ಇಂದಿನ ಪಂದ್ಯದಲ್ಲಿ ಆರ್‌ಸಿಬಿ-ಟೈಟಾನ್ಸ್ ಆಟಗಾರರು ನಿರ್ಮಿಸಬಹುದಾದ ದಾಖಲೆಗಳಿವು
IPL 2026: ಆರ್‌ಸಿಬಿಯ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಬಲಿಷ್ಠವಾಗಿವೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಅಲ್ಲದೇ ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮಾ ಅವರ ಬೀಸಾಟಕ್ಕೆ ಕಡಿವಾಣ ಹಾಕುವುದು ಎದುರಾಳಿ ಬೌಲರ್ ಗಳಿಗೆ ಸುಲಭವಲ್ಲ.
GT vs RCB -
ಅಹಮದಾಬಾದ್, ಎ.30: ರಾಯಲ್ ಚಾಲೆಂಜರ್ಸ್ ಬೆಂಗಳೂರು(GT vs RCB) ತಂಡವು ಯಶಸ್ಸಿನ ಓಟವನ್ನು ಮುಂದುವರಿಸುವ ಛಲದೊಂದಿಗೆ ಇಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್(IPL 2026) ಪಂದ್ಯದಲ್ಲಿ ಶುಭಮನ್ ಗಿಲ್ ನಾಯಕತ್ವದ ಗುಜರಾತ್ ಟೈಟನ್ಸ್ ಎದುರು ಕಣಕ್ಕಿಳಿಯಲಿದೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಕೆಲವು ಮಹತ್ವದ ದಾಖಲೆಯ ಸನಿಹದಲ್ಲಿದ್ದಾರೆ. ಈ ದಾಖಲೆಗಳ ಪಟ್ಟಿ ಹೀಗಿದೆ.
ಜೋಸ್ ಬಟ್ಲರ್: 1300 ಟಿ20 ಬೌಂಡರಿಗಳಿಗೆ 7 ಬೌಂಡರಿಗಳು ಬೇಕಾಗಿವೆ.
ಜೋಸ್ ಬಟ್ಲರ್: 200 ಐಪಿಎಲ್ ಸಿಕ್ಸರ್‌ಗಳಿಗೆ 4 ಬೌಂಡರಿಗಳು ಬೇಕಾಗಿವೆ.
ಮೊಹಮ್ಮದ್ ಸಿರಾಜ್: 200 ಟಿ20 ವಿಕೆಟ್‌ಗಳಿಗೆ 6 ವಿಕೆಟ್‌ಗಳು ಬೇಕಾಗಿವೆ.
ಕಾಗಿಸೊ ರಬಾಡ: 50 ಟಿ20 ಬೌಂಡರಿಗಳಿಗೆ 1 ಬೌಂಡರಿ ಬೇಕು.
ಜಾಕೋಬ್ ಬೆಥೆಲ್: 150 ಟಿ20 ಬೌಂಡರಿಗಳಿಗೆ 2 ಬೌಂಡರಿಗಳು ಬೇಕಾಗಿವೆ.
ಜಾಕೋಬ್ ಬೆಥೆಲ್: 100 ಟಿ20 ಸಿಕ್ಸರ್‌ಗಳಿಗೆ 1 ಸಿಕ್ಸರ್ ಅಗತ್ಯವಿದೆ.
ವಿರಾಟ್ ಕೊಹ್ಲಿ: 14,000 ಟಿ20 ರನ್‌ಗಳಿಗೆ 106 ರನ್‌ಗಳು ಬೇಕಾಗಿವೆ.
ವಿರಾಟ್ ಕೊಹ್ಲಿ: 450 ಐಪಿಎಲ್ ಸಿಕ್ಸರ್‌ಗಳಿಗೆ 1 ಸಿಕ್ಸರ್ ಅಗತ್ಯವಿದೆ.
ಭುವನೇಶ್ವರ ಕುಮಾರ್: 350 ಟಿ20 ವಿಕೆಟ್‌ಗಳಿಗೆ 1 ವಿಕೆಟ್ ಅಗತ್ಯವಿದೆ.
ಆರ್‌ಸಿಬಿ ಬಲಿಷ್ಠ
ಆರ್‌ಸಿಬಿಯ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಗಳು ಬಲಿಷ್ಠವಾಗಿವೆ. ಬ್ಯಾಟಿಂಗ್‌ನಲ್ಲಿ ವಿರಾಟ್ ಅಲ್ಲದೇ ದೇವದತ್ತ ಪಡಿಕ್ಕಲ್, ಟಿಮ್ ಡೇವಿಡ್, ನಾಯಕ ರಜತ್ ಪಾಟೀದಾರ್, ಜಿತೇಶ್ ಶರ್ಮಾ ಅವರ ಬೀಸಾಟಕ್ಕೆ ಕಡಿವಾಣ ಹಾಕುವುದು ಎದುರಾಳಿ ಬೌಲರ್ ಗಳಿಗೆ ಸುಲಭವಲ್ಲ. ಸ್ಪಿನ್‌ನಲ್ಲಿ ಕೃಣಾಲ್ ಪಾಂಡ್ಯ ಮತ್ತು ಸುಯಶ್ ಶರ್ಮಾ ಅವರು ಮೋಡಿ ಮಾಡಿದರೆ, ವೇಗದ ದಾಳಿ ವಿಭಾಗದಲ್ಲಿ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ತುಂಬಾನೆ ಘಾತಕವಾಗಿದ್ದಾರೆ. ಹೀಗಾಗಿ ಆತಿಥೇಯ ತಂಡದ ಬ್ಯಾಟರ್‌ಗಳಾದ ಗಿಲ್, ಜೋಸ್ ಬಟ್ಲರ್, ಸಾಯಿ ಸುದರ್ಶನ್, ಶಾರೂಕ್ ಖಾನ್‌ಗೆ ಕಠಿಣ ಸವಾಲು ಎದುರಾಗಬಹುದು.
GT vs RCB: ಇಂದಿನ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ವಿಶ್ವ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ
ಸಂಭಾವ್ಯ ತಂಡಗಳು
ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್ (ನಾಯಕ), ಸಾಯಿ ಸುದರ್ಶನ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಶಾರುಖ್ ಖಾನ್, ವಾಷಿಂಗ್ಟನ್ ಸುಂದರ್, ಜೇಸನ್ ಹೋಲ್ಡರ್, ರಶೀದ್ ಖಾನ್, ಪ್ರಸಿದ್ಧ್ ಕೃಷ್ಣ, ಕಗಿಸೊ ರಬಾಡ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್.
ಇಂಪ್ಯಾಕ್ಟ್ ಆಟಗಾರ: ರಾಹುಲ್ ತೆವಾಟಿಯಾ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ರಜತ್ ಪಾಟಿದಾರ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಟಿಮ್ ಡೇವಿಡ್, ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್ವುಡ್, ಸುಯಶ್ ಶರ್ಮಾ, ರಸಿಖ್ ಸಲಾಮ್ ದಾರ್.
ಇಂಪ್ಯಾಕ್ಟ್ ಪ್ಲೇಯರ್: ಜಾಕೋಬ್ ಬೆಥೆಲ್.