ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಛೇ.. ಇದೆಂಥಾ ಅಮಾನುಷ ಕೃತ್ಯ! ಸೊಸೆಯ ಚಿನ್ನ ಕಸಿದುಕೊಂಡು ಮನೆಯಿಂದ ಹೊರಬ್ಬಿದ ಅತ್ತೆಮಾವ- ವಿಡಿಯೊ ಇದೆ

ಉತ್ತರ ಪ್ರದೇಶದ ಜಲಾಲ್ಪುರದಲ್ಲಿ ಅತ್ತೆ-ಮಾವ ಸೊಸೆಗೆ 5ಲಕ್ಷ ವರದಕ್ಷಿಣೆ ತರುವಂತೆ ಒತ್ತಾಯಿಸಿ, ಆಕೆಯ ಚಿನ್ನಾಭರಣಗಳನ್ನು ಕಸಿದುಕೊಂಡು ಮನೆಯಿಂದ ಹೊರಹಾಕಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ. ಮಹಿಳೆ ಈ ಬಗ್ಗೆ ಪತಿ ಹಾಗೂ ಅತ್ತೆಮಾವನ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದ್ದಾಳೆ.

ವರದಕ್ಷಿಣೆ ದುರಾಸೆಗೆ ಅತ್ತೆ-ಮಾವ ಸೊಸೆಗೆ ಮಾಡಿದ್ದೇನು ಗೊತ್ತಾ?

Profile pavithra Mar 18, 2025 9:23 AM

ಲಖನೌ: ಇತ್ತೀಚೆಗಷ್ಟೇ ರಾಜಸ್ತಾನದಲ್ಲಿ ವರನೊಬ್ಬ ವಧುವಿನ ಕಡೆಯವರು ವರದಕ್ಷಿಣೆ ರೂಪದಲ್ಲಿ ನೀಡಿದ ಹಣವನ್ನು ವಾಪಾಸ್‌ ನೀಡಿದ ಅಪರೂಪದ ಘಟನೆಯೊಂದು ನಡೆದಿತ್ತು. ಸಮಾಜದಲ್ಲಿ ಇಷ್ಟೆಲ್ಲಾ ಬದಲಾವಣೆಗಳು ಆಗುತ್ತಿದ್ದರೂ ಕೆಲವೊಂದು ಕಡೆ ಮಾತ್ರ ಈ ವರದಕ್ಷಿಣೆ ಹೆಣ್ಣುಮಕ್ಕಳ ಜೀವನವನ್ನು ಅಸ್ತವ್ಯಸ್ತಗೊಳಿಸುತ್ತದೆ ಎಂದರೆ ತಪ್ಪಾಗಲಾರದು! ಇದೀಗ ಉತ್ತರ ಪ್ರದೇಶದ ಜಲಾಲ್ಪುರದಲ್ಲಿ ವರದಕ್ಷಿಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯೊಬ್ಬಳನ್ನು ಆಕೆಯ ಅತ್ತೆಮಾವ ಮನೆಯಿಂದ ಹೊರಹಾಕಿದ್ದು, ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ್ದು, ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ.

ಸಂತ್ರಸ್ತ ಮಹಿಳೆಯ ಹೆಸರು ರಂಜನಾ ಯಾದವ್. ಈಕೆ ರಾಜ್ಯದ ಅಂಬೇಡ್ಕರ್ ನಗರ ಪ್ರದೇಶದ ರಮೇಶ್ ಕುಮಾರ್ ಯಾದವ್ ಅವನನ್ನು ಕಳೆದ ವರ್ಷ ಮಾರ್ಚ್‍ನಲ್ಲಿ ವಿವಾಹವಾಗಿದ್ದಳು. ಆದರೆ ಈ ನಡುವೆ ಅವಳ ಅತ್ತೆ-ಮಾವ ಆಕೆಯ ಬಳಿ 5ಲಕ್ಷ ರೂ. ವರದಕ್ಷಿಣೆ ನೀಡುವಂತೆ ಒತ್ತಡ ಹಾಕಿದ್ದಾರೆ. ಅಲ್ಲದೇ ಆಕೆಯ ಎಲ್ಲಾ ಆಭರಣಗಳನ್ನು ಕಸಿದುಕೊಂಡು ಅವಳನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ಈ ಘಟನೆಯ ನಂತರ, ಅವಳು ಸ್ಥಳೀಯ ಪೊಲೀಸರನ್ನು ಸಂಪರ್ಕಿಸಿ, ತನ್ನ ಪತಿ ಹಾಗೂ ಅತ್ತೆ ಮಾವನ ವಿರುದ್ಧ ದೂರು ದಾಖಲಿಸಿದ್ದಾಳೆ.

