ಮಹಾಕುಂಭ ಮೇಳದಲ್ಲಿ ತಾರತಮ್ಯ? ವಿಐಪಿಗಳಿಗೆ ಸ್ಪೆಷಲ್ ಟ್ರೀಟ್‌ಮೆಂಟ್- ಭಕ್ತರ ಆಕ್ರೋಶ
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಕ್ಕೆ ವಿಐಪಿಗಳು ಆಗಮಿಸಿದ್ದರಿಂದ, ಅವರಿಗೆ ಸ್ಥಳಾವಕಾಶ ಕಲ್ಪಿಸಲು ಪ್ರಮುಖ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದು ಅನೇಕ ಯಾತ್ರಾರ್ಥಿಗಳಲ್ಲಿ ನಿರಾಶೆಯನ್ನು ಮೂಡಿಸಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.


ಲಖನೌ: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರಯವ ಮಹಾಕುಂಭ ಮೇಳಕ್ಕೆ ಇಂದು ಮೌನಿ ಅಮವಸ್ಯೆ ಹಿನ್ನೆಲೆ ಪವಿತ್ರ ಸ್ನಾನಕ್ಕೆಂದು ಕೋಟ್ಯಂತರ ಭಕ್ತರು ಜಮಾಯಿಸಿದ್ದಾರೆ. ಈ ವೇಳೆ ಭಾರೀ ಕಾಲ್ತುಳಿತ ಸಂಭವಿಸಿದ್ದು, ಕೆಲವರು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಈ ನಡುವೆ ಮಹಾಕುಂಭ ಮೇಳದಲ್ಲಿ ವಿಐಪಿಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅನೇಕ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಐಪಿಗಳ ಆಗಮನದಿಂದ ಉಂಟಾದ ಅಡೆತಡೆಗಳಿಗೆ ಭಕ್ತರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗಿದೆ. ಗಣ್ಯರಿಗೆ ಸ್ಥಳಾವಕಾಶ ಕಲ್ಪಿಸಲು ಪ್ರಮುಖ ಪ್ರದೇಶಗಳಿಗೆ ಪ್ರವೇಶವನ್ನು ನಿರ್ಬಂಧಿಸಿದ್ದರಿಂದ ಅನೇಕ ಯಾತ್ರಾರ್ಥಿಗಳಿಗೆ ಇದು ನಿರಾಶೆಯನ್ನು ಮೂಡಿಸಿದೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್(Viral Video) ಆಗಿದೆ.
ಅನಾನುಕೂಲತೆಯ ಬಗ್ಗೆ ಭಕ್ತರು ತಮ್ಮ ಹತಾಶೆ ವ್ಯಕ್ತಪಡಿಸಿದ ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ತ್ರಿವೇಣಿ ಸಂಗಮಕ್ಕೆ ಹೋಗುವ ರಸ್ತೆಗಳನ್ನು ವಿಭಜಿಸಲಾಗಿದ್ದು, ಒಂದು ಬದಿ ಯಾತ್ರಾರ್ಥಿಗಳಿಗೆ ಹಾಗೇ ಇನ್ನೊಂದು ಬದಿಯನ್ನು ವಿಐಪಿಗಳಿಗಾಗಿ ತೆರವುಗೊಳಿಸಲಾಗಿದೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಜನ ದಟ್ಟಣೆ ನಿರ್ವಹಣೆಯಲ್ಲಿ ಸರ್ಕಾರ ವಿಫಲವಾಗಿದೆ ಎಂದು ಜನ ಅಕ್ರೋಶ ಹೊರ ಹಾಕಿದ್ದಾರೆ.
महाकुंभ में VIP और आम श्रद्धालुओं के साथ भेदभाव पर भड़के लोग... #MahaKumbh2025 #Mahakumbh #China #NTRNeel #GoldRate #ShrutiHaasan pic.twitter.com/1JCGszdm70
— Pratahkal Live (@pratahkal) January 28, 2025
ಅಖಿಲೇಶ್ ಯಾದವ್ ಕಿಡಿ
ಮಹಾಕುಂಭಮೇಳದಲ್ಲಿ ನಡೆಯುವ ವಿಐಪಿ ಸಂಸ್ಕೃತಿಯ ಬಗ್ಗೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಗಮವನ್ನು ತಲುಪಲು ಹೆಣಗಾಡುತ್ತಿರುವ ಜನಸಮೂಹದ ವಿಡಿಯೊಗಳನ್ನು ಹಂಚಿಕೊಂಡ ಯಾದವ್, ವಿಐಪಿ ವ್ಯವಸ್ಥೆಗಳಿಗಿಂತ ಯಾತ್ರಾರ್ಥಿಗಳ ಅಗತ್ಯಗಳಿಗೆ ಆದ್ಯತೆ ನೀಡುವಂತೆ ಆಡಳಿತವನ್ನು ಒತ್ತಾಯಿಸಿದ್ದಾರೆ. "ವಿಐಪಿ ಪ್ರೋಟೋಕಾಲ್‍ಗಳಿಂದಾಗಿ ತೊಂದರೆಗಳನ್ನು ಸೃಷ್ಟಿಸುವ ಬದಲು ಯಾತ್ರಾರ್ಥಿಗಳಿಗೆ ಸುಗಮ ಸಾರಿಗೆಯನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು. ಮಹಾ ಕುಂಭಮೇಳದಲ್ಲಿ ಭಕ್ತರಿಗೆ ವಿಶೇಷ ವ್ಯವಸ್ಥೆಗಳು ಇರಬೇಕೇ ಹೊರತು ಗಣ್ಯರಿಗೆ ಅಲ್ಲ" ಎಂದು ಯಾದವ್ ಬರೆದಿದ್ದಾರೆ.
ಈ ಸುದ್ದಿಯನ್ನೂ ಓದಿ: Mahakumbh Stampede: ಮಹಾ ಕುಂಭಮೇಳದ ಕಾಲ್ತುಳಿತ; ಹೇಗಾಯ್ತು ಈ ದುರಂತ?
ಈ ಕಾರ್ಯಕ್ರಮವನ್ನು ಸ್ವಯಂ ಪ್ರಚಾರಕ್ಕಿಂತ ಸೇವಾ ಮನೋಭಾವದಿಂದ ಪರಿಗಣಿಸುವ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ. ಈ ಕಾರ್ಯಕ್ರಮವನ್ನು ನಿರ್ವಹಿಸಲು ದಣಿವರಿಯದೆ ಕೆಲಸ ಮಾಡುವ ಯಾತ್ರಾರ್ಥಿಗಳು ಮತ್ತು ಅಧಿಕಾರಿಗಳಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
महाकुंभ में VIP और आम श्रद्धालुओं के साथ भेदभाव पर भड़के लोग... #MahaKumbh2025 #Mahakumbh #China #NTRNeel #GoldRate #ShrutiHaasan pic.twitter.com/1JCGszdm70
— Pratahkal Live (@pratahkal) January 28, 2025