ಸಂಪೂರ್ಣ ಗ್ರಾಮಕ್ಕೆ ವಿಮೆ ಮಾಡಿಸಿ ಹಸೆಮಣೆ ಏರಿದ ಮಹಾರಾಷ್ಟ್ರದ ಯುವಕ; ಇದು ದೇಶಕ್ಕೇ ಮಾದರಿಯಾದ ಮದುವೆ
ಗ್ರಾಮದ ಸುಮಾರು 3,500 ಮಂದಿಗೆ ಅಪಘಾತ ರಕ್ಷಣೆ ವಿಮೆ ಮಾಡಿ ಮಹಾರಾಷ್ಟ್ರದಲ್ಲಿ ಯುವಕನೊಬ್ಬ ಹಸೆಮಣೆ ಏರಿದ್ದಾನೆ. ಇದು ಈಗ ದೇಶದ ಗಮನ ಸೆಳೆದಿದೆ. ಯುವಕ ಹಾಗೂ ಆತನ ಕುಟುಂಬಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ವಿವಾಹ ಸಮಾರಂಭದಲ್ಲಿ ವಧು ವರರು ವಿಮೆ ಪತ್ರವನ್ನು ಗ್ರಾಮಸ್ಥರಿಗೆ ಉಡುಗೊರೆಯಾಗಿ ನೀಡಿದರು.
ಸಂಗ್ರಹ ಚಿತ್ರ -
ಮುಂಬೈ, ಮೇ 26: ಮದುವೆಯಲ್ಲಿ (wedding gift) ವಧು ವರರಿಗೆ ಉಡುಗೊರೆ ಕೊಡುವುದು ವಾಡಿಕೆ. ಆದರೆ ಇಲ್ಲಿ ವಧುವರರೇ ಗ್ರಾಮದ ಜನರಿಗೆ ಉಡುಗೊರೆಯನ್ನು ನೀಡಿದ್ದಾರೆ. ಗ್ರಾಮದ ಸುಮಾರು 3,500 ಮಂದಿಗೆ ಅಪಘಾತ ರಕ್ಷಣೆ (accident cover) ವಿಮೆ (accident insurance coverage) ಮಾಡಿಸಿದ ಮಹಾರಾಷ್ಟ್ರದ (Maharastra) ಯುವಕ ಬಳಿಕ ಹಸೆಮಣೆ ಏರಿದ್ದಾನೆ. ಖಾಸಗಿ ಕಾರ್ಯಕ್ರಮದಲ್ಲಿ ಸಮುದಾಯ ಕಲ್ಯಾಣದ ಯುವಕನ ಯೋಜನೆಗೆ ಗ್ರಾಮಸ್ಥರಿಂದ ಅಪಾರ ಮೆಚ್ಚುಗೆ ಪ್ರಾಪ್ತವಾಗಿದೆ. ದೂರದೂರುಗಳಿಂದಲೂ ಯುವಕ ಹಾಗೂ ಆತನ ಕುಟುಂಬಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವರನ ಕುಟುಂಬವು ಬಹುತೇಕ ಸಂಪೂರ್ಣ ಗ್ರಾಮಕ್ಕೆ ಅಪಘಾತ ವಿಮಾ ರಕ್ಷಣೆಯನ್ನು ಉಡುಗೊರೆಯಾಗಿ ನೀಡಿದೆ. ಇದರಿಂದ ಗ್ರಾಮದ ಒಟ್ಟು 3,500 ಮಂದಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯು 1 ಲಕ್ಷ ರೂ. ಮೌಲ್ಯದ ಅಪಘಾತ ರಕ್ಷಣೆ ವಿಮೆಯನ್ನು ಪಡೆದರು.
ಸಂಪೂರ್ಣ ಗ್ರಾಮಕ್ಕೆ ವಿಮೆ ಮಾಡಿಸಿದ ಮದುಮಗ:
The most beautiful story of the day!!! Let’s Hope the insurers ensures that this beautiful gesture works. It has the potential for replication. Any insurer coming forward to say who did this and keep track? Good for your image and good for is to know!!!! pic.twitter.com/GBk3PXEG7k
— Sucheta Dalal (@suchetadalal) May 26, 2026
ನಾಂದೇಡ್ ಜಿಲ್ಲೆಯ ಕಂದಾರ್ ತಹಸಿಲ್‌ನಲ್ಲಿರುವ ಬಹದ್ದೂರ್‌ಪುರ ಗ್ರಾಮದ ಸಿದ್ಧೇಶ್ವರ ಪೇಠ್ಕರ್ ಮತ್ತು ಮಂಜುಷಾ ಅವರ ವಿವಾಹ ಸಮಾರಂಭದಲ್ಲಿ ಪೇಠ್ಕರ್ ಕುಟುಂಬವು ಸುಮಾರು 3,500 ನಿವಾಸಿಗಳಿಗೆ ವಿಮೆ ಮಾಡಿಸಿದೆ. ಬಹದ್ದೂರ್‌ಪುರವು ಮತದಾರರ ಪಟ್ಟಿಯಲ್ಲಿ 3,600 ಕ್ಕೂ ಹೆಚ್ಚು ಹೆಸರುಗಳನ್ನು ಹೊಂದಿದ್ದು, ಇದರಲ್ಲಿರುವ ಎಲ್ಲರಿಗೂ ಈಗ ವಿಮಾ ಯೋಜನೆಯಡಿಯಲ್ಲಿ ಸೇರಿಸಲಾಗಿದೆ ಎಂದು ಪೇಠ್ಕರ್ ಕುಟುಂಬ ತಿಳಿಸಿದೆ.
