ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Year Ender 2025

Year Ender 2025

Year Ender 2025: ಮೇಘಸ್ಫೋಟ, ದಿಢೀರ್ ಪ್ರವಾಹ, ಚಂಡಮಾರುತಗಳು; 2025ರಲ್ಲಿ ಭಾರತ ಎದುರಿಸಿದ ನೈಸರ್ಗಿಕ ವಿಕೋಪಗಳಿವು

2025ರಲ್ಲಿ ಭಾರತ ಎದುರಿಸಿದ 8 ನೈಸರ್ಗಿಕ ವಿಕೋಪಗಳಿವು

Natural Disasters in India: 2025ರಲ್ಲಿ ಭಾರತವು ಹಲವು ಭೀಕರ ನೈಸರ್ಗಿಕ ವಿಪತ್ತುಗಳನ್ನು ಎದುರಿಸಿತು. ಮೇಘ ಸ್ಫೋಟ, ದಿಢೀರ್ ಪ್ರವಾಹ ಮತ್ತು ತೀವ್ರ ಚಂಡಮಾರುತಗಳು ದೇಶದ ವಿವಿಧ ಭಾಗಗಳಲ್ಲಿ ಸಾಕಷ್ಟು ಹಾನಿ ಮತ್ತು ಜೀವ ನಷ್ಟಕ್ಕೆ ಕಾರಣವಾದವು. ಈ ವಿಪತ್ತುಗಳು ಮನೆಗಳು, ಜಮೀನು ಮತ್ತು ಕೃಷಿ ಕ್ಷೇತ್ರಗಳಲ್ಲಿ ಭಾರಿ ಹಾನಿಯನ್ನುಂಟು ಮಾಡಿದವು.

Year Ender 2025: ಟಾಲಿವುಡ್‌ನಲ್ಲಿ ಸಣ್ಣ ಬಜೆಟ್‌ ಸಿನಿಮಾಗಳ ಮ್ಯಾಜಿಕ್;‌ ಈ ವರ್ಷ ಬ್ಲಾಕ್‌ ಬ್ಲಸ್ಟರ್‌ ಗೆಲುವು ಕಂಡ ಚಿತ್ರಗಳಿವು!

ಟಾಲಿವುಡ್‌ನಲ್ಲಿ ಸಣ್ಣ ಸಿನಿಮಾಗಳ ಬಿಗ್‌ ಮ್ಯಾಜಿಕ್;‌ ಕೋಟಿ ಕೋಟಿ ಲೂಟಿ!

Tollywood Box Office Collection 2025: ತೆಲುಗು ಚಿತ್ರರಂಗದಲ್ಲಿ ಸಣ್ಣ ಬಜೆಟ್‌ನ 2 ಸಿನಿಮಾಗಳು ಅಚ್ಚರಿಯ ಮ್ಯಾಜಿಕ್ ಮಾಡಿವೆ. ಕೇವಲ 2.50 ಕೋಟಿ ರೂ.ನಲ್ಲಿ ತಯಾರಾದ 'ಲಿಟ್ಲ್ ಹಾರ್ಟ್ಸ್' ಮತ್ತು 4 ಕೋಟಿ ಬಜೆಟ್‌ನ 'ಕೋರ್ಟ್' ಸಿನಿಮಾ ಕ್ರಮವಾಗಿ 40 ಕೋಟಿ ಹಾಗೂ 60 ಕೋಟಿ ಗಳಿಸಿ ಹೊಸ ಇತಿಹಾಸ ಬರೆದಿವೆ. ಕಂಟೆಂಟ್ ಚೆನ್ನಾಗಿದ್ದರೆ ಪ್ರೇಕ್ಷಕರು ಕೈಹಿಡಿಯುತ್ತಾರೆ ಎಂಬುದಕ್ಕೆ ಈ ಚಿತ್ರಗಳೇ ಸಾಕ್ಷಿ.

Year Ender 2025: ಈ ವರ್ಷ ಸ್ಯಾಂಡಲ್‌ವುಡ್‌ನಲ್ಲಿ ದಾಖಲೆ ಸಂಖ್ಯೆಯ ಸಿನಿಮಾಗಳು ರಿಲೀಸ್;‌ 255ರಲ್ಲಿ ನಿರ್ಮಾಪಕರನ್ನು ಸೇಫ್‌ ಮಾಡಿದ ಚಿತ್ರಗಳೆಷ್ಟು?

2025ರ ಕನ್ನಡ ಸಿನಿಮಾಗಳ ರಿಪೋರ್ಟ್ ಕಾರ್ಡ್! ಗೆಲುವಿನ ಪ್ರಮಾಣ ಎಷ್ಟು?

