ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಒಂದು ಕಾಲದಲ್ಲಿ WWE ಕುಸ್ತಿಪಟು, ಈಗ ಆಶ್ರಮದಲ್ಲಿ ಕಸ ಗುಡಿಸುತ್ತಿರುವ ಕರ್ಮಚಾರಿ! ಇಲ್ಲಿದೆ ನೋಡಿ ವಿಡಿಯೊ

WWE Wrestler, Now Seen Sweeping Floors: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೊದಲ್ಲಿ ಎಲ್ಲರಿಗೂ ಅಚ್ಚರಿ ತಂದ ಒಂದು ಘಟನೆ ನಡೆದಿದೆ. ಒಂದು ಕಾಲದಲ್ಲಿ ಕ್ರೀಡಾ ಲೋಕದಲ್ಲಿ ಮೆರೆದಿದ್ದ ವ್ಯಕ್ತಿಯೊಬ್ಬರು ಇದೀಗ ಹಿಂದೂ ಗುರು ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ಕಸ ಗುಡಿಸುತ್ತಿದ್ದಾರೆ. ಅವರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. WWE ಮಾಜಿ ಕುಸ್ತಿಪಟು ಮತ್ತು ಬೇಸ್‌ಬಾಲ್ ಆಟಗಾರ ರಿಂಕು ಸಿಂಗ್ ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ನೆಲ ಸ್ವಚ್ಛಗೊಳಿಸುತ್ತಿದ್ದಾರೆ. ಬೇಸ್‌ಬಾಲ್‌ನಿಂದ WWE ಮೂಲಕ ವೃಂದಾವನದವರೆಗೆ ಅವರ ಈ ಪಯಣವು ಎಲ್ಲರಿಗೂ ಅಚ್ಚರಿ ತಂದಿದೆ.

ಆಶ್ರಮದಲ್ಲಿ ಕಸ ಗುಡಿಸುತ್ತಿರುವ WWE ಮಾಜಿ ಕುಸ್ತಿಪಟು

-

Priyanka P Priyanka P Nov 1, 2025 3:31 PM

ಲಖನೌ: ಹಿಂದೂ ಗುರು ಪ್ರೇಮಾನಂದ ಮಹಾರಾಜರ (Premanand Maharaj) ಉಪದೇಶಗಳು ಲಕ್ಷಾಂತರ ಜನರ ಹೃದಯಗಳನ್ನು ಸ್ಪರ್ಶಿಸಿವೆ. ಸಾಮಾನ್ಯ ಜನರು ಮಾತ್ರವಲ್ಲ, ಖ್ಯಾತ ವ್ಯಕ್ತಿಗಳು ಕೂಡ ಅವರನ್ನು ಅನುಸರಿಸುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಒಂದು ವಿಡಿಯೊದಲ್ಲಿ (Viral Video) ಎಲ್ಲರಿಗೂ ಅಚ್ಚರಿ ತಂದ ಒಂದು ಘಟನೆ ನಡೆದಿದೆ. ಕ್ರೀಡಾ ಲೋಕದಲ್ಲಿ ತನ್ನ ಶಕ್ತಿ ಮತ್ತು ಖ್ಯಾತಿಯಿಂದ ಪ್ರಸಿದ್ಧನಾಗಿದ್ದ ವ್ಯಕ್ತಿಯೊಬ್ಬ ಈಗ ಪ್ರೇಮಾನಂದ ಮಹಾರಾಜರ ಭಕ್ತನಾಗಿ ಕಾಣಿಸಿಕೊಂಡಿದ್ದಾನೆ.

ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿರುವ ವಿಡಿಯೊದಲ್ಲಿ WWE ಮಾಜಿ ಕುಸ್ತಿಪಟು ಮತ್ತು ಬೇಸ್‌ಬಾಲ್ ಆಟಗಾರ ರಿಂಕು ಸಿಂಗ್ (Rinku Singh) ವೃಂದಾವನದಲ್ಲಿರುವ ಪ್ರೇಮಾನಂದ ಮಹಾರಾಜರ ಆಶ್ರಮದಲ್ಲಿ ನೆಲ ಸ್ವಚ್ಛಗೊಳಿಸುತ್ತಿದ್ದಾರೆ. ಜಾಗತಿಕ ಕ್ರೀಡಾಪಟುವೊಬ್ಬ ವಿನಯಪೂರ್ಣವಾಗಿ ಸೇವೆ ನಿರ್ವಹಿಸುತ್ತಿರುವ ಈ ದೃಶ್ಯ ಜನರನ್ನು ಆಶ್ಚರ್ಯಚಕಿತಗೊಳಿಸುವುದರ ಜೊತೆಗೆ ಪ್ರೇರಣೆಯನ್ನೂ ನೀಡಿದೆ.

