Viral Video: ‘ಇದು ಭಾರತವಲ್ಲ, ಅಮೆರಿಕ’... ಇಂಟರ್ನೆಟ್‌ನಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದ ಬಟ್ಟೆ ಒಣಗಿಸುವ ವಿಡಿಯೊ
Viral Video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು, ಇದು ಇಂಡಿಯಾ ಅಲ್ಲ,ಅಮೆರಿಕ ಎಂಬ ಕ್ಯಾಪ್ಷನ್ ಕೊಟ್ಟ ವಿಡಿಯೊ... ಅಷ್ಟಕ್ಕೂ ಆ ತಲೆಬರಹ ಕೊಟ್ಟಿದ್ಯಾರು..? ಹಾಗೇ ಅನ್ನಲು ಕಾರಣವೇನು....? ಈ ವಿಡಿಯೊ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದರು ಗೊತ್ತಾ...? ಇಲ್ಲಿದೆ ನೋಡಿ ಇದರ ಕಂಪ್ಲೀಟ್ ಮಾಹಿತಿ.


ವಾಷಿಂಗ್ಟನ್: ಬೇರೆ ಬೇರೆ ದೇಶಗಳು ವಿಭಿನ್ನ ಸಂಸ್ಕೃತಿ ಮತ್ತು ಜೀವನ ಶೈಲಿಯನ್ನು ಹೊಂದಿವೆ. ತಮ್ಮ ಸಂಸ್ಕೃತಿಯೇ ಇತರರಿಗಿಂತ ಮೇಲು, ನಮ್ಮ ಜೀವನಶೈಲಿಯೇ ಉತ್ತಮ ಎಂದು ಹಲವು ಇಂಟರ್ನೆಟ್‌ನಲ್ಲಿ ಬಡಿದಾಡಿಕೊಳ್ಳುವುದುಂಟು. ಇಂತಹ ಕಮೆಂಟ್‌ಗಳಿಂದಾಗಿಯೇ, ಕೆಲವು ಪೋಸ್ಟ್‌ಗಳು ಏಕಾಏಕಿ ವೈರಲ್(Viral Video) ಆಗುತ್ತವೆ. ಭಾರತೀಯ ಮೂಲದ ವ್ಯಕ್ತಿಯೊಬ್ಬರು ಅಮೆರಿಕ(USA)ದಲ್ಲಿ ಬಟ್ಟೆ ಒಣಗಿಸಲು (Clothes drying)ಹಾಕಿದ ವಿಡಿಯೊ (Viral video)ವೊಂದನ್ನು ಪೋಸ್ಟ್ ಮಾಡಿದ್ದು, ಈಗ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಮೊಹಮ್ಮದ್ ಅನಾಸ್‌ಎಂಬ ಇನ್‌ಸ್ಟಾಗ್ರಾಮ್(Instagram) ಯೂಸರ್ ತಮ್ಮ ಅಕೌಂಟ್‌ನಲ್ಲಿ ಅಪ್ಲೋಡ್ ಮಾಡಿದ ಸರಳ ಮತ್ತು ಸಾಮಾನ್ಯ ದೃಶ್ಯ ಈಗ ಸಾಂಸ್ಕೃತಿಕ ಭಿನ್ನತೆಗಳ ಚರ್ಚಾ ಕೇಂದ್ರವಾಗಿ ಮಾರ್ಪಟ್ಟಿದೆ.
ಈ ವಿಡಿಯೊದಲ್ಲಿ ವಿವಾದಾತ್ಮಕ ಅಂಶಗಳು ಏನೂ ಇಲ್ಲ, ಬದಲಾಗಿ ಯಾರದೋ ಮನೆಯ ಹಿತ್ತಿಲಿನಲ್ಲಿ ಬಟ್ಟೆ ಒಣಗಲು ಹಾಕಲಾದ ದೃಶ್ಯವಿದೆ. ಈ ವಿಡಿಯೊ ಆರಂಭವಾಗುವಾಗ “ಇದು ಭಾರತವಲ್ಲ, ಅಮೆರಿಕ” ಎಂಬ ಟೆಕ್ಸ್ಟ್ ಬರೆದು, ಒಂದು ಇಮೋಜಿ ಹಾಕಿದ್ದಾರೆ. ಇದರ ಹಿನ್ನೆಲೆಯಲ್ಲಿ ಕೆಂಡ್ರಿಕ್ ಲಾಮರ್ ಅವರ “ನಾಟ್ ಲೈಕ್ ಅಸ್” ಹಾಡು ಕೇಳಿ ಬರುತ್ತಿದೆ ಅಷ್ಟೇ. ಆದರೆ, ಈ ವಿಡಿಯೊ ನೋಡಿದ ಹಲವರು ಕಾಮೆಂಟ್‌ಗಳ ಮೂಲಕ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರಿಂದ, ಸಾಂಸ್ಕೃತಿಕ ಭಿನ್ನತೆಗಳ ಕುರಿತ ಚರ್ಚೆ ಜೋರಾಗಿಯೇ ನಡೆದಿದೆ.
