Vishweshwar Bhat Column: ಇದು ಅಪರಾಧ ಅಲ್ಲ, ಆದರೆ...
ಪೈಲಟ್ ತಪ್ಪಾಗಿ ವಿಮಾನವನ್ನು ಪಕ್ಕದ ’ರನ್ ವೇ 29’ (29 ರೈಟ್) ನಲ್ಲಿ ಇಳಿಸಿದ. ರನ್ ವೇ 29 ಅನ್ನು ಕೇವಲ ವಿಮಾನಗಳ ಟೇಕಾಫ್ ಬಳಸಲಾಗುತ್ತಿತ್ತು. ಅದೃಷ್ಟವಶಾತ್, ಆಫ್ಘನ್ ವಿಮಾನ ಇಳಿಯುವ ಕೆಲವೇ ಕ್ಷಣಗಳ ಮೊದಲು ಏರ್ ಇಂಡಿಯಾ ವಿಮಾನವೊಂದು ಅದೇ ರನ್ವೇಯಿಂದ ಹಾರಾಟ ಆರಂಭಿಸಿತ್ತು.
-
ಸಂಪಾದಕರ ಸದ್ಯಶೋಧನೆ
ಒಂದಕ್ಕಿಂತ ಹೆಚ್ಚು ರನ್ವೇಗಳಿರುವ ವಿಮಾನ ನಿಲ್ದಾಣದಲ್ಲಿ, ಸೂಚಿಸಿದರನ್ವೇ ಬಿಟ್ಟು ತಪ್ಪಾಗಿ ಬೇರೆ ರನ್ವೇಯಲ್ಲಿ ವಿಮಾನ ಇಳಿಸುವುದು ಅಪರಾಧವಾ? ಸರಳವಾಗಿ ಹೇಳುವು ದಾದರೆ, ಇದು ’ಕ್ರಿಮಿನಲ್ ಅಪರಾಧ’ ಅಲ್ಲ, ಆದರೆ ನಾಗರಿಕ ವಿಮಾನಯಾನ ನಿಯಮಗಳ ಅಡಿಯಲ್ಲಿ ಇದು ಅತ್ಯಂತ ಗಂಭೀರವಾದ ’ಸುರಕ್ಷತಾ ಉಲ್ಲಂಘನೆ’.
ನವೆಂಬರ್ 23, 2025. ಕಾಬೂಲ್‌ನಿಂದ ದೆಹಲಿಗೆ ಬಂದ ಅರಿಯಾನಾ ಆಫ್ಘನ್ ಏರ್ ಲೈನ್ಸ್‌ನ ’ಎಫ್ ಜಿ &311' (Airbus A310 ) ವಿಮಾನವು ಲ್ಯಾಂಡಿಂಗ್ ಮಾಡುವಾಗ ದೊಡ್ಡ ಪ್ರಮಾದ ಎಸಗಿತು. ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಈ ವಿಮಾನಕ್ಕೆ ಇಳಿಯಲು ’ರನ್ ವೇ 29L’ (೨೯ ಲೆಫ್ಟ್) ಅನ್ನು ನಿಗದಿಪಡಿಸಿತ್ತು. ಇದು ಆಗಮಿಸುವ ವಿಮಾನಗಳಿಗೆ ಮೀಸಲಾಗಿತ್ತು.
ಪೈಲಟ್ ತಪ್ಪಾಗಿ ವಿಮಾನವನ್ನು ಪಕ್ಕದ ’ರನ್ ವೇ 29’ (29 ರೈಟ್) ನಲ್ಲಿ ಇಳಿಸಿದ. ರನ್ ವೇ 29 ಅನ್ನು ಕೇವಲ ವಿಮಾನಗಳ ಟೇಕಾಫ್ ಬಳಸಲಾಗುತ್ತಿತ್ತು. ಅದೃಷ್ಟವಶಾತ್, ಆಫ್ಘನ್ ವಿಮಾನ ಇಳಿಯುವ ಕೆಲವೇ ಕ್ಷಣಗಳ ಮೊದಲು ಏರ್ ಇಂಡಿಯಾ ವಿಮಾನವೊಂದು ಅದೇ ರನ್ವೇಯಿಂದ ಹಾರಾಟ ಆರಂಭಿಸಿತ್ತು.