2025ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಒಟ್ಟು 255 ಸಿನಿಮಾಗಳು (248 ಥಿಯೇಟರ್ + 7 ಒಟಿಟಿ) ತೆರೆಕಂಡಿವೆ. ಆದರೆ ಈ ಬೃಹತ್ ಸಂಖ್ಯೆಯಲ್ಲಿ ಲಾಭ ತಂದುಕೊಟ್ಟ ಸಿನಿಮಾಗಳ ಸಂಖ್ಯೆ 10ನ್ನೂ ದಾಟಿಲ್ಲ ಎಂಬುದು ಕಹಿ ಸತ್ಯ. ರಿಷಬ್ ಶೆಟ್ಟಿಯ 'ಕಾಂತಾರ: ಚಾಪ್ಟರ್ 1' ಮತ್ತು ರಾಜ್ ಬಿ ಶೆಟ್ಟಿ ತಂಡದ 'ಸು ಫ್ರಮ್ ಸೋ' ಚಿತ್ರಗಳು ಈ ವರ್ಷದ ಅತಿದೊಡ್ಡ ಯಶಸ್ವಿ ಚಿತ್ರಗಳಾಗಿ ಹೊರಹೊಮ್ಮಿವೆ. ಉಳಿದಂತೆ ಶೇ. 95ಕ್ಕೂ ಹೆಚ್ಚು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿವೆ.

Year Ender 2025: ಈ ವರ್ಷ ಅತಿ ಹೆಚ್ಚು ಗಳಿಕೆ ಮಾಡಿದ ಭಾರತದ ಟಾಪ್‌ 10 ಸಿನಿಮಾಗಳ ಲಿಸ್ಟ್‌ ಇಲ್ಲಿದೆ ನೋಡಿ

2025ರಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಟಾಪ್‌ 10 ಸಿನಿಮಾಗಳ ಪಟ್ಟಿ

2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತೀಯ ಚಿತ್ರರಂಗದಲ್ಲಿ ಒಂದಷ್ಟು ಉತ್ತಮ ಸಿನಿಮಾಗಳು ತೆರೆಕಂಡು, ಬಾಕ್ಸ್‌ ಆಫೀಸ್‌ನಲ್ಲಿ ಹವಾ ಮಾಡಿವೆ. ಕೆಲವು ಸಿನಿಮಾಗಳು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ, ದೊಡ್ಡಮಟ್ಟದ ಕಮಾಯಿ ಮಾಡುವಲ್ಲಿ ಹಿಂದೆ ಬೀಳಲಿಲ್ಲ ಅನ್ನೋದು ವಿಶೇಷ. ಸದ್ಯ ವಿವಿಧ ಭಾಷೆಗಳಲ್ಲಿ ತೆರೆಕಂಡ ಭಾರತದ ‌ಟಾಪ್‌ 10 ಸಿನಿಮಾಗಳ ಕಲೆಕ್ಷನ್‌ ಮಾಹಿತಿ ಇಲ್ಲಿದೆ. ವರ್ಷಾಂತ್ಯದಲ್ಲಿ ತೆರೆಗೆ ಬಂದ ಧುರಂಧರ್‌ ಸಿನಿಮಾವು ಮೊದಲ ಸ್ಥಾನದಲ್ಲಿ ಇದೆ.

Year Ender 2025: ಬೀದಿ ನಾಯಿ, ಹಸಿರು ಪಟಾಕಿ, ಅರಾವಳಿ ಬೆಟ್ಟ...ಈ ವರ್ಷ ಸುಪ್ರೀಂ ಕೋರ್ಟ್‌ ನೀಡಿದ 10 ಪ್ರಮುಖ ತೀರ್ಪುಗಳು

2025ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ 10 ಪ್ರಮುಖ ತೀರ್ಪುಗಳು

ಜನಜೀವನದ ಮೇಲೆ ಪರಿಣಾಮ ಬೀರುವ ಹತ್ತು ಪ್ರಮುಖ ತೀರ್ಪುಗಳನ್ನು ಸುಪ್ರೀಂ ಕೋರ್ಟ್ 2025ರಲ್ಲಿ ನೀಡಿದೆ. ಸಾರ್ವಜನಿಕ ಸುರಕ್ಷತೆ, ಸಾಮಾಜಿಕ ನ್ಯಾಯ ಮತ್ತು ಪರಿಸರ ಸಂರಕ್ಷಣೆ ಸೇರಿದಂತೆ ಪ್ರಮುಖವಾಗಿ ಬೀದಿ ನಾಯಿ, ಹಸಿರು ಪಟಾಕಿ, ಅರಾವಳಿ ಬೆಟ್ಟಗಳ ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇವುಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

