ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs NZ: ರೋಹಿತ್‌ ಶರ್ಮಾರ ಒಡಿಐ ನಿವೃತ್ತಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಶುಭಮನ್‌ ಗಿಲ್‌!

Shubaman Gill on Rohit Sharma's Retirement: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಫೈನಲ್‌ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಭಾನುವಾರ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಫೈನಲ್‌ ಹಣಾಹಣಿಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶುಭಮನ್‌ ಗಿಲ್‌, ರೋಹಿತ್‌ ಶರ್ಮಾ ಅವರ ಒಡಿಐ ನಿವೃತ್ತಿ ಬಗ್ಗೆ ಕೇಳಿದ್ದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ತಮ್ಮ ನಾಯಕನ ಬಗ್ಗೆ ಗಿಲ್‌ ಹೇಳಿದ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ರೋಹಿತ್‌ ಶರ್ಮಾರ ಒಡಿಐ ನಿವೃತ್ತಿ ಬಗ್ಗೆ ಶುಭಮನ್‌ ಗಿಲ್‌ ಮಾಹಿತಿ!

ರೋಹಿತ್‌ ಶರ್ಮಾ ಭವಿಷ್ಯದ ಬಗ್ಗೆ ಶುಭಮನ್‌ ಗಿಲ್‌ ಹೇಳಿಕೆ.

Profile Ramesh Kote Mar 8, 2025 8:45 PM

ದುಬೈ: ಭಾರತ ಮತ್ತು ನ್ಯೂಜಿಲೆಂಡ್ ನಡುವೆ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ (ICC Champions Trophy 2025) ಟೂರ್ನಿಯ ಫೈನಲ್‌ ಪಂದ್ಯ ಮಾರ್ಚ್ 9 ರಂದು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್ (Shubaman Gill) ಪತ್ರಿಕಾಗೋಷ್ಠಿಗೆ ಬಂದಿದ್ದರು. ಪತ್ರಿಕಾಗೋಷ್ಠಿಯಲ್ಲಿ ಫೈನಲ್‌ ಪಂದ್ಯದ ರಣತಂತ್ರದ ಜೊತೆಗೆ, ಶುಭಮನ್ ಅವರಿಗೆ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಭವಿಷ್ಯದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಯಿತು, ಇದಕ್ಕೆ ಅವರು ಮುಕ್ತವಾಗಿ ಉತ್ತರ ಕೊಟ್ಟಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳ ನಡುವಣ ಫೈನಲ್‌ ಪಂದ್ಯದ ಬಳಿಕ ಹಲವು ಮಹತ್ವದ ಬೆಳವಣಿಗೆಗಳನ್ನು ನಾವು ನಿರೀಕ್ಷೆ ಮಾಡಬಹುದಾಗಿದೆ.

ಶನಿವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಶುಭಮನ್ ಗಿಲ್ ಅವರನ್ನು ಚಾಂಪಿಯನ್ಸ್ ಟ್ರೋಫಿ ಫೈನಲ್ ನಂತರ ರೋಹಿತ್ ಶರ್ಮಾ ನಿವೃತ್ತರಾಗಲಿದ್ದಾರೆಯೇ ಅಥವಾ ತಂಡದ ನಿರ್ವಹಣೆಯಲ್ಲಿ ಅಂತಹ ಯಾವುದೇ ಚರ್ಚೆ ನಡೆಯುತ್ತಿದೆಯೇ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಅವರು "ಪ್ರಸ್ತುತ ನಮ್ಮ ತಂಡದ ಏಕೈಕ ಗುರಿ ಫೈನಲ್‌ ಪಂದ್ಯವನ್ನು ಗೆಲ್ಲುವುದು. ತಂಡದಲ್ಲಿ ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಇದನ್ನು ರೋಹಿತ್ ಭಾಯ್ ಮಾತ್ರ ನಿರ್ಧರಿಸುತ್ತಾರೆ. ಇದೀಗ ಅವರು ಚಾಂಪಿಯನ್ಸ್ ಟ್ರೋಫಿ ಫೈನಲ್ ಗೆಲ್ಲುವತ್ತ ಗಮನ ಹರಿಸಿದ್ದಾರೆ. ಅವರ ನಿವೃತ್ತಿಯ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ," ಎಂದು ಸ್ಪಷ್ಟನೆ ನೀಡಿದ್ದಾರೆ.

IND vs NZ: ʻನಾ ಹೇಳಿದ ಹಾಗೆ ಕೇಳಿ ಭಾರತವನ್ನು ಸೋಲಿಸಬಹುದುʼ-ಕಿವೀಸ್‌ಗೆ ಅಖ್ತರ್‌ ಮಹತ್ವದ ಸಲಹೆ!

