IND vs AFG: ನಾಲ್ಕು ವರ್ಷಗಳ ಬಳಿಕ ಒಡಿಐ ಶತಕ ಬಾರಿಸಿದ ಇಶಾನ್ ಕಿಶನ್!
Ishan Kishan Century: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭರ್ಜರಿ ಶತಕವನ್ನು ಸಿಡಿಸಿದ್ದಾರೆ. ಅವರು ನಾಲ್ಕು ವರ್ಷಗಳ ಬಳಿಕ ಇದು ಅವರ ಮೊದಲ ಏಕದಿನ ಕ್ರಿಕೆಟ್ ಶತಕವಾಗಿದೆ. ಇವರ ಶತಕದ ಬಲದಿಂದ ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿದೆ.
ತಮ್ಮ ಎರಡನೇ ಒಡಿಐ ಶತಕ ಬಾರಿಸಿ ಸಂಭ್ರಮಿಸಿದ ಇಶಾನ್ ಕಿಶನ್. -
ಲಖನೌ: ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಇಶಾನ್ ಕಿಶನ್ (Ishan Kishan) ಅವರು ನಾಲ್ಕು ವರ್ಷಗಳ ಬಳಿಕ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕವನ್ನು ಬಾರಿಸಿದ್ದಾರೆ. ಅಫ್ಘಾನಿಸ್ತಾನ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ(IND vs AFG) ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಇಶಾನ್ ಕಿಶನ್ ತಮ್ಮ ವೃತ್ತಿ ಜೀವನದ ಎರಡನೇ ಒಡಿಐ ಶತಕವನ್ನು ಬಾರಿಸಿದ್ದಾರೆ. ಇವರ ಶತಕದ ಬಲದಿಂದ ಭಾರತ ತಂಡ ಪಂದ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಿತು.
ಬುಧವಾರ ಇಲ್ಲಿನ ಏಕನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಿಸಲಾಯಿತು. ಯಶಸ್ವಿ ಜೈಸ್ವಾಲ್ ಅಗ್ರ ಸ್ಥಾನಕ್ಕೆ ಬಂದ ಕಾರಣ ಶುಭಮನ್ ಗಿಲ್ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರು. ಹಾಗಾಗಿ ಇಶಾನ್ ಕಿಶನ್ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದರು. ಅವರು ಆಫ್ಘನ್ ಬೌಲರ್‌ಗಳ ಎದುರು ಭರ್ಜರಿಯಾಗಿ ಬ್ಯಾಟ್ ಬೀಸಿದರು.
IND vs AFG: ನಾಲ್ಕು ವರ್ಷಗಳ ಬಳಿಕ ಒಡಿಐ ಶತಕ ಬಾರಿಸಿದ ಇಶಾನ್ ಕಿಶನ್!
ಶುಭಮನ್ ಗಿಲ್ ಜೊತೆ 224 ರನ್‌ಗಳ ದೀರ್ಘಾವಧಿ ಜೊತೆಯಾಟವನ್ನು ಆಡಿದ ಇಶಾನ್ ಕಿಶನ್, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದರು. ಅವರು ಅಫ್ಘಾನಿಸ್ತಾನ ಬೌಲರ್‌ಗಳ ಎದುರು ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ ಇಶಾನ್ ಕಿಶನ್, 71 ಎಸೆತಗಳಲ್ಲಿ ತಮ್ಮ ಒಡಿಐ ವೃತ್ತಿ ಜೀವನದ ಎರಡನೇ ಶತಕವನ್ನು ಪೂರ್ಣಗೊಳಿಸಿದರು. ಅವರು ತಮ್ಮ ಶತಕದಲ್ಲಿ ನಾಲ್ಕು ಭರ್ಜರಿ ಸಿಕ್ಸರ್‌ಹಾಗೂ 14 ಮನಮೋಹಕ ಬೌಂಡರಿಗಳನ್ನು ದಾಖಲಿಸಿದ್ದರು.
