ವಿನಾಯಕ ವೆಂ ಭಟ್ಟರು ಮೂಲತಹ ಉತ್ತರ ಕನ್ನಡದ ಶಿರಸಿಯ ಸಮೀಪದ ಅಂಬ್ಲಿಹೊಂಡ ಎಂಬ ಹಳ್ಳಿಯವರು, ಧಾರವಾಡದಲ್ಲಿ ವಾಣಿಜ್ಯ ಪದವಿಪಡೆದ ಇವರು, ಭಾರತೀಯ ವಿದ್ಯಾಭವನದಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸದ್ಯ, ಕಲ್ಯಾಣಿ ಸಮೂಹದ ಅಟೋಮೋಟಿವ ಅಕ್ಸಲ್ ಸಂಸ್ಥೆಯ ಮಾನವ ನಂಪನ್ಮೂಲ ವಿಭಾಗದ 'ಕಂಟ್ರಿ ಹೆಡ್' ಆಗಿ ಮೈಸೂರಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿರುವ ಇವರು, ಈಗಾಗಲೇ ಕನ್ನಡದಲ್ಲಿ ೩ ಪುಸ್ತಕಗಳನ್ನು ಸಂಕಲಿಸಿರುತ್ತಾರೆ ಮತ್ತು ಅನೇಕ ಕವನಗಳನ್ನು ರಚಿಸಿರು ತ್ತಾರೆ. ಧಾರವಾಡ ಆಕಾಶವಾಣಿಯಿಂದ ಇವರ ಅನೇಕ ಕವನ ವಾಚನಗಳು ಪ್ರಸಾರವಾಗಿರುತ್ತವೆ. ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದ ಭಾಷಣಕಾರರೂ ಆಗಿದ್ದ ಇವರು. ತಮ್ಮ ಕಾಲೇಜುದಿನಗಳಿಂದ ವಿಶಾಲ ಕರ್ಣಾಟಕ. ನವನಾಡು, ಸಂಯುಕ್ತ ಕರ್ನಾಟಕ ಮುಂತಾದ ಕನ್ನಡದ ಪತ್ರಿಕೆಗಳ ಮತ್ತು ಪತ್ರಕರ್ತರುಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಪ್ರಚಲಿತ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಮ್ಮದೇ ಆದ ಪ್ರಖರ ವಿಶ್ಲೇಷಣೆಯನ್ನು ಹೊಂದಿರುವ ಇವರು, ಪ್ರಾಚೀನ ಸಂಸ್ಕೃತ ಸಾಹಿತ್ಯದ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.