ಸೊಸೆಯನ್ನು ಮನೆಯಿಂದ ಹೊರದಬ್ಬುತ್ತಿರುವ ವಿಡಿಯೊ ಇಲ್ಲಿದೆ ನೋಡಿ



ವರದಿಗಳ ಪ್ರಕಾರ, ರಂಜನಾಗೆ ಪತಿ ರಮೇಶ್ ಕುಮಾರ್‌ ಹಾಗೂ ಆತನ ಸಹೋದರರಾದ ಶ್ರೀನಾಥ್ ಮತ್ತು ರಕ್ಷರಾಮ್ ಕಿರುಕುಳ ನೀಡಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ರಂಜನಾ ಮದುವೆಯ ನಂತರ ಗಂಡನ ಮನೆಗೆ ಬರುವಾಗ ಫ್ರಿಡ್ಜ್, ಕೂಲರ್, ಹಾಸಿಗೆ ಮತ್ತು ಇತರ ಕೆಲವು ವಸ್ತುಗಳನ್ನು ವರದಕ್ಷಿಣೆಯ ರೂಪದಲ್ಲಿ ತಂದಿದ್ದಳು. ಆದರೆ, ಆಕೆಯ ಅತ್ತೆ ಮಾವಂದಿರು ಇನ್ನೂ ಹೆಚ್ಚಿನ ವರದಕ್ಷಿಣೆಯನ್ನು ಬೇಕೆಂದು ಅವಳ ಎಲ್ಲಾ ಆಭರಣಗಳನ್ನು ಕಿತ್ತುಕೊಂಡಿದ್ದಾರಂತೆ. ಅಷ್ಟೇಅಲ್ಲದೇ ಆಕೆಯನ್ನು ಮನೆಯಿಂದ ಹೊರಹಾಕಿ 5 ಲಕ್ಷ ರೂ. ನೀಡದಿದ್ದರೆ ಮನೆಯೊಳಗೆ ಪ್ರವೇಶವಿಲ್ಲ ಎಂದು ಬೆದರಿಕೆ ಕೂಡ ಹಾಕಿದ್ದಾರೆ.

ವೈರಲ್ ಆದ ವಿಡಿಯೊದಲ್ಲಿ ವರದಕ್ಷಿಣೆ ಹಣಕ್ಕಾಗಿ ಮಹಿಳೆಯನ್ನು ಬಲವಂತವಾಗಿ ಮನೆಯಿಂದ ಹೊರಹಾಕಿದ ದೃಶ್ಯ ಸೆರೆಯಾಗಿದೆ.ಮಹಿಳೆ ಮನೆಬಿಟ್ಟು ಹೋಗುವುದಿಲ್ಲ ಎಂದು ಎಷ್ಟೇ ಬೇಡಿಕೊಂಡರೂ ಆಕೆಯನ್ನು ಮನೆಯಿಂದ ಹೊರಗೆ ಎಳೆದು ಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಭಾರತದ ಕಾನೂನಿನ ಅಡಿಯಲ್ಲಿ ವರದಕ್ಷಿಣೆಯನ್ನು ನಿಷೇಧಿಸಲಾಗಿದೆ. ಹಾಗಾಗಿ ಪೊಲೀಸರು ರಂಜನಾಳ ಪತಿ ಹಾಗೂ ಅತ್ತೆಮಾವನ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣದ ದಾಖಲಿಸಿಕೊಂಡಿದ್ದಾರೆ. ಹಾಗೂ ಸ್ಥಳೀಯ ಪೊಲೀಸರು ಪ್ರಸ್ತುತ ಈ ಬಗ್ಗೆ ತನಿಖೆ ನಡೆಸಿದ್ದಾರೆ ಎಂಬುದಾಗಿ ವರದಿಯಾಗಿದೆ.

ಈ ಸುದ್ದಿಯನ್ನೂ ಓದಿ:UP Dowry Case: ವರದಕ್ಷಿಣೆ ಕಿರುಕುಳ- ಸೊಸೆಗೆ ಎಚ್‌ಐವಿ ಇಂಜೆಕ್ಷನ್‌ ಚುಚ್ಚಿದ ನೀಚ ಅತ್ತೆ-ಮಾವ!

ವರದಕ್ಷಿಣೆ ಕಿರುಕುಳಕ್ಕೆ ಸಾಫ್ಟ್‌ವೇರ್‌ ಎಂಜಿನಿಯರ್ ಬಲಿ

ವರದಕ್ಷಿಣೆಯ ಕಿರುಕುಳಕ್ಕೆ ವಿವಾಹಿತ ಮಹಿಳೆಯರು ಬಲಿಯಾಗುತ್ತಿರುವುದು ಇದೇ ಮೊದಲಲ್ಲ. ಇತ್ತೀಚೆಗಷ್ಟೇ ಸಾಫ್ಟ್‌ವೇರ್‌ ಎಂಜಿನಿಯರ್ ದೇವಿಕಾ ಎಂಬ ಮಹಿಳೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‍ನಲ್ಲಿ ನಡೆದಿತ್ತು. ಆಸ್ತಿ ವರ್ಗಾವಣೆ ಸೇರಿದಂತೆ ವರದಕ್ಷಿಣೆ ಬೇಡಿಕೆಗಳ ಬಗ್ಗೆ ಅವಳಿಗೆ ದೈಹಿಕ ಮತ್ತು ಭಾವನಾತ್ಮಕ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ದೇವಿಕಾ ಕುಟುಂಬವು ಆಕೆಯ ಪತಿಯ ವಿರುದ್ಧ ದೂರು ದಾಖಲಿಸಿದೆ.