ಭಾರತದ ಟಿ20 ವಿಶ್ವಕಪ್ ಗೆಲುವಿನ ಕ್ಷಣವನ್ನು ಕಾಮೆಂಟರಿಯಲ್ಲಿ ಹಾಳು ಮಾಡಿದ; ರವಿಶಾಸ್ತ್ರಿ
Ravi Shastri Blender: ಭಾರತ ತಂಡ ತವರಿನಲ್ಲೇ ಏಕದಿನ ಹಾಗೂ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿತು. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆದ್ದು, ತವರಿನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಸಾಧನೆ ಮಾಡಿತ್ತು. ಈ ಬಾರಿ ಟಿ20 ವಿಶ್ವಕಪ್‌ನಲ್ಲೂ ಅದೇ ಸಾಧನೆ ಪುನರಾವರ್ತಿಸಿದೆ. ಈವರೆಗೂ ಯಾವುದೇ ತಂಡ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿರಲಿಲ್ಲ.
-
ಅಹಮದಾಬಾದ್, ಮಾ.9: ಭಾರತೀಯ ಕ್ರಿಕೆಟ್ ಇತಿಹಾಸದ ಕೆಲವು ಅಪ್ರತಿಮ ಕ್ಷಣಗಳೊಂದಿಗೆ ರವಿಶಾಸ್ತ್ರಿ ಅವರ ನಿರೂಪಣೆ ಮರೆಯಲಾಗದು. ಯುವರಾಜ್ ಸಿಂಗ್ ಒಂದೇ ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಸಿಡಿಸಿದಾಗಿನಿಂದ ಹಿಡಿದು 2011 ರ ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್(T20 World Cup)ನಲ್ಲಿ ಭಾರತದ ವಿಜಯೋತ್ಸವದ ಸಮಯದಲ್ಲಿ ಅವರು ವ್ಯಾಖ್ಯಾನಿಸಿದ ಪದಗಳು ಭಾರತೀಯ ಅಭಿಮಾನಿಗಳಿಗಳ ಎಂದೂ ಮರೆಯಲು ಅಸಾಧ್ಯ. ಆದರೆ ಭಾನುವಾರ ನಡೆದ ನ್ಯೂಜಿಲೆಂಡ್ ವಿರುದ್ಧದ ಟಿ20 ವಿಶ್ವಕಪ್‌ನಲ್ಲಿ ರವಿಶಾಸ್ತ್ರಿ ಕಾಮೆಂಟರಿ(Ravi Shastri Blender) ಮಾಡುವ ಬರದಲ್ಲಿ ಸಣ್ಣದೊಂದು ತಪ್ಪನ್ನು ಮಾಡಿದರು.
ಪಂದ್ಯದ ಅತ್ಯಂತ ನಿರ್ಣಾಯಕ ಕ್ಷಣದಲ್ಲಿ ರವಿಶಾಸ್ತ್ರಿ ಮಾಡಿದ ಈ ಎಡವಟ್ಟು ಇದೀಗ ಅವರನ್ನು ಟ್ರೋಲ್ ಮಾಡುವಂತೆ ಮಾಡಿದೆ. ಈ ಬಗ್ಗೆ ಅನೇಕ ನೆಟ್ಟಿಗರು ಕಮೆಂಟ್ ಮೂಲಕ ಶಾಸ್ತ್ರಿಯನ್ನು ಅಣಕಿಸಿದ್ದಾರೆ.
ಹೌದು, ಅಭಿಷೇಕ್ ಶರ್ಮ ಎಸೆದೆ 19ನೇ ಓವರ್‌ನ ಕೊನೆಯ ಎಸೆತದಲ್ಲಿ ಜಾಕೋಬ್ ಡಫ್ಫಿ ಅವರು ಲಾಂಗ್ ಆಫ್ ಕಡೆಗೆ ಬಾರಿಸಿದ ಚೆಂಡು ತಿಲಕ್ ವರ್ಮ ಕೈ ಸೇರಿತು. ಇದರೊಂದಿಗೆ ನ್ಯೂಜಿಲೆಂಡ್ ಆಲೌಟ್ ಆಯಿತು. ಆದರೆ ಕಾಮೆಂಟರಿ ಮಾಡುತ್ತಿದ್ದ ರವಿಶಾಸ್ತ್ರಿ "ಅಂತಿಮ ಹಂತದ ಆಟದಲ್ಲಿ ಒಂಬತ್ತನೇ ವಿಕೆಟ್ ಪತನವಾಯಿತು" ಎಂದು ಶಾಸ್ತ್ರಿ ಪ್ರಸಾರದಲ್ಲಿ ಹೇಳಿದರು ಆದರೆ ಭಾರತೀಯ ತಂಡ ಸಂಭ್ರಮಾಚರಣೆಯಲ್ಲಿ ತೊಡಗಿದಾಗ ಶಾಸ್ತ್ರಿಗೆ ತಮ್ಮ ತಪ್ಪಿನ ಅರಿವಾಯಿತು. "ವಾಸ್ತವವಾಗಿ ಎಲ್ಲವೂ ಮುಗಿದಿದೆ. ಭಾರತ ಮೂರನೇ ಬಾರಿಗೆ ವಿಶ್ವಕಪ್ ಗೆದ್ದಿದೆ. ಸತತ ಎರಡು ವಿಶ್ವಕಪ್ ಗೆದ್ದ ಮೊದಲ ತಂಡ ಮತ್ತು ಟಿ20 ವಿಶ್ವಕಪ್ ಗೆದ್ದ ಮೊದಲ ಆತಿಥೇಯ ತಂಡ" ಎಂದು ಅವರು ಹೇಳಿದರು. ಆದರೆ ಶಾಸ್ತ್ರಿಯ ಈ ಪ್ರಮಾದವನ್ನು ಪಂದ್ಯದ ಬಳಿಕ ಟ್ರೋಲ್ ಮಾಡಿದ್ದಾರೆ.
