ಡಿಜಿಟಲ್ ಲಂಚ: ಪಿಎಸ್ಐ ಅಮಾನತು
ಡಿಜಿಟಲ್ ಲಂಚ: ಪಿಎಸ್ಐ ಅಮಾನತು



(ವಿಶ್ವವಾಣಿ ವರದಿ ಪರಿಣಾಮ)
ತುಮಕೂರು: ಚಾಲಕರೊಬ್ಬರಿಂದ ಪೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ.
ಗುಬ್ಬಿ ತಾಲೂಕಿನ ಎಂ.ಹೆಚ್. ಪಟ್ಟಣ ಗೇಟ್ ಬಳಿ ಅಪಘಾತದಿಂದ ಮೃತಪಟ್ಟಿದ್ದ ಶವವೊಂದನ್ನು ಸಾಗಿಸುವಂತೆ ಕ್ಯಾಬ್ ಚಾಲಕ ಶಕೀಲ್ ಅವರಿಗೆ ಪಿಎಸ್ಐ ಜ್ಞಾನಮೂರ್ತಿ ಸೂಚಿಸಿದ್ದರು ಒಪ್ಪದಿದ್ದಾಗ ಹೆದರಿಸಿವಪೋನ್ ಪೇ ಮೂಲಕ 7 ಸಾವಿರ ಲಂಚ ಪಡೆದಿದ್ದರು. ಇದನ್ನು ಖಂಡಿಸಿ ಚಾಲಕರುಗಳು ಪ್ರತಿಭಟಿಸಿದ್ದರು.
ಈ ಸಂಬಂಧ ಎಸ್ಪಿ ರಾಹುಲ್ ಕುಮಾರ್ ಅವರು ಪಿಎಸ್ ಐ ಅವರನ್ನು ಅಮಾನತು ಮಾಡಿದ್ದಾರೆ.