ಇದನ್ನೂ ಓದಿ: Vishweshwar Bhat Column: ಒಂದು ತಮಾಷೆಯ ಪ್ರಸಂಗ
ಒಂದು ವೇಳೆ ಏರ್ ಇಂಡಿಯಾ ವಿಮಾನ ಟೇಕಾಫ್ ಆಗಲು ಸ್ವಲ್ಪ ತಡವಾಗಿದ್ದರೂ ಅಥವಾ ರನ್ ವೇ ಮೇಲೆ ನಿಂತಿದ್ದರೂ, ಇತಿಹಾಸದ ಕಂಡರಿಯದ ಭೀಕರ ಅಪಘಾತ ಸಂಭವಿಸುತ್ತಿತ್ತು. ಹೀಗಾಗಿ ತಪ್ಪು ರನ್ ವೇಯಲ್ಲಿ ಇಳಿಸುವುದು ಅಪರಾಧವೇ ಎಂಬ ಪ್ರಶ್ನೆ ಎದುರಾಗಿದೆ. ಭಾರತೀಯ ವಾಯುಯಾನ ಕಾನೂನು ( Aircraft Rules, 1937) ಮತ್ತು ಅಂತಾ ರಾಷ್ಟ್ರೀಯ ನಿಯಮಗಳ ಪ್ರಕಾರ, ಇದನ್ನು ನೇರವಾಗಿ ಕ್ರಿಮಿನಲ್ ಅಪರಾಧ’ ಎಂದು ಪರಿಗಣಿಸಲಾಗುವುದಿಲ್ಲ. ಆದರೆ, ಇದು ವಾಯುಯಾನ ಸುರಕ್ಷತಾ ನಿಯಮಗಳ ( DGCA Safety Protocols) ಗಂಭೀರ ಉಲ್ಲಂಘನೆಯಾಗಿದೆ.
ಇದರ ವ್ಯತ್ಯಾಸವನ್ನು ನಾವು ಅರ್ಥಮಾಡಿಕೊಳ್ಳಬಹುದು. ಹೆಚ್ಚಿನ ವಿಮಾನ ಯಾನ ಘಟನೆಗಳು ಮಾನವ ಪ್ರಮಾದ’ ಅಥವಾ ತಾಂತ್ರಿಕ ದೋಷಗಳಿಂದ ಸಂಭವಿಸುತ್ತವೆ. ಪೈಲಟ್ ಉದ್ದೇಶಪೂರ್ವಕವಾಗಿ ಪ್ರಯಾಣಿಕರ ಪ್ರಾಣಕ್ಕೆ ಕುತ್ತು ತರಲು ಹೀಗೆ ಮಾಡುವು ದಿಲ್ಲ. ಆದ್ದರಿಂದ, ಇದನ್ನು ಕ್ರಿಮಿನಲ್ ಎಂದು ಪರಿಗಣಿಸದೆ, ’ಗಂಭೀರ ಘಟನೆ’ ಎಂದು ವರ್ಗೀಕರಿಸಲಾಗುತ್ತದೆ. ಇದಕ್ಕೆ ಶಿಕ್ಷೆಯಾಗಿ, ಹೆಚ್ಚೆಂದರೆ ಪೈಲಟ್‌ನ ಲೈಸೆನ್ಸ್ ರದ್ದುಪಡಿಸ ಬಹುದು ಅಥವಾ ತಾತ್ಕಾಲಿಕವಾಗಿ ಅಮಾನತು ಮಾಡಬಹುದು.
