ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಲುಕಿದ ಎ.ಆರ್. ರೆಹಮಾನ್: ಆಸ್ಕರ್ ವಿಜೇತರಿಗೂ ತಪ್ಪಿದ್ದಲ್ಲ ಈ ಕಿರಿಕಿರಿ!
Viral Video: ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಯಾರಿಗೂ ತಪ್ಪಿದ್ದಲ್ಲ. ವಾಹನಗಳ ದೀರ್ಘ ಸಾಲು ಮತ್ತು ನಿಧಾನಗತಿಯ ಸಂಚಾರದಿಂದಾಗಿ ಪ್ರಯಾಣಿಕರಿಗೆ ಕಾಯುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ. ಈ ಬಾರಿ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಕೂಡ ನಗರದ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ಬೆಂಗಳೂರು ಟ್ರಾಫಿಕ್ ನಲ್ಲಿ ಸಿಲುಕಿದ ಸಂಗೀತ ದಿಗ್ಗಜ ಎ.ಆರ್. ರೆಹಮಾನ್ -
ಬೆಂಗಳೂರು,ಅ.5: ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ವಾಗುತ್ತಿದ್ದು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಟ್ರಾಫಿಕ್ ನಿಂದ ಎಷ್ಟೇ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಗಂಟೆ- ಘಟ್ಟಲ್ಲೇ ರಸ್ತೆ ಮಧ್ಯೆ ಕಾಯಬೇಕಾದ ಪರಿಸ್ಥಿತಿ ಬಂದಿದೆ. ಇದೀಗ ಖ್ಯಾತ ಸಂಗೀತ ಸಂಯೋಜಕ ಹಾಗೂ ಓಸ್ಕರ್ ಪ್ರಶಸ್ತಿ ವಿಜೇತ ಎ.ಆರ್. ರೆಹಮಾನ್ ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿಕೊಂಡಿರುವ ವಿಡಿಯೊವೊಂದು ವೈರಲ್ (Viral News) ಆಗುತ್ತಿದೆ.
ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಯಾರಿಗೂ ತಪ್ಪಿದ್ದಲ್ಲ. ವಾಹನಗಳ ದೀರ್ಘ ಸಾಲು ಮತ್ತು ನಿಧಾನಗತಿಯ ಸಂಚಾರದಿಂದಾಗಿ ಪ್ರಯಾಣಿಕರಿಗೆ ಕಾಯುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ. ಈ ಬಾರಿ, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಕೂಡ ನಗರದ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದಾರೆ.
ವಿಡಿಯೋ ನೋಡಿ:
ಅವರು ವೈಟ್‌ಫೀಲ್ಡ್‌ನ KTPO ಕಾನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ತಮ್ಮ 'ದಿ ವಂಡರ್‌ಮೆಂಟ್ ಟೂರ್' ಮ್ಯೂಸಿಕ್ ಕಾರ್ಯಕ್ರಮ ಮುಗಿಸಿಕೊಂಡು ತೆರಳುತ್ತಿದ್ದಾಗ ನಗರದ ಭಾರಿ ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದಾರೆ. ಮನೋಜ್ ಕುಮಾರ್ ಎಂಬುವವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದು ರೆಹಮಾನ್ ಅವರು ಕಾರಿನ ಹಿಂಭಾಗದ ಸೀಟಿನಲ್ಲಿ ಕುಳಿತರೆ ಅವರ ಭದ್ರತಾ ತಂಡದ ಸದಸ್ಯರು ಹಿಂದೆ ನಿಂತಿದ್ದ ಕಾರಿನಲ್ಲಿ ಇದ್ದರು. ಈ ಎರಡೂ ವಾಹನಗಳು ಬೆಂಗಳೂರಿನ ರಸ್ತೆಯೊಂದರಲ್ಲಿ ಭಾರಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿರುವುದು ಕಂಡುಬರುತ್ತದೆ.
ಟ್ರಾಫಿಕ್‌ನಲ್ಲಿ ಕಾಯುತ್ತಿದ್ದಾಗ ರೆಹಮಾನ್ ಅವರನ್ನು ಅಭಿಮಾನಿಗಳು ಅವರನ್ನು ಗುರುತಿಸಿದ್ದಾರೆ. ರೆಹಮಾನ್ ಕಾರಿನ ಗಾಜು ಇಳಿಸಿ ನಗುತ್ತಾ ಕೈಬೀಸಿದ್ದಾರೆ. ಈ ದೃಶ್ಯ ನೋಡಿ ನೆಟ್ಟಿಗರು ಬೆಂಗಳೂರಿನ ಟ್ರಾಫಿಕ್‌ನಿಂದ ದಿಗ್ಗಜರೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಟ್ರಾಫಿಕ್ ಕಿರಿಕಿರಿಯ ನಡುವೆಯೂ ಕಾರ್ಯಕ್ರಮಕ್ಕೆ ರೆಹಮಾನ್ 20 ನಿಮಿಷ ಮುಂಚಿತವಾಗಿ ತಲುಪಿ ನಿಗದಿತ ಸಮಯಕ್ಕೆ ಸರಿಯಾಗಿ ಪ್ರದರ್ಶನ ನೀಡಿ ಅಭಿಮಾನಿಗಳ ಮನ ಗೆದ್ದಿದ್ದಾರೆ.