ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻನನಗೆ ಸಂದೇಶ ಕಳುಹಿಸಿದ್ದು ಕೆಲವರು ಮಾತ್ರʼ: ಕಠಿಣ ದಿನಗಳನ್ನು ನೆನೆದ ಶ್ರೇಯಸ್‌ ಅಯ್ಯರ್‌!

Shreyas Iyer on his 'tough phase': ಇಂಗ್ಲೆಂಡ್‌ ವಿರುದ್ದದ ಏಕದಿನ ಸರಣಿ ಹಾಗೂ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶ್ರೇಯಸ್‌ ಅಯ್ಯರ್‌ ಬಲಿಷ್ಠವಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. ಈ ಬಗ್ಗೆ ಶ್ರೇಯಸ್‌ ಅಯ್ಯರ್‌ ಪ್ರತಿಕ್ರಿಯಿಸಿದ್ದು, 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ ತಾನು ಅತ್ಯಂತ ದಿನಗಳನ್ನು ಎದುರಿಸಿದ್ದೆ ಹಾಗೂ ಈ ಅವಧಿಯಲ್ಲಿ ಹಲವರು ಬೆಂಬಲ ಸೂಚಿಸಿದ್ದರು ಎಂದು ಹೇಳಿಕೊಂಡಿದ್ದಾರೆ.

ತಾವು ಎದುರಿಸಿದ ಕಠಿಣ ದಿನಗಳನ್ನು ನೆನೆದ ಶ್ರೇಯಸ್‌ ಅಯ್ಯರ್!

ಶ್ರೇಯಸ್‌ ಅಯ್ಯರ್‌

Profile Ramesh Kote Mar 11, 2025 10:33 PM

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶ್ರೇಯಸ್‌ ಅಯ್ಯರ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದ್ದಾರೆ. 2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯ ಬಳಿಕ 18 ತಿಂಗಳುಗಳ ಅವಧಿಯಲ್ಲಿ ತಾನು ಎದುರಿಸಿದ ಕಠಿಣ ಸಂಗತಿಗಳನ್ನು ಬಲಗೈ ಬ್ಯಾಟ್ಸ್‌ಮನ್‌ ರಿವೀಲ್‌ ಮಾಡಿದ್ದಾರೆ. ಈ ಕಠಿಣ ಅವಧಿಯಲ್ಲಿ ನನಗೆ ಬೆಂಬಲ ಸೂಚಿಸಿದ್ದರು ಹಾಗೂ ಕೆಲವರು ಸಂದೇಶವನ್ನು ಕಳುಹಿಸಿದ್ದರು. ನಾನು ಈ ಅವಧಿಯಲ್ಲಿ ನನ್ನನ್ನು ನಾನು ಸಾಕಷ್ಟು ಸುಧಾರಣೆಯನ್ನು ಕಂಡಿದ್ದೇನೆಂದು ಹೇಳಿಕೊಂಡಿದ್ದಾರೆ. ಅಂದ ಹಾಗೆ ಇತ್ತೀಚೆಗೆ ಮುಗಿಸಿದ್ದ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಮೂರು ಅರ್ಧಶತಕಗಳೊಂದಿಗೆ 243 ರನ್‌ಗಳನ್ನು ಗಳಿಸಿದ್ದರು. ಆ ಮೂಲಕ ಭಾರತದ ಪರ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು.

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ ಬಳಿಕ ಮಾತನಾಡಿದ್ದ ಶ್ರೇಯಸ್‌ ಅಯ್ಯರ್‌, ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ತಮ್ಮ ಜೊತೆ ಕಾರ್ಯ ನಿರ್ವಹಿಸಿದ್ದ ಸಹಾಯಕ ಕೋಚ್‌ ಅಭಿಷೇಕ್‌ ನಾಯರ್‌, ಪ್ರವೀನ್‌ ಆಮ್ರೆ, ಸಾಗರ್‌ ಸೇರಿದಂತೆ ಸಹಾಯಕ ಸಿಬ್ಬಂದಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

IND vs NZ: ರೋಹಿತ್‌ ಶರ್ಮಾ ಬ್ಯಾಟಿಂಗ್‌ನಿಂದ ಬೌಲರ್‌ಗಳು ಭಯ ಬಿದ್ದಿದ್ದರೆಂದ ಮಿಚೆಲ್‌ ಸ್ಯಾಂಟ್ನರ್‌!

