ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪಂಚ ದ್ರಾವಿಡ ಕವಿ ಸಂಗಮವು ಸಾಹಿತ್ಯ, ಭಾಷಾ ಸೌಹಾರ್ದತೆಗೆ ಹೊಸ ದಿಕ್ಕು ನೀಡುವ ವೇದಿಕೆ: ಎಚ್. ಡುಂಡಿರಾಜ್

Bengaluru News: ಬೆಂಗಳೂರಿನ ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ಬುಧವಾರ ಪಂಚ ದ್ರಾವಿಡ ಕವಿ ಸಂಗಮ ಹಾಗೂ ತೊದಲ್ನುಡಿಯ 13ನೇ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ದ್ರಾವಿಡ ಭಾಷಾ ಟ್ರಾನ್ಸ್‌ಲೇಟರ್ಸ್ ಅಸೋಸಿಯೇಷನ್ (DBTA) ಹಾಗೂ ತೊದಲ್ನುಡಿ ಕನ್ನಡ ಮಕ್ಕಳ ಸಾಹಿತ್ಯ ಮಾಸಪತ್ರಿಕೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪಂಚ ದ್ರಾವಿಡ ಕವಿ ಸಂಗಮ, ತೊದಲ್ನುಡಿ ವಾರ್ಷಿಕ ಸಂಚಿಕೆ ಬಿಡುಗಡೆ

ಬೆಂಗಳೂರಿನಲ್ಲಿ ಪಂಚ ದ್ರಾವಿಡ ಕವಿ ಸಂಗಮ, ತೊದಲ್ನುಡಿಯ 13ನೇ ವಾರ್ಷಿಕ ಸಂಚಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು. -

Profile
Siddalinga Swamy Jun 17, 2026 10:36 PM

ಬೆಂಗಳೂರು, ಜೂ.17: ದ್ರಾವಿಡ ಭಾಷಾ ಟ್ರಾನ್ಸ್‌ಲೇಟರ್ಸ್ ಅಸೋಸಿಯೇಷನ್ (DBTA) ಹಾಗೂ ತೊದಲ್ನುಡಿ ಕನ್ನಡ ಮಕ್ಕಳ ಸಾಹಿತ್ಯ ಮಾಸಪತ್ರಿಕೆಗಳ ಸಂಯುಕ್ತಾಶ್ರಯದಲ್ಲಿ ನಗರದ ವೈಟ್‌ಫೀಲ್ಡ್‌ನ ಶ್ರೀ ಸರಸ್ವತಿ ಎಜುಕೇಶನ್ ಟ್ರಸ್ಟ್‌ನಲ್ಲಿ ಪಂಚ ದ್ರಾವಿಡ ಕವಿ ಸಂಗಮ ಹಾಗೂ ತೊದಲ್ನುಡಿಯ 13ನೇ ವಾರ್ಷಿಕ ಸಂಚಿಕೆ ಬಿಡುಗಡೆ ಸಮಾರಂಭ ಬುಧವಾರ ಯಶಸ್ವಿಯಾಗಿ ನಡೆಯಿತು.

ಕನ್ನಡ, ಮಲಯಾಳಂ, ತಮಿಳು, ತೆಲುಗು ಹಾಗೂ ತುಳು ಭಾಷೆಗಳನ್ನು ಪ್ರತಿನಿಧಿಸಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಐವತ್ತಕ್ಕೂ ಹೆಚ್ಚು ಕವಿಗಳು ತಮ್ಮ ಕವನಗಳನ್ನು ವಾಚಿಸಿದರು. ಭಾಷಾ ವೈವಿಧ್ಯತೆ ಮತ್ತು ಸಾಹಿತ್ಯದ ಏಕತೆಯನ್ನು ಪ್ರತಿಬಿಂಬಿಸಿದ ಕವನಗಳು ಸಭಿಕರ ಮನಸೆಳೆದವು.

ಸಮಾರಂಭವನ್ನು ಖ್ಯಾತ ಕನ್ನಡ ಕವಿ “ಚುಟುಕು ಚಕ್ರವರ್ತಿʼ ಎಂದೇ ಪ್ರಸಿದ್ಧರಾಗಿರುವ ಎಚ್. ಡುಂಡಿರಾಜ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಾಹಿತ್ಯ ಮತ್ತು ಭಾಷಾ ಸೌಹಾರ್ದತೆಗೆ ಹೊಸ ದಿಕ್ಕನ್ನು ನೀಡುವ ವೇದಿಕೆಯಾಗಿ ಪಂಚ ದ್ರಾವಿಡ ಕವಿ ಸಂಗಮ ರೂಪುಗೊಂಡಿದೆ ಎಂದು ಅಭಿಪ್ರಾಯಪಟ್ಟರು.

ಡಿ.ಬಿ.ಟಿ.ಎ ಅಧ್ಯಕ್ಷೆ ಡಾ. ಸುಷ್ಮಾ ಶಂಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿವಿಧ ದ್ರಾವಿಡ ಭಾಷೆಗಳ ಕವಿಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿದ ಈ ಕಾರ್ಯಕ್ರಮವು ಡಿ.ಬಿ.ಟಿ.ಎ ಹಾಗೂ ತೊದಲ್ನುಡಿಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಗಿ ದಾಖಲಾಗಿದ್ದು, ದ್ರಾವಿಡ ಭಾಷೆಗಳ ಪರಸ್ಪರ ಬಾಂಧವ್ಯ ಮತ್ತು ಸಾಹಿತ್ಯಿಕ ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸಿದೆ ಎಂದು ತಿಳಿಸಿದರು.

ತೊದಲ್ನುಡಿ ಮಾಸಪತ್ರಿಕೆಯ 13ನೇ ವಾರ್ಷಿಕ ಸಂಚಿಕೆಯನ್ನು ಡಿ.ಬಿ.ಟಿ.ಎ ಸಲಹೆಗಾರ ಡಾ. ನ. ದಾಮೋದರ ಶೆಟ್ಟಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಮಕ್ಕಳಲ್ಲಿ ಮಾತೃಭಾಷೆಯ ಮೇಲಿನ ಪ್ರೀತಿ ಹಾಗೂ ಓದುವ ಹವ್ಯಾಸವನ್ನು ಬೆಳೆಸುವಲ್ಲಿ ತೊದಲ್ನುