ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ತನ್ನದೇ ಹುಟ್ಟುಹಬ್ಬ ಮರೆತ ಯೋಧ; ಕರೆ ಮಾಡಿ ಶುಭಾಶಯ ತಿಳಿಸಿದ ಮಗಳು: ಹೃದಯಸ್ಪರ್ಶಿ ವಿಡಿಯೊ ನೋಡಿ

Viral Video: ಮಗಳು ಕರೆ ಮಾಡಿ ಶುಭಾಶಯ ತಿಳಿಸಿದಾಗಲೇ ಯೋಧರೊಬ್ಬರಿಗೆ ಇವತ್ತು ತಮ್ಮ ಹುಟ್ಟುಹಬ್ಬ ಎನ್ನುವುದು ನೆನಪಿಗೆ ಬಂದಿದೆ. ಸದ್ಯ ಈ ಘಟನೆಯ ವಿಡಿಯೊ ವೈರಲ್ ಆಗಿದ್ದು, ನೆಟ್ಟಿಗರ ಮನಸ್ಸು ಕರಗಿದೆ. ದೇಶಕ್ಕೋಸ್ಕರ ಜೀವವನ್ನೇ ತ್ಯಾಗ ಮಾಡುವ ಸೈನಿಕರು ತಮ್ಮ ವಿಶೇಷ ದಿನವನ್ನೇ ಮರೆತುಬಿಟ್ಟಿರುತ್ತಾರೆ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ.

ಮಗಳು ಹುಟ್ಟುಹಬ್ಬದ ಶುಭಾಶಯ ತಿಳಿಸಿದಾಗ ಯೋಧ ಹೇಳಿದ್ದೇನು?

ಸಾಂದರ್ಭಿಕ ಚಿತ್ರ -

Priyanka P
Priyanka P Jan 6, 2026 6:17 PM

ನವದೆಹಲಿ, ಜ. 6: ದೇಶದ ಗಡಿಗಳನ್ನು ಕಾಯುವ ಸೈನಿಕರಿಗೆ ಹುಟ್ಟುಹಬ್ಬಗಳು, ಹಬ್ಬಗಳು ಹಾಗೂ ಇತರ ಸಂಭ್ರಮಗಳ ಬಗ್ಗೆ ಅರಿವಿರುವುದೇ ಇಲ್ಲ. ಅವರಿಗೆ ವಿಶೇಷ ದಿನದ ನೆನಪು ಇರುವುದಿಲ್ಲ. ಯಾಕೆಂದರೆ ಎಲ್ಲಕ್ಕಿಂತ ಹೆಚ್ಚಾಗಿ ಅವರಿಗೆ ಕರ್ತವ್ಯವು ಮೊದಲು ಬರುತ್ತದೆ. ಕೆಲವೊಮ್ಮೆ ತಮ್ಮದೇ ಆದ ವಿಶೇಷ ದಿನವನ್ನು ನೆನಪಿಸಿಕೊಳ್ಳಲೂ ಸಮಯವೇ ಇರುವುದಿಲ್ಲ. ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಯೋಧರೊಬ್ಬರ ವಿಡಿಯೊವೊಂದು (viral video) ನೆಟ್ಟಿಗರ ಹೃದಯ ಕರಗಿಸಿದೆ.

ವೈರಲ್ ಆಗಿರುವ ವಿಡಿಯೊದಲ್ಲಿ ಭಾರತೀಯ ಸೈನಿಕನೊಬ್ಬರು ತಮ್ಮ ಜವಾಬ್ದಾರಿಗಳಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಕಂಡು ಬಂದಿದೆ. ಈ ಅವರ ಮೊಬೈಲ್ ಫೋನ್‍ಗೆ ವಿಡಿಯೊ ಕರೆ ಬಂದಿದೆ. ಅವರ ಚಿಕ್ಕ ಮಗಳು ನಗುತ್ತಾ ʼʼಜನ್ಮದಿನದ ಶುಭಾಶಯಗಳು ಅಪ್ಪʼʼ ಎಂದು ಹೇಳಿದ್ದಾಳೆ. ಈ ವೇಳೆ ಯೋಧನ ಮುಖಭಾವ ತಕ್ಷಣವೇ ಬದಲಾಗಿದೆ. ʼʼಏನು, ಇವತ್ತು ನನ್ನ ಹುಟ್ಟುಹಬ್ಬವೇ?ʼʼ ಎಂದು ಪ್ರಶ್ನಿಸಿದ್ದಾರೆ.