nah man Ravi Shastri is washed now, blud didn't even know if it was the 9th or 10th wicket, completely ruined the moment https://t.co/SlhCSgqWXG
— soo washed (@anubhav__tweets) March 8, 2026
ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ತಂಡವನ್ನು 96 ರನ್‌ಗಳ ಬೃಹತ್ ಅಂತರದಿಂದ ಸೋಲಿಸಿ ಟ್ರೋಫಿ ತನ್ನದಾಗಿಸಿಕೊಂಡಿತು. ಸೂರ್ಯಕುಮಾರ್ ಯಾದವ್ ನೇತೃತ್ವದ ತಂಡ ಮೊದಲು ಬ್ಯಾಟಿಂಗ್ ಮಾಡಿ 255 ರನ್‌ಗಳ ಬೃಹತ್ ಮೊತ್ತವನ್ನು ಗಳಿಸಿತು. ಆ ಬಳಿಕ ಗುರಿ ಹಿಂಬಾಲಿಸಿದ ಮಿಚೆಲ್ ಸ್ಯಾಂಟ್ನರ್ ನೇತೃತ್ವದ ನ್ಯೂಜಿಲೆಂಡ್ ತಂಡವನ್ನು ಕೇವಲ 159 ರನ್‌ಗಳಿಗೆ ಆಲೌಟ್ ಮಾಡಿತು.
ಭಾರತ ತಂಡ ತವರಿನಲ್ಲೇ ಏಕದಿನ ಹಾಗೂ ಟಿ20 ವಿಶ್ವಕಪ್ ಗೆದ್ದ ಮೊದಲ ತಂಡ ಎನಿಸಿಕೊಂಡಿತು. 2011ರಲ್ಲಿ ಭಾರತದಲ್ಲೇ ನಡೆದಿದ್ದ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಗೆದ್ದು, ತವರಿನಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ಸಾಧನೆ ಮಾಡಿತ್ತು. ಈ ಬಾರಿ ಟಿ20 ವಿಶ್ವಕಪ್‌ನಲ್ಲೂ ಅದೇ ಸಾಧನೆ ಪುನರಾವರ್ತಿಸಿದೆ. ಈವರೆಗೂ ಯಾವುದೇ ತಂಡ ತವರಿನಲ್ಲಿ ಟಿ20 ವಿಶ್ವಕಪ್ ಗೆದ್ದಿರಲಿಲ್ಲ.
nah man Ravi Shastri is washed now, blud didn't even know if it was the 9th or 10th wicket, completely ruined the moment https://t.co/SlhCSgqWXG
— soo washed (@anubhav__tweets) March 8, 2026
ಇದುವರೆಗಿನ ಟಿ20 ವಿಶ್ವಕಪ್ ಇತಿಹಾಸದಲ್ಲಿ ಈವರೆಗೆ ಯಾವ ತಂಡವೂ ಸತತ 2 ಹಾಗೂ ಒಟ್ಟಾರೆ 3 ಬಾರಿ ಟಿ20 ವಿಶ್ವಕಪ್ ಜಯಿಸಿರಲಿಲ್ಲ. ಇದೀಗ ಈ ದಾಖಲೆಯನ್ನು ಭಾರತ ತಂಡ ಬರೆದಿದೆ. ತಂಡ ಈ ಹಿಂದೆ 2007, 2024ರಲ್ಲಿ ಚಾಂಪಿಯನ್ ಆಗಿತ್ತು. ಈ ಬಾರಿ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡಿದೆ.