ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಗೋವಾ ವಿರುದ್ಧ ಶತಕ ಬಾರಿಸಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಬರೆದ ಋತುರಾಜ್‌ ಗಾಯಕ್ವಾಡ್‌!

Ruturaj Gaikwad Hits 20Th List A Century: ಗೋವಾ ವಿರುದ್ಧದ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿದ ಮಹಾರಾಷ್ಟ್ರ ತಂಡದ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ವಿಶೇಷ ದಾಖಲೆಯನ್ನು ಬರೆದಿದ್ದಾರೆ. 100 ಇನಿಂಗ್ಸ್‌ಗಳ ಒಳಗೆ 20 ಲಿಸ್ಟ್‌ ಎ ಶತಕಗಳನ್ನು ಗಳಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ.

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 20ನೇ ಶತಕ ಬಾರಿಸಿ ದಾಖಲೆ ಬರೆದ ಗಾಯಕ್ವಾಡ್‌!

20ನೇ ಲಿಸ್ಟ್‌ ಎ ಶತಕ ಬಾರಿಸಿದ ಋತುರಾಜ್‌ ಗಾಯಕ್ವಾಡ್‌. -

Profile
Ramesh Kote Jan 8, 2026 4:47 PM

ನವದೆಹಲಿ: ಭಾರತ ಏಕದಿನ ತಂಡದಿಂದ ಕೈ ಬಿಟ್ಟ ಬಳಿಕ ಮಹಾರಾಷ್ಟ್ರ ತಂಡದ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ದೇಶಿ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಮುಂದುವರಿಸುತ್ತಿದ್ದಾರೆ. 2025-26ರ ಸಾಲಿನ ವಿಜಯ ಹಝಾರೆ ಟ್ರೋಫಿ (Vijay Hazare Trophy 2025-26) ಟೂರ್ನಿಯ ಗೋವಾ ವಿರುದ್ಧದ ಕೊನೆಯ ಲೀಗ್‌ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಋತುರಾಜ್‌ ಗಾಯಕ್ವಾಡ್‌ ಶತಕವನ್ನು ಸಿಡಿಸಿದರು. ಆ ಮೂಲಕ ನ್ಯೂಜಿಲೆಂಡ್‌ ವಿರುದ್ಧದ ಏಕದಿನ ಸರಣಿಯ (IND vs NZ) ಭಾರತ ತಂಡದಿಂದ ಕೈ ಬಿಟ್ಟ ಬಿಸಿಸಿಐ ಆಯ್ಕೆದಾರರಿಗೆ ತಿರುಗೇಟು ನೀಡಿದ್ದಾರೆ. ಅಲ್ಲದೆ ಈ ಶತಕದ ಮೂಲಕ ಅವರು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆಯನ್ನು ಬರೆದಿದ್ದಾರೆ.

ಜೈಪುರದ ಸೋನಿ ಸ್ಟೇಡಿಯಂನಲ್ಲಿ ಗುರುವಾರ ನಡೆದಿದ್ದ ಪಂದ್ಯದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ ಋತುರಾಜ್‌ ಗಾಯಕ್ವಾಡ್‌, 131 ಎಸೆತಗಳಲ್ಲಿ 134 ರನ್‌ಗಳನ್ನು ಬಾರಿಸಿದರು. ಅರ್ಶಿನ್‌ ಕುಲಕರ್ಣಿ, ಅಂಕಿತ್‌ ಬಾವ್ನೆ ಹಾಗೂ ಪೃಥ್ವಿ ವಿಕೆಟ್‌ ಒಪ್ಪಿಸಿದ ಬಳಿಕ ಐದನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ತೆರಳಿದ ಇವರು, ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡುತ್ತಿದ್ದರು. ಆದರೆ ಮತ್ತೊಂದು ತುದಿಯಲ್ಲಿ ವಿಕೆಟ್‌ಗಳು ನಿರಂತರವಾಗಿ ಉರುಳುತ್ತಿದ್ದವು. 25 ರನ್‌ಗೆ 5 ವಿಕೆಟ್‌ ಕಳೆದುಕೊಂಡಿದ್ದ ಮಹಾರಾಷ್ಟ್ರ ನಂತರ, 53 ರನ್‌ಗಳಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

IND vs NZ: ಭಾರತ ಏಕದಿನ ತಂಡಕ್ಕೆ ಬಂತು ಆನೆ ಬಲ, ಫಿಟ್ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ಶ್ರೇಯಸ್‌ ಅಯ್ಯರ್‌!

