ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs LSG: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮಯಾಂಕ್‌ ಯಾದವ್‌ ಫಿಟ್‌, ಲಖನೌಗೆ ಸಿಕ್ತು ಆನೆ ಬಲ!

Mayank yadav Fit for RCB's Match: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯಕ್ಕೆ ಲಖನೌ ಸೂಪರ್‌ ಜಯಂಟ್ಸ್‌ ತಂಡದ ವೇಗದ ಬೌಲರ್‌ ಮಯಾಂಕ್‌ ಯಾದವ್‌ ಸಂಪೂರ್ಣ ಫಿಟ್‌ ಆಗಿದ್ದಾರೆಂದು ಹೆಡ್‌ ಕೋಚ್‌ ಟಾಮ್‌ ಮೂಡಿ ಸ್ಪಷ್ಟಪಡಿಸಿದ್ದಾರೆ.

‌IPL 2026: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮಯಾಂಕ್‌ ಯಾದವ್‌ ಫಿಟ್‌!

ಮೊಹ್ಸಿನ್‌ ಖಾನ್‌, ಮಾಯಾಂಕ್‌ ಯಾದವ್‌ ಸಂಪೂರ್ಣ ಫಿಟ್‌. -

Profile
Ramesh Kote Apr 14, 2026 10:44 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯ ಇತಿಹಾಸದಲ್ಲಿ ಅತ್ಯಂತ ಅಪಾಯಕಾರಿ ವೇಗಿಗಳಲ್ಲಿ ಒಬ್ಬರಾಗಿರುವ ಲಖನೌ ಸೂಪರ್‌ ಜಯಂಟ್ಸ್‌ ತಂಡದ ಮಯಾಂಕ್‌ ಯಾದವ್‌ (Mayank Yadav) ಅವರು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ (RCB vs LSG) ಆಡುವ ಸಾಧ್ಯತೆ ಇದೆ. 2025ರ ಮೇ 4 ರಂದು ಕೊನೆಯ ಬಾರಿ ಐಪಿಎಲ್‌ ಟೂರ್ನಿಯಲ್ಲಿ ಆಡಿದ್ದ ಮಾಯಂಕ್‌, ಇದೀಗ ಸಂಪೂರ್ಣ ಫಿಟ್‌ ಆಗಿದ್ದಾರೆಂದು ಲಖನೌ ತಂಡದ ನಿರ್ದೇಶಕ ಟಾಮ್‌ ಮೂಡಿ (Tom Moody) ಸ್ಪಷ್ಟಪಡಿಸಿದ್ದಾರೆ.

ಬುಧವಾರ ಆರ್‌ಸಿಬಿ ವಿರುದ್ಧದ ಪಂದ್ಯದ ನಿಮಿತ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟಾಮ್‌ ಮೂಡಿ, ಐಪಿಎಲ್‌ ಟೂರ್ನಿಯ ಅತ್ಯುತ್ತಮ ವೇಗಿಗಳಾದ ಮೊಹ್ಸಿನ್‌ ಖಾನ್‌ ಹಾಗೂ ಮಯಾಂಕ್‌ ಯಾದವ್‌ ಅವರು ಮರಳಿರುವುದರಿಂದ ಎಲ್‌ಎಸ್‌ಜಿ ತಂಡ ಆನೆ ಬಲ ಬಂದಂತಾಗಿದೆ ಎಂದು ಹೇಳಿದ್ದಾರೆ. ದೀರ್ಘಾವಧಿ ಗಾಯದಿಂದ ಗುಣಮುಖರಾಗಿ ತಂಡಕ್ಕೆ ಮರಳಿರುವ ಈ ಇಬ್ಬರೂ ವೇಗಿಗಳನ್ನು ಸಂಪೂರ್ಣವಾಗಿ ಫಿಟ್‌ ಆಗಿದ್ದು, ಅವರನ್ನು ತುಂಬಾ ಎಚ್ಚರಿಕೆಯಿಂದ ನಿರ್ವಹಿಸಬೇಕಾಗಿದೆ ಎಂದಿದ್ದಾರೆ.

