ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ‌ಪ್ರಫುಲ್‌- ಸಾಕಿಬ್‌ ಪವರ್‌ಫುಲ್‌ ಬೌಲಿಂಗ್‌ಗೆ ಶರಣಾದ ರಾಜಸ್ಥಾನ್‌, ಹೈದರಾಬಾದ್‌ಗೆ ಎರಡನೇ ಜಯ!

SRH vs RR Match Highlights: ಪ್ರಸಕ್ತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಗೆಲುವಿನ ಓಟಕ್ಕೆ ಸನ್‌ರೈಸರ್ಸ್‌ ಹೈದರಾಬಾದ್‌ ತಂಡ ಬ್ರೇಕ್‌ ಹಾಕಿದೆ. ಐಪಿಎಲ್‌ಗೆ ಪದಾರ್ಪಣೆ ಪಂದ್ಯದಲ್ಲಿಯೇ ಮಾರಕ ದಾಳಿ ನಡೆಸಿದ ಪ್ರಫುಲ್‌ ಹಿಂಗೆ ಹಾಗೂ ಸಾಕಿಬ್‌ ಹುಸೇನ್‌ ತಲಾ 4 ವಿಕೆಟ್‌ಗಳನ್ನು ಕಿತ್ತು ಎಸ್‌ಆರ್‌ಎಚ್‌ ತಂಡಕ್ಕೆ ಈ ಸೀಸನ್‌ನ ಎರಡನೇ ಗೆಲುವು ತಂದುಕೊಟ್ಟರು.

ರಾಜಸ್ಥಾನದ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿದ ಪ್ರಫುಲ್‌ ಹಿಂಗೆ!

ರಾಜಸ್ಥಾನ್‌ ರಾಯಲ್ಸ್‌ ಎದುರು 4 ವಿಕೆಟ್‌ ಕಿತ್ತ ಪ್ರಫ್ರುಲ್‌ ಹಿಂಗೆ. -

Profile
Ramesh Kote Apr 14, 2026 12:19 AM

ಹೈದರಾಬಾದ್‌: ಡೆಬ್ಯೂಟಂಟ್ಸ್‌ ಪ್ರಫುಲ್‌ ಹಿಂಗೆ (Praful Hinge) ಹಾಗೂ ಸಾಕಿಬ್‌ ಹುಸೇನ್‌ ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಸನ್‌ರೈಸರ್ಸ್‌ ಹೈದರಾಬಾದ್‌ (SRH) ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ರಾಜಸ್ಥಾನ್‌ ರಾಯಲ್ಸ್‌ ತಂಡದ ಗೆಲುವಿನ ಓಟಕ್ಕೆ ಬ್ರೇಕ್‌ ಹಾಕಿತು. ಇಶಾನ್‌ ಕಿಶನ್‌ ನಾಯಕತ್ವದ ಎಸ್‌ಆರ್‌ಎಚ್‌ ತಂಡ 57 ರನ್‌ಗಳಿಂದ ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್‌ ಎದುರು ಗೆದ್ದು ಬೀಗಿತು. ಇದು ಆತಿಥೇಯ ಹೈದರಾಬಾದ್‌ ತಂಡಕ್ಕೆ ಈ ಸೀಸನ್‌ನಲ್ಲಿ ಎರಡನೇ ಗೆಲುವಾಗಿದೆ. ಆರ್‌ಆರ್‌ ಚೇಸಿಂಗ್‌ನ ಮೊದಲ ಓವರ್‌ನಲ್ಲಿಯೇ 3 ವಿಕೆಟ್‌ ಕಿತ್ತ ಪ್ರಫುಲ್‌ ಹಿಂದೆ (34 ಕ್ಕೆ4) ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಸೋಮವಾರ ಇಲ್ಲಿನ ರಾಜೀವ್‌ ಗಾಂಧಿ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ನೀಡಿದ್ದ 217 ರನ್‌ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್‌ ರಾಯಲ್ಸ್‌ಗೆ ಪದಾರ್ಪಣೆ ಪಂದ್ಯದ ಮೊದಲ ಓವರ್‌ನಲ್ಲಿಯೇ ಪ್ರಫುಲ್‌ ಹಿಂಗೆ ತಮ್ಮ ಮಾರಕ ದಅಳಿಯ ಮೂಲಕ ಆರಂಭಿಕ ಆಘಾತ ನೀಡಿದರು. ಅವರು ತಮ್ಮ ಐಪಿಎಲ್‌ ವೃತ್ತಿ ಜೀವನದ ಮೊದಲನೇ ಓವರ್‌ನಲ್ಲಿಯೇ ಅಪಾಯಕಾರಿ ವೈಭವ್‌ ಸೂರ್ಯವಂಶಿ, ಧ್ರುವ್‌ ಜುರೆಲ್‌ ಹಾಗೂ ಲ್ಯೂನ್‌ ಪ್ರೆಟೋರಿಯಸ್‌ ಅವರನ್ನು ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದರು. ಆ ಮೂಲಕ ತಮ್ಮ ವೃತ್ತಿ ಜೀವನದ ಮೊದಲ ಓವರ್‌ ಅನ್ನೇ ಸ್ಮರಣೀಯವಾಗಿಸಿಕೊಂಡರು. ಆ ಮೂಲಕ ಮೊದಲ ಓವರ್‌ನಲ್ಲಿಯೇ ಆರ್‌ಆರ್‌ ಒಂದು ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

SRH vs RR: ʻವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಿʼ-ಅಭಿಷೇಕ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಕಿಡಿ!

