ಪಿಜಿ ನೀಟ್; ಮ್ಯಾಟ್ರಿಕ್ಸ್ ಹಿಂಪಡೆದ ಸರಕಾರ
ಪಿಜಿ ನೀಟ್; ಮ್ಯಾಟ್ರಿಕ್ಸ್ ಹಿಂಪಡೆದ ಸರಕಾರ
 
                                -
 Vishwavani News
                            
                                Feb 1, 2022 3:27 PM
                                
                                Vishwavani News
                            
                                Feb 1, 2022 3:27 PM
                             
    
    ಗೊಂದಲ ಬಗ್ಗೆ ವರದಿ ಪ್ರಕಟಿಸಿದ್ದ ವಿಶ್ವವಾಣಿ
ಪರಿಷ್ಕೃತ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ ಕೆಇಎ
ಬೆಂಗಳೂರು: ಎಂ.ಡಿ. ಸೀಟುಗಳಿಗೆ ನಡೆಸಿದ್ದ ಪಿ.ಜಿ. ನೀಟ್‌ನ ಸೀಟ್ ಮ್ಯಾಟ್ರಿಕ್ಸ್ ಬಗ್ಗೆ ಹಲವು ಆಕ್ಷೇಪಣೆಗಳು ವ್ಯಕ್ತವಾದ ಬೆನ್ನಲ್ಲೇ, ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಈ ಹಿಂದೆ ಹೊರಡಿಸಿದ್ದ ಸೀಟ್ ಮ್ಯಾಟ್ರಿಕ್ಸ್ ಅನ್ನು ಸಂಪೂರ್ಣವಾಗಿ ಹಿಂಪಡೆದು ಪರಿಷ್ಕೃತ ಮ್ಯಾಟ್ರಿಕ್ಸ್ ಅನ್ನು ಬಿಡುಗಡೆಗೊಳಿಸಿದೆ.
ಈ ಸಂಬಂಧ ಅಧಿಕೃತ ಸುತ್ತೋಲೆ ಹೊರಡಿಸಿರುವ ಕೆಇಎ, ಈ ಹಿಂದೆ ಹೊರಡಿಸಿದ್ದ ಸೀಟ್ ಮ್ಯಾಟ್ರಿಕ್ಸ್ ಅನ್ನು ಹಿಂಪಡೆಯಲಾಗಿದೆ. ಸೋಮವಾರ ಸಂಜೆ 7 ರಿಂದ ಮಂಗಳವಾರ ಸಂಜೆ 7ರ ತನಕ ಅಭ್ಯರ್ಥಿಗಳು ತಮ್ಮ ಆಯ್ಕೆ ಗಳನ್ನು ದಾಖಲಿಸುವುದಕ್ಕೆ ಅಥವಾ ಮಾರ್ಪಡಿಸುವುದಕ್ಕೆ ಅವಕಾಶ ನೀಡಲಾ ಗಿದ್ದು, ಫೆ.2ರ ಬೆ.10ರ ಬಳಿಕ ಸೀಟು ಹಂಚಿಕೆಯ ಫಲಿತಾಂಶ ಪ್ರಕಟಿಸುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ರೀತಿ ಸೀಟ್ ಮ್ಯಾಟ್ರಿಕ್ಸ್ ಬದಲಾವಣೆಗೆ ಪ್ರಮುಖವಾಗಿ, ರೋಸ್ಟರ್ ಪದ್ಧತಿಯಲ್ಲಿ ಆಗಿರುವ ಗೊಂದಲ ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕೆಲ ಕಾಲೇಜುಗಳಲ್ಲಿ ಅವಕಾಶವೇ ಇರಲಿಲ್ಲ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಪ್ರಮಾಣದಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಇದರೊಂದಿಗೆ ಮ್ಯಾನೇಜ್‌ಮೆಂಟ್ ಕೋಟದ ಸೀಟಿನಲ್ಲಿ ಕೆಲ ಬದಲಾವಣೆಯಾಗಬೇಕು ಎನ್ನುವ ಒತ್ತಡ ಕೇಳಿಬಂದಿದ್ದರಿಂದ ಪರಿಷ್ಕೃತ ಮ್ಯಾಟ್ರಿಕ್ಸ್ ಬಿಡುಗಡೆ ಸರಕಾರ ಮುಂದಾಗಿತ್ತು ಎಂದು ಹೇಳಲಾಗಿದೆ.
ಧ್ವನಿ ಎತ್ತಿದ್ದ ವಿಶ್ವವಾಣಿ ಸೀಟು ಮ್ಯಾಟ್ರಿಕ್ಸ್‌ನಲ್ಲಿ ಆಗಿರುವ ಲೋಪದೋಷದಿಂದ ಸಾಮಾನ್ಯ ವರ್ಗದ ವಿದ್ಯಾರ್ಥಿಗಳಿಗೆ ಉತ್ತಮ ರ‍್ಯಾಂಕ್ ಇದ್ದರೂ
ಆತ ಬಯಸಿದ ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ. ಇದರಿಂದ ಸಾಮಾನ್ಯ ವರ್ಗ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ ಎಂದು ‘ವಿಶ್ವವಾಣಿ’ ಧ್ವನಿ ಎತ್ತಿತ್ತು.
                                
                            