ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Impact: ವಿಶ್ವವಾಣಿ ವರದಿಯಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ: ಯಂತ್ರೋಪಕರಣ ಬಾಡಿಗೆ ಬಾಕಿ ಚುಕ್ತಾ

2024ರ ಏಪ್ರಿಲ್ 3ರಂದು ಲಚ್ಯಾಣ ಗ್ರಾಮದಲ್ಲಿ ಕೊಳೆಬಾವಿಗೆ ಬಿದ್ದಿದ್ದ ಮಗು ಸಾತ್ವಿಕ ಗುಜ ಗೊಂಡನನ್ನು ಸ್ಥಳೀಯರ ಜೆಸಿಬಿ, ಹಿಟ್ಯಾಚಿ, ಟ್ರ್ಯಾಕ್ಟರ್ ಬ್ರೇಕರ್ಸ್, ಬೋರ್‌ವೆಲ್ ಕ್ಯಾಮೆರಾ ಹೀಗೆ ವಿವಿಧ ಯಂತ್ರೋಪಕರಣಗಳನ್ನು ಬಳಸಿಕೊಂಡು ರಕ್ಷಣಾ ತಂಡವು ಸತತ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕ ಸಾತ್ವಿಕನನ್ನು ಸಾವಿನ ದವಡೆಯಿಂದ ಪಾರುಮಾಡಿ ಹೊರಗೆ ತರುವಲ್ಲಿ ಯಶಸ್ವಿ ಯಾಗಿತ್ತು.

ಕೊಳಬೆ ಬಾವಿಗೆ ಬಿದ್ದ ಮಗು ರಕ್ಷಣೆ: ಬಿಲ್‌ ಪಾವತಿ

Profile Ashok Nayak Mar 14, 2025 9:46 PM

ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ 2024ರ ಏಪ್ರಿಲ್ 03 ರಂದು ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವಿನ ಯಶಸ್ವಿ ರಕ್ಷಣಾ ಕಾರ್ಯಾಚರಣೆಗೆ ಬಾಡಿಗೆ ರೂಪದಲ್ಲಿ ಸ್ಥಳೀಯವಾಗಿ ಬಳಸಿಕೊಳ್ಳಲಾಗಿದ್ದ ವಿವಿಧ ಯಂತ್ರೋಪಕರಣಗಳ 3 ಲಕ್ಷಕ್ಕೂ ಅಧಿಕ ಬಿಲ್ ವರ್ಷಗಳಿಂದ ಬಾಕಿ ಉಳಿದಿರುವ ಕುರಿತು ವಿಶ್ವವಾಣಿಯಲ್ಲಿ ಪ್ರಕಟ ಗೊಂಡ ವಿಶೇಷ ವರದಿ ವಿಜಯಪುರ ಜಿಲ್ಲಾಡಳಿತಕ್ಕೆ ಬಿಸಿ ಮುಟ್ಟಿಸಿದೆ. ವರದಿಯಿಂದ ಎಚ್ಚೆತ್ತ ಜಿಲ್ಲಾಡಳಿತ ವರದಿ ಪ್ರಕಟವಾದ ದಿನವೇ ಯಂತ್ರೋಪಕರಣಗಳ ಮಾಲೀಕರಿಗೆ ಬಾಕಿ ಬಿಲ್ ಪಾವತಿಸಿದೆ.

ವರ್ಷದ ಹಿಂದೆ ನಡೆದಿದ್ದ ಘಟನೆ: 2024ರ ಏಪ್ರಿಲ್ 3ರಂದು ಲಚ್ಯಾಣ ಗ್ರಾಮದಲ್ಲಿ ಕೊಳೆಬಾವಿಗೆ ಬಿದ್ದಿದ್ದ ಮಗು ಸಾತ್ವಿಕ ಗುಜಗೊಂಡನನ್ನು ಸ್ಥಳೀಯರ ಜೆಸಿಬಿ, ಹಿಟ್ಯಾಚಿ, ಟ್ರ್ಯಾಕ್ಟರ್ ಬ್ರೇಕರ್ಸ್, ಬೋರ್‌ವೆಲ್ ಕ್ಯಾಮೆರಾ ಹೀಗೆ ವಿವಿಧ ಯಂತ್ರೋಪಕರಣಗಳನ್ನು ಬಳಸಿಕೊಂಡು ರಕ್ಷಣಾ ತಂಡವು ಸತತ 22 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬಾಲಕ ಸಾತ್ವಿಕನನ್ನು ಸಾವಿನ ದವಡೆಯಿಂದ ಪಾರುಮಾಡಿ ಹೊರಗೆ ತರುವಲ್ಲಿ ಯಶಸ್ವಿ ಯಾಗಿತ್ತು.