Blessing Muzarabani: ಕೆಕೆಆರ್‌ ವೇಗಿಗೆ ಎರಡು ವರ್ಷ ಬ್ಯಾನ್‌! ಕಾರಣ ಇಲ್ಲಿದೆ ನೋಡಿ

“ಮಯಾಂಕ್ ಮತ್ತು ಮೊಹ್ಸಿನ್ (ಖಾನ್) ಅವರಂತಹ ಆಟಗಾರರು ದೀರ್ಘಕಾಲದ ಗಾಯಗಳಿಂದ ಬಳಲುತ್ತಿದ್ದರು. ಆದ್ದರಿಂದ, ಅವರನ್ನು ಮತ್ತೆ ಆಟಕ್ಕೆ ಸಿದ್ಧಗೊಳಿಸಲು ಕಳೆದ ಕೆಲವು ತಿಂಗಳ ಕಾಲ ನಮ್ಮ ವೈದ್ಯಕೀಯ ತಂಡ ಅತ್ಯಂತ ಶ್ರಮಪಟ್ಟಿದೆ,” ಎಂದು ಟಾಮ್‌ ಮೂಡಿ ಅವರು ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

IPL 2026: ವಿರಾಟ್‌ ಕೊಹ್ಲಿ ಔಟ್‌? ಎಲ್‌ಎಸ್‌ಜಿ ಪಂದ್ಯಕ್ಕೆ ಆರ್‌ಸಿಬಿ ಸಂಭಾವ್ಯ ಪ್ಲೇಯಿಂಗ್‌ XI ವಿವರ!

“ಅವರೆಲ್ಲರೂ ಈಗ ಆಟಕ್ಕೆ ಸಿದ್ಧರಾಗಿದ್ದಾರೆ. ಮೊಹ್ಸಿನ್ ನಾಳೆ (ಬುಧವಾರ) ಅಂತಿಮ ಪರೀಕ್ಷೆಗೆ ಒಳಪಡಬಹುದು, ಆ ಮೂಲಕ ಅವರು ಆಯ್ಕೆಗಾಗಿ ಲಭ್ಯರಾಗಿದ್ದಾರೆಯೇ ಎಂಬುದನ್ನು ನಿರ್ಧರಿಸಲಾಗುತ್ತದೆ. ಮಯಾಂಕ್ ವಿಷಯಕ್ಕೆ ಬಂದರೆ, ಅವರು ಕೂಡ ಆಡಲು ಸಿದ್ಧರಾಗಿದ್ದಾರೆ. ಟೂರ್ನಿಯ ಆರಂಭಿಕ ಹಂತದಲ್ಲಿ ಅವರನ್ನು ನಮ್ಮ ಯೋಜನೆಗಳಲ್ಲಿ ಸೇರಿಸಿಕೊಳ್ಳಲಿಲ್ಲ, ಏಕೆಂದರೆ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿರಲಿಲ್ಲ. ವಿಶೇಷವಾಗಿ ಬೌಲಿಂಗ್ ಮತ್ತು ಒಬ್ಬ ವೇಗದ ಬೌಲರ್‌ಗೆ ಬೇಕಾದ ವರ್ಕ್‌ಲೋಡ್‌ ಮ್ಯಾನೇಜ್‌ಮೆಂಟ್‌ ವಿಷಯದಲ್ಲಿ ಅವರು ಇನ್ನೂ ಪೂರ್ಣ ಸಿದ್ಧರಾಗಿರಲಿಲ್ಲ,” ಎಂದು ಟಾಮ್‌ ಮೂಡಿ ಹೇಳಿದ್ದಾರೆ.

ಜಸ್‌ಪ್ರೀತ್‌ ಬುಮ್ರಾರನ್ನು ಹಿಂದಿಕ್ಕಿ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ಭಾಜನರಾದ ಸಂಜು ಸ್ಯಾಮ್ಸನ್‌!

ಮಯಾಂಕ್‌ ಯಾದವ್‌ ಕಳೆದ ಸೀಸನ್‌ನಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದ್ದರು. ಅವರ ಕೊನೆಯ ಪಂದ್ಯ ಮೇ 4 ರಂದು ನಡೆದಿದ್ದು, ಆ ಪಂದ್ಯದಲ್ಲಿ ಅವರು ಪಂಜಾಬ್‌ ಕಿಂಗ್ಸ್‌ ವಿರುದ್ಧ 60 ರನ್‌ಗಳನ್ನು ನೀಡಿದ್ದರು. ಸಾಮಾನ್ಯವಾಗಿ ಹೆಚ್ಚಿನ ವೇಗದಲ್ಲಿ ಬೌಲ್‌ ಮಾಡುವ ಅವರ ಶೈಲಿಗೆ ಬದಲಾಗಿ, ಅವರು ಹೆಚ್ಚಾಗಿ ಕಟರ್‌ಗಳನ್ನು ಹಾಕುತ್ತಾ 135–140 ಕಿಮೀ/ಗಂ ವೇಗದ ಸುತ್ತಲೇ ಬೌಲ್‌ ಮಾಡಿದ್ದರು.