ಮೋಹನ್ ವಿಶ್ವ ಮೂಲತಃ ಬೆಂಗಳೂರಿನವರು, ಕನ್ನಡ ಮಾದ್ಯಮದಲ್ಲಿ ಶಾಲಾ ಶಿಕ್ಷಣ ಮುಗಿಸಿ, ನಂತರ ಬೆಂಗಳೂರಿನ ಪ್ರತಿಷ್ಟಿತ ವಿಜಯಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ತಮ್ಮ 23 ನೇ ವಯಸ್ಸಿನಲ್ಲಿ Chartered Accountant ಮತ್ತು Company Secretary ಸ್ನಾತಕೋತ್ತರ ಪದವಿ ಪಡೆದವರು. 15 ವರ್ಷಗಳಿಂದ ಬೆಂಗಳೂರಿನಲ್ಲಿ ತಮ್ಮ ಸ್ವಂತ ಕಚೇರಿ ನಡೆಸುತ್ತಿದ್ದಾರೆ. ಪ್ರತಿಷ್ಟಿತ ಬಹುರಾಷ್ಟೀಯ ಕಂಪೆನಿಗಳಿಗೆ ಸತತ ವಾಗಿ 15 ವರ್ಷಗಳಿಂದ ದೇಶದಾದ್ಯಂತ ವ್ಯಾವಹಾರಿಕ ಸಲಹೆ ನೀಡುತ್ತಾ ಬಂದಿದ್ದಾರೆ. ಸುಮಾರು 12 ವರ್ಷಗಳ ಹಿಂದೆ ವಿಶ್ವೇಶ್ವರ ಭಟ್ಟರ ಸಲಹೆಯ ಮೇರೆಗೆ ಅಂಕಣ ಬರೆಯಲು ಪ್ರಾರಂಭಿಸಿದರು.ವಿಶ್ವವಾಣಿ ಪತ್ರಿಕೆಯ ಮೊದಲ ದಿನದಿಂದ 10 ವರ್ಷಗಳ ಕಾಲ ಅಂಕಣ ಬರೆಯುತ್ತಿದ್ದಾರೆ. ಜಕೀಯ,ಅಂತರಾಷ್ಟೀಯ ವಿಚಾರ, ಆರ್ಥಿಕತೆ, ಇತಿಹಾಸ, ವೈಚಾರಿಕತೆ, ಧರ್ಮಗಳ ಕುರಿತು 300 ಕ್ಕೂ ಅಧಿಕ ಅಂಕಣಗಳನ್ನು ಬರೆದಿದ್ದಾರೆ. ಪಾಕಿಸ್ತಾನದ ಆರ್ಥಿಕ ದಿವಾಳಿತನ ಕುರಿತು ‘ದಾರಿ ತಪ್ಪಿದ ದೇಶ ಪಾಕಿಸ್ತಾನ/ʼ ಎಂಬ ಪುಸ್ತಕ ಬರೆದಿದ್ದಾರೆ. ಕಳೆದ 12 ವರ್ಷಗಳಿಂದ ಹಲವು ವಿಷಯಗಳ ವಿಶ್ಲೇಷಕರಾಗಿ ರಾಜ್ಯ ಮತ್ತು ರಾಷ್ಟೀಯ ಮಟ್ಟದ ಪ್ರತಿಷ್ಟಿತ ಟಿ.ವಿ.ಮಾದ್ಯಮಗಳಲ್ಲಿ 5000 ಕ್ಕೂ ಅಧಿಕ ಚರ್ಚೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಸ್ತುತ ಭಾರತೀಯ ಜನತಾ ಪಕ್ಷ - ಕರ್ನಾಟಕದ ರಾಜ್ಯ ವಕ್ತಾರರಾಗಿಯೂ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ..