ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL ಟೂರ್ನಿಯಿಂದ ಸಂಜೀವ್‌ ಗೊಯಾಂಕರನ್ನು ಬ್ಯಾನ್‌ ಮಾಡಿ ಎಂದ ಲಲಿತ್‌ ಮೋದಿ!

IPL 2026: ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ತಂಡ ಸೋಲು ಅನುಭವಿಸಿದ ಬಳಿಕ ಐಪಿಎಲ್‌ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ ಅವರು, ಲಖನೌ ಫ್ರಾಂಚೈಸಿ ಮಾಲೀಕ ಸಂಜೀವ್‌ ಗೋಯಾಂಕ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪೋಸ್ಟ್‌ಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಜೀವ್‌ ಗೋಯಾಂಕರನ್ನು ಬ್ಯಾನ್‌ ಮಾಡಿ ಎಂದ ಲಲಿತ್‌ ಮೋದಿ!

ಸಂಜೀವ್‌ ಗೋಯೆಂಕಾ ವಿರುದ್ಧ ಲಲಿತ್‌ ಮೋದಿ ಗುಡುಗು. -

Profile
Ramesh Kote Apr 3, 2026 5:37 PM

ನವದೆಹಲಿ: ಲಖನೌ ಸೂಪರ್‌ ಜಯಂಟ್ಸ್‌ (LSG) ತಂಡದ ಮಾಲೀಕರಾದ ಸಂಜೀವ್‌ ಗೋಯಾಂಕ (Sanjiv Goenka) ವಿರುದ್ಧ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಮಾಜಿ ಮುಖ್ಯಸ್ಥ ಲಲಿತ್‌ ಮೋದಿ(Lalit Modi) ತಮ್ಮ ಆಕ್ರೋಶದ ಮಾತುಗಳನ್ನು ಮುಂದುವರಿಸಿದ್ದಾರೆ. ಲಖನೌದ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿದ್ದ ತನ್ನ ಮೊದಲ ಪಂದ್ಯದಲ್ಲಿ ಲಖನೌ ಸೂಪರ್‌ ಜಯಂಟ್ಸ್‌, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲು ಅನುಭವಿಸಿದ ನಂತರ, ರಿಷಭ್‌ ಪಂತ್‌ ಅವರೊಂದಿಗೆ ಅಸಮಾಧಾನಭರಿತ ಸಂಭಾಷಣೆಯ ಫೋಟೋ ಹಾಗೂ ವಿಡಿಯೊಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದವು.ಈ ಹಿನ್ನೆಲೆಯಲ್ಲಿ ಲಲಿತ್ ಮೋದಿ ಅವರು ಸಂಜೀವ್‌ ಗೋಯಾಕ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಕ್ರಿಕೆಟ್ ಲೀಗ್‌ನ ಸ್ಥಾಪಕ ಲಲಿತ್‌ ಮೋದಿ, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಲಖನೌ ಸೂಪರ್‌ ಜಯಂಟ್ಸ್ ಮಾಲೀಕರಾದ ಸಂಜೀವ್‌ ಗೋಯಾಂಕ ಮೇಲೆ ನಿಷೇಧ ಹೇರಬೇಕೆಂದು ಆಗ್ರಹಿಸಿದ್ದಾರೆ. ಪಂದ್ಯದ ಫೋಟೋ ಹಾಗೂ ವಿಡಿಯೊಗಳು ವೈರಲ್ ಆಗುವ ಮೂಲಕ 2024ರ ಐಪಿಎಲ್‌ ಸಮಯದಲ್ಲಿ ಕೆಎಲ್ ರಾಹುಲ್ ಅವರೊಂದಿಗೆ ನಡೆದಿದ್ದ ಘಟನೆಯನ್ನು ನೆನಪಿಸಿವೆ.