ಫೈನಲ್‌ನ ರಣ ತಂತ್ರದ ಬಗ್ಗೆ ಗಿಲ್‌ ಹೇಳಿಕೆ

ಇದಲ್ಲದೆ, ಫೈನಲ್‌ ಪಂದ್ಯದಲ್ಲಿ ಟೀಮ್ ಇಂಡಿಯಾದ ತಂತ್ರ ಹಾಗೂ ಪಂದ್ಯದ ಒತ್ತಡದ ಬಗ್ಗೆಯೂ ಶುಭಮನ್‌ ಗಿಲ್‌ ಮಾತನಾಡಿದ್ದಾರೆ. "ಫೈನಲ್ ಪಂದ್ಯ ಎಲ್ಲರಿಗೂ ದೊಡ್ಡದು. ಪರಿಸ್ಥಿತಿ ಹೀಗಿರುವಾಗ ಖಂಡಿತವಾಗಿಯೂ ಒತ್ತಡವಿರುತ್ತದೆ ಎಂಬುದು ಸ್ಪಷ್ಟ, ಆದರೆ ಫೈನಲ್‌ನಲ್ಲಿ ಯಾವುದೇ ತಂಡವು ಸಾಮಾನ್ಯ ಪಂದ್ಯದಂತೆ ಆಡಿದರೂ, ಅದರ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಮತ್ತು ಆ ತಂಡ ಗೆಲ್ಲುವ ಸಾಧ್ಯತೆಗಳು ಸಹ ಹೆಚ್ಚಿರುತ್ತವೆ. ಆದಾಗ್ಯೂ, ಇದು ಅಂದುಕೊಂಡಷ್ಟು ಸುಲಭವಲ್ಲ," ಎಂದು ತಿಳಿಸಿದ್ದಾರೆ.

ಶುಭಮನ್ ಗಿಲ್ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. "ದೊಡ್ಡ ಪಂದ್ಯಗಳಲ್ಲಿ ಅನುಭವ ಯಾವಾಗಲೂ ಉಪಯೋಗಕ್ಕೆ ಬರುತ್ತದೆ. ವಿರಾಟ್ ಕೊಹ್ಲಿ ಸಾಕಷ್ಟು ಫೈನಲ್‌ ಪಂದ್ಯಗಳನ್ನು ಆಡಿದ್ದಾರೆ ಮತ್ತು ಒತ್ತಡವನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ದೊಡ್ಡ ಪಂದ್ಯಗಳಲ್ಲಿ ಹೇಗೆ ಬ್ಯಾಟ್‌ ಮಾಡಬೇಕೆಂದು ಅವರಿಗೆ ತಿಳಿದಿದೆ. ಅದಕ್ಕಾಗಿಯೇ ಅವರು ನಮಗೆ ಬಹಳ ಮುಖ್ಯ," ಎಂದು ಶುಭಮನ್‌ ಗಿಲ್‌ ಹೇಳಿದ್ದಾರೆ.

IND vs NZ Final: ಫೈನಲ್​ಗೆ ಮಳೆ ಕಾಡಿದರೆ?, ಪಂದ್ಯ ಟೈ ಆದರೆ ಫಲಿತಾಂಶ ನಿರ್ಧಾರ ಹೇಗೆ?

ಚಾಂಪಿಯನ್ಸ್ ಟ್ರೋಫಿ ಫೈನಲ್‌ಗಾಗಿ ಗಿಲ್ ಉತ್ಸುಕ

ಶುಭಮನ್ ಗಿಲ್ ಪತ್ರಿಕಾಗೋಷ್ಠಿಯಲ್ಲಿ 2023ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿನ ಕಹಿ ಸೋಲನ್ನು ನೆನಪಿಸಿಕೊಂಡರು. "ನಾವು ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಸೋತಿದ್ದೆವು. ಇದು ನಮ್ಮ ಮನಸಿನಲ್ಲಿದೆ. ಈ ಬಾರಿ ನಮ್ಮ ಸಂಪೂರ್ಣ ಪ್ರಯತ್ನವು ಫೈನಲ್‌ ಪಂದ್ಯವನ್ನು ಗೆಲ್ಲುವುದಾಗಿರುತ್ತದೆ," ಎಂದು ಟೀಮ್‌ ಇಂಡಿಯಾ ಉಪ ನಾಯಕ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಫೈನಲ್‌ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ರೋಹಿತ್‌ ಶರ್ಮಾ (ನಾಯಕ), ಶುಭಮನ್‌ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್‌, ಅಕ್ಷರ್‌ ಪಟೇಲ್‌, ಕೆಎಲ್‌ ರಾಹುಲ್‌ (ವಿ.ಕೀ), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ವರುಣ್‌ ಚಕ್ರವರ್ತಿ.