ಇದನ್ನೂ ಓದಿ: Vijayapura Breaking: ಆದಾಯ ಮೀರಿ ಆಸ್ತಿ ಗಳಿಕೆ: ಕೆಎಚ್‌ಬಿ ಎಫ್ ಡಿ ಎ ಶಿವಾನಂದ ಕೆಂಬಾವಿಗೆ ಲೋಕಾಯುಕ್ತ ಬಿಸಿ

ಆದರೆ ಜಿಲ್ಲಾಡಳಿತ ಬಾಲಕನ ರಕ್ಷಣೆಗೆ ಬಳಸಿಕೊಂಡಿದ್ದ ಯಂತ್ರೋಪಕ ರಣಗಳ 3 ಲಕ್ಷಕ್ಕೂ ಅಧಿಕ ಬಾಡಿಗೆ ಹಣ ನೀಡದ ಕಾರಣ ತುರ್ತು ಕಾರ್ಯಾಚರಣೆಗೆ ಯಂತ್ರೋ ಪಕರಣ ನೀಡಿ ನೆರವಾದವರು ತಮ್ಮ ಬಿಲ್ ಪಾವತಿಗಾಗಿ ವರ್ಷದಿಂದ ಕಚೇರಿಯಿಂದ ಕಚೇರಿಗೆ ಅಲೆಯುವಂತಾಗಿತ್ತು. ಈ ಕುರಿತು ವಿಶ್ವವಾಣಿ ಪತ್ರಿಕೆಯಲ್ಲಿ ಮಾ.12ರಂದು ‘ಒಂದು ವರ್ಷವಾದರೂ ಯಂತ್ರೋಪಕರಣ ಬಿಲ್ ಬಾಕಿ ’ಎಂಬ ತಲೆ ಬರಹದಡಿ ವಿಶೇಷ ವರದಿ ಪ್ರಕಟಿಸುವ ಮೂಲಕ ಬಾಕಿ ಬಿಲ್ ವಿಚಾರವಾಗಿ ಬೆಳಕು ಚೆಲ್ಲಿತ್ತು. ವರದಿ ಪ್ರಕಟ ವಾದ ದಿನವೇ ವರ್ಷದಿಂದ ಬಿಲ್ ಬಾಕಿಯಿದ್ದ ಯಂತ್ರೋಪಕರಣಗಳ ಮಾಲೀಕರಿಗೆ ಜಿಲ್ಲಾಡಳಿತ ಲಚ್ಯಾಣ ಗ್ರಾ.ಪಂ ಮೂಲಕ ಹಣ ಪಾವತಿಸಿದೆ.

4.36 ಲಕ್ಷ ರು. ಪಾವತಿ: ಜಿಲ್ಲಾಧಿಕಾರಿ

ರಕ್ಷಣಾ ಕಾರ್ಯಾಚರಣೆಗಾಗಿ ಬಳಸಲಾದ ಯಂತ್ರೋಪಕರಣ ಸೇವೆ ನೀಡಿದ ಪಿ.ಡಬ್ಲ್ಯೂಡಿ 1ನೇ ದರ್ಜೆಯ ಗುತ್ತಿಗೆದಾರರಾದ ರಾಜಶೇಖರ ಚೋರಗಿ ಅವರಿಗೆ ಯಂತ್ರೋಪಕರಣ ಬಳಕೆ ಬಿಲ್ಲಿನ ಮೊತ್ತ 4,36,357 ರು. ಗಳನ್ನು ಪಾವತಿಸಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ. ಅಲ್ಲದೆ, ಯಂತ್ರೋಪಕರಣ ಬಳಕೆಯ ಮೊತ್ತವನ್ನು ಗ್ರಾಮ ಪಂಚಾಯತಿಯಿಂದ ಗುತ್ತಿಗೆದಾರರಿಗೆ ಪಾವತಿಸಲಾಗಿದ್ದು, ಈ ಮೊತ್ತ ಹೊರತುಪಡಿಸಿ ಇತರ ಮೊತ್ತ ಬಾಕಿ ಇಲ್ಲ ಹಾಗೂ ಈ ಪ್ರಕರಣ ಸಂಬಂಧ ಬಿಲ್ ಪಾವತಿಸುವ ಯಾವುದೇ ಬೇಡಿಕೆ ಇಲ್ಲ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.

ವಿಶ್ವವಾಣಿ ವರದಿಯ ಪರಿಣಾಮ ವರ್ಷದಿಂದ ಬಾಕಿ ಉಳಿದಿದ್ದ ನಮ್ಮ ಯಂತ್ರೋ ಪಕರಣಗಳ ಬಾಕಿ ಬಿಲ್ ಪಾವತಿಯಾಗಿದೆ. ಬಿಲ್ ಬಾಕಿ ಉಳಿದಿದ್ದ ಎಲ್ಲಾ ಯಂತ್ರೋ ಪಕರಣ ಮಾಲಿಕರಿಂದ ಜನಪರ ಕಾಳಜಿಯುಳ್ಳ ವಿಶ್ವವಾಣಿ ಪತ್ರಿಕಾ ಬಳಗಕ್ಕೆ ವಿಶೇಷ ಧನ್ಯವಾದಗಳು.

- ರಾಜಶೇಖರಯ್ಯ ಮಠಪತಿ, ಮಗುವಿನ ರಕ್ಷಣೆಗೆ ಕೊಳವೆಬಾವಿ ಕ್ಯಾಮೆರಾ ಪೂರೈಸಿ ದವರು