ಈ ವಿಡಿಯೊವನ್ನು ಈಗ ಹಲವರು ಜನ ಶೇರ್ ಮಾಡಿಕೊಂಡಿದ್ದು, ಸುಮಾರು 20 ಸಾವಿರ ಜನರು ಲೈಕ್ ಮಾಡಿದ್ದಾರೆ. ಸಾವಿರಾರು ಕಾಮೆಂಟ್‌ಗಳು ಈ ವಿಡಿಯೋಗೆ ಹರಿದುಬರುತ್ತಿವೆ. ಸಾಂಸ್ಕೃತಿಕ ಭಿನ್ನತೆಗಳ ಚರ್ಚೆಯಲ್ಲಿ ನಮ್ಮದೂ ಒಂದು ಪಾಲಿರಲಿ ಎಂಬಂತೆ, ನೆಟ್ಟಿಗರು ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.
ನೆಟ್ಟಿಗರ ರಿಯಾಕ್ಷನ್ ಏನು?
ಈ ವಿಡಿಯೊವನ್ನು ಕಂಡು ಹಲವರು ಟೀಕಿಸಿದ್ದೂ ಉಂಟು. ಅಮೆರಿಕವನ್ನು ಭಾರತದೊಂದಿಗೆ ಹೋಲಿಸಿದ್ದಕ್ಕೆ ಸಿಟ್ಟಾದವರೂ ಇದ್ದಾರೆ. “ಹಿತ್ತಲಿನಲ್ಲಿ ಬಟ್ಟೆ ಒಣಗಲು ಹಾಕುವುದು ಮತ್ತು ಅಮೆರಿಕವನ್ನು ಭಾರತದೊಂದಿಗೆ ಹೋಲಿಕೆ ಮಾಡುವುದು ಎರಡೂ ತಪ್ಪು” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಈ ಪೋಸ್ಟ್‌ನಿಂದ ಗೊಂದಲಕ್ಕೆ ಒಳಗಾಗಿರುವುದಾಗಿ ಹೇಳಿಕೊಂಡಿದ್ದಾರೆ. “ಅಮೆರಿಕದಲ್ಲಿ ಬಟ್ಟೆ ಒಣಗಿಸುವುದಿಲ್ಲವೇ?” ಎಂದು ಒಬ್ಬರು ಪ್ರಶ್ನಿಸಿದರೆ, ಮತ್ತೊಬ್ಬರು “ಕ್ಷಮಿಸಿ, ನಮ್ಮ ಬಟ್ಟೆಗಳನ್ನು ಒಣಗಿಸುವುದೂ ಅಪರಾಧವೇ ಅಥವಾ ಅದಕ್ಕೂ ಕಾನೂನಿದೆಯೇ?” ಎಂದು ಕೇಳಿದ್ದಾರೆ. “ಇದು ಗೊಂದಲಮಯವಾದ ಪೋಸ್ಟ್. ಯುಎಸ್‌ನಲ್ಲಿ ಇದನ್ನೂ ಮಾಡಬಾರದೆ?” ಎಂದು ಯುಎಸ್‌ನ ವ್ಯಕ್ತಿಯೊಬ್ಬರು ಹೇಳಿದ್ದಾರೆ.
ಈ ಸುದ್ದಿಯನ್ನು ಓದಿ: Viral Video: ಕುರ್ಚಿಗಾಗಿ ಕಿತ್ತಾಡಿಕೊಂಡ ಬಿಜೆಪಿ ನಾಯಕರು; ಇದೆಂಥಾ ನಾಚಿಕೆಗೇಡು ನೋಡಿ!
ಕಾಮೆಂಟ್ ಬಾಕ್ಸ್‌ನಲ್ಲಿ ನಡೆಯುತ್ತಿದ್ದ ಚರ್ಚೆಗೆ ಎಂಟ್ರಿ ಕೊಟ್ಟ ನ್ಯೂಜಿಲೆಂಡ್‌ನ ವ್ಯಕ್ತಿಯೊಬ್ಬರು, “ನಾನು ನ್ಯೂಜಿಲೆಂಡ್‌ನವ. ಸೂರ್ಯನ ಬೆಳಕು ಮತ್ತು ಗಾಳಿಯನ್ನು ಬಳಸಿ ಬಟ್ಟೆ ಒಣಗಿಸುವುದು ಸಾಮಾನ್ಯ ವಿಧಾನ” ಎಂದು ಹೇಳಿದ್ದಾರೆ.
ಯಾರು ಈ ಮೊಹಮ್ಮದ್ ಅನಾಸ್?
ಮೊಹಮ್ಮದ್ ಅನಾಸ್ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತಹ ಕಂಟೆಂಟ್‌ಗಳನ್ನು, ವೀಡಿಯೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. USA, UK, ಆಸ್ಟ್ರೇಲಿಯಾ, ಐರ್ಲೆಂಡ್, ಕೆನಡಾ, ಜರ್ಮನಿ ಮತ್ತು ಸ್ಪೇನ್‌ನಂತಹ ದೇಶಗಳಲ್ಲಿ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ತಮ್ಮ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಆಂಬರ್ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯೊಂದಿಗೆ ಇವರು ಕೈಜೋಡಿಸಿದ್ದಾರೆ. ಜನರು ಅಂತಾರಾಷ್ಟ್ರೀಯ ಪ್ರವಾಸದ ವೇಳೆ ಯಾವ ರೀತಿ ವಸತಿಯನ್ನು ಕಂಡುಕೊಳ್ಳಬಹುದು ಎಂಬುದರ ಬಗ್ಗೆ ಮಾಹಿತಿ ನೀಡುತ್ತಲೇ ಇರುತ್ತಾರೆ.