ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವರ್ಷಕ್ಕೆ 70 ಲಕ್ಷ ನೀಡಿದ್ರೂ ತಪ್ಪದ ಸಂಕಷ್ಟ: ಕುಡಿಯುವ ನೀರಿನ‌ ಕೊರತೆ ಬಗ್ಗೆ ಬೇಸರ ಹೊರಹಾಕಿದ ಜನ

Viral Post: ಪುಣೆಯಲ್ಲಿ ದುಬಾರಿ ವೆಚ್ಚದ ಕಟ್ಟಡ, ಫ್ಲ್ಯಾಟ್ ಗಳನ್ನು ನಿರ್ಮಿಸಿದರೂ ಅಗತ್ಯವಾದ ಶುದ್ಧ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿರುವ ಘಟನೆ ಕಂಡು ಬಂದಿದೆ. ಇಲ್ಲಿನ ನಿವಾಸಿಗಳು ವರ್ಷಕ್ಕೆ 70 ಲಕ್ಷ ಹಣವನ್ನು ಖಾಸಗಿ ಟ್ಯಾಂಕರ್ ಗಾಗಿ ಖರ್ಚು ಮಾಡುತ್ತಿದ್ದಾರೆ. ಸದ್ಯ ಈ ಬಗ್ಗೆ ಪೋಸ್ಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ...

ಟ್ಯಾಂಕರ್‌ಗೆ 70 ಲಕ್ಷ ನೀಡಿದ್ರೂ ಕೆಸರು ನೀರು: ಪುಣೆ ನಿವಾಸಿ ಹೇಳಿದ್ದೇನು?

ಟ್ಯಾಂಕರ್‌ಗೆ 70 ಲಕ್ಷ ರೂ.ಪಾವತಿಸಿದರೂ ಕೆಸರು ನೀರು -

Profile
Pushpa Kumari Jun 18, 2026 6:49 PM

ಪುಣೆ,ಜೂ.18: ಇತ್ತೀಚೆಗೆ ನಗರ ಪ್ರದೇಶಗಳು ಅಭಿವೃದ್ಧಿ ಹೊಂದಿದ್ದರೂ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಜನರು ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲದೆ ಪರಿದಾಡುತ್ತಿದ್ದವರು ಅನೇಕರು ಇದ್ದಾರೆ. ಇದಕ್ಕೆ ಸಾಕ್ಷಿ ಎಂಬಂತೆ ಪುಣೆಯಲ್ಲಿ ದುಬಾರಿ ವೆಚ್ಚದ ಕಟ್ಟಡ, ಫ್ಲ್ಯಾಟ್ ಗಳನ್ನು ನಿರ್ಮಿಸಿದರೂ ಅಗತ್ಯವಾದ ಶುದ್ಧ ನೀರಿಗಾಗಿ ಜನರು ಸಮಸ್ಯೆ ಎದುರಿಸುತ್ತಿರುವ ಘಟನೆ ಕಂಡು ಬಂದಿದೆ. ಇಲ್ಲಿನ ನಿವಾಸಿಗಳು ವರ್ಷಕ್ಕೆ 70 ಲಕ್ಷ ಹಣವನ್ನು ಖಾಸಗಿ ಟ್ಯಾಂಕರ್ ಗಾಗಿ ಖರ್ಚು ಮಾಡುತ್ತಿದ್ದಾರೆ. ಸದ್ಯ ಈ ಬಗ್ಗೆ ಪೋಸ್ಟ್ ವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ (Viral News) ಆಗುತ್ತಿದೆ.

ವಾಟರ್ ಟ್ಯಾಂಕರ್‌ಗಳಿಗೆ ವಾರ್ಷಿಕವಾಗಿ ಸುಮಾರು 70 ಲಕ್ಷ ರೂ. ಖರ್ಚು ಮಾಡಿದರೂ ಈ ವಸತಿ ಸೊಸೈಟಿಗೆ ತಲುಪಿಸಲಾದ ನೀರು ಕೆಸರುಮಯವಾಗಿ ಕಾಣುತ್ತದೆ ಎಂದು ಪುಣೆ ನಿವಾಸಿ ಯೊಬ್ಬರು ಪೋಸ್ಟ್ ಶೇರ್ ಮಾಡಿದ್ದಾರೆ. ಇಷ್ಟೊಂದು ಪ್ರಮಾಣದ ಹಣ ಖರ್ಚು ಮಾಡುತ್ತಿದ್ದರೂ ಟ್ಯಾಂಕರ್‌ ಗಳು ಸರಬರಾಜು ಮಾಡುತ್ತಿರುವ ನೀರು ಸಂಪೂರ್ಣವಾಗಿ ಕೆಸರು ಮಿಶ್ರಿತವಾಗಿದೆ. ಇದು ಆರೋಗ್ಯಕ್ಕೂ ತೀವ್ರ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.



