ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ತಂದೆಯನ್ನೇ ಫೂಲ್‌ ಮಾಡಿದ ಕಿಲಾಡಿ ಮಗಳು; ಸಿಕ್ಕಾಪಟ್ಟೆ ಫನ್ನಿಯಾಗಿದೆ ಈ ವಿಡಿಯೊ ನೋಡಿ!

ಪುಟ್ಟ ಹುಡುಗಿಯೊಬ್ಬಳು ಟಿವಿ ಪರದೆ ಹಾಳಾಗಿರುವಂತೆ ಸೆಟ್ ಮಾಡಿ ತಂದೆಯನ್ನು ಕರೆದುಕೊಂಡು ಬಂದು ತೋರಿಸಿ ನಂತರ ತಂದೆಯನ್ನೇ ಹೆದರಿ ಓಡಿಹೋಗುವಂತೆ ಮಾಡಿದ್ದಾಳೆ. ಈ ತಮಾಷೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿ ನೆಟ್ಟಿಗರನ್ನು ನಗಿಸಿದೆ.

ತಂದೆ-ಮಗಳ ಈ ವಿಡಿಯೊ ನೋಡಿದ್ರೆ ನೀವೂ ಬಿದ್ದು ಬಿದ್ದು ನಗ್ತೀರಿ!

Profile pavithra May 24, 2025 1:42 PM

ಇಂದಿನ ಕಾಲದ ಮಕ್ಕಳು ಎಷ್ಟು ತುಂಟರಾಗಿರುತ್ತಾರೆ ಎಂದರೆ ತಮ್ಮ ತುಂಟತನದಿಂದ ತಂದೆತಾಯಿಯನ್ನೇ ಮೂರ್ಖರನ್ನಾಗಿ ಮಾಡಿಬಿಡುತ್ತಾರೆ. ಇದೀಗ ಅಂತಹದೊಂದು ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡಿದೆ. ಇದರಲ್ಲಿ ಪುಟ್ಟ ಹುಡುಗಿ ತನ್ನ ತಂದೆಯನ್ನೇ ಫೂಲ್‌(Fool) ಮಾಡಿದ್ದಾಳೆ. ಈ ವಿಡಿಯೊ ಈಗ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌(Viral Video) ಆಗಿದೆ.ತಂದೆ-ಮಗಳ ಈ ತಮಾಷೆಯ ವಿಡಿಯೊ ನೋಡಿ ನೆಟ್ಟಿಗರು ಕೂಡ ಖುಷಿಯಾಗಿದ್ದಾರೆ. ಹಾಗೇ ಕಾಮೆಂಟ್‌ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ಪುಟ್ಟ ಹುಡುಗಿ ಟಿವಿ ಸರಿಯಾಗಿ ವರ್ಕ್‌ ಆಗುತ್ತಿಲ್ಲ ಎಂದು ರೂಂನಲ್ಲಿದ್ದ ತಂದೆಯ ಬಳಿ ಸುಳ್ಳು ಹೇಳಿದ್ದಾಳೆ. ತಂದೆ ಅದನ್ನು ನಿಜವೆಂದುಕೊಂಡು ಟಿವಿ ನೋಡಲು ಬಂದಿದ್ದಾನೆ. ಹೊರಗಡೆ ಬಂದು ನೋಡಿದಾಗ ಟಿವಿ ಸ್ಕ್ರಿನ್‌ ಒಡೆದ ರೀತಿ ಕಾಣುತ್ತಿತ್ತು. ಅವನು ಟಿವಿ ಸ್ಕ್ರಿನ್‌ ಮುಟ್ಟುತ್ತಿದ್ದಂತೆ ದೆವ್ವದ ಮುಖವೊಂದು ಕಾಣಿಸಿದೆ. ಇದನ್ನು ಕಂಡು ತಂದೆ ಭಯಗೊಂಡು ಕಿರುಚುತ್ತಾ ಓಡಿಹೋಗಿದ್ದಾನೆ. ಇದನ್ನು ನೋಡಿ ಪುಟ್ಟ ಹುಡುಗಿ ನಕ್ಕಿದ್ದಾಳೆ. ಈ ವಿಡಿಯೊ ಈಗ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ವಿಡಿಯೊ ಇಲ್ಲಿದೆ ನೋಡಿ...

ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೆಟ್ಟಿಗರು ತಂದೆಯ ಪ್ರತಿಕ್ರಿಯೆಯನ್ನು ನೋಡಿ ನಕ್ಕಿದ್ದಾರೆ ಮತ್ತು ಹುಡುಗಿಯ ತಮಾಷೆ ಪ್ರವೃತ್ತಿಯನ್ನು ಹೊಗಳಿದ್ದಾರೆ. ಆದರೆ ಕೆಲವರು ಪುಟ್ಟ ಮಗುವನ್ನು ಬಿಟ್ಟು ಓಡಿಹೋದ ತಂದೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ 6 ಲಕ್ಷಕ್ಕೂ ಹೆಚ್ಚು ವ್ಯೂವ್ಸ್‌ ಗಳಿಸಿದೆ.

ಈ ಸುದ್ದಿಯನ್ನೂ ಓದಿ: ‌VIral Video: ಭೀಕರ ಮಳೆ- ಗಾಳಿಗೆ ಮಕ್ಕಳ ಸಹಿತ ಹಾರಿ ಹೋದ ಮನೆಯ ಚಾವಣಿ-ವಿಡಿಯೊ ವೈರಲ್

ಮತ್ತೊಬ್ಬರು, "ನಿನ್ನ ತಂದೆ ಶಾಕ್‌ಗೆ ನೀಡಿದ್ದು ತುಂಬಾ ಚೆನ್ನಾಗಿದೆ ಮಗು” ಎಂದು ಒಬ್ಬರು ಹೇಳಿದ್ದಾರೆ. "ಟಿವಿ ಹಾಳಾಗಿದೆ ಎಂದು ನಾನು ಭಾವಿಸಿದೆ" ಎಂದು ಇನ್ನೊಬ್ಬರು ಹೇಳಿದ್ದಾರೆ. "ಆ ಮಗು ತಂದೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿದೆ" ಎಂದು ಮತ್ತೊಬ್ಬರು ಹೇಳಿದ್ದಾರೆ."ತನ್ನನ್ನು ತಾನು ಉಳಿಸಿಕೊಳ್ಳಲು ತನ್ನ ಮಗುವನ್ನು ಬಿಟ್ಟ ಸ್ವಾರ್ಥಿ ತಂದೆ ಅವನು" ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. "ಅವಳು ಒಬ್ಬ ತುಂಟ ಹುಡುಗಿ" ಎಂದು ಮತ್ತೊಬ್ಬರು ಬರೆದಿದ್ದಾರೆ.