ಸಾರ್ಕ್ ವಿಚಾರ ಸಂಕಿರಣದಲ್ಲಿ ತಪ್ಪಾದ ನಕ್ಷೆ ಪ್ರದರ್ಶನಕ್ಕೆ ಭಾರತ ಆಕ್ಷೇಪ
ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಭಾರತೀಯ ರಾಯಭಾರಿ ಪೂಜಾ ಕುಮಾರಿ ಝಾ ಹೇಳಿದ್ದಾರೆ. ಢಾಕಾದಲ್ಲಿ ನಡೆದ ಸಾರ್ಕ್ ವಿಚಾರ ಸಂಕಿರಣದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಚಿತ್ರಿಸುವ ಭಾರತದ ತಪ್ಪು ನಕ್ಷೆಯನ್ನು ಪ್ರದರ್ಶಿಸಿರುವುದಕ್ಕೆ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಸಂಗ್ರಹ ಚಿತ್ರ -
ನವದೆಹಲಿ: ಜಮ್ಮು ಮತ್ತು ಕಾಶ್ಮೀರ (jammu and kashmir) ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಭಾರತೀಯ ರಾಯಭಾರಿ ಪೂಜಾ ಕುಮಾರಿ ಝಾ (Indian diplomat Pooja Kumari Jha) ಹೇಳಿದರು. ಢಾಕಾದಲ್ಲಿ (Dhaka) ನಡೆದ ಸಾರ್ಕ್ ವಿಚಾರ ಸಂಕಿರಣದಲ್ಲಿ (SAARC seminar) ಬಾಂಗ್ಲಾದೇಶದ ಮಾಜಿ ಹೈಕಮಿಷನರ್ ಅಹ್ಮದ್ ತಾರಿಕ್ ಕರೀಮ್ (Ahmed Tariq Karim) ಅವರು ವಿಷಯ ಪ್ರಸ್ತುತಿ ವೇಳೆ ತೋರಿಸಿದ ನಕ್ಷೆಗೆ (India map) ಆಕ್ಷೇಪ ವ್ಯಕ್ತಪಡಿದ ಅವರು ತಪ್ಪಾಗಿ ನಿರೂಪಿಸುವುದನ್ನು ಎತ್ತಿ ತೋರಿಸುವುದು ನನ್ನ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಬಾಂಗ್ಲಾದೇಶ ಅಂತರರಾಷ್ಟ್ರೀಯ ಮತ್ತು ಕಾರ್ಯತಂತ್ರದ ಅಧ್ಯಯನ ಸಂಸ್ಥೆ (BIISS) ಯಲ್ಲಿ ನಡೆದ ಸಾರ್ಕ್ ವಿಚಾರ ಸಂಕಿರಣದಲ್ಲಿ ಭಾರತದ ನಕ್ಷೆಯನ್ನು ತಪ್ಪಾಗಿ ಚಿತ್ರಿಸಿರುವುದಕ್ಕೆ ಪೂಜಾ ಆಕ್ಷೇಪ ವ್ಯಕ್ತಪಡಿಸಿ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ತಂಗಿದ್ದ ಹೋಟೆಲ್‌ಗೆ ನುಗ್ಗಿದ ಪ್ರತಿಭಟನಾಕಾರ; ಭಾರತ ವಿರೋಧಿ ಘೋಷಣೆ
ಬಾಂಗ್ಲಾದೇಶದ ಮಾಜಿ ಹೈಕಮಿಷನರ್ ಅಹ್ಮದ್ ತಾರಿಕ್ ಕರೀಮ್ ಅವರ ತಮ್ಮ ವಿಚಾರ ಪ್ರಸ್ತುತಿಯ ಸಂದರ್ಭದಲ್ಲಿ ತೋರಿಸಿದ ನಕ್ಷೆಗೆ ಢಾಕಾದಲ್ಲಿರುವ ಭಾರತೀಯ ಹೈಕಮಿಷನ್‌ನ ಎರಡನೇ ಕಾರ್ಯದರ್ಶಿ ಪೂಜಾ ಕುಮಾರಿ ಝಾ ಅವರು ಆಕ್ಷೇಪ ವ್ಯಕ್ತಪಡಿಸಿದರು.
India's Second Secretary at the @ihcdhaka Puja Jha, objected on the spot after an incorrect map of Jammu & Kashmir as part of Pakistan was displayed during a foreign policy seminar in Bangladesh.
