ಬಿಹಾರದಲ್ಲಿ ಗಣರಾಜ್ಯೋತ್ಸವದಂದೇ ಪಾಕಿಸ್ತಾನ ಪರ ಘೋಷಣೆ ಕೂಗಿದ ಶಿಕ್ಷಕ
ಬಿಹಾರದ ಸುಪೌಲ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಯ ವೇಳೆ ಶಿಕ್ಷಕನೊಬ್ಬ ಪಾಕಿಸ್ತಾನ ಹಾಗೂ ಅದರ ಸಂಸ್ಥಾಪಕ ಮುಹಮ್ಮದ್ ಅಲಿ ಜಿನ್ನಾ ಅವರನ್ನು ಬೆಂಬಲಿಸಿ ಘೋಷಣೆ ಕೂಗಿದ್ದಾನೆ. ಈ ಘಟನೆ ಕಿಶನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ಬೆಳಕಿಗೆ ಬಂದ ಬಳಿಕ ತನಿಖೆ ಆರಂಭಿಸಲಾಗಿದೆ.
ಸಾಂದರ್ಭಿಕ ಚಿತ್ರ -
ಪಾಟ್ನಾ, ಜ. 27: ಬಿಹಾರ (Bihar)ದ ಸುಪೌಲ್ (Supaul) ಜಿಲ್ಲೆಯಲ್ಲಿ 77ನೇ ಗಣರಾಜ್ಯೋತ್ಸವ (Republic Day) ಆಚರಣೆಯ ವೇಳೆ ಪಾಕಿಸ್ತಾನ ಮತ್ತು ಅದರ ಸಂಸ್ಥಾಪಕ ಹಾಗೂ ಮೊದಲ ಗೌವರ್ನರ್ ಜನರಲ್ (Governor General) ಮೊಹಮ್ಮದ್ ಅಲಿ ಜಿನ್ನಾ (Mohammed Ali Jinnah) ಪರ ಘೋಷಣೆ ಕೂಗಿದ ಆರೋಪದ ಮೇಲೆ ಸೋಮವಾರ (ಜನವರಿ 26) ಸರ್ಕಾರಿ ಶಾಲಾ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ಮನ್ಸೂರ್ ಆಲಂ (Mansoor Alam) ಎಂದು ಗುರುತಿಸಲಾಗಿde.
ಈತ ಕಿಶನ್‌ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಬುವರ್‌ನ ಆದರ್ಶ ಉತ್ಕ್ರಮಿತ್ ಮಾಧ್ಯಮಿಕ ವಿದ್ಯಾಲಯದಲ್ಲಿ ಸಹಾಯಕ ಶಿಕ್ಷಕ. ಧ್ವಜಾರೋಹಣದ ನಂತರ ರಾಷ್ಟ್ರಗೀತೆ ಮುಗಿಯುತ್ತಿದ್ದಂತೆ ಮನ್ಸೂರ್ ಆಲಂ “ಮೊಹಮ್ಮದ್ ಜಿನ್ನಾ ಅಮರ್ ರಹೇ” (ಮೊಹಮ್ಮದ್ ಜಿನ್ನಾ ಅಮರರಾಗಿರಲಿ) ಎಂಬ ಘೋಷಣೆಗಳನ್ನು ಕೂಗಿದ್ದಾನೆ. ಬಳಿಕ ವಿದ್ಯಾರ್ಥಿಗಳೂ ಸಹ ಆಲಂನ ಘೋಷಣೆಗಳನ್ನೇ ಅನುಸರಿಸಿ ಕೂಗಿದ್ದಾರೆ ಎಂದು ವರದಿಯಾಗಿದೆ. ಇದರಿಂದ ಅಲ್ಲೇ ಇದ್ದ ಇತರ ಶಿಕ್ಷಕರು ಹಾಗೂ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿಕ್ಷಕ ಆಲಂ ಭಾರತೀಯ ಸಂವಿಧಾನದ ವಿರುದ್ಧ ನಡೆದುಕೊಂಡು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಆರೋಪಿಸಿ ಸ್ಥಳೀಯರು ಪ್ರತಿಭಟನೆಗೆ ನಡೆಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಜನಸ್ತೋಮ ಉಂಟಾಗಿದ್ದು, ಆರೋಪಿಯನ್ನು ತಮ್ಮ ವಶಕ್ಕೆ ನೀಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪಿಯುಸಿ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದ ಪೊಲೀಸ್ ಕಾನ್ಸ್ಟೇಬಲ್ ಅರೆಸ್ಟ್
