ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೂಪರ್ 300 ಬ್ಯಾಡ್ಮಿಂಟನ್‌: ಮಾಜಿ ವಿಶ್ವ ಚಾಂಪಿಯನ್‌ಗೆ ಸೋಲುಣಿಸಿದ 16 ವರ್ಷದ ತನ್ವಿ

ಪಂಜಾಬ್ ಮೂಲದ ತನ್ವಿ, ಆರಂಭಿಕ ಗೇಮ್‌ನಲ್ಲಿ ಸೋತರು ಆ ಬಳಿಕದ ನಿರ್ಣಾಯಕ ಎರಡು ಗೇಮ್‌ಗಳಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ತನ್ವಿ ದೇಶವಾಸಿ ಅಶ್ಮಿತಾ ಚಲಿಹಾ ಅವರನ್ನು 21-15, 21-19 ನೇರ ಸೆಟ್‌ಗಳಿಂದ ಸೋಲಿಸಿದ್ದರು.

ಸೈಯದ್‌ ಮೋದಿ ಬ್ಯಾಡ್ಮಿಂಟನ್‌ನಲ್ಲಿ ಪ್ರಣಯ್‌ಗೆ ಆಘಾತಕಾರಿ ಸೋಲು

ತನ್ವಿ ಶರ್ಮಾ -

Abhilash BC
Abhilash BC Nov 27, 2025 8:10 PM

ಲಕ್ನೋ, ನ.27: ಗುರುವಾರ ಇಲ್ಲಿ ನಡೆದ ಸೈಯದ್ ಮೋದಿ ಇಂಟರ್‌ನ್ಯಾಷನಲ್‌(Syed Modi International) ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತೆ ತನ್ವಿ ಶರ್ಮಾ(Tanvi Sharma), ಈ ಋತುವಿನ ಅಚ್ಚರಿಯ ಪ್ರದರ್ಶನ ನೀಡಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟರು. 16 ವರ್ಷದ ಉದಯೋನ್ಮುಖ ತಾರೆ ವೃತ್ತಿಜೀವನದ ನಿರ್ಣಾಯಕ ಪ್ರದರ್ಶನ ನೀಡಿ, 59 ನಿಮಿಷಗಳ ರೋಮಾಂಚಕ ಪಂದ್ಯದಲ್ಲಿ ಮಾಜಿ ವಿಶ್ವ ಚಾಂಪಿಯನ್ ನೊಜೊಮಿ ಒಕುಹರಾ ಅವರನ್ನು 13-21, 21-16, 21-19 ಅಂತರದಿಂದ ಮಣಿಸಿದರು.

ಪಂಜಾಬ್ ಮೂಲದ ತನ್ವಿ, ಆರಂಭಿಕ ಗೇಮ್‌ನಲ್ಲಿ ಸೋತರು ಆ ಬಳಿಕದ ನಿರ್ಣಾಯಕ ಎರಡು ಗೇಮ್‌ಗಳಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಪಂದ್ಯದಲ್ಲಿ ಹಿಡಿತ ಸಾಧಿಸಿದರು. ಮೊದಲ ಸುತ್ತಿನ ಪಂದ್ಯದಲ್ಲಿ ತನ್ವಿ ದೇಶವಾಸಿ ಅಶ್ಮಿತಾ ಚಲಿಹಾ ಅವರನ್ನು 21-15, 21-19 ನೇರ ಸೆಟ್‌ಗಳಿಂದ ಸೋಲಿಸಿದ್ದರು.

ಇದನ್ನೂ ಓದಿ WPL Auction: ಮೆಗಾ ಹರಾಜಿನಲ್ಲಿ ಅತ್ಯಧಿಕ ಬೆಲೆಗೆ ಬಿಕರಿಯಾದ ದೀಪ್ತಿ, ಅಮೇಲಿಯಾ

ಮಾಜಿ ವಿಶ್ವ ಜೂನಿಯರ್ ನಂಬರ್ 1 ಆಗಿದ್ದ ತನ್ವಿ, 2025 ರ ಬಿಡಬ್ಲ್ಯೂಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಒಂದೇ ಆವೃತ್ತಿಯಲ್ಲಿ ಬಹು ಪದಕಗಳನ್ನು ಗೆದ್ದ ಮೊದಲ ಭಾರತೀಯ ಶಟ್ಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸಿಂಗಲ್ಸ್‌ನಲ್ಲಿ ಅವರು ಬೆಳ್ಳಿ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. 2024 ರ ಬ್ಯಾಡ್ಮಿಂಟನ್ ಏಷ್ಯಾ ತಂಡ ಚಾಂಪಿಯನ್‌ಶಿಪ್‌ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತೀಯ ಮಹಿಳಾ ತಂಡದ ಭಾಗವಾಗಿದ್ದರು.

ಅಗ್ರ ಶ್ರೇಯಾಂಕದ ಉನ್ನತಿ ಹೂಡಾ ತಸ್ನಿಮ್ ಮಿರ್ ಅವರನ್ನು ಸೋಲಿಸಿ ಕೊನೆಯ ಎಂಟರ ಘಟ್ಟ ತಲುಪಿದರು. ಅಲ್ಲಿ ಅವರು ಏಳನೇ ಶ್ರೇಯಾಂಕದ ರಕ್ಷಿತಾ ಶ್ರೀ ಸಂತೋಷ್ ರಾಮರಾಜ್ ಅವರನ್ನು ಎದುರಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಮಿಥುನ್ ಮಂಜುನಾಥ್ ತರುಣ್ ಮನ್ನೆಪಲ್ಲಿ ಅವರನ್ನು ಹಿಂದಿಕ್ಕಿ ಈಗ ಮನರಾಜ್ ಅವರನ್ನು ಎದುರಿಸಲಿದ್ದಾರೆ.

ಡಬಲ್ಸ್‌ನಲ್ಲಿ, ಐದನೇ ಶ್ರೇಯಾಂಕದ ಹರಿಹರನ್ ಅಂಶಕರುಣನ್–ಎಂಆರ್ ಅರ್ಜುನ್ ಮುನ್ನಡೆದರೆ, ಹಾಲಿ ಚಾಂಪಿಯನ್ ಟ್ರೀಸಾ ಜಾಲಿ–ಗಾಯತ್ರಿ ಗೋಪಿಚಂದ್ ಮಹಿಳಾ ಡಬಲ್ಸ್ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದರು.