ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಒಂದು ಕೋಟಿ ರುಪಾಯಿ ಬಹುಮಾನವಿದ್ದ, ದೇಶದ ಕೊನೆಯ ಸಕ್ರಿಯ ಮಾವೋವಾದಿ ಮಿಸಿರ್ ಬೆಸ್ರ ಅರೆಸ್ಟ್

ದೇಶದ ಕೊನೆಯ ನಕ್ಸಲ್ ನಾಯಕ ಮಿಸಿರ್ ಬೆಸ್ರಾನನ್ನು ಜಾರ್ಖಂಡ್‌ನಲ್ಲಿ ನಾಲ್ವರು ಸಹಚರರೊಂದಿಗೆ ಬಂಧಿಸಲಾಗಿದೆ. 1 ಕೋಟಿ ರೂಪಾಯಿ ಬಹುಮಾನ ಹೊಂದಿದ್ದ ಮಿಸಿರ್ ಬೆಸ್ರಾ ಮೋಸ್ಟ್ ವಾಂಟೆಡ್ ಮಾವೋವಾದಿ ನಾಯಕರಲ್ಲಿ ಒಬ್ಬನಾಗಿದ್ದನು. ಈತನ ಬಂಧನ ದೇಶದ ಭದ್ರತಾ ಪಡೆಗಳಿಗೆ ದೊರೆತಿರುವ ಅತಿದೊಡ್ಡ ಗೆಲುವಾಗಿದೆ.

ದೇಶದ ಕೊನೆಯ ನಕ್ಸಲ್ ನಾಯಕನ ಬಂಧನ

ಸಂಗ್ರಹ ಚಿತ್ರ -

ಜಾರ್ಖಂಡ್: ಮೋಸ್ಟ್ ವಾಂಟೆಡ್ ನಕ್ಸಲ್ ನಾಯಕ ( most wanted Maoist leader) ಮಿಸಿರ್ ಬೆಸ್ರಾನನ್ನು (Misir Besra) ಜಾರ್ಖಂಡ್ (Jharkhand) ನಲ್ಲಿ ಬಂಧಿಸಲಾಗಿದೆ. ಇದು ಭದ್ರತಾ ಪಡೆಗಳಿಗೆ ದೊರೆತಿರುವ ಅತಿ ದೊಡ್ಡ ಗೆಲುವಾಗಿದೆ. 1 ಕೋಟಿ ರೂಪಾಯಿ ಬಹುಮಾನ ಹೊಂದಿದ್ದ ದೇಶದ ಕೊನೆಯ ಸಕ್ರಿಯ ಮಾವೋವಾದಿ ನಾಯಕ, ಸಿಪಿಐ (ಮಾವೋವಾದಿ) ಪೊಲಿಟ್‌ಬ್ಯೂರೋ ಸದಸ್ಯ ಮಿಸಿರ್ ಬೆಸ್ರಾ ಮತ್ತು ಆತನ ನಾಲ್ವರು ಸಹಚರರನ್ನು ಜಾರ್ಖಂಡ್ ಪೊಲೀಸರು ಕೇಂದ್ರ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಧನ್ಬಾದ್ ಜಿಲ್ಲೆಯಲ್ಲಿ ಬಂಧಿಸಿದ್ದಾರೆ.

ಜಾರ್ಖಂಡ್‌ನ ನಕ್ಸಲ್ ವಿರೋಧಿ ಅಭಿಯಾನದ ಹಿನ್ನೆಲೆಯಲ್ಲಿ 16 ಮಾವೋವಾದಿಗಳು ಈವರೆಗೆ ಶರಣಾಗಿದ್ದಾರೆ. ದೇಶದ ಅತ್ಯಂತ ಬೇಕಾಗಿರುವ ಮಾವೋವಾದಿ ನಾಯಕರಲ್ಲಿ ಒಬ್ಬ ಮತ್ತು ಎಡಪಂಥೀಯ ಉಗ್ರವಾದದ ಪ್ರಮುಖ ವ್ಯಕ್ತಿ ಮಿಸಿರ್ ಬೆಸ್ರಾ ಪೂರ್ವ ಭಾರತದ ರೆಡ್ ಕಾರಿಡಾರ್‌ನಾದ್ಯಂತ ನಿಷೇಧಿತ ಸಂಘಟನೆಯ ಚಟುವಟಿಕೆಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.