2025 ಬಸ್ ದುರಂತಗಳ ಸರಮಾಲೆ! ಅಬ್ಬರಿಸಿ ಬೊಬ್ಬಿರಿದ ಜವರಾಯ; ದೇಶದಲ್ಲಿ ನಡೆದ ಪ್ರಮುಖ ಅಪಘಾತಗಳ ವಿವರ ಇಲ್ಲಿದೆ

2025ರಲ್ಲಿ ದೇಶವನ್ನು ಕಣ್ಣೀರಲ್ಲಿ ಮುಳುಗಿಸಿದ ಬಸ್ ದುರಂತಗಳು ಇವು

ಚಿತ್ರದುರ್ಗದ ಬಳಿ ಬಸ್‌ ಬೆಂಕಿಗೆ ಆಹುತಿಯಾಗಿ 9ಕ್ಕೂ ಹೆಚ್ಚು ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಕ್ರಿಸ್‌ಮಸ್‌ ದಿನವೇ ನಡೆದ ಈ ಹೃದಯ ವಿದ್ರವಾಕ ಘಟನೆಗೆ ದೇಶವೇ ಕಂಬಿನಿ ಮಿಡಿದಿದೆ. ಈ ವರ್ಷ ದೇಶದ ವಿವಿಧ ಕಡೆಗಳಲ್ಲಿ ನಾನಾ ಅವಘಡಗಳು ನಡೆದಿದ್ದು, ಆ ಕುರಿತಾದ ವಿವರ ಇಲ್ಲಿದೆ.

2025ರ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಭಾರತದ ಟಾಪ್‌ 5 ಬ್ಯಾಟ್ಸ್‌ಮನ್‌ಗಳು!

2025ರಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟಾಪ್‌ 5 ಬ್ಯಾಟ್ಸ್‌ಮನ್‌ಗಳು!

2025ರ ವರ್ಷ ಅಂತ್ಯವಾಗಲು ಇನ್ನು ಕೇವಲ ಆರು ದಿನಗಳು ಮಾತ್ರ ಬಾಕಿ ಇವೆ. ಹಾಗಾಗಿ ಈ ವರ್ಷದಲ್ಲಿ ಭಾರತ ತಂಡದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ಗಳನ್ನು ಕಲೆ ಹಾಕಿದ ಅಗ್ರ ಐವರು ಬ್ಯಾಟ್ಸ್‌ಮನ್‌ಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಇದರಲ್ಲಿ ಭಾರತ ಟೆಸ್ಟ್‌ ಹಾಗೂ ಏಕದಿನ ತಂಡದ ನಾಯಕ ಶುಭಮನ್‌ ಗಿಲ್‌ ಅಗ್ರ ಸ್ಥಾನದಲ್ಲಿದ್ದಾರೆ.

Year in Search 2025: ಈ ವರ್ಷ ಚಿತ್ರಪ್ರೇಮಿಗಳು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಡಿದ ʻಟಾಪ್‌ 10 ಸಿನಿಮಾಗಳುʼ ಇವೆ ನೋಡಿ

Year in Search 2025: ಹೆಚ್ಚು ಹುಡುಕಲ್ಪಟ್ಟ ಭಾರತದ Top 10 ಸಿನಿಮಾಗಳು

2025ರ ವರ್ಷ ಮುಗಿಯಲು ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವರ್ಷ ಭಾರತದ ವಿವಿಧ ಭಾಷೆಗಳಲ್ಲಿ ಅನೇಕ ಉತ್ತಮ ಸಿನಿಮಾಗಳು ತೆರೆಕಂಡಿವೆ. ಸದ್ಯ ಈ ವರ್ಷ ನೆಟ್ಟಿಗರು ಹುಡುಕಾಡಿದ ಟಾಪ್‌ 10 ಸಿನಿಮಾಗಳ ಮಾಹಿತಿಯನ್ನು ಗೂಗಲ್‌ ಹಂಚಿಕೊಂಡಿದೆ. ಜನರು ಈ ಚಿತ್ರಗಳ ಕುರಿತ ಮಾಹಿತಿಗಾಗಿ ಗೂಗಲ್‌ನಲ್ಲಿ ಸಾಕಷ್ಟು ಹುಡುಕಾಟ ನಡೆಸಿರುತ್ತಾರೆ. ಆ ಬಗ್ಗೆ ಗೂಗಲ್‌ ಮಾಹಿತಿ ಹಂಚಿಕೊಂಡಿದ್ದು, ಮೊದಲ ಸ್ಥಾನದಲ್ಲಿ ಹಿಂದಿ ಸೈಯಾರ ಸಿನಿಮಾ ಇದ್ದರೆ, ಕನ್ನಡ ಕಾಂತಾರ ಚಾಪ್ಟರ್‌ 1 ಸಿನಿಮಾ 2ನೇ ಸ್ಥಾನದಲ್ಲಿದೆ. ಟಾಪ್‌ 10 ಸಿನಿಮಾಗಳ ಮಾಹಿತಿ ಈ ಮುಂದಿನಂತೆ ಇದೆ.

