Viral Video: ಚಲಿಸುತ್ತಿದ್ದ ಕಾರಿನಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿದ ದಂಪತಿ; ಮುಂದಾಗಿದ್ದೇ ಬೇರೆ
ಚಲಿಸುವ ಕಾರಿನ ಸನ್ರೂಫ್ ತೆರೆದು ದಂಪತಿ ಲಿಪ್ಕಿಸ್ ಮಾಡುತ್ತಿರುವ ಮತ್ತು ಅಪ್ಪಿಕೊಳ್ಳುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ರಸ್ತೆಯಲ್ಲಿ ಅಸಭ್ಯವಾಗಿ ವರ್ತಿಸಿದ್ದ ದಂಪತಿಗೆ 4,000 ರೂ ದಂಡ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.


ಚಂಡೀಗಢ: ಈ ಹಿಂದೆ ನವದಂಪತಿ ತಮ್ಮ ಹನಿಮೂನ್, ಫಸ್ಟ್ನೈಟ್ಗೆ ಸಂಬಂಧಪಟ್ಟ ದೃಶ್ಯವನ್ನು ವಿಡಿಯೊ ಶೂಟ್ ಮಾಡಿ ಸೋಶಿಯಲ್ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದು ಸುದ್ದಿಯಾಗಿತ್ತು. ಇತ್ತೀಚೆಗೆ ಬೈಕ್ನಲ್ಲಿ ದಂಪತಿ ರೊಮ್ಯಾನ್ಸ್ ಮಾಡಿದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದೇರೀತಿ ಇದೀಗ ದಂಪತಿಯ ಖಾಸಗಿ ಕ್ಷಣದ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಚಂಡೀಗಢ-ಮನಾಲಿಯ ಹೈವೇಯಲ್ಲಿ ಚಲಿಸುತ್ತಿದ್ದ ಕಾರಿನ ಸನ್ರೂಫ್ ತೆರೆದು ದಂಪತಿ ಲಿಪ್ಕಿಸ್ (Lipkiss) ಮಾಡುತ್ತಿರುವ ಮತ್ತು ಅಪ್ಪಿಕೊಳ್ಳುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಅಸಭ್ಯವಾಗಿ ವರ್ತಿಸಿದ್ದ ದಂಪತಿಗೆ 4,000 ರೂ. ದಂಡ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
ವೈರಲ್ ವಿಡಿಯೊದಲ್ಲಿ ಏನಿದೆ?
ವೈರಲ್ ಆದ ವಿಡಿಯೊದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ತೆರೆದ ಸನ್ರೂಫ್ನಲ್ಲಿ ದಂಪತಿ ನಡುರಸ್ತೆಯಲ್ಲಿ ರೊಮ್ಯಾನ್ಸ್ ಮಾಡಿದ ದೃಶ್ಯ ಸೆರೆಯಾಗಿದೆ. ಈ ವಿಡಿಯೊ ಎಲ್ಲರ ಗಮನಸೆಳೆದು ಈಗ ವೈರಲ್ ಆಗಿದೆ. ಇದಕ್ಕೆ ಹಲವಾರು ನೆಟ್ಟಿಗರು ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದ್ದಾರೆ.
एक और धाकड़ जी सनरूफ खोलकर शक्ति प्रदर्शन कर रहे हैं। Video चंडीगढ़–मनाली फोरलेन हाईवे की है। pic.twitter.com/VjqgKYHsjn
— Sachin Gupta (@SachinGuptaUP) June 25, 2025
ಇಂತಹ ಕೃತ್ಯದಲ್ಲಿ ತೊಡಗಿದ್ದಕ್ಕಾಗಿ ದಂಪತಿಗೆ 4,000 ರೂ. ದಂಡ ವಿಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಭಾರತದಲ್ಲಿ ಪ್ರೀತಿಯ ಸಾರ್ವಜನಿಕ ಪ್ರದರ್ಶನ (PDA) ಕಾನೂನುಬಾಹಿರವಲ್ಲ. ಆದರೆ ಅವುಗಳನ್ನು ಅಶ್ಲೀಲವಾಗಿ ಪ್ರದರ್ಶಿಸಿದರೆ, ಅದರಿಂದ ಇತರರಿಗೆ ಕಿರಿಕಿರಿ ಉಂಟಾದರೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294ರ ಅಡಿಯಲ್ಲಿ ದಂಡ ವಿಧಿಸಬಹುದು.
ಮನಾಲಿಯಲ್ಲಿ ಪ್ರವಾಸಿಗರ ಮತ್ತೊಂದು ವಿಚಿತ್ರ ಕೃತ್ಯ
ಇತ್ತೀಚೆಗೆ ಚಲಿಸುವ ಕಾರಿನಲ್ಲಿ ಪಾರ್ಟಿ ಮಾಡುತ್ತಾ, ಮದ್ಯಪಾನ ಮಾಡುತ್ತಾ, ಕಾರಿನ ಕಿಟಕಿಗಳು ಮತ್ತು ಸನ್ರೂಫ್ನಿಂದ ಹೊರಗೆ ಬರುತ್ತಿರುವ ಯುವ ಪ್ರವಾಸಿಗರ ವಿಡಿಯೊವೊಂದು ವೈರಲ್ ಆಗಿತ್ತು. ವರದಿಗಳ ಪ್ರಕಾರ ಅವರ ಈ ಕೃತ್ಯಕ್ಕಾಗಿ ಅವರಿಗೆ 2,500 ರೂ. ದಂಡ ವಿಧಿಸಲಾಗಿದೆ.
ಚಲಿಸುವ ಕಾರಿನಲ್ಲಿ ರೊಮ್ಯಾನ್ಸ್ ಮಾಡಿದ ಜೋಡಿ
ಬೆಂಗಳೂರಿನ ಟ್ರಿನಿಟಿ ರಸ್ತೆಯಲ್ಲಿ ಚಲಿಸುವ ಕಾರಿನ ಸನ್ರೂಫ್ ತೆಗೆದು ಯುವತಿಗೆ ಯುವಕನೊಬ್ಬ ಚುಂಬಿಸಿದ ಘಟನೆಯೂ ಇತ್ತೀಚೆಗೆ ನಡೆದಿತ್ತು.ಈ ದೃಶ್ಯವನ್ನು ಹಿಂದೆ ಹೋಗುತ್ತಿದ್ದ ವಾಹನ ಸವಾರರೊಬ್ಬರು ಮೊಬೈಲ್ನಲ್ಲಿ ಚಿತ್ರೀಕರಿಸಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲಸೂರು ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸಾರ್ವಜನಿಕವಾಗಿ ಅಸಭ್ಯ ವರ್ತನೆ ತೋರಿದ ಜೋಡಿ ವಿರುದ್ಧ ಬೆಂಗಳೂರು ಪೊಲೀಸರು ಕಠಿಣ ಕ್ರಮ ಜರುಗಿಸಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.