ಠಾಣಾಧಿಕಾರಿ ಜ್ಞಾನ ರಂಜನ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ ಜನರನ್ನು ಸಮಾಧಾನಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದೆ ಮತ್ತು ಪೊಲೀಸ್ ರಕ್ಷಣೆಯೊಂದಲ್ಲೇ ಆಲಂನನ್ನು ಠಾಣೆಗೆ ಕರೆತರಲಾಗಿದೆ. ಇದೀಗ ಮುಖ್ಯೋಪಾಧ್ಯಾಯರ ಹೇಳಿಕೆಯ ಆಧಾರದಲ್ಲಿ ಅಧಿಕೃತ ದೂರು ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
"ವಿದ್ಯಾರ್ಥಿಗಳು ನೀಡಿದ ಮಾಹಿತಿಯಂತೆ, ಆಲಂ ಪಾಕಿಸ್ತಾನವನ್ನು ‘ಜನ್ನತ್’ (ಸ್ವರ್ಗ) ಎಂದು ವಿವರಿಸುತ್ತಿದ್ದ ಮತ್ತು ಕೆಲವು ಮಕ್ಕಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ್ದ. ವಿದ್ಯಾರ್ಥಿಗಳ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಆತನ ಹಿನ್ನೆಲೆಯನ್ನು ಪರಿಶೀಲಿಸಲಾಗುತ್ತಿದೆ” ಎಂದು ಶಿಕ್ಷಕರೊಬ್ಬರು ಹೇಳಿದ್ದಾರೆ.
ಈ ತರಹದ ಘಟನೆ ಇದೇ ಮೊದಲಲ್ಲ ಎಂದ ಪೊಲೀಸ್ ಅಧಿಕಾರಿಗಳು, ಈ ಹಿಂದೆಯೂ ಬಿಹಾರದ ವಿವಿಧ ಜಿಲ್ಲೆಗಳಲ್ಲಿ ಸ್ವಾತಂತ್ರ್ಯ ದಿನ ಅಥವಾ ಗಣರಾಜ್ಯೋತ್ಸವ ದಿನದಂದು ಪಾಕಿಸ್ತಾನದ ಧ್ವಜ ಹಾರಿಸುವುದು ಹಾಗೂ ರಾಷ್ಟ್ರವಿರೋಧಿ ಘೋಷಣೆಗಳನ್ನು ಕೂಗಿರುವ ಘಟನೆಗಳು ನಡೆದಿವೆ ಎಂದು ಹೇಳಿದ್ದಾರೆ.
2016ರಲ್ಲಿ ನಳಂದ ಜಿಲ್ಲೆಯ ಬಿಹಾರ್‌ಶರೀಫ್ ಪಟ್ಟಣದ ಖರಾಡಿ ಕಾಲೋನಿಯೊಂದರಲ್ಲಿ ಪಾಕಿಸ್ತಾನದ ಧ್ವಜ ಹಾರಿಸಲಾಗಿದ್ದು, ನಂತರ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದರು. ಆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. 2023ರಲ್ಲಿ ಪೂರ್ಣಿಯಾ ಜಿಲ್ಲೆಯ ಮಧುಬನಿ ಪ್ರದೇಶದ ಸಿಪಾಹಿ ಟೋಲಾ ಭಾಗದ ಮನೆಯೊಂದರಲ್ಲಿ ಪಾಕಿಸ್ತಾನದ ಧ್ವಜಗಳು ಪತ್ತೆಯಾಗಿದ್ದವು.