ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಭಾರತಕ್ಕೆ ಕೋಚ್‌ ಆದ್ರೆ ರೋಹಿತ್‌ ಶರ್ಮಾರನ್ನು 20 ಕಿಮೀ ಓಡುವ ರೀತಿ ಮಾಡುತ್ತೇನೆʼ: ಯೋಗರಾಜ್‌ ಸಿಂಗ್‌!

Yograj Singh on Rohit Sharma's Fitness: ಭಾರತ ಕ್ರಿಕೆಟ್ ತಂಡದ ಮಾಜಿ ಆಲ್‌ರೌಂಡರ್‌ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಯಾವಾಗಲೂ ತಮ್ಮ ಬಹಿರಂಗ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಈ ಬಾರಿ ಟೀಮ್‌ ಇಂಡಿಯಾದ ಮುಖ್ಯ ಕೋಚ್ ಆಗುವ ಪ್ರಶ್ನೆಗೆ ಉತ್ತರಿಸಿದ್ದಾರೆ ಹಾಗೂ ರೋಹಿತ್ ಶರ್ಮಾ ಫಿಟ್ನೆಸ್ ಬಗ್ಗೆ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ.

ರೋಹಿತ್‌ ಶರ್ಮಾ ಫಿಟ್‌ನೆಸ್‌ ಬಗ್ಗೆ ಯೋಗರಾಜ್‌ ಸಿಂಗ್‌ ಅಚ್ಚರಿ ಹೇಳಿಕೆ!

ರೋಹಿತ್‌ ಶರ್ಮಾ ಫಿಟ್‌ನೆಸ್‌ ಬಗ್ಗೆ ಯೋಗರಾಜ್‌ ಸಿಂಗ್‌ ಹೇಳಿಕೆ.

Profile Ramesh Kote Mar 27, 2025 9:00 PM

ನವದೆಹಲಿ: ಭಾರತ ಮಾಜಿ ಕ್ರಿಕೆಟಿಗ ಮತ್ತು ಯುವರಾಜ್ ಸಿಂಗ್ (yuvraj Singh) ಅವರ ತಂದೆ ಯೋಗರಾಜ್ ಸಿಂಗ್ (Yograj Singh) ಆಗಾಗ್ಗೆ ತಮ್ಮ ಬಹಿರಂಗ ಹೇಳಿಕೆಗಳಿಂದ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ಮಾಜಿ ಆಟಗಾರ ತರುವರ್ ಕೊಹ್ಲಿ ಅವರ ಪಾಡ್‌ಕಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಅವರು ಭಾರತೀಯ ಕ್ರಿಕೆಟ್‌ನ ಭವಿಷ್ಯ ಮತ್ತು ಪ್ರಸ್ತುತ ಆಟಗಾರರು ಮತ್ತು ಅವರ ಪ್ರದರ್ಶನದ ಬಗ್ಗೆ ಬಹಿರಂಗವಾಗಿ ಚರ್ಚೆ ನಡೆಸಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ(Rohit Sharma) ಅವರ ಫಿಟ್ನೆಸ್‌ ಬಗ್ಗೆ ಅಚ್ಚರಿ ಹೇಳಿಕೆಯನ್ನು ನೀಡಿದ್ದಾರೆ. ನಾನೇದಾರೂ ಭಾರತ ತಂಡಕ್ಕೆ ಹೆಡ್‌ ಕೋಚ್‌ ಆದ್ರೆ, ರೋಹಿತ್‌ ಶರ್ಮಾ ಅವರನ್ನು 20 ಕಿಮೀ ಓಡುವಂತೆ ಮಾಡುತ್ತೇನೆಂದು ಹೇಳಿದ್ದಾರೆ.

ಇತ್ತೀಚೆಗೆ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಇದಕ್ಕೂ ಮುನ್ನ ನ್ಯೂಜಿಲೆಂಡ್ ವಿರುದ್ಧದ ತವರು ಟೆಸ್ಟ್ ಸರಣಿಯನ್ನು 0-3 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಆಅಘಾತ ಅನುಭವಿಸಿತ್ತು. ಇದಾದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್‌ ಸರಣಿಯಲ್ಲಿಯೂ ಟೀಮ್‌ ಇಂಡಿಯಾ 1-4 ಅಂತರದಲ್ಲಿ ಸೋತಿತ್ತು. ಈ ವೇಳೆ ರೋಹಿತ್ ಶರ್ಮಾ ಅವರ ವೃತ್ತಿಜೀವನದ ಬಗ್ಗೆ ಪ್ರಶ್ನೆಗಳು ಎದುರಾಗಿದ್ದವು. ಆದರೆ ಯೋಗರಾಜ್ ಸಿಂಗ್ ನಾಯಕ ರೋಹಿತ್‌ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಆಟಗಾರರು ಪ್ರಸ್ತುತ ತಂಡಕ್ಕೆ ಪ್ರಮುಖ ಆಧಾರ ಸ್ಥಂಭಗಳಾಗಿದ್ದು, ಅವರಿಗೆ ಬೆಂಬಲದ ಅಗತ್ಯವಿದೆ ಎಂದು ಅವರು ಹೇಳಿದ್ದರು.