ಟೈಮ್ಸ್‌ ಆಫ್‌ ಇಂಡಿಯಾ ಸಂದರ್ಶನದಲ್ಲಿ ಮಾತನಾಡಿದ ಶ್ರೇಯಸ್‌ ಅಯ್ಯರ್‌, "ನಾನು ಕಠಿಣ ದಿನಗಳನ್ನು ಎದುರಿಸಿದ್ದ ಅವಧಿಯಲ್ಲಿ ಕೆಲವರೇ ಕೆಲವರು ನನಗೆ ಸಂದೇಶವನ್ನು ಕಳುಹಿಸಿದ್ದರು. ಅವರು ಯಾರೆಂದರೆ, ಪ್ರವೀಣ್‌ ಆಮ್ರೆ ಸರ್‌, ಅಭಿಷೇಕ್‌ ನಾಯರ್‌, ಸಾಗರ್‌ ಸೇರಿದಂತೆ ಇನ್ನೂ ಕೆಲವರು ನನಗೆ ಬೆಂಬಲ ನೀಡಿದ್ದರು ಹಾಗೂ ಅವರೊಂದಿಗೆ ನಾನು ಸದಾ ಸಂಪರ್ಕದಲ್ಲಿದ್ದೆ. ಎಲ್ಲವೂ ಚೆನ್ನಾಗಿದೆ ಎಂಬ ರೀತಿ ಅವರು ನನ್ನೊಂದಿಗೆ ಸಾಮಾನ್ಯವಾಗಿದ್ದರು. ನೀವು ನಿಮ್ಮ ವೃತ್ತಿ ಜೀವನದಲ್ಲಿ ಕೆಳ ಹಂತದಲ್ಲಿದ್ದಾಗ, ಇಂಥಾ ವ್ಯಕ್ತಿಗಳು ನಿಮ್ಮ ಜೊತೆ ಇದ್ದಾಗ, ನೀವು ಖಂಡಿತವಾಗಿಯೂ ಸುಧಾರಣೆಯನ್ನು ಕಾಣುತ್ತೀರಿ," ಎಂದು ಹೇಳಿದ್ದಾರೆ.

ಐಪಿಎಲ್‌ ಗೆದ್ದ ಬಳಿಕ ನನಗೆ ಮನ್ನಣೆ ಸಿಗಲಿಲ್ಲ

ಇದೇ ವೇಳೆ ಶ್ರೇಯಸ್‌ ಅಯ್ಯರ್‌, ಕಳೆದ ವರ್ಷದ ತಂಡ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತನ್ನ ನಾಯಕತ್ವದಲ್ಲಿ ಕೆಕೆಆರ್‌ ತಂಡಕ್ಕೆ ಪ್ರಶಸ್ತಿಯನ್ನು ತಂದುಕೊಟ್ಟಿದ್ದರ ಹೊರತಾಗಿಯೂ ಕೋಲ್ಕತಾ ಫ್ರಾಂಚೈಸಿಯಲ್ಲಿ ನನಗೆ ಯಾರೂ ಮನ್ನಣೆ ನೀಡಲಿಲ್ಲ ಎಂದು ಶ್ರೇಯಸ್‌ ಅಯ್ಯರ್‌ ದೂರಿದ್ದಾರೆ. ಚಾಂಪಿಯನ್‌ ಆಗಿದ್ದರ ಹೊರತಾಗಿಯೂ ಕೋಲ್ಕತಾ ಫ್ರಾಂಚೈಸಿ ಶ್ರೇಯಸ್‌ ಅಯ್ಯರ್‌ ಅವರನ್ನು 2025ರ ಐಪಿಎಲ್ ಮೆಗಾ ಹರಾಜಿ‌ಗೆ ಬಿಡುಗಡೆ ಮಾಡಿತ್ತು. ಮೆಗಾ ಹರಾಜಿನಲ್ಲಿ ಶ್ರೇಯಸ್‌ ಅಯ್ಯರ್‌ ಅವರನ್ನು 26.75 ಕೋಟಿ ರೂ. ಗಳಿಗೆ ಪಂಜಾಬ್‌ ಕಿಂಗ್ಸ್ ಖರೀದಿಸಿತ್ತು.

IPL 2025: ʻನನ್ನನ್ನು ಯಾರೂ ಗುರುತಿಸಲಿಲ್ಲʼ-ಕೆಕೆಆರ್‌ ವಿರುದ್ಧ ಶ್ರೇಯಸ್‌ ಅಯ್ಯರ್‌ ಗಂಭೀರ ಆರೋಪ!