ಇದನ್ನೂ ಓದಿ: Viral Video: ಸಫಾರಿಗೆ ಹೋದ ಮಹಿಳೆಯ ಮಡಿಲಲ್ಲಿ ಮರಿಯನ್ನು ಇಟ್ಟ ಸಿಂಹಿಣಿ: ವೈರಲ್ ವಿಡಿಯೊ ಇಲ್ಲಿದೆ

ಈ ವಿಡಿಯೊ ಆಶ್ರಮದಲ್ಲಿರುವ ರಿಂಕು ಅವರ ದೃಶ್ಯಗಳಿಂದ ಆರಂಭವಾಗುತ್ತದೆ. ಸನ್ಯಾಸಿಯ ವೇಷದಲ್ಲಿರುವ ರಿಂಕು, ನತಮಸ್ತಕವಾಗಿ ತಿಲಕ ಧರಿಸಿ, ಸೇವೆಯ ಭಾಗವಾಗಿ ಬೀದಿಯನ್ನು ಗುಡಿಸುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಆ ನಂತರದ ದೃಶ್ಯಗಳಲ್ಲಿ, ಅವರು ಹೇಗೆ ಮೊದಲು ಬೇಸ್‌ಬಾಲ್ ಆಟಗಾರರಾಗಿದ್ದರು, ನಂತರ WWE ರಿಂಗ್‌ಗೆ ಕಾಲಿಟ್ಟರು ಮತ್ತು ಅಂತಿಮವಾಗಿ ತಮ್ಮ ಆಧ್ಯಾತ್ಮಿಕ ಮಾರ್ಗವನ್ನು ಕಂಡುಕೊಂಡರು ಎಂಬುದನ್ನು ವಿಡಿಯೊದಲ್ಲಿ ವಿವರಿಸಲಾಗಿದೆ. ಬೇಸ್‌ಬಾಲ್‌ನಿಂದ WWE ಮೂಲಕ ವೃಂದಾವನದವರೆಗೆ, ರಿಂಕು ಸಿಂಗ್ ಅವರ ಆಧ್ಯಾತ್ಮಿಕ ಪಯಣ ಹೀಗಿದೆ ಎಂದು ವಿಡಿಯೊಗೆ ಶೀರ್ಷಿಕೆ ನೀಡಲಾಗಿದೆ.

ವಿಡಿಯೊ ವೀಕ್ಷಿಸಿ:

ವಿಡಿಯೊದ ಪ್ರಕಾರ, ರಿಂಕು ಸಿಂಗ್ ಅವರ ಕ್ರೀಡಾ ಪಯಣವು 87 ಮೈಲಿ ವೇಗದಲ್ಲಿ ಬೇಸ್‌ಬಾಲ್ ಎಸೆದಾಗ ಪ್ರಾರಂಭವಾಯಿತು. ಇದೇ ಅವರ ವೃತ್ತಿಪರ ಜೀವನದ ಆರಂಭವಾಗಿತ್ತು. ನಂತರ ಅವರು ವೃತ್ತಿಪರ ಬೇಸ್‌ಬಾಲ್‌ನಲ್ಲಿ ಆಡಿದ ಮೊದಲ ಭಾರತೀಯನಾದರು. ಅಮೆರಿಕದ ಮೈನರ್ ಲೀಗ್‌ಗಳಲ್ಲಿ ಆಡಿದ ಅವರು, ಸಿಂಗಲ್-ಎ ಮಟ್ಟದವರೆಗೂ ತಲುಪಿದರು.

ಡಿಸ್ನಿ ಕಂಪನಿಯು 2014ರಲ್ಲಿ ಮಿಲಿಯನ್ ಡಾಲರ್ ಆರ್ಮ್ ಎಂಬ ಚಲನಚಿತ್ರವನ್ನೂ ನಿರ್ಮಿಸಿತು. ಈ ಸಿನಿಮಾ ರಿಂಕು ಸಿಂಗ್ ಮತ್ತು ದಿನೇಶ್ ಪಟೇಲ್ ಎಂಬ ಇಬ್ಬರು ಭಾರತೀಯ ಪಿಚರ್‌ಗಳ ನಿಜ ಜೀವನದ ಕಥೆಯನ್ನು ಆಧರಿಸಿದೆ. ಇವರಿಬ್ಬರನ್ನೂ ಕ್ರೀಡಾ ಏಜೆಂಟ್ ಜೆ.ಬಿ. ಬರ್ನ್‌ಸ್ಟೀನ್ ರಿಯಾಲಿಟಿ ಶೋ ಸ್ಪರ್ಧೆಯ ಮೂಲಕ ಆಯ್ಕೆಮಾಡಿಕೊಂಡಿದ್ದರು.