ನಂತರ ಮತ್ತೊಬ್ಬ ಡೆಬ್ಯೂಟಂಟ್‌ ಸಾಕಿಬ್‌ ಹುಸೇನ್‌ ಕೂಡ ತಮ್ಮ ಐಪಿಎಲ್‌ ವೃತ್ತಿ ಜೀವನದ ಮೊದಲ ಓವರ್‌ನಲ್ಲಿಯೇ ಯಶಸ್ವಿ ಜೈಸ್ವಾಲ್‌ ಅವರನ್ನು ಔಟ್‌ ಮಾಡಿದರು. ನಂತರ ಮೂರನೇ ಓವರ್‌ಗೆ ಮರಳಿದ ಪ್ರಫುಲ್‌ ನಾಯಕ ರಿಯಾನ್‌ ಪರಾಗ್‌ ಅವರನ್ನು ಔಟ್‌ ಮಾಡಿ ತಮ್ಮ ಪದಾರ್ಪಣೆ ಪಂದ್ಯದಲ್ಲಿ 4 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ರಾಜಸ್ಥಾನ್‌ ರಾಯಲ್ಸ್‌ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್‌ ಮಾಡಿ ಎಸ್‌ಆರ್‌ಎಚ್‌ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಒಟ್ಟು ನಾಲ್ಕು ಓವರ್‌ಗೆ 34 ರನ್‌ ನೀಡಿ ನಾಲ್ಕು ವಿಕೆಟ್‌ ಸಾಧನೆ ಮಾಡಿದರು.



ಜಡೇಜಾ-ಪೆರೆರಾ ಜುಗಲ್‌ಬಂದಿ

ಕೇವಲ 9 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ವೇಳೆ ಕ್ರೀಸ್‌ನಲ್ಲಿ ಜೊತೆಯಾದ ರವೀಂದ್ರ ಜಡೇಜಾ ಹಾಗೂ ಡೊನೊವಾನ್‌ ಫೆರೆರಾ ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಈ ಜೋಡಿ 72 ಎಸೆತಗಳಲ್ಲಿ 118 ರನ್‌ಗಳ ಜೊತೆಯಾಟವನ್ನು ಆಡಿದರು. ಆ ಮೂಲಕ ಆರ್‌ಆರ್‌ಗೆ ಭರವಸೆ ಮೂಡಿಸಿದ್ದರು. ಸ್ಪೋಟಕ ಬ್ಯಾಟ್‌ ಮಾಡಿದ ಡೊನೊವಾನ್‌ ಫೆರೆರಾ 44 ಎಸೆತಗಳಲ್ಲಿ 69 ರನ್‌ ಗಳಿಸಿದರೆ, ರವೀಂದ್ರ ಜಡೇಜಾ 32 ಎಸೆತಗಳಲ್ಲಿ 45 ರನ್‌ ಗಳಿಸಿ ಔಟ್‌ ಆದರು. ತುಷಾರ್‌ ದೇಶಪಾಂಡೆ ಕೊನೆಯಲ್ಲಿ 25 ರನ್‌ ಗಳಿಸಿದರು. ಇವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.



ಡೆಬ್ಯೂಟಂಟ್‌ ಸಾಕಿಬ್‌ ಹುಸೇನ್‌ ತಮ್ಮ ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ಕೇವಲ 24 ರನ್‌ ನೀಡಿ ಚೊಚ್ಚಲ 4 ವಿಕೆಟ್‌ ಸಾಧನೆ ಮಾಡಿದರು. ಆ ಮೂಲಕ ಎಲ್ಲರ ಗಮನ ಸೆಳೆದರು. ಪ್ರಫುಲ್‌ ಹಿಂಗೆ ಹಾಗೂ ಸಾಕಿಬ್‌ ಹುಸೇನ್‌ ಅವರು ತಮ್ಮ ಪದಾರ್ಪಣೆ ಪಂದ್ಯದಲ್ಲಿಯೇ ತಮ್ಮ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವನ್ನು ಗೆಲ್ಲಿಸಿದರು.