ಪ್ರಿಯಕರನೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದ ವೇಳೆ ಅಳುತ್ತಿದ್ದ ಮಗುವನ್ನು ಕೊಂದ ಪಾಪಿ ತಾಯಿ

ಗಿರಿಧಿ ಜಿಲ್ಲೆಯ ನಿವಾಸಿಯಾಗಿರುವ ಮಿಸಿರ್ ಬೆಸ್ರಾ ವಿರುದ್ಧ ಭದ್ರತಾ ಸಿಬ್ಬಂದಿ ಮೇಲೆ ದಾಳಿ, ಸುಲಿಗೆ, ಶಸ್ತ್ರಾಸ್ತ್ರ ಚಳುವಳಿ ಮತ್ತು ದಂಗೆ ಸಂಬಂಧಿತ ಹಿಂಸಾಚಾರವನ್ನು ಒಳಗೊಂಡ ಹಲವಾರು ಪ್ರಕರಣಗಳಿವೆ. ಕೇಂದ್ರ ಭದ್ರತಾ ಸಂಸ್ಥೆಗಳ ಸಹಯೋಗದೊಂದಿಗೆ ಜಾರ್ಖಂಡ್ ಪೊಲೀಸರು ನಿರಂತರ ಗುಪ್ತಚರ ಮಾಹಿತಿಯನ್ನು ಆಧರಿಸಿ ಧನ್ಬಾದ್ ಜಿಲ್ಲೆಯಲ್ಲಿ ಅತನನ್ನು ಬಂಧಿಸಿದರು.

ಕಾರ್ಯಾಚರಣೆ ವೇಳೆ ಇತರ ನಾಲ್ವರನ್ನು ಬಂಧಿಸಲಾಗಿದ್ದು, ಅವರ ಗುರುತುಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಅವರನ್ನು ಸೆರೆಹಿಡಿಯಲು ನಿಖರವಾದ ಕಾರಣಗಳನ್ನು ಕೂಡ ತಿಳಿಸಿಲ್ಲ. ಪ್ರಾಥಮಿಕ ತನಿಖೆಯ ಅನಂತರ ವಿವರವಾದ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸುಮಾರು ಎರಡು ದಶಕಗಳಿಂದ ಮಾವೋವಾದಿ ಚಟುವಟಿಕೆಯಲ್ಲಿ ಗುರುತಿಸಿಕೊಂಡಿರುವ ಬೆಸ್ರಾ ಹಿರಿಯ ಸಿಪಿಐ (ಮಾವೋವಾದಿ) ಪೊಲಿಟ್‌ಬ್ಯೂರೋ ಸದಸ್ಯನಾಗಿದ್ದಾನೆ. 2007 ರಲ್ಲಿ ಬಂಧನಕ್ಕೊಳಗಾಗಿದ್ದು, 2009ರಲ್ಲಿ ಭದ್ರತಾ ಪಡೆಗಳಿಂದ ತಪ್ಪಿಸಿಕೊಂಡಿದ್ದನು.

ಇತ್ತೀಚಿನ ಕೆಲವು ವರ್ಷಗಳಲ್ಲಿ ಹಲವಾರು ಮಾವೋವಾದಿ ನಾಯಕರನ್ನು ಎನ್‌ಕೌಂಟರ್‌ ಮಾಡಲಾಗಿದ್ದು, ಇನ್ನು ಹಲವಾರು ಮಂದಿ ಶರಣಾಗಿದ್ದಾರೆ. ಮಿಸರ್ ಬೆಸ್ರಾನನ್ನು ಶರಣಾಗಲು ಪೊಲೀಸರು ಹಲವು ಬಾರಿ ಆತನ ಮನವೊಲಿಸಲು ಪ್ರಯತ್ನಿಸಿದ್ದರು.

ಹಲವಾರು ನಕ್ಸಲ್ ದಾಳಿಗಳ ಮಾಸ್ಟರ್ ಮೈಂಡ್ ಆಗಿದ್ದ ಬೆಸ್ರಾ ವಿರುದ್ಧ 154 ಕ್ರಿಮಿನಲ್ ಪ್ರಕರಣಗಳಿವೆ. ಜಾರ್ಖಂಡ್, ಒಡಿಶಾ ಮತ್ತು ಇತರ ಮಾವೋವಾದಿ ಪೀಡಿತ ರಾಜ್ಯಗಳಲ್ಲಿ ಆತನ ವಿರುದ್ಧ ಪ್ರಕರಣಗಳು ದಾಖಲಾಗಿವೆ. ಈತನ ವಿಚಾರಣೆಯಿಂದ ನಕ್ಸಲ್ ಚಟುವಟಿಕೆಯ ಬಗ್ಗೆ ಹಲವಾರು ಪ್ರಮುಖ ಮಾಹಿತಿಗಳು ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ ತನಿಖಾಧಿಕಾರಿಗಳು.