ಈ ವೇಳೆ ಏಕಾಂಗಿ ಹೋರಾಟ ನಡಸಿದ ಗಾಯಕ್ವಾಡ್‌, ಗೋವಾ ಬೌಲರ್‌ಗಳ ಸವಾಲನ್ನು ಮೆಟ್ಟಿ ನಿಂತರು. ಅವರು ತಮ್ಮ 94ನೇ ಲಿಸ್ಟ್‌ ಎ ಇನಿಂಗ್ಸ್‌ನಲ್ಲಿ 20ನೇ ಶತಕವನ್ನು ಪೂರ್ಣಗೊಳಿಸಿದರು. ಇದು ಅವರ ವಿಜಯ ಹಝಾರೆ ಟ್ರೋಫಿ ಟೂರ್ನಿಯ 15ನೇ ಶತಕವಾಗಿದೆ. ಆ ಮೂಲಕ ಈ ಟೂರ್ನಿಯಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಜಂಟಿ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ತಮ್ಮ ಸಹ ಆಟಗಾರ ಅಂಕಿತ್‌ ಬಾವ್ನೆ ಜೊತೆ ಹಂಚಿಕೊಂಡಿದ್ದಾರೆ.ಅನಧಿಕೃತ ಏಕದಿನ ಪಂದ್ಯಗಳಲ್ಲಿ ಭಾರತ ಎ ಪರ ಮೂರು ಶತಕಗಳು ಹಾಗೂ ಭಾರತ ಬಿ ತಂಡದ ಪರ ದೇವದತ್‌ ಟ್ರೋಫಿ ಟೂರ್ನಿಯಲ್ಲಿ ಒಂದು ಶತಕವನ್ನು ಗಳಿಸಿದ್ದಾರೆ. ಇತ್ತೀಚೆಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿಯೂ ಶತಕವನ್ನು ಬಾರಿಸಿದ್ದರು.

ವಿಶೇಷ ದಾಖಲೆ ಬರೆದ ಋತುರಾಜ್‌ ಗಾಯಕ್ವಾಡ್‌

ಋತುರಾಜ್‌ ಗಾಯಕ್ವಾಡ್‌ ಅವರು ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 100 ಇನಿಂಗ್ಸ್‌ಗಳ ಒಳಗೆ 20 ಶತಕಗಳನ್ನು ಭಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ. ಆ ಮೂಲಕ ಕರ್ನಾಟಕ ತಂಡದ ನಾಯಕ ಮಯಾಂಕ್‌ ಅಗರ್ವಾಲ್‌ ಅವರ ದಾಖಲೆಯನ್ನು ಮುರಿದಿದ್ದಾರೆ.

ಭಾರತ ಏಕದಿನ ಸರಣಿಯಲ್ಲಿ ನಮಗೆ ದೊಡ್ಡ ಸವಾಲು ಎದುರಾಗಲಿದೆ ಎಂದ ಡ್ಯಾರಿಲ್‌ ಮಿಚೆಲ್‌!

ಮಂಗಳವಾರ (ಜನವರಿ 6) ಕರ್ನಾಟಕದ ಪರ ರಾಜಸ್ಥಾನ ವಿರುದ್ಧ ಶತಕ ಗಳಿಸುವ ಮೂಲಕ ಭಾರತೀಯ ಕ್ರಿಕೆಟಿಗ ಮಯಾಂಕ್ ಅಗರ್ವಾಲ್ ಅವರ ದಾಖಲೆಯನ್ನು ಇದೀಗ ಗಾಯಕ್ವಾಡ್‌ ಮುರಿದಿದ್ದಾರೆ. ಪಾಕಿಸ್ತಾನದ ಖುರ್ರಂ ಮಂಜೂರ್ ಅವರೊಂದಿಗೆ ಮಾಯಾಂಕ್ ಈ ದಾಖಲೆಯನ್ನು ಹಂಚಿಕೊಂಡಿದ್ದಾರೆ.

ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವೇಗವಾಗಿ 20 ಶತಕ ಸಿಡಿಸಿದ ಬ್ಯಾಟರ್ಸ್‌

ಋತುರಾಜ್‌ ಗಾಯಕ್ವಾಡ್‌: 95-2026

ಖುರಮ್‌ ಮಂಝೂರ್‌: 129-2018

ಮಯಾಂಕ್‌ ಅಗರ್ವಾಲ್‌: 129-2026

ಬಾಬರ್‌ ಆಝಮ್‌: 131-2019

ವಿರಾಟ್‌ ಕೊಹ್ಲಿ: 143-2013

ಸಲ್ಮಾನ್‌ ಬಟ್‌: 149-2016