ಭಾರತದಲ್ಲಿ ವೈಯಕ್ತಿಕ ದಾಖಲೆಗಳಿಗಿಲ್ಲ ಸುರಕ್ಷತೆ: 20 ರೂ. ಬೇಲ್ ಪುರಿ ಜೊತೆ ಸಿಕ್ತು ಬ್ಯಾಂಕ್ ಸ್ಟೇಟ್‌ಮೆಂಟ್!
Viral News: ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯಕ್ತಿಯೊರ್ವರ ಎರಡು ಪುಟಗಳ ಮುದ್ರಿತ ಬ್ಯಾಂಕ್ ಸ್ಟೇಟ್‌ಮೆಂಟ್‌ನಿಂದ ಬೇಲ್ ಪುರಿಯನ್ನು ಕಟ್ಟಿಕೊಡಲಾಗಿದೆ. ಈ ಪೇಪರ್ ನಲ್ಲಿ ಆ ವ್ಯಕ್ತಿಯ ಸೂಕ್ಷ್ಮ ವಿವರಗಳನ್ನು ಕೂಡ ದಾಖಲಿಸಲಾಗಿತ್ತು. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
20 ರೂ.ಬೇಲ್ ಪುರಿ ಜೊತೆ ಸಿಕ್ತು ಬ್ಯಾಂಕ್ ಸ್ಟೇಟ್‌ಮೆಂಟ್ -
ನವದೆಹಲಿ, ಮೇ 23: ಬ್ಯಾಂಕ್ ಖಾತೆಯ ವಿವರಗಳು ನಮ್ಮ ವೈಯಕ್ತಿಕ ವಿಚಾರಕ್ಕೆ ಪ್ರಮುಖ ದಾಖಲೆಯಾಗಿದೆ. ಇತ್ತೀಚೆಗೆ ಇಂತಹ ದಾಖಲೆ ಪಡೆದು ಮೋಸ, ವಂಚನೆ ಮಾಡುವ ಜಾಲಗಳು ಹೆಚ್ಚಾಗಿದೆ. ಇದೀಗ ರಸ್ತೆ ಬದಿಯಲ್ಲಿ ಮಾರಾಟ ಮಾಡುವ ಬೇಲ್ ಪುರಿಯನ್ನು ವ್ಯಕ್ತಿಯೊಬ್ಬರ ಬ್ಯಾಂಕ್ ಸ್ಟೇಟ್‌ಮೆಂಟ್ ವಿವರದ ಹಾಳೆಗಳಲ್ಲಿ ಸುತ್ತಿ ನೀಡಲಾಗಿದೆ. ಬಳಕೆದಾರರೊಬ್ಬರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ (Viral News) ಮಾಡಿಕೊಂಡಿದ್ದು ಭಾರತದಲ್ಲಿ ವೈಯಕ್ತಿಕ ದಾಖಲೆಗಳಿಗೂ ಸುರಕ್ಷಿತ ಇಲ್ಲ ಎಂದು ಬರೆದುಕೊಂಡಿದ್ದಾರೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ವ್ಯಕ್ತಿಯೋರ್ವರ ಎರಡು ಪುಟಗಳ ಮುದ್ರಿತ ಬ್ಯಾಂಕ್ ಸ್ಟೇಟ್‌ಮೆಂಟ್‌ನಿಂದ ಬೇಲ್ ಪುರಿಯನ್ನು ಕಟ್ಟಿ ಕೊಡಲಾಗಿದೆ. ಈ ಪೇಪರ್ ನಲ್ಲಿ ಆ ವ್ಯಕ್ತಿಯ ಸೂಕ್ಷ್ಮ ವಿವರಗಳನ್ನು ಕೂಡ ದಾಖಲಿಸಲಾಗಿತ್ತು. ಸದ್ಯ ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.
Bought a ₹20 Bhel from a street vendor and it was wrapped in someone’s 2 page bank statement.
— Sudhanshu Ambhore (@Sudhanshu1414) May 21, 2026
Name, account number, transactions… everything just out there like it’s normal.
Privacy is seriously a joke in India 😭 pic.twitter.com/nlnQl2O9MV
ಬಳಕೆದಾರ ಸುಧಾಂಶು ಅಂಬೋರ್ ಈ ಪೋಸ್ಟ್ ಶೇರ್ ಮಾಡಿದ್ದು “ಬೀದಿ ವ್ಯಾಪಾರಿಯಿಂದ 20ರೂ ಬೇಲ್ ಪುರಿ ಖರೀದಿಸಿದೆ" ಅದನ್ನು ಯಾರೊಬ್ಬರ 2 ಪುಟಗಳ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿ ಸುತ್ತಿಡಲಾಗಿತ್ತು. ಹೆಸರು, ಖಾತೆ ಸಂಖ್ಯೆ, ವಹಿವಾಟುಗಳು ಎಲ್ಲ ವಿವರ ಇದರಲ್ಲಿ ಇತ್ತು. ಭಾರತದಲ್ಲಿ ಗೌಪ್ಯತೆ ಎನ್ನುವುದು ತಮಾಷೆಯಾಗಿದೆ ಎಂದು ಬರೆದಿದ್ದಾರೆ. ಬೇಲ್ ಪುರಿ ಕಟ್ಟಿದ್ದ ಬ್ಯಾಂಕ್ ದಾಖಲೆಯಲ್ಲಿ ಗ್ರಾಹಕರ ಅತ್ಯಂತ ಸೂಕ್ಷ್ಮ ಮಾಹಿತಿ ಬಹಿರಂಗವಾಗಿತ್ತು. ಖಾತೆದಾರರ ಹೆಸರು, ಸಂಖ್ಯೆ, ಇತ್ತೀಚಿನ ವಹಿವಾಟುಗಳ ವಿವರ ಎಲ್ಲವೂ ಇತ್ತು. ಸದ್ಯ ಬ್ಯಾಂಕಿಂಗ್ ದಾಖಲೆಗಳನ್ನು ರಸ್ತೆಬದಿಯ ಮಾರಾಟಗಾರರು ಪ್ಯಾಕೇಜಿಂಗ್ ವಸ್ತುವಾಗಿ ಹೇಗೆ ಬಳಸಿದ್ದಾರೆ ಎಂಬ ಬಗ್ಗೆ ಹಲವಾರು ಮಂದಿ ಕಳವಳ ವ್ಯಕ್ತಪಡಿಸಿದರು.
Viral Video: ಪಾಕಿಸ್ತಾನಿ ಮದುವೆಯಲ್ಲಿ ಧುರಂಧರ್ ಸಿನಿಮಾದ ಹವಾ; ಟೈಟಲ್ ಸಾಂಗ್‌ಗೆ ಭರ್ಜರಿ ಸೆಪ್ಟ್ ಹಾಕಿದ ಯುವಕರು
ದಾಖಲೆಗಳನ್ನು ಸೈಬರ್ ವಂಚಕರು ಇದರ ದುರುಪಯೋಗ ಪಡಿಸಿಕೊಳ್ಳಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ. ಖಾತೆದಾರರು ಮೊಬೈಲ್ ಅಪ್ಲಿಕೇಶನ್/ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ PDF ಆಗಿ ಡೌನ್‌ಲೋಡ್ ಮಾಡಿ ಪ್ರಿಂಟ್ ತೆಗೆದಿರಬಹುದು ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತೊಬ್ಬರು ಇತ್ತೀಚೆಗೆ ಯಾವ ವಸ್ತು ದಾಖಲೆಗೂ ಸುರಕ್ಷತೆ ಇಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.