Year Ender 2025: ಎಸ್‌.ಎಸ್‌. ಭೈರಪ್ಪ, ಪೋಪ್ ಫ್ರಾನ್ಸಿಸ್‌, ಗೋಪಿಚಂದ್ ಹಿಂದೂಜಾ; 2025ರಲ್ಲಿ ನಿಧನರಾದ ಪ್ರಭಾವಿ ವ್ಯಕ್ತಿಗಳಿವರು

2025ರಲ್ಲಿ ನಿಧನರಾದ ಪ್ರಭಾವಿ ವ್ಯಕ್ತಿಗಳಿವರು

2025ರಲ್ಲಿ ವಿಶ್ವದ ವಿವಿಧ ಕ್ಷೇತ್ರಗಳ ಹಲವು ಪ್ರಮುಖ ವ್ಯಕ್ತಿಗಳು ನಿಧನ ಹೊಂದಿದರು. ರಾಜಕೀಯ, ಆಧ್ಯಾತ್ಮಿಕ, ಕ್ರೀಡೆ, ವ್ಯಾಪಾರ ಮತ್ತು ಕಲಾ ಕ್ಷೇತ್ರಕ್ಕೆ ಗಣನೀಯ ಕೊಡುಗೆ ನೀಡಿದ ಗಣ್ಯರು ಈ ವರ್ಷ ವಿಧಿವಶರಾದರು. ಈ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ವಿವರ.

Year Ender 2025: ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು; ʼಕಾಂತಾರʼ ಚಿತ್ರಕ್ಕೆ ಎಷ್ಟನೇ ಸ್ಥಾನ?

ಈ ವರ್ಷ ಗೂಗಲ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ಸಿನಿಮಾಗಳು ಇವು

Google Search: ನಾವು ಅಧಿಕೃತವಾಗಿ 2025ರ ಕೊನೆಯ ತಿಂಗಳಿಗೆ ಕಾಲಿಟ್ಟಿದ್ದೇವೆ ಮತ್ತು ಗೂಗಲ್ ಇಂಡಿಯಾ ಈ ವರ್ಷದ ಅತಿ ಹೆಚ್ಚು ಹುಡುಕಿದ ಟಾಪ್ 10 ಭಾರತೀಯ ಸಿನಿಮಾಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಆನ್‌ಲೈನ್ ಬಝ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಮತ್ತು ವರ್ಷವಿಡೀ ಗೂಗಲ್‌ನ ಹುಡುಕಾಟ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಟಾಪ್ 10 ಭಾರತೀಯ ಚಲನಚಿತ್ರಗಳು ಇಲ್ಲಿವೆ.

Year Ender 2025: ಅಹಮಾದಾಬಾದ್‌ ವಿಮಾನ ದುರಂತ, ಪಹಲ್ಗಾಮ್‌ ಟೆರರ್‌ ಅಟ್ಯಾಕ್‌: 2025ರಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ದುರಂತಗಳಿವು

2025ರಲ್ಲಿ ಭಾರತವನ್ನು ಬೆಚ್ಚಿಬೀಳಿಸಿದ ದುರಂತಗಳಿವು

ನೋಡ ನೋಡುತ್ತಿದ್ದಂತೆ 2025 ಕಳೆದು ಹೋಗಿದೆ. 2026 ಅನ್ನು ಸ್ವಾಗತಿಸಲು ಕೆಲವೇ ದಿನ ಬಾಕಿ. ಈಗ ನಿಂತು ಇಡೀ ವರ್ಷವನ್ನು ಅವಲೋಕಿಸಿದರೆ ದೇಶದಲ್ಲಿ ಬೆಚ್ಚಿ ಬೀಳಿಸುವ ಅನೇಕ ದುರಂತಗಳು ನಡೆದಿರುವುದು ಕಂಡು ಬಂದಿದೆ. ಈ ಕುರಿತಾದ ವಿವರ ಇಲ್ಲಿದೆ.

