ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಮಗಳ ಮೇಲೆಯೇ ತಾಯಿಯ ವಿಕೃತಿ: ಶಾಲಾ ಬ್ಯಾಗ್‌ಗೆ ಇಟ್ಟಿಗೆ ತುಂಬಿಸಿ ಕಿರುಕುಳ; ಬುದ್ಧಿ ಹೇಳಿದವರ ಮೇಲೆಯೇ ಕೂಗಾಟ

Viral Video: ಇಲ್ಲೊಬ್ಬ ತಾಯಿ ಮಗುವಿನ ಮೇಲೆಯೇ ಕ್ರೌರ್ಯ ಮೆರೆದಿದ್ದಾಳೆ. ಬಿಹಾರದ ಮಹಿಳೆಯೊಬ್ಬಳು ಮಗಳ ಬ್ಯಾಗ್‌ಗೆ ಇಟ್ಟಿಗೆ ತುಂಬಿಸಿ ಅದನ್ನು ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಿದ್ದಾಳೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಬ್ಯಾಗ್‌ ಮೇಲೆ ಇಟ್ಟಿಗೆ ತುಂಬಿಸಿ ಮಗುವಿಗೆ ಶಿಕ್ಷೆ ನೀಡಿದ ತಾಯಿ

ಬ್ಯಾಗ್‌ ಒಳಗೆ ಇಟ್ಟಿಗೆ ತುಂಬಿಸಿ ಮಗುವಿಗೆ ಶಿಕ್ಷೆ ನೀಡಿದ ತಾಯಿ -

Profile
Pushpa Kumari Feb 17, 2026 3:39 PM

ಪಾಟ್ನಾ, ಫೆ. 17: ತಾಯಿ-ಮಗುವಿನ ಬಾಂಧವ್ಯವಕ್ಕೆ ಬೆಲೆ ಕಟ್ಟಲಾಗದು. ಮಗುವಿನ ಪ್ರತಿ ಕಷ್ಟ- ಸುಖಕ್ಕೆ ಸ್ಪಂದಿಸುವ ತಾಯಿ ಆರೈಕೆಯಲ್ಲೇ ಖುಷಿ ಕಾಣುತ್ತಾಳೆ. ಆದರೆ ಇಲ್ಲೊಬ್ಬ ತಾಯಿ ಮಗುವಿನ ಮೇಲೆಯೇ ಕ್ರೌರ್ಯ ಮೆರೆದಿದ್ದಾಳೆ. ಬಿಹಾರದ ಮಹಿಳೆಯೊಬ್ಬಳು ಮಗಳ ಬ್ಯಾಗ್‌ಗೆ ಇಟ್ಟಿಗೆ ತುಂಬಿಸಿ ಹೊತ್ತುಕೊಂಡು ಹೋಗುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಸದ್ಯ ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಬಿಹಾರದ ಮುಜಾಫರ್‌ಪುರ ನಗರದ ಜನನಿಬಿಡ ಬೀದಿಯಲ್ಲಿ ತಾಯಿಯೊಬ್ಬಳು ತನ್ನ ಚಿಕ್ಕ ಮಗಳನ್ನು ಸಾರ್ವಜನಿಕವಾಗಿ ಶಿಕ್ಷಿಸುತ್ತಿರುವ ವಿಡಿಯೊ ಇದಾಗಿದ್ದು, ನೆಟ್ಟಿಗರು ಕಿಡಿಕಾರಿದ್ದಾರೆ. ಜನನಿಬಿಡ ರಸ್ತೆಯಲ್ಲೇ ತನ್ನ ಮಗಳಿಗೆ ತಾಯಿ ನೀಡಿದ ಶಿಕ್ಷೆ ನೋಡಿ ಅನೇಕರ್‌ ಶಾಕ್‌ಗೆ ಒಳಗಾಗಿದ್ದಾರೆ. ಸದ್ಯ ಈ ವಿಡಿಯೊ ಮಕ್ಕಳ ಸುರಕ್ಷತೆ ಮತ್ತು ಕೌಟುಂಬಿಕ ಹಿಂಸಾಚಾರದ ಬಗ್ಗೆ ಕಳವಳ ಉಂಟು ಮಾಡಿದೆ.

ವಿಡಿಯೊ ನೋಡಿ:



ಮಹಿಳೆ ರಸ್ತೆಬದಿಯಲ್ಲಿ ತನ್ನ ಚಿಕ್ಕ ಮಗಳನ್ನು ಬೈಯುತ್ತ ಹೊಡೆಯುವುದನ್ನು ನೀವು ವಿಡಿಯೊದಲ್ಲಿ ಗಮನಿಸಬಹುದು. ಶಿಕ್ಷೆಯ ಭಾಗವಾಗಿ ಮಗುವಿನ ಬ್ಯಾಗ್‌ಗೆ ಇಟ್ಟಿಗೆ ತುಂಬಿಸಿದ್ದಾಳೆ. ಬಾಲಕಿ ನೋವಿನಿಂದ ಅಳುತ್ತಿರುವುದನ್ನು ವಿಡಿಯೊ ತೋರಿಸುತ್ತವೆ. ಆದರೆ ತಾಯಿಗೆ ಮನಸ್ಸು ಕರಗದೆ ಆಕೆಯ ತೋಳನ್ನು ಹಿಡಿದು ಕಪಾಳಮೋಕ್ಷ ಮಾಡಿದ್ದಾಳೆ.

ಅಮ್ಮನ ಮಡಿಲಲ್ಲಿ ಮಲಗಬೇಕು ಎಂದು ಶಾಲೆಯಲ್ಲಿ ಕಣ್ಣೀರಿಟ್ಟ ಪುಟ್ಟ ಮಗು

ಇದನ್ನು ಗಮನಿಸಿದ ಸಾರ್ವಜನಿಕರು ಆರಂಭದಲ್ಲಿ ಏನಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಲ್ಲಿದ್ದ ವ್ಯಕ್ತಿಯೊಬ್ಬರು ಮಧ್ಯ ಪ್ರವೇಶಿಸಿ ಇಟ್ಟಿಗೆಗಳನ್ನು ತೆಗೆದು ಹಾಕಲು ಪ್ರಯತ್ನಿಸಿದಾಗ, ಮಹಿಳೆ ಎಲ್ಲರ ಮುಂದೆ ಕೂಗಾಡಿದ್ದಾಳೆ. ʼʼಮಗು ನನ್ನದು. ನನಗೆ ಇಷ್ಟವಾಗುವಂತೆ ವರ್ತಿಸುತ್ತೇನೆʼʼ ಎಂದು ದರ್ಪ ತೋರಿದ್ದಾಳೆ. ಅಲ್ಲದೆ ಯಾರಿಗೆ ಫೋನ್ ಮಾಡಬೇಕೋ ಮಾಡಿ, ಪೊಲೀಸ್ ಬೇಕಾದರೆ ಕರೆಯಿರಿ ಎಂದು ಸವಾಲು ಹಾಕಿದ್ದಾಳೆ.

ವಿಡಿಯೊ ವೈರಲ್ ಆದ ಬಳಿಕ ಸೋಷಿಯಲ್ ಮೀಡಿಯಾ ಬಳಕೆದಾರರು ಮಗುವಿನ ಸುರಕ್ಷತೆಯನ್ನು ಖಚಿತಪಡಿಸಿ ಕೊಳ್ಳಬೇಕು ಮತ್ತ ಸರಿಯಾಗಿ ತನಿಖೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಒಬ್ಬರು ಈ ಪಾಪಿ ಹೆಂಗಸಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದಿದ್ದಾರೆ.