ಆ ನಂತರದ ಭಾಗದಲ್ಲಿ ಅವರ ಜೀವನದ ಮತ್ತೊಂದು ಅಧ್ಯಾಯ ಆರಂಭವಾಗುತ್ತದೆ. 2018ರಲ್ಲಿ WWEಗೆ ಅವರ ಪ್ರವೇಶವಾಗುತ್ತದೆ. ಅಲ್ಲಿ ಅವರು ತಮ್ಮ ರಿಂಕು ಹೆಸರಿನಿಂದ ವೀರ್ ಮಹಾನ್ ಎಂದೇ ಪ್ರಸಿದ್ಧರಾದರು. ವಿಡಿಯೊದಲ್ಲಿ ಅವರ ಕುಸ್ತಿ ದಿನಗಳ ದೃಶ್ಯಗಳನ್ನು ಗಮನಿಸಬಹುದು. ಅಲ್ಲಿ ಅವರು ಜಾನ್ ಸೀನಾ ಮತ್ತು ದಿ ಗ್ರೇಟ್ ಖಲಿ ಮುಂತಾದ ಪ್ರಸಿದ್ಧ ಆಟಗಾರರೊಂದಿಗೆ ರಿಂಗ್‌ನಲ್ಲಿ ಆಡಿದ್ದಾರೆ. ತಿಲಕ ಧರಿಸಿ, ಧೋತಿ ಶೈಲಿಯ ಉಡುಪು ತೊಟ್ಟು, ರುದ್ರಾಕ್ಷ ಮಾಲೆ ಧರಿಸಿರುವ ಅವರ ದೇಸಿ ಲುಕ್ ನೋಡಿದ ಇತರೆ ದೇಶದ ಜನರು ಅಚ್ಚರಿಗೊಂಡರು.

ಇದನ್ನೂ ಓದಿ: Viral Video: ಮಗಳ ಮದುವೆಯಲ್ಲಿ ಶರ್ಟ್ ಮೇಲೆ ಕ್ಯುಆರ್‌ ಕೋಡ್ ಬ್ಯಾಡ್ಜ್ ಧರಿಸಿದ ತಂದೆ; ಸ್ಕ್ಯಾನ್ ಮಾಡಿ, ಊಟ ಮಾಡಿ ಎಂದ ನೆಟ್ಟಿಗರು

ಇನ್ನು ಈ ವಿಡಿಯೊದಲ್ಲಿ, ರಿಂಕು ಸಿಂಗ್ ಮತ್ತು ಪ್ರೇಮಾನಂದ ಮಹಾರಾಜರ ನಡುವಿನ ಸಂಭಾಷಣೆ ಅತ್ಯಂತ ಮನಮುಟ್ಟುವ ಕ್ಷಣವಾಗಿದೆ. ನೀವು ಈ ಜಗತ್ತಿಗೆ ಅರ್ಹರಾಗಿದ್ದೀರಿ ಎಂದು ನೀವು ಭಾವಿಸಿದರೆ, ಬನ್ನಿ ಎಂದು ಆಧ್ಯಾತ್ಮಿಕ ಗುರು ಪ್ರೇಮಾನಂದ ಮಹಾರಾಜರು ಅವರಿಗೆ ಹೇಳಿದ್ದಾರೆ. ಅದಕ್ಕೆ ರಿಂಕು, ಕೈಗಳನ್ನು ಮಡಚಿ ನಗುತ್ತಾ, ಖಂಡಿತವಾಗಿಯೂ ಎಂದು ಉತ್ತರಿಸಿದ್ದಾರೆ.

ಅಂದಹಾಗೆ, ರಿಂಕು ಸಿಂಗ್ ಅವರ ಪೂರ್ಣ ಹೆಸರು ರಿಂಕು ಸಿಂಗ್ ರಜಪೂತ್. ಆಗಸ್ಟ್ 8, 1988 ರಂದು ಉತ್ತರ ಪ್ರದೇಶದ ಭದೋಹಿ ಜಿಲ್ಲೆಯ ಹೋಲ್ಪುರ್ ಗ್ರಾಮದಲ್ಲಿ ಜನಿಸಿದರು. ಒಂಭತ್ತು ಮಂದಿ ಸಹೋದರ-ಸಹೋದರಿಯರ ನಡೆ ಬೆಳೆದರು. ಅವರ ತಂದೆ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಶಾಲಾ ದಿನಗಳಿಂದಲೂ ಕ್ರೀಡೆಗಳ ಬಗ್ಗೆ ಒಲವು ತೋರಿದ್ದ ಅವರು ಅನೇಕ ಆಟಗಳನ್ನು ಆಡಿದ್ದರು. ಜಾವೆಲಿನ್ ಎಸೆತಗಾರರೂ ಆಗಿದ್ದ ಅವರು, ಜೂನಿಯರ್ ರಾಷ್ಟ್ರೀಯ ಮಟ್ಟದಲ್ಲಿ ಪದಕ ವಿಜೇತರಾಗಿದ್ದರು.