Year Ender 2025: ಈ ವರ್ಷ ದೇಶದ ವಿವಿಧೆಡೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟಿದ್ದು ಎಷ್ಟು ಮಂದಿ? ಇಲ್ಲಿದೆ ವಿವರ

ದೇಶದ ವಿಧೆಡೆ ಸಂಭವಿಸಿದ ಕಾಲ್ತುಳಿತಗಳ ಪಟ್ಟಿ

Stampedes in India: 2025ರಲ್ಲಿ ದೇಶದ ವಿವಿಧ ಭಾಗಗಳಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಹಲವು ಮಂದಿ ಪ್ರಾಣ ಕಳೆದುಕೊಂಡರು. ಧಾರ್ಮಿಕ ಕಾರ್ಯಕ್ರಮಗಳು, ಸಾರ್ವಜನಿಕ ಸಮಾರಂಭಗಳು ಹಾಗೂ ಜನಸಂದಣಿ ಹೆಚ್ಚಿದ್ದ ಸ್ಥಳಗಳಲ್ಲಿ ನಡೆದ ಈ ದುರ್ಘಟನೆಯು ಚರ್ಚೆ ಹಾಗೂ ಟೀಕೆಗೆ ಕಾರಣವಾಯಿತು.

Year Ender 2025: ಬಿಹಾರ, ದಿಲ್ಲಿ ಚುನಾವಣೆ, ಉಪರಾಷ್ಟ್ರಪತಿ ಧಿಡೀರ್‌ ರಾಜೀನಾಮೆ...ಈ ವರ್ಷ ಭಾರತದ ರಾಜಕೀಯ ಸ್ಥಿತಿಗತಿ ಹೇಗಿತ್ತು? ಇಲ್ಲಿದೆ ಹಿನ್ನೋಟ

2025ರಲ್ಲಿ ಭಾರತದ ರಾಜಕೀಯ ಸ್ಥಿತಿಗತಿ ಹೇಗಿತ್ತು?

2025ರಲ್ಲಿ ಭಾರತದ ರಾಜಕೀಯ ಕ್ಷೇತ್ರದಲ್ಲಿ ಹಲವು ಪ್ರಮುಖ ಘಟನೆಗಳು ನಡೆದಿವೆ. ದೇಶದ ಮುಖ್ಯ ರಾಜ್ಯಗಳಲ್ಲಿ ಚುನಾವಣೆಗಳು ನಡೆದವು. ಲಡಾಖ್ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ಈ ಎಲ್ಲ ಘಟನೆಗಳು ದೇಶದ ರಾಜಕೀಯ ಸ್ಥಿತಿಗತಿಯನ್ನು ನಿರ್ಧರಿಸಿದವು. 2025ರ ರಾಜಕೀಯ ಹಿನ್ನೋಟ ಇಲ್ಲಿದೆ.

Year Ender 2025: ಈ ವರ್ಷ ವೈರಲ್ ಆದ ಭಾರತದ ಟಾಪ್‌ 5 ಪ್ರವಾಸಿ ತಾಣಗಳು

ಭಾರತದ ಫೆವರಿಟ್ ಟ್ರಾವೆಲ್ ಸ್ಪಾಟ್ ಯಾವುವು ಗೊತ್ತಾ?

2025ಕ್ಕೆ ವಿದಾಯ ಹೇಳುವ ಸಮಯ ಸಮೀಪಿಸುತ್ತಿರುವಂತೆ, ವರ್ಷವಿಡೀ ನಡೆದ ಪ್ರಮುಖ ಘಟನೆಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಷಯಗಳನ್ನು ನೆನಪಿಸಿಕೊಳ್ಳುವ ಹವ್ಯಾಸ ಇತ್ತೀಚೆಗೆ ಟ್ರೆಂಡ್ ಆಗಿದೆ. ಅದರ ಭಾಗವಾಗಿ 2025ರಲ್ಲಿ ಪ್ರವಾಸಿಗರ ಮನಸೆಳೆದ ಭಾರತದ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳ ಕುರಿತು ಮಾಹಿತಿ ಇಲ್ಲಿದೆ.

Year Ender 2025: ಇಡ್ಲಿಯಿಂದ ಬೀಟ್ರೂಟ್ ಕಾಂಜಿವರೆಗೆ; 2025ರಲ್ಲಿ ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಭಾರತೀಯ ಖಾದ್ಯಗಳಿವು

2025ರಲ್ಲಿ ಗೂಗಲ್‍ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಲ್ಪಟ್ಟ ಖಾದ್ಯಗಳಿವು

2025ರಲ್ಲಿ ಗೂಗಲ್‌ನಲ್ಲಿ ಜನರ ಗಮನ ಸೆಳೆದ ಅತಿದೊಡ್ಡ ಖಾದ್ಯಗಳ ಪಟ್ಟಿ ಇಲ್ಲಿದೆ. ಈ ಆಹಾರಗಳು ಜನರಲ್ಲಿ ಹೆಚ್ಚು ಆಸಕ್ತಿ ಹುಟ್ಟಿಸಿದ್ದವು ಮತ್ತು ಆರೋಗ್ಯ, ರುಚಿಯ ಕಾರಣದಿಂದಲೂ ಜನಪ್ರಿಯವಾಗಿವೆ. ಅವುಗಳು ಯಾವ್ಯಾವು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