IPL 2026: ಐಪಿಎಲ್ ನೀತಿ ಸಂಹಿತೆ ಉಲ್ಲಂಘನೆ: ಅಭಿಷೇಕ್‌ ಶರ್ಮಾಗೆ ದಂಡ

ಸಂಜೀವ್‌ ಗೊಯಾಂಕ ಆಡಂಬರದ ಜೋಕರ್

“ನಾನು ನಿಮಗೆ ಹೇಳಿದ್ದೇನೆ, ಲಖನೌ ಫ್ರಾಂಚೈಸಿಯ ಮಾಲೀಕರಾದ ಸಂಜೀವ್‌ ಗೋಯಾಂಕ ಸಂಪೂರ್ಣ ಸೋಲಿನ ವ್ಯಕ್ತಿ ಮತ್ತು ಅತ್ಯಂತ ಹಾಸ್ಯಕಾರ! ಅವರ ವರ್ತನೆಯಿಂದ ನಾನು ನಿಜವಾಗಿಯೂ ತುಂಬಾ ನೊಂದಿದ್ದೇನೆ. ನಾನು ಐಪಿಎಲ್ ಅನ್ನು ಅಭಿಮಾನಿಗಳು ಮತ್ತು ಆಟಗಾರರಿಗಾಗಿ ಹುಟ್ಟು ಹಾಕಿದ್ದೆ, ಪ್ರತಿವರ್ಷ ಯಾವುದೇ ಸಂದರ್ಭದಲ್ಲಿ ಇಂತಹ ಘಟನೆ ನಡೆಯಬಾರದು. ನಾನು ಇನ್ನೂ ಅಧ್ಯಕ್ಷರಾಗಿದ್ದರೆ ಅಥವಾ ಆಯುಕ್ತರಾಗಿದ್ದರೆ, ತಕ್ಷಣವೇ ಅವರನ್ನು ನಿಷೇಧಿಸಿ, ಅವರು ತಂಡದ ಮಾಲೀಕತ್ವವನ್ನು ಶಾಶ್ವತವಾಗಿ ಕಳೆದುಕೊಳ್ಳುವಂತೆ ಮಾಡುತ್ತಿದ್ದೆ. ಅವರು ಸಂಪೂರ್ಣ ಆಡಂಬರದ ಜೋಕರ್. ಈ ಸಮಸ್ಯೆಗೆ ಫ್ರಾಂಚೈಸಿ ಒಪ್ಪಂದದಲ್ಲಿ ಪ್ರತ್ಯೇಕ ನಿಯಮ ಇದೆ. ಬಿಸಿಸಿಐ ಇದನ್ನು ಜಾರಿಗೆ ತರಬೇಕು, ಅಖಂಡತೆಯನ್ನು ಎತ್ತಿ ಹಿಡಿಯಬೇಕು. ಕಠಿಣ ಕ್ರಮ ತೆಗೆದುಕೊಂಡರೆ, ಅಭಿಮಾನಿಗಳು ಮತ್ತು ಆಟಗಾರರು ಇದನ್ನು ನೆನೆಪಿನಲ್ಲಿಟ್ಟುಕೊಳ್ಳುತ್ತಾರೆ,” ಎಂದು ಎಕ್ಸ್‌ ಖಾತೆಯಲ್ಲಿ ಲಲಿತ್‌ ಮೋದಿ ಬರೆದುಕೊಂಡಿದ್ದಾರೆ.

IPL 2026: ವರುಣ್‌ ಚಕ್ರವರ್ತಿ ಬೌಲಿಂಗ್‌ ವೈಫಲ್ಯಕ್ಕೆ ನೈಜ ಕಾರಣ ತಿಳಿಸಿದ ಅಭಿಷೇಕ್‌ ನಾಯರ್‌!

ಸಂಜೀವ್‌ ಗೊಯಾಂಕ ನನಗೆ ಸೋದರ ಮಾವ

ಮತ್ತೊಂದು ಪೋಸ್ಟ್‌ನಲ್ಲಿ ಲಲಿತ್‌ ಮೋದಿ ಅವರು, ಸಂಜೀವ್‌ ಗೊಯಾಂಕ ತಮ್ಮ ಮಾವನ ಮಗ ಎಂದು ಹೇಳಿದ್ದಾರೆ, ಆದರೆ ಆಟದಲ್ಲಿ ಸಂಬಂಧಗಳು ಮುಖ್ಯವಲ್ಲ ಎಂದು ಹೇಳಿದ್ದಾರೆ. ಲಲಿತ್ ಮೋದಿ ಅವರು ಎಲ್‌ಎಸ್‌ಜಿ ಓನರ್‌ ವಿಷಕಾರಿ ವ್ಯಕ್ತಿ ಎಂದು ಕರೆಯುತ್ತಾ, ಅವರನ್ನು ಕ್ರಿಕೆಟ್ ಆಟಕ್ಕೆ ವಿಷ ಎಂದು ಉಲ್ಲೇಖಿಸಿದ್ದಾರೆ.



“ನೀವು ಧೈರ್ಯದಿಂದ ಮಾಡಿದ ಒಂದು ಹೇಳಿಕೆಯನ್ನು ನಾನು ಒಪ್ಪುತ್ತೇನೆ, ಅದು ಅಂತಿಮ ವಾಕ್ಯ. ನೀವು ನಿರಂತರವಾಗಿ, ಸ್ಪಷ್ಟವಾಗಿ ಮತ್ತು ಸಮಗ್ರವಾಗಿ ಐಪಿಎಲ್‌ ಟೂರ್ನಿಯನ್ನು ಅವಮಾನ ಮಾಡಿಸುತ್ತಿದ್ದೀರಿ. ನಿಮಗೆ ನಿಷೇಧ ವಿಧಿಸಲಾಗುತ್ತದೆ. ನಿಮ್ಮ ಅನುಕೂಲಕ್ಕಾಗಿ ರಾಜೀನಾಮೆ ನೀಡಿ ಮತ್ತು ಸ್ಟೇಡಿಯಂನೊಳಗೆ ಬರಬೇಡಿ. ನೀವು ಕ್ರಿಕೆಟ್ ಆಟಕ್ಕೆ, ಅದರ ಅಖಂಡತೆ, ಪರಿಸರ, ಅಭಿಮಾನಿಗಳು ಮತ್ತು ಮುಖ್ಯವಾಗಿ ಆಟಗಾರರಿಗೆ ವಿಷವಾಗಿದ್ದೀರಿ. ನೀವು ವಿಷಕಾರಿ ವ್ಯಕ್ತಿ. ನೀವು ನಿಮ್ಮ ಕಾರ್ಖಾನೆಗಳಲ್ಲಿ ಮಾತ್ರ ಇರಿ. ನೀವು ನನ್ನ ಮಾವನ ಮಗ. ಆದರೆ ಆಟವೇ ಮೊದಲಿಗೆ ಬರುತ್ತದೆ, ನೀವು ಅಲ್ಲ,” ಎಂದು ಲಲಿತ್‌ ಮೋದಿ ಎಕ್ಸ್‌ ಖಾತೆಯಲ್ಲಿ ಸಂಜೀವ್‌ ಗೊಯಾಂಕ ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದಾರೆ.