IND vs SA: ಹಾರ್ದಿಕ್ ಪಾಂಡ್ಯ ಸ್ಫೋಟಕ ಅರ್ಧಶತಕದ ಬಲದಿಂದ ಮೊದಲನೇ ಟಿ20ಐ ಗೆದ್ದ ಭಾರತ!
India vs South Africa 1st T20I Highlights: ಹಾರ್ದಿಕ್ ಪಾಂಡ್ಯ ಸ್ಪೋಟಕ ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ಬೌಲಿಂಗ್ ದಾಳಿಯಿಂದ ಭಾರತ ತಂಡ, ಮೊದಲನೇ ಟಿ20ಐ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 101 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಜಯದ ಮೂಲಕ ಟೀಮ್ ಇಂಡಿಯಾ 5 ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಮುನ್ನಡೆಯನ್ನು ಗಳಿಸಿದೆ.
ದಕ್ಷಿಣ ಆಫ್ರಿಕಾ ಎದುರು ಮೊದಲನೇ ಟಿ20 ಪಂದ್ಯ ಗೆದ್ದ ಭಾರತ. -
ಕಟಕ್: ಹಾರ್ದಿಕ್ ಪಾಂಡ್ಯ (Hardik Pandya) ಅವರ ಸ್ಪೋಟಕ ಅರ್ಧಶತಕ ಹಾಗೂ ಬೌಲರ್‌ಗಳ ಪರಿಣಾಮಕಾರಿ ದಾಳಿಯ ಸಹಾಯದಿಂದ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ (IND vs SA) 101 ರನ್‌ಗಳ ಭರ್ಜರಿ ಗೆಲುವು ಪಡೆಯಿತು. ಈ ಜಯದ ಮೂಲಕ ಸೂರ್ಯಕುಮಾರ್ ಯಾದವ್ ನಾಯಕತ್ವದ ಟೀಮ್ ಇಂಡಿಯಾ (India) ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ 1-0 ಅಂತರದಲ್ಲಿ ಶುಭಾರಂಭ ಕಂಡಿದೆ. ಬೌಲಿಂಗ್‌ನಲ್ಲಿ ಆರಂಭದಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದ ಹರಿಣ ಪಡೆ, ಹಾರ್ದಿಕ್ ಎದುರು ವಿಫಲವಾಗಿತ್ತು. ಆದರೆ, ಬ್ಯಾಟಿಂಗ್‌ನಲ್ಲಿ ಪ್ರವಾಸಿ ತಂಡ ಸಂಪೂರ್ಣವಾಗಿ ನೆಲ ಕಚ್ಚಿತ್ತು. ಇದರಿಂದಾಗಿ ಸೋಲು ಒಪ್ಪಿಕೊಳ್ಳಬೇಕಾಯಿತು.
ಮಂಗಳವಾರ ಇಲ್ಲಿನ ಬಾರಬತಿ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 176 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡ ಸಾಮೂಹಿಕವಾಗಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಹಾಗಾಗಿ 12.3 ಓವರ್‌ಗಳಿಗೆ 74 ರನ್‌ಗಳಿಗೆ ಆಲ್‌ಔಟ್ ಆಯಿತು ಹಾಗೂ ಹೀನಾಯ ಸೋಲು ಅನುಭವಿಸಿತು. ಪ್ರವಾಸಿ ತಂಡದ ಪರ 22 ರನ್‌ಗಳಿಸಿದ ಡೆವಾಲ್ಡ್ ಬ್ರೆವಿಸ್ ಬಿಟ್ಟರೆ, ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ ವೈಯಕ್ತಿಕ 20ರ ಗಡಿ ದಾಟಲಿಲ್ಲ.
ʻಶುಭಮನ್ ಗಿಲ್‌ಗಾಗಿ ಐವರು ಆಟಗಾರರ ವೃತ್ತಿ ಜೀವನ ಅಂತ್ಯʼ: ಗೌತಮ್ ಗಂಭೀರ್ ವಿರುದ್ಧ ಫ್ಯಾನ್ಸ್ ಕಿಡಿ!
ಮಿಂಚಿದ ಟೀಮ್ ಇಂಡಿಯಾ ಬೌಲರ್ಸ್
ಭಾರತ ತಂಡದ ಪರ ಮೊದಲನೇ ಓವರ್ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಮೊಟ್ಟ ಮೊದಲ ಎಸೆತದಲ್ಲಿಯೇ ಕ್ವಿಂಟನ್ ಡಿ ಕಾಕ್ ಅವರನ್ನು ಔಟ್ ಮಾಡಿದರು. ನಂತರ ತಮ್ಮ ಎರಡನೇ ಓವರ್‌ನಲ್ಲಿಯೂ ಟ್ರಿಸ್ಟನ್ ಸ್ಟಬ್ಸ್ ಅವರನ್ನು ಔಟ್ ಮಾಡಿ ಎದುರಾಳಿ ತಂಡದ ಮೇಲೆ ಆರಂಭಿಕ ಒತ್ತಡ ಹೇರಿದ್ದರು. ನಂತರ ಬೌಲಿಂಗ್ ಬಂದ ಭಾರತದ ಇನ್ನುಳಿದ ಬೌಲರ್‌ಗಳು ಅದೇ ಲಯವನ್ನು ಮುಂದುವರಿಸಿದರು. ಅರ್ಷದೀಪ್ ಸಿಂಗ್, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ ಹಾಗೂ ಅಕ್ಷರ್ ಪಟೇಲ್ ತಲಾ ಎರಡೆರಡು ವಿಕೆಟ್ ಕಬಳಿಸಿದರು. ಹಾರ್ದಿಕ್ ಪಾಂಡ್ಯ ಮತ್ತು ಶಿವಂ ದುಬೆ ತಲಾ ಒಂದೊಂದು ವಿಕೆಟ್ ಕಿತ್ತರು.
An emphatic win in the #INDvSA T20I series opener 🥳#TeamIndia register a 1⃣0⃣1⃣-run victory in Cuttack to go 1⃣-0⃣ up 🙌
— BCCI (@BCCI) December 9, 2025
Scorecard ▶️ https://t.co/tiemfwcNPh@IDFCFIRSTBank pic.twitter.com/mw3oxC5AHw
ಆರಂಭಿಕ ಆಘಾತ ಅನುಭವಿಸಿದ್ದ ಭಾರತ
ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಪಂದ್ಯದ ಮೊದಲನೇ ಓವರ್‌ನಲ್ಲಿಯೇ ಶುಭಮನ್ ಗಿಲ್ ಅವರು ಬೌಂಡರಿ ಬಾರಿಸಿದ ಬಳಿಕ ಲುಂಗಿ ಎನ್ಗಿಡಿಗೆ ವಿಕೆಟ್ ಒಪ್ಪಿಸಿದರು. ನಂತರ ಮೂರನೇ ಓವರ್‌ನಲ್ಲಿ ನಾಯಕ ಸೂರ್ಯಕುಮಾರ್ ಯಾದವ್ (12) ಅವರು ಕೂಡ ಲುಂಗಿ ಎನ್ಗಿಡಿಗೆ ಔಟ್ ಆದರು. ನಂತರ 17 ರನ್ ಗಳಿಸಿ ಉತ್ತಮ ಆರಂಭ ಪಡೆದಿದ್ದ ಆರಂಭಿಕ ಅಭಿಷೇಕ್ ಶರ್ಮಾ ಅವರನ್ನು ಲುಥೊ ಸಿಪಾಮ್ಲಾ ಔಟ್ ಮಾಡಿದರು.
𝙄. 𝘾. 𝙔. 𝙈. 𝙄
— BCCI (@BCCI) December 9, 2025
6⃣, 4⃣, 6⃣
Hardik Pandya 🤝 Jitesh Sharma
Updates ▶️ https://t.co/tiemfwcNPh#TeamIndia | #INDvSA | @hardikpandya7 | @jiteshsharma_ | @IDFCFIRSTBank pic.twitter.com/806L1KmQac
ಟೀಮ್ ಇಂಡಿಯಾ 7ನೇ ಓವರ್‌ನಲ್ಲಿ 48 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ನಾಲ್ಕನೇ ವಿಕೆಟ್‌ಗೆ ಜೊತೆಯಾದ ತಿಲಕ್ ವರ್ಮಾ (26) ಹಾಗೂ ಅಕ್ಷರ್ ಪಟೇಲ್ (23) ಅವರು ಕೆಲಕಾಲ ಕ್ರೀಸ್‌ನಲ್ಲಿ ನಿಂತು 30 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ, ಇವರನ್ನು ಉಳಿಯಲು ಕ್ರಮವಾಗಿ ಲುಂಗಿ ಎನ್ಗಿಡಿ ಹಾಗೂ ಸಿಪಾಮ್ಲಾ ಬಿಡಲಿಲ್ಲ.
What a knock from Hardik Pandya! 💪💪
— BCCI (@BCCI) December 9, 2025
Put on an absolute show with the bat here in Cuttack! 🔥
5⃣9⃣* Runs
2⃣8⃣ Balls
6⃣ Fours
4⃣ Sixes
Scorecard ▶️ https://t.co/tiemfwcNPh #TeamIndia | #INDvSA | @hardikpandya7 | @IDFCFIRSTBank pic.twitter.com/MJNzTCokA6
ಹಾರ್ದಿಕ್ ಪಾಂಡ್ಯ ಸ್ಪೋಟಕ ಅರ್ಧಶತಕ
ಭಾರತ ತಂಡದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. ಒಂದು ಹಂತದಲ್ಲಿ ಭಾರತ ತಂಡ 14 ಓವರ್‌ಗಳಿಗೆ 104 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಈ ವೇಳೆ ಭಾರತ 150ರ ಗಡಿ ದಾಟುವುದೂ ಅನುಮಾನ ಎಂದು ಹೇಳಲಾಗಿತ್ತು. ಆದರೆ, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ಸ್ಪೋಟಕ ಅರ್ಧಶತಕದ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು. ಅವರು ಆಡಿದ ಕೇವಲ 28 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 59 ರನ್‌ಗಳನ್ನು ಸಿಡಿಸಿದರು. ಅದರಲ್ಲಿಯೂ ವಿಶೇಷವಾಗಿ ಇವರು 210.79ರ ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದ್ದು ವಿಶೇಷ. ಜಿತೇಶ್ ಶರ್ಮಾ (10*) ಹಾಗೂ ಶಿವಂ ದುಬೆ (11) ಅವರು ಕೂಡ ಉಪಯುಕ್ತ ಕಾಣಿಕೆ ನೀಡಿದ್ದರು. ಅಂತಿಮವಾಗಿ ಭಾರತ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 175 ರನ್‌ಗಳನ್ನು ಕಲೆ ಹಾಕಿತು.
ಹರಿಣ ಪಡೆಯ ಪರ ಲುಂಗಿ ಎನ್ಗಿಡಿ ಮೂರು ವಿಕೆಟ್ ಕಿತ್ತರೆ, ಲುಥೊ ಸಿಪಾಮ್ಲಾ ಎರಡು ವಿಕೆಟ್‌ಗಳನ್ನು ಪಡೆದರು.