Year Ender 2025: ಈ ವರ್ಷ ಪ್ರವಾಸಿಗರು ಅತೀ ಹೆಚ್ಚು ಭೇಟಿ ಕೊಟ್ಟ ಸ್ಥಳಗಳಿವು; ಪಟ್ಟಿಯಲ್ಲಿ ಭಾರತದ ಯಾವ ತಾಣವಿದೆ?

ಪ್ರವಾಸಿಗರು ಅತೀ ಹೆಚ್ಚು ಭೇಟಿ ನೀಡಿದ ತಾಣಗಳಿವು

2025ರ ಟ್ರಾವಲ್ ಡಾಟಾ ಮತ್ತು ಟ್ರೆಂಡ್‌ಗಳನ್ನು ಆಧರಿಸಿ ಜನರು ಸರ್ಚ್ ಮಾಡಿದ, ಬುಕ್ ಮಾಡಿದ ಮತ್ತು ಭೇಟಿ ನೀಡಿದ ಪ್ರವಾಸಿ ಸ್ಥಳಗಳ ಮಾಹಿತಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಈ ಎಲ್ಲ ಪ್ರವಾಸಿ ಸ್ಥಳಗಳು ತಮ್ಮಲ್ಲಿರುವ ವೈಶಿಷ್ಟ್ಯಗಳಿಂದ ವಿಶ್ವದ ಪ್ರವಾಸಿಗಳನ್ನು ತಮ್ಮತ್ತ ಸೆಳೆಯುವಲ್ಲಿ 2025ರಲ್ಲಿ ಯಶಸ್ವಿಯಾಗಿವೆ.

Year Ender 2025: ಭಾರತ-ಪಾಕ್, ಇಸ್ರೇಲ್-ಇರಾನ್ ಸಂಘರ್ಷ; 2025ರ 5 ಪ್ರಮುಖ ಯುದ್ಧಗಳಿವು

2025ರಲ್ಲಿ ಸಂಭವಿಸಿದ 5 ಪ್ರಮುಖ ಯುದ್ಧಗಳಿವು

5 Major Wars: 2025ರಲ್ಲಿ ಜಗತ್ತಿನ ವಿವಿಧ ಭಾಗಗಳಲ್ಲಿ ಹಲವು ಪ್ರಮುಖ ಯುದ್ಧ, ಸಂಘರ್ಷಗಳು ಸಂಭವಿಸಿ, ಪ್ರಾದೇಶಿಕ ಹಾಗೂ ಅಂತಾರಾಷ್ಟ್ರೀಯ ಭದ್ರತೆಯ ಪರಿಸ್ಥಿತಿಯನ್ನು ಗಂಭೀರವಾಗಿ ಬದಲಿಸಿವೆ. ಭಾರತ-ಪಾಕಿಸ್ತಾನ ಮತ್ತು ಇಸ್ರೇಲ್-ಇರಾನ್ ಸಂಘರ್ಷಗಳು ಸೇರಿದಂತೆ ಈ ಐದು ಪ್ರಮುಖ ಯುದ್ಧಗಳು ಈ ವರ್ಷ ಜಗತ್ತಿನ ನಿದ್ದೆಗೆಡಿಸಿದವು.

ಟ್ರಂಪೊನಾಮಿಕ್ಸ್‌ನಿಂದ ಜೆನ್‌ ಝೀವರೆಗೆ; 2025ರ ಟಾಪ್ 10 ಟ್ರೆಂಡಿಂಗ್ ಸುದ್ದಿಗಳಿವು

2025ರ ಟಾಪ್ 10 ಟ್ರೆಂಡಿಂಗ್ ಸುದ್ದಿಗಳಿವು

Year Ender 2025: 2025ಕ್ಕೆ ಬೈ ಬೈ ಹೇಳಲು ದಿನಗಣನೆ ಆರಂಭವಾಗಿದೆ. ಎಲ್ಲರೂ 2026 ಆಗಮನಕ್ಕೆ ಕಾಯುತ್ತಿದ್ದಾರೆ. 2025ನೇ ವರ್ಷವನ್ನು ಕೆಲವರು ಕೆಟ್ಟ ವರ್ಷ ಅಂತಾ ಕರೆದರೆ, ಇನ್ನು ಕೆಲವರಿಗೆ ಅದೃಷ್ಟದ ವರ್ಷ ಎನಿಸಿಕೊಂಡಿದೆ. ಈ ವರ್ಷ ಜಗತ್ತಿನಲ್ಲಿ ನಡೆದ ಟಾಪ್‌ 10 ಪ್ರಮುಖ ಬೆಳವಣಿಗೆಗಳ ಮಾಹಿತಿ ಇಲ್ಲಿದೆ:

