IPL 2025: ʻಪ್ರತಿಯೊಂದು ಎಸೆತವನ್ನು ಹೊಡೆಯಬೇಕುʼ-ತಮ್ಮ ಸ್ಪೋಟಕ್ ಬ್ಯಾಟಿಂಗ್ ಯಶಸ್ಸಿಗೆ ಕಾರಣ ತಿಳಿಸಿದ ಆಶುತೋಷ್ ಶರ್ಮಾ!
Ashutosh Sharma on his batting: ಲಖನೌ ಸೂಪರ್ ಜಯಂಟ್ಸ್ ವಿರುದ್ದದ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಅರ್ಧಶತಕವನ್ನು ಸಿಡಿಸಿದದ್ ಆಶುತೋಷ್ ಶರ್ಮಾ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿದ್ದರು. ಆ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು. ಇದೀಗ ಅವರು ತಮ್ಮ ಬ್ಯಾಟಿಂಗ್ ರಣತಂತ್ರದ ಬಗ್ಗೆ ಮಾತನಾಡಿದ್ದಾರೆ.

ಆಶುತೋಷ್ ಶರ್ಮಾ ಹೇಳಿಕೆ.

ನವದೆಹಲಿ: ಲಖನೌ ಸೂಪರ್ ಜಯಂಟ್ಸ್ ವಿರುದ್ಧ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಪಂದ್ಯದಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸೋಲಿನ ಸುಳಿಗೆ ಸಿಲುಕಿದ್ದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವನ್ನು ಗೆಲ್ಲಿಸಿದ್ದ ಆಶುತೋಷ್ ಶರ್ಮಾ (Ashutosh Sharma) ಅವರು ತಮ್ಮ ಬ್ಯಾಟಿಂಗ್ ರಣತಂತ್ರದ ಬಗ್ಗೆ ಮಾತನಾಡಿದ್ದಾರೆ. ಪ್ರತಿಯೊಂದು ಎಸೆತದಲ್ಲಿಯೂ ದೊಡ್ಡ ಹೊಡೆತವನ್ನು ಹೊಡೆಯಬೇಕೆಂಬ ಉದ್ದೇಶವನ್ನು ಹೊಂದಿರುತ್ತೇನೆ. ಇದಕ್ಕಾಗಿ ಸಾಕಷ್ಟು ಅಭ್ಯಾಸವನ್ನು ನಡೆಸಿದ್ದೇನೆಂದು ಡಿಸಿ ಬ್ಯಾಟ್ಸ್‌ಮನ್ ಹೇಳಿಕೊಂಡಿದ್ದಾರೆ. ಲಖನೌ ಸೂಪರ್ ಜಯಂಟ್ಸ್ ವಿರುದ್ದದ ಪಂದ್ಯದಲ್ಲಿ 210 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಕೊನೆಯಲ್ಲಿ ಆಶುತೋಷ್ ಶರ್ಮಾ ಕೇವಲ 31 ಎಸೆತಗಳಲ್ಲಿ ಅಜೇಯ 66 ರನ್ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಒಂದು ವಿಕೆಟ್ ಗೆಲುವು ತಂದುಕೊಟ್ಟಿದ್ದರು.
ಆರಂಭದಲ್ಲಿ 7 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಡೆಲ್ಲಿ, ನಂತರ 65 ರನ್‌ಗಳಿಂದ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ವಿಪ್ರಾಜ್ ನಿಗಮ್, ಆಶುತೋಷ್ ಶರ್ಮಾ ನಿರ್ಣಾಯಕ ಬ್ಯಾಟಿಂಟ್ ಪ್ರದರ್ಶನವನ್ನು ತೋರಿದ್ದರು. ಅಂದ ಹಾಗೆ ಕೊನೆಯ ಓವರ್‌ನಲ್ಲಿ 6 ರನ್ ಅಗತ್ಯವಿದ್ದ ವೇಳೆ ಆಶುತೋಷ್ ಶರ್ಮಾ, ಶಹಬಾಝ್ ಅಹ್ಮದ್‌ಗೆ ಸಿಕ್ಸರ್ ಬಾರಿಸಿ ಇನ್ನೂ ಮೂರು ಎಸೆತಗಳು ಬಾಕಿ ಇರುವಾಗಲೇ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿದ್ದರು.
DC vs LSG: ತಮ್ಮ ಮ್ಯಾಚ್ ವಿನ್ನಿಂಗ್ ಇನಿಂಗ್ಸ್‌ನ ಶ್ರೇಯ ಕೆವಿನ್ ಪಿಟರ್ಸನ್‌ಗೆ ಸಮರ್ಪಿಸಿದ ಆಶುತೋಷ್ ಶರ್ಮಾ!
