ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಪಾನಿಪುರಿ ಪ್ರಿಯರೇ ಎಚ್ಚರ...ಎಚ್ಚರ... ಪಾನಿಪುರಿ ಮಸಾಲೆಯಲ್ಲಿ ಜೀವಂತ ಇಲಿ ಪತ್ತೆ: ಶಾಕಿಂಗ್‌ ವಿಡಿಯೊ ನೋಡಿ

Viral Video: ಸ್ಟ್ರೀಟ್ ಫುಡ್ ಅಂದಾಗ ಬೇಲ್ ಪುರಿ, ಮೊಮೊಸ್, ಪಾನಿ ಪುರಿ ಹೀಗೆ ಇದನ್ನು ಚಪ್ಪರಿಸಿ ತಿನ್ನುವವರು ಇದ್ದಾರೆ. ಆದರೆ ಪಂಜಾಬ್‌ನ ಅಮೃತಸರದಲ್ಲಿ ನಡೆದ ಘಟನೆಯೊಂದು ಆಹಾರ ಪ್ರಿಯರ ನಿದ್ದೆ ಗೆಡಿಸಿದೆ. ಪಾನಿಪುರಿ ಮಾರಾಟ ಮಾಡುವ ಮಸಾಲೆ ನೀರು ತುಂಬಿದ್ದ ಪಾತ್ರೆಯಲ್ಲಿ ಜೀವಂತ ಇಲಿವೊಂದು ಕಂಡು ಬಂದಿದ್ದು ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಪಾನಿಪುರಿ ಮಸಾಲೆಯಲ್ಲಿ ಜೀವಂತ ಇಲಿ: ಕಿಡಿಕಾರಿದ ನೆಟ್ಟಿಗರು

ಪಾನಿಪುರಿ ಮಸಾಲೆಯಲ್ಲಿ ಜೀವಂತ ಇಲಿ ಪತ್ತೆ -

Profile
Pushpa Kumari Feb 17, 2026 3:55 PM

ಚಂಡೀಗಢ, ಫೆ. 17: ಬಹುತೇಕರು ಮನೆ ಆಹಾರಕ್ಕಿಂತ ಬಿದಿ ಬದಿಯ ಆಹಾರವನ್ನೇ ಇಷ್ಟ ಪಡುತ್ತಾರೆ‌. ಸ್ಟ್ರೀಟ್ ಫುಡ್ ಬೇಲ್ ಪುರಿ, ಮೊಮೊಸ್, ಪಾನಿ ಪುರಿ ಹೀಗೆ ಇದನ್ನು ಚಪ್ಪರಿಸಿ ತಿನ್ನುವವರು ಇದ್ದಾರೆ. ಆದರೆ ಪಂಜಾಬ್‌ನ ಅಮೃತಸರದಲ್ಲಿ ನಡೆದ ಘಟನೆಯೊಂದು ಆಹಾರ ಪ್ರಿಯರ ನಿದ್ದೆ ಗೆಡಿಸಿದೆ. ಪಾನಿಪುರಿ ಮಾರಾಟ ಮಾಡುವ ಮಸಾಲೆ ನೀರು ತುಂಬಿದ್ದ ಪಾತ್ರೆಯಲ್ಲಿ ಜೀವಂತ ಇಲಿವೊಂದು ಕಂಡು ಬಂದಿದ್ದು ಇದರ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.

