ಪಹಲ್ಗಾಮ್ ದಾಳಿಯಂತೆ ಇನ್ನೊಂದು ಅಟ್ಯಾಕ್ ನಡೆಯುವ ಭೀತಿ!
Lieutenant General Katiyar: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನ ಬೈಸರನ್ ಕಣಿವೆಯಲ್ಲಿ ಕಳೆದ ಏಪ್ರಿಲ್ ತಿಂಗಳಲ್ಲಿ ನಡೆದ ಭಯೋತ್ಪಾದಕ ದಾಳಿಯ ನೆನಪು ಇನ್ನು ಮನದಲ್ಲಿ ಹಚ್ಚ ಹಸಿರಾಗಿರುವಾಗಲೇ ಇದೀಗ ಇಂತಹ ಇನ್ನೊಂದು ದಾಳಿಯಾಗುವ ಸಾಧ್ಯತೆ ಬಗ್ಗೆ ಪಶ್ಚಿಮ ಸೇನಾ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಕಟಿಯಾರ್ ಎಚ್ಚರಿಕೆ ನೀಡಿದ್ದಾರೆ.