2025 ಮುಗಿಯುವ ಮುನ್ನ ಭಾರತದ ಈ ರೋಮಾಂಚನಕಾರಿ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ

ಇಯರ್ ಎಂಡ್‌ಗೆ ಟ್ರಿಪ್ ಪ್ಲ್ಯಾನ್ ಮಾಡುವವರಿಗೆ ಇಲ್ಲಿದೆ ರೂಟ್ ಮ್ಯಾಪ್

Year Ender 2025: ನಮ್ಮ ದೇಶ ಪ್ರಾಕೃತಿಕವಾಗಿ ವೈವಿಧ್ಯಮಯ ಪ್ರದೇಶಗಳನ್ನು ಹೊಂದಿದೆ. ಮನಮೋಹಕ ಬೀಚ್‌ಗಳು, ಸಾಹಸಪ್ರಿಯರನ್ನು ಸೆಳೆಯುವ ಟ್ರಕ್ಕಿಂಗ್ ಸ್ಥಳಗಳು, ಮನಃಶಾಂತಿಯನ್ನು ಬಯಸುವವರನ್ನು ಸೆಳೆಯುವ ಮನಮೋಹಕ ಕೂಲ್ ಸ್ಪಾಟ್‌ಗಳು, ಜಲಪಾತಗಳು... ಹೀಗೆ ನಮ್ಮ ದೇಶದಲ್ಲಿ ಒಂದು ಜನ್ಮದಲ್ಲಿ ಸುತ್ತಿ ಮುಗಿಸಲಾಗದಷ್ಟು ಪ್ರವಾಸಿ ತಾಣಗಳಿವೆ. ಈ ವರ್ಷ ಮುಗಿಯುವ ಮುನ್ನ ನೀವು ಭೇಟಿ ನೀಡಲೇಬೇಕಾದ 10 ಬೆಸ್ಟ್ ಡೆಸ್ಟಿನೇಷನ್‌ಗಳ ಮಾಹಿತಿ ಇಲ್ಲಿದೆ.

Year Ender 2025: ಈ ವರ್ಷ ನೆಟ್ಟಿಗರ ಮನಗೆದ್ದ ವಿದೇಶಿ ಪ್ರವಾಸಿಗರು ಭಾರತವನ್ನು ಹೊಗಳಿದ ಟಾಪ್‌ 8 ವಿಡಿಯೊ ಇದು

ಈ ವರ್ಷ ವಿದೇಶಿ ಪ್ರವಾಸಿಗರ ಯಾವೆಲ್ಲ ವಿಡಿಯೋ ಹೈಲೈಟ್ ಆಗಿತ್ತು?

2025ರಲ್ಲಿ ಭಾರತಕ್ಕೆ ಬಂದ ವಿದೇಶಿ ಪ್ರವಾಸಿಗರು ಇಲ್ಲಿನ ತಮ್ಮ ಪ್ರಯಾಣದ ಅನುಭವಗಳು, ಸ್ಥಳೀಯ ಆಹಾರ ಮತ್ತು ಸಂಸ್ಕೃತಿಯನ್ನು ವ್ಲಾಗ್‌ ಮೂಲಕ ಹಂಚಿಕೊಂಡಿದ್ದಾರೆ. ಹಾಗೇ ವೈರಲ್ ಆದ ಪ್ರವಾಸಿಗರ ಕೆಲವು ಅವಿಸ್ಮರಣೀಯ ವಿಡಿಯೊ ಯಾವುವು ಎನ್ನುವ ವಿವರ ಇಲ್ಲಿದೆ:

Year Ender 2025: ಡೊನಾಲ್ಡ್ ಟ್ರಂಪ್‍ - ಶುಭಾಂಶು ಶುಕ್ಲಾ:  2025ರ ಟಾಪ್ 10 ಸುದ್ದಿಯಲ್ಲಿದ್ದವರಿವರು

2025ರ ಟಾಪ್ 10 ಸುದ್ದಿಯಲ್ಲಿದ್ದ ವ್ಯಕ್ತಿಗಳಿವರು

Top newsmakers 2025: ಜಾಗತಿಕವಾಗಿ 2025ನೇ ವರ್ಷ ದೊಡ್ಡ ಘಟನೆಗಳು, ವಿವಾದಗಳು, ಆರ್ಥಿಕ ಉಲ್ಬಣಗಳು, ವೈಜ್ಞಾನಿಕ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆಗಳು ಸೇರಿದಂತೆ ಅನೇಕ ಘಟನೆಗಳು ಸಂಭವಿಸಿವೆ. ರಾಜಕೀಯ ಮಟ್ಟದಲ್ಲಿ ರಾಷ್ಟ್ರಗಳು ತಮ್ಮ ನಿರ್ಧಾರಗಳಲ್ಲಿ ಮಹತ್ವದ ತಿರುವುಗಳನ್ನು ತೆಗೆದುಕೊಂಡಿವೆ.