ತಾಜ್ ಮಹಲ್ ವೀಕ್ಷಿಸಿದ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊಗೆ ಇರಾನ್ ವ್ಯಂಗ್ಯ
ಅಪಘಾತ ರಕ್ಷಣೆ ವಿಮೆ ಪಾಲಿಸಿಯಲ್ಲಿ ವಿಮಾದಾರರು ಹಾವು ಕಡಿತ, ಮಿಂಚಿನ ಹೊಡೆತ, ಪ್ರಾಣಿಗಳ ದಾಳಿ, ರಸ್ತೆ ಅಪಘಾತ ಮತ್ತು ದೈನಂದಿನ ಕೆಲಸಗಳ ಸಮಯದಲ್ಲಿ ಸಂಭವಿಸುವ ಅಪಘಾತಗಳ ವೇಳೆಯಲ್ಲಿ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ. ಇದು ಸಂಪೂರ್ಣವಾಗಿ ಅಪಘಾತ ವಿಮೆಯಾಗಿದ್ದು, ಯಾವುದೇ ಅಪಘಾತದಿಂದ ಸಾವು ಸಂಭವಿಸಿದಲ್ಲಿ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ 1 ಲಕ್ಷ ರೂ. ಗಳನ್ನು ನೀಡಲಾಗುತ್ತದೆ ಎಂದು ವರನ ಅಣ್ಣ ಅನೂಪ್ ಪೆಠ್ಕರ್ ತಿಳಿಸಿದ್ದಾರೆ.
ಹಠಾತ್ ಅಪಘಾತಗಳಿಂದ ಗ್ರಾಮಸ್ಥರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟಗಳನ್ನು ನಿರಂತರವಾಗಿ ನೋಡುವುದರಿಂದ ಈ ಆಲೋಚನೆ ಬಂದಿದೆ. ಇದು ಕೇವಲ ಸಾಮಾಜಿಕ ಮಾಧ್ಯಮದ ಗಮನ ಸೆಳೆಯಲು ಯೋಜಿಸಲಾದ ಒಂದು ಬಾರಿಯ ಕಾರ್ಯಕ್ರಮವಲ್ಲ ಎಂದು ಸಿದ್ದೇಶ್ವರ್ ತಿಳಿಸಿದ್ದಾರೆ.
ಅನೂಪ್ ಅವರ ಕುಟುಂಬವು ಈ ಹಿಂದೆ "ವಿಮೆ ಮತ್ತು ಹೆಲ್ಮೆಟ್" ಶಿಬಿರವನ್ನು ಆಯೋಜಿಸಿತ್ತು. ಇದರಲ್ಲಿ ಒಂದೇ ದಿನದಲ್ಲಿ ಸುಮಾರು 900 ಜನರಿಗೆ ವಿಮೆ ಮಾಡಲಾಗಿತ್ತು. ಅವರ ಸ್ವಂತ ವಿವಾಹದ ಸಮಯದಲ್ಲಿ ರಸ್ತೆ ಸುರಕ್ಷತಾ ಕ್ರಮವಾಗಿ ಅತಿಥಿಗಳಿಗೆ ಹೆಲ್ಮೆಟ್‌ಗಳನ್ನು ವಿತರಿಸಲಾಗಿತ್ತು.
ಸೆಪ್ಟಿಕ್ ಟ್ಯಾಂಕ್ ಒಳಗೆ ಬಿದ್ದ ಬಿಲ್ಡರ್; ಆತನನ್ನು ರಕ್ಷಿಸಲು ಹಾರಿದ ಐವರು: ಕೊನೆಗೆ ಆರು ಮಂದಿಯೂ ಸಾವು!
ಇವರ ಈ ಕಾರ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಅನೇಕರು ಶ್ಲಾಘಿಸಿದ್ದಾರೆ. ಶಿವಸೇನಾ ಸಂಸದ ಮಿಲಿಂದ್ ದಿಯೋರಾ ಈ ಕುರಿತು ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡು ಸರ್ಕಾರ ಮಾಡಬೇಕಾದದ್ದನ್ನು ಇವರು ಮಾಡಿದ್ದಾರೆ. ಇದು ಸ್ಪೂರ್ತಿದಾಯಕ ಎಂದು ಹೇಳಿದ್ದಾರೆ.