ಮಹತ್ವದ ಬೆಳವಣಿಗೆಯಲ್ಲಿ ಮಂಗಳವಾರ ಬೆಳಗ್ಗೆ ಆರು ಮಂದಿ ಮಾವೋವಾದಿಗಳು ಶರಣಾಗಿದ್ದಾರೆ. ಈ ಮೂಲಕ ಒಟ್ಟು 16 ಮಾವೋವಾದಿಗಳು ಜಾರ್ಖಂಡ್ ಪೊಲೀಸರ ಮುಂದೆ ಶರಣಾದರು. ಅವರಿಗೆ ಒಟ್ಟು 39 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು.

ಶರಣದವರಲ್ಲಿ ಸಿಪಿಐ (ಮಾವೋವಾದಿ) ಪ್ರಾದೇಶಿಕ ಸಮಿತಿ ಸದಸ್ಯ ಸಂತೋಷ್ ಮಹ್ತೋ ಅಲಿಯಾಸ್ ಬಸುದೇವ್ ದಾ ಅಲಿಯಾಸ್ ದಿಲೀಪ್ ಕೂಡ ಸೇರಿದ್ದಾನೆ. ಈತನ ವಿರುದ್ಧ 128 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಶರಣಾಗಿರುವ ಮಾವೋವಾದಿಗಳಲ್ಲಿ ಇವರು ಮಹಿಳಾ ಕಾರ್ಯಕರ್ತರು ಕೂಡ ಸೇರಿದ್ದಾರೆ. ಇವರಲ್ಲಿ ವಲಯ ಸಮಿತಿ ಸದಸ್ಯೆ, ಉಪ ವಲಯ ಸಮಿತಿ ಸದಸ್ಯರು ಮತ್ತು ಪ್ರದೇಶ ಸಮಿತಿ ಸದಸ್ಯರಾಗಿದ್ದಾರೆ. 78 ಪ್ರಕರಣಗಳಲ್ಲಿ ಬೇಕಾಗಿದ್ದ ವಲಯ ಸಮಿತಿ ಸದಸ್ಯ ಚಂದನ್ ಲೋಹ್ರಾ, ಉಪ ವಲಯ ಸಮಿತಿ ಸದಸ್ಯ ಅನಿಲ್ ತುರಿ ಅಲಿಯಾಸ್ ಉಜ್ವಲ್, ಸುಖ್‌ಲಾಲ್ ಬಿರ್ಜಿಯಾನ್ ಅಲಿಯಾಸ್ ಅಕೇಲಾ, ಪ್ರದೇಶ ಸಮಿತಿ ಸದಸ್ಯರಾದ ಸುದೇಶ್ ಹೊನ್ಹಾಗಾ ಅಲಿಯಾಸ್ ಸೋನಾರಾಮ್ ಹೊನ್ಹಾಗಾ, ರಿಸಿವ್, ವಲಯ ಸಮಿತಿ ಸದಸ್ಯ ಸಂತೋಷ್ ಮಾಂಝಿ ಅಲಿಯಾಸ್ ಜಗಬಂಧು ಕೂಡ ಶರಣಾಗಿದ್ದಾರೆ. ಇವರು ಆರು ಐಎನ್‌ಎಸ್‌ಎಎಸ್ ರೈಫಲ್‌ಗಳು, ಎರಡು ಎಕೆ-47 ರೈಫಲ್‌ಗಳು, 38 ಮ್ಯಾಗಜೀನ್‌ಗಳು ಮತ್ತು 1,562 ಸುತ್ತು ಮದ್ದುಗುಂಡುಗಳನ್ನು ಪೊಲೀಸರಿಗೆ ಒಪ್ಪಿಸಿದರು.

ಜಮ್ಮು-ಕಾಶ್ಮೀರದಲ್ಲಿ ನೆಲ ಬಾಂಬ್‌ ಸ್ಫೋಟ; ಇಬ್ಬರು ಯೋಧರಿಗೆ ಗಾಯ

ಜಾರ್ಖಂಡ್‌ನಾದ್ಯಂತ ನಡೆದ ಮಾವೋವಾದಿ ವಿರೋಧಿ ಅಭಿಯಾನದಲ್ಲಿ ಈ ವರ್ಷದ ಆರಂಭದಿಂದ ಈವರೆಗೆ 93 ಮಂದಿ ಮಾವೋವಾದಿಗಳನ್ನು ಬಂಧಿಸಲಾಗಿದ್ದು, 45 ಮಂದಿ ಶರಣಾಗಿದ್ದಾರೆ. 22 ಮಂದಿಯನ್ನು ಎನ್‌ಕೌಂಟರ್‌ ಮಾಡಲಾಗಿದೆ.