"ಐಪಿಎಲ್‌ ಗೆಲ್ಲುವುದು ನನ್ನ ದೊಡ್ಡ ಗುರಿಯಾಗಿತ್ತು ಹಾಗೂ ಅದನ್ನು ಸಾಧಿಸಿದ್ದೇನೆ. ಆದರೆ, ಕೆಕೆಆರ್‌ಗೆ ಐಪಿಎಲ್‌ ಗೆದ್ದುಕೊಟ್ಟ ಬಳಿಕ ನಾನು ಬಯಸಿದ ಮನ್ನಣೆ ನನಗೆ ಸಿಗಲಿಲ್ಲ ಎಂದು ವೈಯಕ್ತಿಕವಾಗಿ ಅನಿಸಿತು. ದಿನದಾಂತ್ಯಕ್ಕೆ ನೀವು ಸ್ವಯಂ ಸಮಗ್ರತೆಯನ್ನು ಹೊಂದಿದ್ದರೂ ಯಾರೂ ನಿಮ್ಮನ್ನು ನೋಡಿಲ್ಲವಾದರೆ, ಏನೂ ಮಾಡಲು ಸಾಧ್ಯವಿಲ್ಲ. ಈ ವೇಳೆ ನಾನು ನನ್ನ ಸಂಗತಿಗಳ ಬಗ್ಗೆ ಮಾತ್ರ ಯೋಚಿಸುತ್ತಿದ್ದೆ," ಎಂದು ಶ್ರೇಯಸ್‌ ಅಯ್ಯರ್‌ ಹೇಳಿದ್ದಾರೆ.

"ನಾನು ಹೇಳಿದ ಮನ್ನಣೆ ಎಂದರೆ ಗೌರವವನ್ನು ನೀಡುವುದಾಗಿರುತ್ತದೆ. ಮೈದಾನದಲ್ಲಿ ತಾನು ಹಾಕಿದ ಪ್ರಯತ್ನ ಹಾಗೂ ಕಠಿಣ ಪರಿಶ್ರಮದ ಗೌರವ ಇದಾಗಿರುತ್ತದೆ. ಕೆಲವೊಮ್ಮೆ ಇದಕ್ಕೆ ಯಾರೂ ಮನ್ನಣೆ ನೀಡುವುದಿಲ್ಲ ಅಥವಾ ಗುರುತಿಸುವುದಿಲ್ಲ ಎಂದು ನನಗೆ ಅನಿಸುತ್ತದೆ. ಆದರೆ, ನನ್ನ ಪ್ರಯತ್ನದ ಬಗ್ಗೆ ನನಗೆ ಸಂಪೂರ್ಣ ತೃಪ್ತಿ ಇದೆ. ಏಕೆಂದರೆ ಬ್ಯಾಟಿಂಗ್‌ಗೆ ಇಲ್ಲಿನ ಪಿಚ್‌ ತುಂಬಾ ಕಠಿಣವಾಗಿತ್ತು," ಎಂದು ಪಂಜಾಬ್‌ ಕಿಂಗ್ಸ್‌ ನಾಯಕ ತಿಳಿಸಿದ್ದಾರೆ.‌

IND vs NZ: ನೆಟ್‌ ಬೌಲರ್‌ಗೆ ವಿಶೇಷ ಉಡುಗೊರೆ ನೀಡಿ ಹೃದಯವಂತಿಕೆ ಮೆರೆದ ಶ್ರೇಯಸ್‌ ಅಯ್ಯರ್‌!

2023ರ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಅವರು ಅಸಾಧಾರಣ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಈ ಟೂರ್ನಿಯಲ್ಲಿ 500ಕ್ಕೂ ಅಧಿಕ ರನ್‌ ಗಳಿಸಿದ ಏಳು ಮಂದಿ ಬ್ಯಾಟ್ಸ್‌ಮನ್‌ಗಳಲ್ಲಿ ಶ್ರೇಯಸ್‌ ಅಯ್ಯರ್‌ ಕೂಡ ಒಬ್ಬರು. ಈ ಟೂರ್ನಿಯಲ್ಲಿ ಶ್ರೇಯಸ್‌ ಅಯ್ಯರ್‌ ಎರಡು ಶತಕಗಳನ್ನು ಗಳಿಸಿದ್ದರು. ನ್ಯೂಜಿಲೆಂಡ್‌ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಶ್ರೇಯಸ್‌ ಅಯ್ಯರ್‌ ಶತಕವನ್ನು ಸಿಡಿಸಿ ಭಾರತ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.