ಸನ್‌ರೈಸರ್ಸ್‌ಗೆ ಆರಂಭಿಕ ಆಘಾತ ನೀಡಿದ ಆರ್ಚರ್‌

ಟಾಸ್ ಸೋತ ನಂತರ ಮೊದಲು ಬ್ಯಾಟಿಂಗ್ ಮಾಡುವಂತಾದ ಸನ್‌ರೈಸರ್ಸ್ ಹೈದರಾಬಾದ್ ತಂಡ, ಅಭಿಷೇಕ್ ಶರ್ಮಾ ಅವರ ವಿಕೆಟ್‌ ಕಳೆದುಕೊಳ್ಳುವ ಮೂಲಕ ಪಂದ್ಯದ ಮೊದಲ ಎಸೆತದಲ್ಲೇ ಆಘಾತ ಅನುಭವಿಸಿತು. ಜೋಫ್ರಾ ಆರ್ಚರ್ ಎಡಗೈ ಆಟಗಾರನ ವಿಕೆಟ್ ಪಡೆದರು. ಆ ಹಂತದಿಂದ ನಾಯಕ ಇಶಾನ್ ಕಿಶನ್, ಟ್ರಾವಿಸ್ ಹೆಡ್ ಅವರೊಂದಿಗೆ ಎರಡನೇ ವಿಕೆಟ್‌ಗೆ 40 ಎಸೆತಗಳಲ್ಲಿ 55 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು. ಹೆಡ್ 18 ಎಸೆತಗಳಲ್ಲಿ 3 ಬೌಂಡರಿಗಳನ್ನು ಒಳಗೊಂಡಂತೆ 18 ರನ್ ಗಳಿಸಿದ ನಂತರ ಪೆವಿಲಿಯನ್‌ಗೆ ಮರಳಿದರು.

SRH vs RR: ʻವೈಭವ್‌ ಸೂರ್ಯವಂಶಿಗೆ ಸ್ಥಾನ ನೀಡಿʼ-ಅಭಿಷೇಕ್‌ ಶರ್ಮಾ ವಿರುದ್ಧ ಫ್ಯಾನ್ಸ್‌ ಕಿಡಿ!

ಎಸ್‌ಆರ್‌ಎಚ್‌ಗೆ ಇಶಾನ್‌ ಕಿಶನ್‌ ಆಸರೆ

ಇದಾದ ನಂತರ ಇಶಾನ್ ಹೆನ್ರಿಕ್ ಕ್ಲಾಸೆನ್ ಅವರೊಂದಿಗೆ ಮೂರನೇ ವಿಕೆಟ್‌ಗೆ 88 ರನ್‌ಗಳನ್ನು ಸೇರಿಸುವ ಮೂಲಕ ತಂಡದ ಕಮ್‌ಬ್ಯಾಕ್‌ಗೆ ನೆರವು ನೀಡಿದರು. ಈ ಪಾಲುದಾರಿಕೆ 39 ಎಸೆತಗಳಲ್ಲಿ ನಡೆಯಿತು. ಇಶಾನ್ ಕಿಶನ್ ಕೇವಲ 9 ರನ್‌ಗಳಿಂದ ತಮ್ಮ ಎರಡನೇ ಐಪಿಎಲ್ ಶತಕವನ್ನು ತಪ್ಪಿಸಿಕೊಂಡರು; ಅವರು 44 ಎಸೆತಗಳಲ್ಲಿ 91 ರನ್ ಗಳಿಸಿದರು, ಇದರಲ್ಲಿ 6 ಸಿಕ್ಸರ್‌ಗಳು ಮತ್ತು 8 ಬೌಂಡರಿಗಳು ಸೇರಿವೆ.

216 ರನ್‌ ಕಲೆ ಹಾಕಿದ ಹೈದರಾಬಾದ್‌

ನಿತೀಶ್ ರೆಡ್ಡಿ ಹೆನ್ರಿಕ್ ಕ್ಲಾಸೆನ್ (ಅವರು 40 ರನ್‌ಗಳು) ಜೊತೆಗೆ ನಾಲ್ಕನೇ ವಿಕೆಟ್‌ಗೆ 19 ರನ್‌ಗಳ ಕೊಡುಗೆ ನೀಡಿದರು ಮತ್ತು ನಂತರ ಸಲೀಲ್ ಅರೋರಾ ಅವರೊಂದಿಗೆ ಐದನೇ ವಿಕೆಟ್‌ಗೆ 33 ರನ್‌ಗಳನ್ನು ಸೇರಿಸಿದರು. ನಿತೀಶ್ ರೆಡ್ಡಿ 13 ಎಸೆತಗಳಲ್ಲಿ 28 ರನ್ ಗಳಿಸಿ ಔಟಾದರು - ಈ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್‌ಗಳು ಸೇರಿವೆ - ಆದರೆ ಸಲೀಲ್ ಅರೋರಾ 13 ಎಸೆತಗಳಲ್ಲಿ 4 ಬೌಂಡರಿಗಳು ಸೇರಿದಂತೆ 24 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಹೈದರಾಬಾದ್‌ ತಂಡ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ ನಷ್ಟಕ್ಕೆ 216 ರನ್‌ಗಳನ್ನು ಕಲೆ ಹಾಕಿತು. ರಾಜಸ್ಥಾನ್ ರಾಯಲ್ಸ್ ಪರ ಜೋಫ್ರಾ ಆರ್ಚರ್ 2 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ, ತುಷಾರ್ ದೇಶಪಾಂಡೆ ಮತ್ತು ರಿಯಾನ್ ಪರಾಗ್ ತಲಾ ಒಂದು ವಿಕೆಟ್ ಪಡೆದರು.