ಗಂಟೆಗೆ 100 ಕಿ.ಮೀ. ವೇಗದಲ್ಲಿ ಕಾರ್‌ ಓಡಿಸುತ್ತ ನಿದ್ರಿಸಿದ ಚಾಲಕ; ವಿಡಿಯೊ ವೈರಲ್

ಈ ವಿಡಿಯೊವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ಇದು ಈಗಾಗಲೇ 1,74,000 ವೀಕ್ಷಣೆ ಕಂಡಿದೆ. ಹಲವರು ಇದನ್ನು ರಿಪೋಸ್ಟ್‌ ಮಾಡಿದ್ದಾರೆ. ದೇಶವನ್ನು ರಕ್ಷಿಸುವಲ್ಲಿ ಸೈನಿಕ ಎಷ್ಟು ಮಗ್ನನಾಗಿದ್ದಾರೆಂಬುದನ್ನು ಈ ವಿಡಿಯೊ ಎತ್ತಿ ತೋರಿಸುತ್ತದೆ. ಅವರಿಗೆ ತಮ್ಮದೇ ಹುಟ್ಟುಹಬ್ಬ ಮರೆತು ಹೋಗಿದೆ. ಪುತ್ರಿ ಶುಭಾಶಯ ತಿಳಿಸಿದಾಗ ಅವರಿಗೆ ಅಚ್ಚರಿಯಾಗಿದೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಇಲ್ಲಿದೆ ವಿಡಿಯೊ:



ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪ್ರತಿಕ್ರಿಯೆಗಳ ಮಹಾಪೂರವನ್ನೇ ಹರಿಸಿದೆ. ಅನೇಕರು ಇದನ್ನು ನಿಜವಾದ ದೇಶಭಕ್ತಿ ಎಂದು ಕರೆದರೆ, ಇತರರು ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸೈನಿಕರು ಗಡಿಗಳಲ್ಲಿ ಹದ್ದಿನಂತೆ ಕಾಯುತ್ತಿರುವುದರಿಂದ ದೇಶದ ನಾಗರಿಕರು ನೆಮ್ಮದಿಯಿಂದ ನಿದ್ರಿಸುತ್ತಾರೆ ಎಂದು ಹೇಳಿದರು. ಹಲವರು ಸೈನಿಕ ಮತ್ತು ಅವರ ಮಗಳ ನಡುವಿನ ಅವಿನಾಭಾವ ಸಂಬಂಧವನ್ನು ಹೊಗಳಿದರು.

ಪ್ರತ್ಯೇಕ ಘಟನೆಯೊಂದರಲ್ಲಿ ಬರೋಬ್ಬರಿ 44 ವರ್ಷಗಳ ಹೋರಾಟದ ನಂತರ ಸೈನಿಕನೊಬ್ಬನಿಗೆ ಪಿಂಚಣಿ ಸೌಲಭ್ಯವನ್ನು ನೀಡಲು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶಿಸಿದೆ. 1971ರ ಯುದ್ಧದಲ್ಲಿ ದೃಷ್ಟಿ ಕಳೆದುಕೊಂಡಿದ್ದ ಸೈನಿಕ ಶ್ಯಾಮ್ ಸಿಂಗ್ ಅವರ ಪಿಂಚಣಿ ಹಕ್ಕನ್ನು ಎತ್ತಿ ಹಿಡಿದಿದದ್ದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್, ಸರ್ಕಾರದ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿ ಶ್ಯಾಮ್ ಸಿಂಗ್ ಅವರ ವಿಧವೆ ಪತ್ನಿ ಕರ್ನೈಲ್ ಕೌರ್ ಅವರಿಗೆ ಇದರ ಪ್ರಯೋಜನಗಳನ್ನು ಒದಗಿಸುವಂತೆ ಆದೇಶಿಸಿದೆ. 1971ರ ಇಂಡೋ- ಪಾಕ್ ಯುದ್ಧದ ಸಮಯದಲ್ಲಿ ತೀವ್ರ ಗಾಯಗೊಂಡ ಶ್ಯಾಮ್ ಸಿಂಗ್ ದೃಷ್ಟಿ ಕಳೆದುಕೊಂಡಿದ್ದರು.