ಈ ಬಗ್ಗೆ ನಿವಾಸಿಯೊಬ್ಬರು ಸೋಷಿಯಲ್ ಮೀಡಿಯಾ ಎಕ್ಸ್ ನಲ್ಲಿ ಕಲುಷಿತ ನೀರಿನ ಫೋಟೋ ವನ್ನು ಹಂಚಿಕೊಂಡಿದ್ದಾರೆ. ಪುಣೆಗೆ ಸದ್ದಿಲ್ಲದೆ ಬರಲು ಸಾಂಕ್ರಾಮಿಕ ರೋಗ ಕಾಯುತ್ತಿದೆ ಎಂದು ಬರೆದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಷ್ಟು ಹಣ ಪಾವತಿಸಿದ ನಂತರವೂ ನಿವಾಸಿಗಳು ಕಳಪೆ ಗುಣಮಟ್ಟದ ನೀರನ್ನು ಕುಡಿಯಬೇಕಾದ ಸಂದರ್ಭ ಬಂದಿದೆ.

Viral Video: ಬ್ಯಾಂಕ್‍ನಲ್ಲಿ ಹಣವಿಟ್ಟರೆ ಸುರಕ್ಷಿತ ಅಂದುಕೊಂಡಿದ್ದೀರಾ? ಗ್ರಾಹಕರ ದುಡ್ಡನ್ನೇ ಕದ್ದ ಕ್ಯಾಶಿಯರ್, ಮುಂದೇನಾಯ್ತು?

ನಾವು ನೀರಿನ ಟ್ಯಾಂಕರ್‌ಗಳಿಗೆ ಪ್ರತಿ ವರ್ಷ70 ಲೀಟರ್ ಪಾವತಿಸುತ್ತೇವೆ, ನಮಗೆ ಪರಿಸ್ಥಿತಿ ಹೀಗಿದ್ದರೆ ... ರೆಸ್ಟೋರೆಂಟ್‌ ಗಳು ಮತ್ತು ರಸ್ತೆಬದಿಯ ತಿನಿಸುಗಳಿಗೆ ಯಾವ ರೀತಿ ಇರಬಹುದು ಎಂದು ಊಹಿಸಿ. ಪುಣೆಯಲ್ಲಿ ಮೌನ ಆರೋಗ್ಯ ಸಾಂಕ್ರಾಮಿಕ ರೋಗವು ಕಾಯುತ್ತಿದೆ.‌ ಈ ರೀತಿಯ ನೀರಿನಿಂದ, ಶೀಘ್ರದಲ್ಲೇ ಆರೋಗ್ಯ, ಚರ್ಮ ರೋಗಗಳು ಹರಡುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ವಸತಿ, ಆಸ್ತಿಗಳಲ್ಲಿ ಎಷ್ಟು ಹೂಡಿಕೆ ಮಾಡಿದರೂ,ನಗರ ಪ್ರದೇಶದ ಜನರು ಮೂಲಭೂತ ಸೌಕರ್ಯಗಳೊಂದಿಗೆ ಹೋರಾಡುತ್ತಲೇ ಇದ್ದಾರೆ..ಎಂದು ಬರೆದುಕೊಂಡಿದ್ದಾರೆ. ಈ ಬಗ್ಗೆ ನೆಟ್ಟಿಗರು ನಾನಾ ಬಗೆಯ ಕಾಮೆಂಟ್ ಮಾಡಿದ್ದು ಬಳಕೆದಾರರೊಬ್ಬರು "ಶುದ್ಧ ಗಾಳಿ ಇಲ್ಲ, ಶುದ್ಧ ನೀರಿಲ್ಲ, ಕಲಬೆರಕೆ ಆಹಾರ...ಜನರ ಆರೋಗ್ಯ ಹೇಗಿರಬೇಡ?" ಎಂದು ಪ್ರಶ್ನೆ ಮಾಡಿದ್ದಾರೆ. ಮತ್ತೊಬ್ಬರು ಇದು ಕೇವಲ ಪುಣೆಯಷ್ಟೇ ಅಲ್ಲ, ಮುಂಬೈ,ಮಹಾರಾಷ್ಟ್ರದ ಪ್ರಮುಖ ಕಡೆ ಇದೇ ಪರಿಸ್ಥಿತಿ ಇದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.