1️⃣2️⃣5️⃣ Runs
— BCCI (@BCCI) June 17, 2026
7️⃣9️⃣ Balls
1️⃣4️⃣ Fours & 7️⃣ Sixes
A dazzling knock from Ishan Kishan 👏👏
Updates ▶️ https://t.co/JYJ5l44iJ6#TeamIndia | #INDvAFG | @IDFCFIRSTBank | @ishankishan51 pic.twitter.com/EI68b2HLje
2022ರಲ್ಲಿ ಬಾಂಗ್ಲಾದೇಶ ವಿರುದ್ಧ ತಮ್ಮ ಚೊಚ್ಚಲ ದ್ವಿಶತಕವನ್ನು ಬಾರಿಸಿದ ಬಳಿಕ ಇದೇ ಮೊದಲ ಬಾರಿ ಶತಕವನ್ನು ಸಿಡಿಸಿದರು. ಅವರು ಒಟ್ಟಾರೆ ಈ ಇನಿಂಗ್ಸ್‌ನಲ್ಲಿ ಆಡಿದ 79 ಎಸೆತಗಳಲ್ಲಿ 7 ಭರ್ಜರಿ ಸಿಕ್ಸರ್ ಹಾಗೂ 14 ಬೌಂಡರಿಗಳೊಂದಿಗೆ 125 ರನ್‌ಗಳನ್ನು ಸಿಡಿಸಿದರು. ಆ ಮೂಲಕ ಅವರು ದ್ವಿಶತಕ ಸಿಡಿಸುವ ಅವಕಾಶವನ್ನು ಕೂ ಹೊಂದಿದ್ದರು. ಆದರೆ, ಅವರು ಖರೋಟಿ ಅವರ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟರು. ಇವರು ನಾಯಕ ಶುಭಮನ್ ಗಿಲ್ ಅವರ ಜೊತೆಗೆ ಮೂರನೇ ವಿಕೆಟ್‌ಗೆ 140 ಎಸೆತಗಳಲ್ಲಿ 224 ರನ್‌ಗಳ ಜೊತೆಯಾಟವನ್ನು ಆಡಿದ್ದರು.
ಅಫ್ಘಾನಿಸ್ತಾನ ವಿರುದ್ಧ ಮೂರನೇ ವೇಗದ ಶತಕ ಬಾರಿಸಿದ ಇಶಾನ್ ಕಿಶನ್
ಈ ಶತಕದ ಮೂಲಕ ಇಶಾನ್ ಕಿಶನ್ ಮತ್ತೊಂದು ದಾಖಲೆಯನ್ನು ಬರೆದಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಮೂರನೇ ವೇಗದ ಶತಕವನ್ನು ಬಾರಿಸಿದ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಕಿಶನ್ ಭಾಜನರಾಗಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಐಯಾನ್ ಮಾರ್ಗನ್ ಅವರು ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಅವರು 2019ರಲ್ಲಿ ಆಫ್ಘನ್ ಎದುರು 57 ಎಸೆತಗಳನ್ನು ಸೆಂಚುರಿ ಬಾರಿಸಿದ್ದರು. 2023ರಲ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಲಿಸ್ಟ್ 'ಎ' ಕ್ರಿಕೆಟ್‌ನಲ್ಲಿ 14 ಸಾವಿರ ರನ್ ಪೂರ್ತಿಗೊಳಿಸಿದ ರೋಹಿತ್ ಶರ್ಮ; ಈ ಸಾಧನೆಗೈದ 5ನೇ ಭಾರತೀಯ
ಅಫ್ಘಾನಿಸ್ತಾನ ಎದುರು ವೇಗದ ಶತಕ ಬಾರಿಸಿದ ಬ್ಯಾಟರ್ಸ್( ಎಸೆತಗಳ ಲೆಕ್ಕದಲ್ಲಿ)
57 ಐಯಾನ್ ಮಾರ್ಗನ್, ಮ್ಯಾಂಚೆಸ್ಟರ್ 2019
63 ರೋಹಿತ್ ಶರ್ಮಾ, ದೆಹಲಿ 2023
71 ಇಶಾನ್ ಕಿಶನ್, ಲಖನೌ 2026 *
76 ಗ್ಲೆನ್ ಮ್ಯಾಕ್ಸ್‌ವೆಲ್, ಮುಂಬೈ 2023
77 ಶುಭಮನ್ ಗಿಲ್, ಲಖನೌ 2026 *