ಜಿಯೋ ಸ್ಟಾರ್ ಜೊತೆ ಮಾತನಾಡಿದ ಆಶುತೋಷ್ ಶರ್ಮಾ, "ನಾನು ಸಾಕಷ್ಟು ಕ್ರಿಕೆಟ್ ಆಡಿದ್ದೇನೆ, ಅದರಲ್ಲಿಯೂ ವಿಶೇಷವಾಗಿ ಸಿಕ್ಕಾಪಟ್ಟೆ ಬ್ಯಾಟಿಂಗ್ ನಡೆಸಿದ್ದೇನೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ಬ್ಯಾಟಿಂಗ್ ಅನ್ನು ನಾನು ಆನಂದಿಸುತ್ತೇನೆ ಹಾಗೂ ಸಾಧ್ಯವಾದಷ್ಟು ದೀರ್ಘಾವಧಿ ಬ್ಯಾಟ್ ಮಾಡಲು ಪ್ರಯತ್ನಿಸುತ್ತೇನೆ. ಅದರಲ್ಲಿಯೂ ವಿಶೇಷವಾಗಿ ಸ್ಪಿನ್ನರ್‌ಗಳಿಗೆ ತುಂಬಾ ಅಭ್ಯಾಸವನ್ನು ಮಾಡುತ್ತೇನೆ. ಪ್ರತಿಯೊಂದು ಎಸೆತವನ್ನೂ ಬೌಂಡರಿ-ಸಿಕ್ಸರ್ ಸಿಡಿಸಲು ಎದುರು ನೋಡುತ್ತೇನೆ. ಏಕೆಂದರೆ, ನಾನು ಬ್ಯಾಟಿಂಗ್‌ಗೆ ಹೋಗುವ ಸನ್ನಿವೇಶ ಆ ರೀತಿ ಇರುತ್ತದೆ. ಈ ಹಾದಿನಲ್ಲಿ ನೀವು ಅಭ್ಯಾಸ ಮಾಡಿದರೆ, ನಿಮ್ಮ ಬ್ಯಾಟಿಂಗ್‌ನಲ್ಲಿ ಸುಧಾರಣೆಯನ್ನು ಕಾಣಬಹುದು. ಪ್ರತಿಯೊಂದನ್ನು ನೀವು ನೆನಪಿನಲ್ಲಿ ಇಡಬೇಕಾಗುತ್ತದೆ ಹಾಗೂ ಈ ಹಾದಿಯಲ್ಲಿಯೇ ನಾನು ಅಭ್ಯಾಸವನ್ನು ನಡೆಸುತ್ತೇನೆ," ಎಂದು ಹೇಳಿದ್ದಾರೆ.
DC vs LSG: ಸೋಲಿನಂಚಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಗೆಲ್ಲಿಸಿದ ಆಶುತೋಷ್ ಶರ್ಮಾ!
ಕೆವಿನ್ ಪೀಟರ್ಸನ್ ಜತೆಗಿನ ಸಂಭಾಷಣೆಯನ್ನು ರಿವೀಲ್ ಮಾಡಿದ ಆಶುತೋಷ್
ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಗೆಲುವಿನ ಬಳಿಕ ಮಾತನಾಡಿದ್ದ ಆಶುತೋಷ್ ಅವರು, ತಮ್ಮ ತಂಡದ ಹೆಡ್ ಕೋಚ್ ಕೆವಿನ್ ಪೀಟರ್ಸನ್ ಅವರ ಜತೆ ನಡೆಸಿದ್ದ ಉಪಯುಕ್ತ ಸಂಭಾಷಣೆಯ ಬಗ್ಗೆ ರಿವೀಲ್ ಮಾಡಿದ್ದಾರೆ.
"ಕೆವಿನ್ ಪೀಟರ್ಸನ್ ಜೊತೆ ಸಂಭಾಷಣೆ ನಡೆಸುವುದು ಹಾಗೂ ಅವರ ಜೊತೆ ಪ್ರಾಕ್ಟಿಸ್ ಸೆಷನ್‌ನಲ್ಲಿ ಸಮಯವನ್ನು ಕಳೆಯುವುದು ಅತ್ಯಂತ ವಿಶೇಷವಾಗಿರುತ್ತದೆ. ಏಕೆಂದರೆ, ಸಾಕಷ್ಟು ಪಂದ್ಯಗಳನ್ನು ಗೆಲ್ಲಿಸಿದ ಅನುಭವನ್ನು ಅವರು ಹೊಂದಿದ್ದಾರೆ. ಅವರ ಅನುಭವವ ಬಗ್ಗೆ ಚರ್ಚೆ ನಡೆಸುವುದು ತುಂಬಾ ಒಳ್ಳೆಯದು. ಅವರಿಗೆ ಪ್ರಶ್ನೆ ಕೇಳುವುದು ಹಾಗೂ ಅವರು ಅದಕ್ಕೆ ಉತ್ತರ ಹೇಳುವುದರಿಂದ ನಾವು ಸಾಕಷ್ಟು ಕಲಿಯುತ್ತೇವೆ," ಎಂದು ಆಶುತೋಷ್ ಶರ್ಮಾ ತಿಳಿಸಿದ್ದಾರೆ.
IPL 2025: ಪಂತ್ ಕಳಪೆ ಪ್ರದರ್ಶನ ಕಂಡು ಲೈವ್ನಲ್ಲೇ ಟಿವಿ ಒಡೆದು ಹಾಕಿದ ನಿರೂಪಕ
ಡೆಲ್ಲಿಗೆ ಮುಂದಿನ ಎದುರಾಳಿ ಹೈದರಾಬಾದ್
ತನ್ನ ಮೊದಲನೇ ಪಂದ್ಯವನ್ನು ಗೆದ್ದು 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭಾನುವಾರ ಆಂಧ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ದ ತನ್ನ ಎರಡನೇ ಪಂದ್ಯವನ್ನು ಆಡಲಿದೆ. ಪ್ಯಾಟ್ ಕಮಿನ್ಸ್ ನಾಯಕತ್ವದ ಎಸ್‌ಆರ್‌ಎಚ್ ಆಡಿದ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು, ಇನ್ನೊಂದರಲ್ಲಿ ಸೋಲು ಅನುಭವಿಸಿದೆ.