Year Ender 2025: ಈ ವರ್ಷ ಭಾರತೀಯ ಕ್ರೀಡಾಲೋಕದಲ್ಲಿ ಏನೇನು ನಡೆಯಿತು? ಇಲ್ಲಿದೆ ವರದಿ

ಈ ವರ್ಷ ಭಾರತೀಯ ಕ್ರೀಡಾಲೋಕದಲ್ಲಿ ಏನೇನು ನಡೆಯಿತು? ಇಲ್ಲಿದೆ ವರದಿ

year ender 2025 sports: ಭಾರತದ ಯುವ ಚೆಸ್‌ ತಾರೆ ದಿವ್ಯಾ ದೇಶ್‌ಮುಖ್‌ 3ನೇ ಆವೃತ್ತಿಯ ಫಿಡೆ ಮಹಿಳಾ ಚೆಸ್ ವಿಶ್ವಕಪ್‌ ಕಿರೀಟ ಮುಡಿಗೇರಿಸಿಕೊಂಡು ಚೆಸ್‌ನ ಅತ್ಯುನ್ನತ ಪಟ್ಟ ಎನಿಸಿಕೊಂಡಿರುವ ಗ್ರ್ಯಾಂಡ್‌ಮಾಸ್ಟರ್‌ ಆಗಿ ಹೊರಹೊಮ್ಮಿದ ವರ್ಷವಿದು.

Year Ender 2025: ಈ ವರ್ಷ ಚಲನಚಿತ್ರೋದ್ಯಮದ ಕೆಲವು ಭಾರೀ ದೊಡ್ಡ ವಿವಾದಗಳಿವು

ಈ ವರ್ಷ ಚಲನಚಿತ್ರೋದ್ಯಮದ ಕೆಲವು ಭಾರೀ ದೊಡ್ಡ ವಿವಾದಗಳಿವು

Controversies from the Indian film: 2025ರ ಡಿಸೆಂಬರ್‌ ತಿಂಗಳಲ್ಲಿ ನಾವಿದ್ದೇವೆ. ನೋಡ ನೋಡುತ್ತಿದ್ದಂತೆ 2025 ಮುಗಿಯುತ್ತದೆ. ವರ್ಷ ಮುಗಿಯುತ್ತಿದ್ದಂತೆ, ಭಾರತೀಯ ಚಲನಚಿತ್ರೋದ್ಯಮದ ಕೆಲವು ದೊಡ್ಡ ವಿವಾದಗಳನ್ನು ನಾವು ನೋಡೋಣ, ಈ ಎಲ್ಲ ವಿವಾದಗಳು ಸಾಕಷ್ಟು ಚರ್ಚೆಯನ್ನು ಹುಟ್ಟು ಹಾಕಿತ್ತು.

Year Ender 2025: ಈ ವರ್ಷದಲ್ಲಿ ರಾಜಕೀಯಕ್ಕೆ ಪ್ರವೇಶ ಪಡೆದ ಹೊಸಬರು

ರಾಜಕೀಯ ಪ್ರವೇಶ ಪಡೆದ ಹೊಸ ಮುಖಗಳು

ವರ್ಷಾಂತ್ಯದಲ್ಲಿ ಈಗ ನಾವಿದ್ದೇವೆ. ರಾಜಕೀಯದಲ್ಲಿ ಈ ಬಾರಿ ಎಲ್ಲರ ಗಮನ ಸೆಳೆದಿದ್ದು ಬಿಹಾರ ವಿಧಾನ ಸಭಾ ಚುನಾವಣೆ. ಇದರಲ್ಲಿ ಎನ್ ಡಿಎ ಭಾರಿ ಪ್ರಮಾಣದ ಗೆಲುವು ಸಾಧಿಸಿದ್ದು ಒಂದು ದಾಖಲೆಯಾದರೆ ಈ ವರ್ಷದಲ್ಲಿ ಹೊಸದಾಗಿ ಹಲವಾರು ಮಂದಿ ರಾಜಕೀಯಕ್ಕೆ ಪ್ರವೇಶ ಪಡೆದಿದ್ದಾರೆ.

Loading...