RCB vs CSK: ಭುವನೇಶ್ವರ್‌ ಕುಮಾರ್‌ ಇನ್‌? ಸಿಎಸ್‌ಕೆ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!

ರೋಹಿತ್ ಶರ್ಮಾ ಬಗ್ಗೆ ಯೋಗರಾಜ್ ಸಿಂಗ್ ಹೇಳಿದ್ದೇನು?

ತರುವರ್ ಕೊಹ್ಲಿ ತಮ್ಮ ಪಾಡ್‌ಕಾಸ್ಟ್‌ನಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗುವ ಬಗ್ಗೆ ಯೋಗರಾಜ್ ಸಿಂಗ್ ಅವರಿಗೆ ಆಸಕ್ತಿದಾಯಕ ಪ್ರಶ್ನೆಯನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ನಾನು ಟೀಮ್‌ ಇಂಡಿಯಾದ ಕೋಚ್ ಆಗಿದ್ದರೆ ಈಗಿನ ಆಟಗಾರರನ್ನೇ ಬಳಸಿಕೊಂಡು ಹಲವು ವರ್ಷಗಳ ಕಾಲ ಈ ತಂಡವನ್ನು ಗೆಲ್ಲಿಸುತ್ತೇನೆ. ಅವರ ಸಾಮರ್ಥ್ಯ ಹಾಗೂ ಪ್ರತಿಭೆಗಳನ್ನು ಹೊರತರುವ ಬಗ್ಗೆ ಯಾರಾದರೂ ಕೆಲಸ ಮಾಡುತ್ತಾರೆಯೇ ಅಥವಾ ಇಲ್ಲವೇ? ತಂಡದಿಂದ ಆಟಗಾರರನ್ನು ಕೈಬಿಡುವ ಬಗ್ಗೆ ಯಾವಾಗಲೂ ಮಾತನಾಡುತ್ತಾರೆ. ರೋಹಿತ್, ಕೊಹ್ಲಿಯನ್ನು ಕೈ ಬಿಡುವುದು ಏಕೆ? ಅವರು ಕಠಿಣ ಅವಧಿಯನ್ನು ಎದುರಿಸುತ್ತಿದ್ದಾರೆ ಮತ್ತು ನಾನು ಅವರೊಂದಿಗಿದ್ದೇನೆ ಎಂದು ನನ್ನ ಆಟಗಾರರಿಗೆ ಹೇಳುತ್ತೇನೆ," ಎಂದು ಹೇಳಿದ್ದಾರೆ.

"ಎಲ್ಲ ಆಟಗಾರರಿಗೆ ರಣಜಿ ಟ್ರೋಫಿ ಆಡಲು ಅಥವಾ ರೋಹಿತ್‌ ಶರ್ಮಾಗೆ 20 ಕಿ.ಮೀ ಓಡುವಂತೆ ಹೇಳುತ್ತೇನೆ. ನಾನು ಅವರನ್ನು ಇಷ್ಟಪಡುವಂತೆ ತಿಳಿಸುತ್ತೇನೆ. ಯಾರಾದರೂ ಇದನ್ನು ಮಾಡುತ್ತಾರೆಯೇ? ಇವರು ಆಟಗಾರರಲ್ಲ, ಅವರು ವಜ್ರಗಳು. ಇವರನ್ನು ಹೊರಹಾಕಬಾರದು. ನಾನು ಅವರ ತಂದೆಯಂತೆ ಇರುತ್ತೇನೆ. ನಾನು ಯುವರಾಜ್ ಮತ್ತು ಇತರ ಆಟಗಾರರ ನಡುವೆ ಅಥವಾ ಧೋನಿ ವಿರುದ್ಧ ಎಂದಿಗೂ ತಾರತಮ್ಯ ಮಾಡಿಲ್ಲ. ಆದರೆ ತಪ್ಪಿದ್ದರೆ ತಪ್ಪು ಎಂದು ಹೇಳುತ್ತೇನೆ," ಎಂದು ಎಂದಿದ್ದಾರೆ ಯೋಗರಾಜ್‌ ಸಿಂಗ್‌.

RCB vs CSK: ʻಚೆನ್ನೈನಲ್ಲಿ ಗೆಲ್ಲುವುದು ಸುಲಭವಲ್ಲʼ- ಆರ್‌ಸಿಬಿಗೆ ವಾರ್ನಿಂಗ್‌ ಕೊಟ್ಟ ಶೇನ್‌ ವ್ಯಾಟ್ಸನ್‌!

ಅರ್ಜುನ್‌ ತೆಂಡೂಲ್ಕರ್‌ಗೆ ಕೋಚಿಂಗ್‌ ಕೊಡಲು ಸಿದ್ದ

ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಪುತ್ರ ಅರ್ಜುನ್‌ ತೆಂಡೂಲ್ಕರ್‌ಗೆ ಯೋಗರಾಜ್‌ ಸಿಂಗ್‌ ಈ ಹಿಂದೆ ತರಬೇತಿ ನೀಡಿದ್ದರು. ಇದಾದ ಬಳಿಕ ಅರ್ಜುನ್‌ ಗೋವಾ ಪರ ಚೊಚ್ಚಲ ರಣಜಿ ಶತಕವನ್ನು ಸಿಡಿಸಿದ್ದರು. ಆದರೆ, ಇದೀಗ ಅದೇ ವಿಷಯವನ್ನು ಯೋಗರಾಜ್‌ ಸಿಂಗ್‌ ಪ್ರಸ್ತಾಪಿಸಿದ್ದಾರೆ. ಅರ್ಜುನ್‌ ನನ್ನ ಬಳಿ ಕೋಚಿಂಗ್‌ ಪಡೆದರೆ, ಅವರು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಆಗಲಿದ್ದಾರೆಂದು ಹೇಳಿದ್ದಾರೆ.

"ಅರ್ಜುನ್‌ ತೆಂಡೂಲ್ಕರ್‌ ಅವರು ನನ್ನ ಬಳಿಕ ಕೋಚಿಂಗ್‌ ಬಂದರೆ, ಕೇವಲ ಆರು ತಿಂಗಳಲ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಮಾಡುತ್ತೇನೆ. ಅವರ ಬ್ಯಾಟಿಂಗ್‌ನಲ್ಲಿನ ಸಾಮರ್ಥ್ಯ ಯಾರಿಗೂ ಗೊತ್ತಿಲ್ಲ. ಅವರ ಜೊತೆ ನಾನು 12 ದಿನಗಳ ಕಾಲ ಸಮಯ ಕಳೆದಿದ್ದೇನೆ ಹಾಗೂ ಅವರ ರಣಜಿ ಪದಾರ್ಪಣೆ ಪಂದ್ಯದಲ್ಲಿ ಶತಕವನ್ನು ಸಿಡಿಸಿದ್ದರು. ಇದನ್ನು ಯಾರಾದರೂ ಮನವರಿಕೆ ಮಾಡಿಕೊಂಡಿದ್ದಾರಾ?" ಯೋಗರಾಜ್‌ ಸಿಂಗ್‌ ಪ್ರಶ್ನೆ ಮಾಡಿದ್ದಾರೆ.

IPL 2025: ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಬಲ್ಲ ತಮ್ಮ ನೆಚ್ಚಿನ 4 ತಂಡಗಳನ್ನು ಆರಿಸಿದ ಇರ್ಫಾನ್‌ ಪಠಾಣ್‌!

"ಗೋವಾ ತಂಡ ಇಲ್ಲಿಗೆ ಬಂದಿತ್ತು. ಅರ್ಜುನ್‌ ತೆಂಡೂಲ್ಕರ್‌ ಅವರಿಗೆ ಕೋಚಿಂಗ್‌ ಕೊಡಿ ಎಂದು ಸಚಿನ್‌, ಯುವರಾಜ್‌ ಸಿಂಗ್‌ ನನಗೆ ತಿಳಿಸಿದ್ದರು. ಅವರು ನನ್ನ ಬಳಿಕ 10-12 ದಿನಗಳ ಕಾಲ ಇದ್ದರು. ಅವರು ಬೌಲಿಂಗ್‌ ಬಿಟ್ಟು ಬ್ಯಾಟಿಂಗ್‌ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗಿದೆ. ಅವರು ಬ್ಯಾಟಿಂಗ್‌ ಆಲ್‌ರೌಂಡರ್‌ ಆದರೂ ಪರವಾಗಿಲ್ಲ," ಎಂದು ಯುವರಾಜ್‌ ಸಿಂಗ್‌ ತಂದೆ ಈ ಹಿಂದೆ ಹೇಳಿದ್ದರು.