Viral Video: ಬಸ್ನಲ್ಲಿ ಕಳ್ಳನ ಕರಾಮತ್ತು; ಕಂಡಕ್ಟರ್ಗೆ ಫುಲ್ ಶಾಕ್- ವಿಡಿಯೊ ವೈರಲ್
ಚಲಿಸುವ ಬಸ್ಸಿನೊಳಗೆ ಕಂಡಕ್ಟರ್ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಕಳ್ಳನೊಬ್ಬ ಆತನ ಫೋನ್ ಕದ್ದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video)ಆಗಿದೆ. ಇದು 33,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ.


ನವದೆಹಲಿ: ಇಂದಿನ ದಿನಗಳಲ್ಲಿ ಚಿನ್ನ, ಹಣದ ಜೊತೆಗೆ ಫೋನ್ ಕಳ್ಳತನಕ್ಕೆ ಸಂಬಂಧಿಸಿದ ಪ್ರಕರಣಗಳು ಸಾಕಷ್ಟು ಹೆಚ್ಚುತ್ತಿವೆ. ಇದೀಗ ಬಸ್ಸಿನೊಳಗಿದ್ದ ಕಂಡಕ್ಟರ್ ತನ್ನ ಕೆಲಸದಲ್ಲಿ ಬ್ಯುಸಿಯಾಗಿದ್ದಾಗ ಕಳ್ಳನೊಬ್ಬ ಆತನ ಫೋನ್ ಎಗರಿಸಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವೈರಲ್(Viral Video) ಆದ ವಿಡಿಯೊದಲ್ಲಿ, ಕಂಡಕ್ಟರ್ ಪ್ರಯಾಣಿಕನೊಬ್ಬನ ಜೊತೆ ಮಾತನಾಡುತ್ತಿರುವಾಗ ಹುಡುಗನೊಬ್ಬ ಕಂಡಕ್ಟರ್ನ ಬ್ಯಾಗ್ನಲ್ಲಿದ್ದ ಫೋನ್ ಕದ್ದು ಎಸ್ಕೇಪ್ ಆಗಿದ್ದಾನೆ.
ಈ ಇಡೀ ದೃಶ್ಯ ಬಸ್ನೊಳಗಿದ್ದ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೊ 33,000 ಕ್ಕೂ ಹೆಚ್ಚು ವ್ಯೂವ್ಸ್ ಗಳಿಸಿದೆ. ವಿಡಿಯೊ ನೋಡಿ ಶಾಕ್ ಆದ ನೆಟ್ಟಿಗರು ಸಿಕ್ಕಾಪಟ್ಟೆ ಕಾಮೆಂಟ್ ಮಾಡಿದ್ದಾರೆ.
ವಿಡಿಯೊ ಇಲ್ಲಿದೆ ನೋಡಿ...
A thief stole a money bag of Bus Conductor pic.twitter.com/QzRLcEwUND
— Ghar Ke Kalesh (@gharkekalesh) June 9, 2025
ನೆಟ್ಟಿಗರೊಬ್ಬರು, “ಅವನು ಈ ಕೆಲಸವನ್ನು ತುಂಬಾ ಗುಟ್ಟಾಗಿ ಮಾಡಿ ಮುಗಿಸಿದ್ದಾನೆ, ಅವನಿಗೆ ಭಾರತ ರತ್ನ ಆವಾರ್ಡ್ ನೀಡಬೇಕು” ಎಂದಿದ್ದಾರೆ. ಮತ್ತೊಬ್ಬರು, "ಅವನು ಕಳ್ಳತನಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ. "ಕೈಗಳ ಕೈಚಳಕ ಸಖತ್ ಆಗಿದೆ " ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಶೇಷವಾಗಿ ದೆಹಲಿಯಲ್ಲಿ ಫೋನ್ ಕಳ್ಳತನ ಪ್ರಕರಣವು ಹೆಚ್ಚು ನಡೆಯುತ್ತಿದೆ. ದತ್ತಾಂಶದ ಪ್ರಕಾರ, 2023 ಮತ್ತು 2022 ರಲ್ಲಿ, ದೆಹಲಿ ಪೊಲೀಸರು ಕದ್ದ ಫೋನ್ಗಳಲ್ಲಿ ಸುಮಾರು 30 ಪ್ರತಿಶತದಷ್ಟು ವಶಪಡಿಸಿಕೊಂಡಿದ್ದಾರೆ. 2021ರಲ್ಲಿ ಇದು 27 ಪ್ರತಿಶತದಷ್ಟಿತ್ತಂತೆ. ಪೊಲೀಸ್ ಮಾಹಿತಿಯ ಪ್ರಕಾರ, 2024ರಲ್ಲಿ 4,749 ಫೋನ್ ಕಳ್ಳತನ ಪ್ರಕರಣ ನಡೆದಿವೆ. ಅದರಲ್ಲಿ 1,572 ವಶಪಡಿಸಿಕೊಳ್ಳಲಾಗಿದೆ. 2023 ರಲ್ಲಿ, 5,873 ಫೋನ್ಗಳು ಕಳ್ಳತನವಾಗಿದ್ದವು ಮತ್ತು 1,776 ವಶಪಡಿಸಿಕೊಳ್ಳಲಾಗಿದೆ. 2022 ರಲ್ಲಿ, 6,382 ಕದ್ದ ಫೋನ್ಗಳಲ್ಲಿ ಕೇವಲ 1,919 ವಶಪಡಿಸಿಕೊಳ್ಳಲಾಗಿದೆ, 2021 ರಲ್ಲಿ 6,989 ಕದ್ದ ಫೋನ್ಗಳಲ್ಲಿ 1,950 ವಶಪಡಿಸಿಕೊಳ್ಳಲಾಗಿದೆಯಂತೆ.
ಈ ಸುದ್ದಿಯನ್ನೂ ಓದಿ:Viral Video: ಬಂಗೀ ಜಂಪ್ ಮಾಡಲು ಹೋದ ಯುವತಿಯ ಅವಸ್ಥೆಯನ್ನೊಮ್ಮೆ ನೋಡಿ; ವಿಡಿಯೊ ಫುಲ್ ವೈರಲ್
ಇತ್ತೀಚೆಗೆ ರೈಲಿನಲ್ಲಿ ಫೋನ್ ಕದಿಯಲು ಪ್ರಯತ್ನಿಸುತ್ತಿರುವ ಕಳ್ಳನ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಪ್ರಯಾಣಿಕನು ಅವನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರಿಂದ ಕಳ್ಳತನ ಭೀಕರ ತಿರುವು ಪಡೆದುಕೊಂಡಿತು. ಪ್ರಯಾಣಿಕನು ಕಳ್ಳನನ್ನು ಹಿಡಿದಿದ್ದರಿಂದ ಅವನನ್ನು ರೈಲಿನ ಕಿಟಕಿಗೆ ನೇತಾಡುವಂತೆ ಮಾಡಿ ಪ್ರಯಾಣಿಕನು ಕಳ್ಳನ ತಲೆಗೆ ನಿರಂತರವಾಗಿ ಹೊಡೆಯುವ ಮೂಲಕ ಶಿಕ್ಷೆ ನೀಡಿದ್ದನು.