Viral Video: ಸಾರಿನ ಪಾತ್ರೆಗೆ ಮೂತ್ರ ವಿಸರ್ಜಿಸಿದ ಕಿಡಿಗೇಡಿಗಳು; ವಿಡಿಯೊ ವೈರಲ್ ಬೆನ್ನಲ್ಲೇ ರೆಸ್ಟೋರೆಂಟ್ ಕೊಟ್ಟ ಪರಿಹಾರ ಎಷ್ಟು ಗೊತ್ತಾ?
ಚೀನಾದ ಜನಪ್ರಿಯ ರೆಸ್ಟೋರೆಂಟ್‌ವೊಂದರಲ್ಲಿ ಇಬ್ಬರು ಕಿಡಿಗೇಡಿಗಳು ಸಾರಿನ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡಿದ್ದು, ಈ ವಿಡಿಯೊ ವೈರಲ್(Viral Video) ಆಗಿದೆ. ಈ ವಿಚಾರ ತಿಳಿದ ಕಂಪನಿ ಗ್ರಾಹಕರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಹಾಗೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಪೊಲೀಸರು ಶಂಕಿತರನ್ನು ಬಂಧಿಸಿದ್ದಾರೆ.


ಬೀಜಿಂಗ್: ಇತ್ತೀಚೆಗಷ್ಟೇ ಮದುವೆಯ ಮನೆಯಲ್ಲಿ ರೋಟಿ ತಯಾರಿಸುತ್ತಿದ್ದ ವ್ಯಕ್ತಿ ರೋಟಿಗೆ ಎಂಜಲು ಉಗಿದ ದೃಶ್ಯವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಈಗ ಚೀನಾದ ಜನಪ್ರಿಯ ರೆಸ್ಟೋರೆಂಟ್‌ವೊಂದರಲ್ಲಿ ಒಂದಾದ ಪುರುಷರಿಬ್ಬರು ಸಾರು ತುಂಬಿರುವ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ಪ್ರಮಾದಕ್ಕಾಗಿ ಕಂಪನಿಯು 4,000ಕ್ಕೂ ಹೆಚ್ಚು ಗ್ರಾಹಕರಿಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರೈವೇಟ್ ಡೈನಿಂಗ್ ರೂಂನಲ್ಲಿ ಇಬ್ಬರು ಪುರುಷರು ಸಾರಿನ ಪಾತ್ರೆಗೆ ಮೂತ್ರ ವಿಸರ್ಜಿಸಿದ ವಿಡಿಯೊ ಸೋಶಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡ ನಂತರ ಚೀನಾದ ಹಾಟ್ ಪಾಟ್ ಚೈನ್ ಈ ನಿರ್ಧಾರವನ್ನು ತೆಗೆದುಕೊಂಡಿದೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ತಕ್ಷಣ ರೆಸ್ಟೋರೆಂಟ್‌ನಲ್ಲಿ ಆಹಾರ ಸುರಕ್ಷತೆಯ ನಿಯಮ ಉಲ್ಲಂಘನೆಯ ಬಗ್ಗೆ ನೆಟ್ಟಿಗರು ಕಿಡಿಕಾರಿದ್ದಾರೆ.
ವೈರಲ್ ವಿಡಿಯೊದಲ್ಲಿ ರೆಸ್ಟೊರೆಂಟ್‌ನ ಟೇಬಲ್ ಮೇಲೆ ನಿಂತಿದ್ದ ಯುವಕನೊಬ್ಬ ಕುದಿಯುವ ಸಾರಿನ ಪಾತ್ರೆಗೆ ಮೂತ್ರ ವಿಸರ್ಜನೆ ಮಾಡುವುದು ಸೆರೆಯಾಗಿದೆ. ಕಂಪನಿಯು ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಶಾಂಘೈನ ಡೌನ್‍ಟೌನ್‍ನಲ್ಲಿನ ರೆಸ್ಟೋರೆಂಟ್‍ನಲ್ಲಿ ಈ ಘಟನೆ ನಡೆದಿರುವುದಾಗಿ ದೃಢಪಡಿಸಿತು ಮತ್ತು ಈ ಘೋರ ಕೃತ್ಯಕ್ಕೆ ಪರಿಹಾರ ನೀಡುವುದಾಗಿ ಭರವಸೆ ನೀಡಿದೆ. ಹಾಗೇ ಈ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದೆ. ಆದರೆ ಕಂಪನಿಯು ಪರಿಹಾರದ ಮೊತ್ತವನ್ನು ಇನ್ನೂ ಬಹಿರಂಗಪಡಿಸಿಲ್ಲ.
ಸಾರಿನ ಪಾತ್ರೆಗೆ ಮೂತ್ರ ವಿಸರ್ಜಿಸುತ್ತಿರುವ ದೃಶ್ಯ ಇಲ್ಲಿದೆ ನೋಡಿ....
Just when you thought the world couldn’t get any crazier… someone stands up and pisses in the Haidilao hotpot. Blasphemy! Hotpot treason!
