ಡಾ.ಮಂಜುನಾಥ್ ಅವಧಿ ವಿಸ್ತರಣೆ
ಡಾ.ಮಂಜುನಾಥ್ ಅವಧಿ ವಿಸ್ತರಣೆ
 
                                -
 Vishwavani News
                            
                                Jul 19, 2022 5:05 PM
                                
                                Vishwavani News
                            
                                Jul 19, 2022 5:05 PM
                             
    
 
    
    ಜಯದೇವ ನಿರ್ದೇಶಕ ಹುದ್ದೆ
ಬೆಂಗಳೂರು: ಹೆಸರಾಂತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಮುಂದುವರಿಸಿ ಸರಕಾರ ಆದೇಶಿಸಿದೆ.
ಮಂಜುನಾಥ್ ಅವಧಿ ಅಂತ್ಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ, ಜನರ ಹಿತದೃಷ್ಟಿ ಯಿಂದ ಇನ್ನೊಂದು ಅವಧಿಗೂ ಅವರನ್ನೇ ಮುಂದುವರಿಸುವಂತೆ ‘ವಿಶ್ವವಾಣಿ’ ಸರಣಿ ವರದಿ ಪ್ರಕಟಿಸಿತ್ತು. ಪರಿಣಾಮ ಸಾರ್ವಜನಿಕ ವಲಯದಲ್ಲೂ ಮಂಜು ನಾಥ್ ಪರ ಅಭಿಪ್ರಾಯ ರಾಜ್ಯದ್ಯಂತ ವ್ಯಾಪಕವಾಗಿತ್ತು. ಇದರ ಬೆನ್ನ ಸಂಸ್ಥೆಯನ್ನು ಉಳಿಸಿ, ಬೆಳೆಸುವ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಂಜುನಾಥ್ ಅವರನ್ನೇ ಮುಂದುವರಿಸುವ ನಿರ್ಧಾರವಾಗಬೇಕೆಂದು ಶಾಸಕರು, ಅಧಿಕಾರಿಗಳು ಹಾಗೂ ವೈದ್ಯಕೀಯ ಕ್ಷೇತ್ರದ ಹಿರಿಯರು, ಸಾರ್ವಜನಿಕರು ಸರಕಾರವನ್ನು ಒತ್ತಾಯಿಸಿದರು.
ಇವೆಲ್ಲದಕ್ಕೆ ಸ್ಪಂದಿಸಿದ ಸಿಎಂ ಬಸವರಾಜ ಬೊಮ್ಮಾಯಿ ಅವರು ಮಂಜುನಾಥ್ ಅವರನ್ನೇ ಮತ್ತೊಂದು ಅವಧಿಗೆ ಮುಂದು ವರಿಸುವಂತೆ ಸೂಚಿಸಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿ ಘಟನೋತ್ತರ ಅನುಮೋದನೆ ಷರತ್ತಿಗೆ ಒಳಪಟ್ಟು ಮಂಜುನಾಥ್ ರನ್ನು ಸಂಸ್ಥೆ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ದೇಶಕರನ್ನಾಗಿ ಮುಂದುವರಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
                                
                            