ಪೈಲಟ್ ಕರ್ತವ್ಯದ ವೇಳೆ ಮದ್ಯಪಾನ ಮಾಡಿದ್ದು ಸಾಬೀತಾದರೆ, ಪೈಲಟ್ ಬೇಕಂತಲೇ ನಿಯಮ ಗಳನ್ನು ಗಾಳಿಗೆ ತೂರಿ, ಜನರ ಪ್ರಾಣಕ್ಕೆ ಅಪಾಯ ತಂದಿದ್ದರೆ, ಭಯೋತ್ಪಾದನೆ ಅಥವಾ ಬೇರಾ ವುದೇ ದುರುದ್ದೇಶದಿಂದ ತಪ್ಪು ರನ್ ವೇ ಯಲ್ಲಿ ಇಳಿಸಿದರೆ, ಪೈಲಟ್ ವಿರುದ್ಧ ಪೊಲೀಸ್ ಕೇಸ್ ಅಥವಾ ಕ್ರಿಮಿನಲ್ ಕ್ರಮ ಜರುಗಿಸಬಹುದು.
ಪ್ರಸ್ತುತ ಅರಿಯಾನಾ ಆಫ್ಘನ್ ಏರ್‌ಲೈನ್ಸ್ ಪ್ರಕರಣದಲ್ಲಿ, ಪೈಲಟ್ ತಾಂತ್ರಿಕ ದೋಷದ ( Instrument Landing System Failure) ಕಾರಣ ನೀಡಿದ್ದರಿಂದ, ಇದು ತನಿಖೆಯ ಹಂತದ ಲ್ಲಿದೆ ಮತ್ತು ಇದನ್ನು ಇನ್ನೂ ಕ್ರಿಮಿನಲ್ ಪ್ರಕರಣವೆಂದು ಪರಿಗಣಿಸಲಾಗಿಲ್ಲ. ಈ ನಿರ್ದಿಷ್ಟ ಘಟನೆಯಲ್ಲಿ, ಅರಿಯಾನಾ ಏರ್‌ಲೈನ್ಸ್ ಪೈಲಟ್ ತಾನು ತಾಂತ್ರಿಕ ದೋಷದ ಬಲಿಪಶು ಎಂದು ಹೇಳಿಕೊಂಡಿದ್ದಾನೆ.
ಎಟಿಸಿ ( Air Traffic Control ) ತಮಗೆ ಸರಿಯಾದ ಎಚ್ಚರಿಕೆ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈಗ DGCA ಈ ವಾದವನ್ನು ಪರಿಶೀಲಿಸುತ್ತದೆ. ಒಂದು ವೇಳೆ ಉಪಕರಣ ಗಳು ನಿಜವಾಗಿಯೂ ಕೆಟ್ಟುಹೋಗಿದ್ದರೆ ಪೈಲಟ್ ಮೇಲಿನ ಶಿಕ್ಷೆ ಕಡಿಮೆ ಯಾಗಬಹುದು. ಆದರೆ, ಉಪಕರಣಗಳು ಸರಿಯಾ ಗಿದ್ದು, ಪೈಲಟ್ ಗೊಂದಲಕ್ಕೀಡಾಗಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ.
ಒಂದು ವಿಮಾನ ನಿಲ್ದಾಣದಲ್ಲಿ ರನ್ ವೇ ಗಳು ಅತ್ಯಂತ ಬ್ಯುಸಿಯಾಗಿರುತ್ತವೆ. ಒಂದು ರನ್ ವೇ ಯನ್ನು ಇಳಿಯಲು ಮತ್ತು ಇನ್ನೊಂದನ್ನು ಹಾರಲು ಬಳಸುವಾಗ, ಪೈಲಟ್ ಗೊಂದಲ ಮಾಡಿಕೊಂಡರೆ ಎದುರಾಗುವ ವಿಪತ್ತು ಕಲ್ಪನೆಗೂ ಮೀರಿದ್ದು. ಟೇಕಾಫ್ ಆಗುತ್ತಿರುವ ವಿಮಾನದ ವೇಗ ಗಂಟೆಗೆ 250-300 ಕಿ.ಮೀ ಇರುತ್ತದೆ. ಅದೇ ಸಮಯಕ್ಕೆ ಎದುರಿನಿಂದ ಇನ್ನೊಂದು ವಿಮಾನ ಬಂದು ಇಳಿದರೆ, ಎರಡೂ ವಿಮಾನಗಳು ಡಿಕ್ಕಿ ಹೊಡೆದರೆ ಏನಾಗ ಬಹುದು? ಊಹಿಸಿ.