— Manya Koetse (@manyapan) March 6, 2025
Anyway, Haidilao reported the guy to the police, and I’m pretty sure he won’t be welcome back anytime soon. pic.twitter.com/3ytLhGdYjX
ಶಾಂಘೈ ಪೊಲೀಸರು ಈ ಪ್ರಕರಣದಲ್ಲಿ ಟ್ಯಾಂಗ್ ಮತ್ತು ವು ಎಂಬ 17 ವರ್ಷದ ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ. ಹೆಚ್ಚುವರಿಯಾಗಿ, ಕಂಪನಿಯು ಅವರ ವಿರುದ್ಧ ಸಿವಿಲ್ ಮೊಕದ್ದಮೆಯನ್ನು ಸಹ ದಾಖಲಿಸಿದೆ. 1994 ರಲ್ಲಿ ಸಣ್ಣ ಸಿಚುವಾನ್ ಪಟ್ಟಣದಲ್ಲಿ ಸ್ಥಾಪನೆಯಾದ ಹೈಡಿಲಾವೊ ಜಾಗತಿಕವಾಗಿ ಪ್ರಸಿದ್ಧ ಚೀನೀ ಪಾಕಪದ್ಧತಿ ಬ್ರಾಂಡ್ ಆಗಿ ಬೆಳೆದಿದೆ. ಜೂನ್ 2023 ರ ಹೊತ್ತಿಗೆ, ಇದು ಚೀನಾದಲ್ಲಿ 1,360 ರೆಸ್ಟೋರೆಂಟ್‍ಗಳನ್ನು ಮತ್ತು ವಿಶ್ವಾದ್ಯಂತ 1,400 ಕ್ಕೂ ಹೆಚ್ಚು ರೆಸ್ಟೋರೆಂಟ್‍ಗಳನ್ನು ಹೊಂದಿತ್ತು. ಇಂಟರ್ನ್ಯಾಷನಲ್ ಸಿಂಗಾಪುರ್, ಯುಎಸ್, ಕೆನಡಾ, ಯುಕೆ ಮತ್ತು ಆಸ್ಟ್ರೇಲಿಯಾ ಸೇರಿದಂತೆ 14 ದೇಶಗಳಲ್ಲಿ 122 ಹೈಡಿಲಾವೊ ಮಳಿಗೆಗಳು ಕಾರ್ಯ ನಿರ್ವಹಿಸುತ್ತವೆ.
ಆಹಾರ ಸುರಕ್ಷತಾ ಹಗರಣಗಳು ಒಂದು ಕಾಲದಲ್ಲಿ ಚೀನಾದಲ್ಲಿ ಸಾಮಾನ್ಯವಾಗಿದ್ದವು. ಚೀನಾದಲ್ಲಿ 2008 ರಲ್ಲಿ ಕಲುಷಿತವಾದ ಹಾಲನ್ನು ಕುಡಿದು ಲಕ್ಷಾಂತರ ಶಿಶುಗಳು ಅನಾರೋಗ್ಯಕ್ಕೀಡಾಗಿದ್ದವು ಮತ್ತು ಆರು ಶಿಶುಗಳು ಸಾವನಪ್ಪಿದ್ದವು.
ಈ ಸುದ್ದಿಯನ್ನೂ ಓದಿViral Video: ಇದೆಂಥಾ ಅಸಹ್ಯ! ತಯಾರಿಸಿಟ್ಟ ಜಾಮೂನ್ ಗೆ ಮೂತ್ರ ವಿಸರ್ಜನೆ ಮಾಡಿದ ಕೊಳಕ- ವಿಡಿಯೊ ವೈರಲ್
ಇಂಥದ್ದೇ ಪ್ರಕರಣವೊಂದು ಇತ್ತೀಚೆಗೆ ನಡೆದಿದೆ. ವ್ಯಕ್ತಿಯೊಬ್ಬ ಗುಲಾಬ್ ಜಾಮೂನು ತಯಾರಿಸಿಟ್ಟ ಕಡಾಯಿಗೆ ಮೂತ್ರ ವಿಸರ್ಜನೆ ಮಾಡಿದ ವಿಡಿಯೊವೊಂದು ಎಲ್ಲೆಡೆ ವೈರಲ್ ಆಗಿತ್ತು. ಗುಲಾಬ್ ಜಾಮೂನ್ ಕಡಾಯಿಗೆ ವ್ಯಕ್ತಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಆತನ ಪಕ್ಕದಲ್ಲಿ ನಿಂತಿದ್ದ ಸಹೋದ್ಯೋಗಿ ಇದನ್ನು ವಿಡಿಯೊ ಮಾಡಿದ್ದಾನೆ. ಈ ವಿಡಿಯೊ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು ಯಾವುದೇ ಬುದ್ದಿ ಇದ್ದವರು ಇಂತಹ ಕೆಲಸ ಮಾಡುವುದಿಲ್ಲ ಎಂದು ಕಿಡಿಕಾರಿದ್ದಾರೆ.