ಪಾನಿಪುರಿಯನ್ನು ಹೆಚ್ಚಿನವರು ಇಷ್ಟ ಪಟ್ಟು ತಿನ್ನುತ್ತಾರೆ. ಆದರೆ ಪಂಜಾಬ್‌ನಲ್ಲಿ ಪಾನಿಪುರಿ ಸವಿಯಲು ಹೋದ ವ್ಲಾಗರ್ ಮತ್ತು ಸ್ನೇಹಿತರಿಬ್ಬರಿಗೆ ಶಾಕ್ ಕಾದಿತ್ತು. ಪಾನಿ ಪುರಿ ಮಿಶ್ರಣದ ಪಾತ್ರೆಯೊಳಗೆ ಜೀವಂತ ಇಲಿ ಕಾಣಿಸಿಕೊಂಡಿದ್ದು, ಹತ್ತಿರ ಹೋಗಿ ನೋಡಿದಾಗ ಮಸಾಲೆಯಲ್ಲಿ ಈಜುತ್ತಿತ್ತು. ವೈರಲ್ ವಿಡಿಯೋದಲ್ಲಿ ವ್ಯಾಪಾರಿಯು ಇಲಿಯನ್ನು ಪಾತ್ರೆಯಿಂದ ಹೊರತೆಗೆಯಲು ಪ್ರಯತ್ನಿಸುವುದನ್ನು ಕಾಣಬಹುದು.

ವಿಡಿಯೊ ನೋಡಿ:

ವಿಡಿಯೊದ ಪ್ರಕಾರ, ವ್ಲಾಗರ್ ಮತ್ತು ಆತನ ಸ್ನೇಹಿತ ಪಾನಿ ಪುರಿಯನ್ನು ಆನಂದಿಸುತ್ತಿದ್ದಾಗ ಮಸಾಲೆಯುಕ್ತ ನೀರು ಮತ್ತು ಮಸಾಲಾ ಮಿಶ್ರಣವನ್ನು ಹೊಂದಿರುವ ದೊಡ್ಡ ಪಾತ್ರೆಯೊಳಗೆ ಇಲಿಯ ಚಲನೆಯನ್ನು ಗಮನಿಸಿದ್ದಾರೆ. ಮಾರಾಟಗಾರನು ಮಿಶ್ರಣದಿಂದ ಇಲಿಯನ್ನು ತೆಗೆದು ಹಾಕಲು ಪ್ರಯತ್ನಿಸುತ್ತಿರುವುದನ್ನು ಕ್ಲಿಪ್‌ನಲ್ಲಿ ಸೆರೆಯಗಿದೆ. ಕೆಲವೇ ಸೆಕೆಂಡುಗಳಲ್ಲಿ, ಇಲಿ ಪಾತ್ರೆಯಿಂದ ಜಿಗಿದು ಹತ್ತಿರದ ಚರಂಡಿಗೆ ಓಡಿದೆ.

ಅವಹೇಳನ ಮೆಟ್ಟಿ ನಿಂತು ಯಶಸ್ಸು ಕಂಡ ಸಿಲೇಂದ್ರನ್ ಅರುಣಗಿರಿ: ಜೀವನದ ಗುಟ್ಟು ಹೇಳಿದ ಐಐಎಂ ಪದವೀಧರ

ಸದ್ಯ ಈ ವೀಡಿಯೊವನ್ನು ವ್ಲಾಗರ್ ಶೇರ್ ಮಾಡಿಕೊಂಡಿದ್ದು "ಪಾನಿ ಪುರಿಯಲ್ಲಿ ಇಲಿ" ಎಂದು ಶಿರ್ಷಿಕೆ ನೀಡಿದ್ದಾರೆ. ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ಲಕ್ಷಾಂತರ ವೀಕ್ಷಣೆ ಪಡೆದಿದ್ದು ಹಲವಾರು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಅನೇಕ ಬಳಕೆದಾರರು ರಸ್ತೆಬದಿಯ ಅಂಗಡಿಗಳಲ್ಲಿ ಇಂತಹ ಆಹಾರ ಕ್ರಮದ ಬಗ್ಗೆ ಅಸಹ್ಯ ವ್ಯಕ್ತಪಡಿಸಿದ್ದಾರೆ. ಕೆಲವರು ಆಹಾರ ಸುರಕ್ಷತಾ ಮಾನದಂಡಗಳನ್ನು ಪ್ರಶ್ನಿಸಿದ್ದಾರೆ.