— Abhishek Jha (@abhishekjha157) July 10, 2026
She said that J&K is an integral and inalienable part of India and that the map was… pic.twitter.com/G3MReBRgEZ
ಸರ್, ಇದು ತಪ್ಪಾದ ನಕ್ಷೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಎಂದು ಹೇಳಿದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಕರೀಮ್, ನಕ್ಷೆಯನ್ನು ಕೇವಲ ಸಾಂದರ್ಭಿಕವಾಗಿ ಬಳಸಲಾಗಿದೆ. ಇದು ವಾಸ್ತವಿಕ ಗಡಿಗಳನ್ನು ಉಲ್ಲೇಖಿಸುವುದಿಲ್ಲ ಎಂದರು.
ಅದಕ್ಕೆ ಝಾ ಅವರು, ನನಗೆ ಅರ್ಥವಾಗಿದೆ ಸರ್. ಆದರೆ ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದನ್ನು ಇಲ್ಲಿ ತಪ್ಪಾಗಿ ನಿರೂಪಿಸಲಾಗಿದೆ. ಆದ್ದರಿಂದ ನಾನು ಅದನ್ನು ಎತ್ತಿ ತೋರಿಸಲು ಬಯಸುತ್ತೇನೆ ಎಂದು ತಿಳಿಸದವರು.
ಆಗ ಕರೀಮ್ ನೀವು ಭಾರತದವರೇ ಎಂದು ಪ್ರಶ್ನಿಸಿದರು. ಅದಕ್ಕೆ ಝಾ ತಮ್ಮನ್ನು ಭಾರತೀಯ ಹೈಕಮಿಷನ್‌ನ ಅಧಿಕಾರಿ ಎಂದು ಪರಿಚಯಿಸಿಕೊಂಡರು. ಬಳಿಕ ಕರೀಮ್ ಆಕ್ಷೇಪಣೆಯನ್ನು ಒಪ್ಪಿಕೊಂದು, ಅದನ್ನು ಗಮನಿಸಿರುವುದಾಗಿ ತಿಳಿಸಿದರು.
ಈ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವೆ ಶಮಾ ಒಬೇದ್ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದು, ದಕ್ಷಿಣ ಏಷ್ಯಾದೊಳಗೆ ಆಳವಾದ ಪ್ರಾದೇಶಿಕ ಸಹಕಾರದ ಮಹತ್ವದ ಬಗ್ಗೆ ಮಾತನಾಡಿದರು.
ಪ್ರದೇಶದ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯ ನಡುವಿನ ಅಂತರವನ್ನು ಕಡಿಮೆ ಮಾಡಲು ಸಲಹೆ ನೀಡಿದ ಅವರು, ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಕ್ಕೆ ಬಲವಾದ ಅನುಷ್ಠಾನ ಸಾಮರ್ಥ್ಯ, ಹೆಚ್ಚಿನ ಆರ್ಥಿಕ ಶಕ್ತಿ, ಹೆಚ್ಚು ಪರಿಣಾಮಕಾರಿ ವಿಶೇಷ ಕಾರ್ಯವಿಧಾನಗಳು ಮತ್ತು ಅನುಸರಣೆಯ ಪ್ರಾಯೋಗಿಕ ಸಂಸ್ಕೃತಿಯ ಅಗತ್ಯವಿದೆ. ಇದಕ್ಕಾಗಿ ಬಾಂಗ್ಲಾದೇಶ ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ನಿಕಟ ಸಮನ್ವಯವನ್ನು ಸಾಧಿಸುವ ಬಗ್ಗೆ ಪರಿಗಣಿಸುತ್ತಿದೆ ಎಂದು ತಿಳಿಸಿದರು.
ಮರುಬಳಕೆ ರಾಕೆಟ್ ತಂತ್ರಜ್ಞಾನದಲ್ಲಿ ಚೀನಾದ ಐತಿಹಾಸಿಕ ಸಾಧನೆ; 'ಲಾಂಗ್ ಮಾರ್ಚ್-10B' ಬೂಸ್ಟರ್ ಯಶಸ್ವಿ ಮರುಪಡೆ
ಈ ನಡುವೆ ಝಾ ಮತ್ತು ಕರೀಮ್ ಅವರ ನಡುವಿನ ಮಾತುಕತೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ನಕ್ಷೆಗೆ ತಕ್ಷಣ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿಅನೇಕರು ಭಾರತೀಯ ರಾಜತಾಂತ್ರಿಕರನ್ನು ಶ್ಲಾಘಿಸಿದರು.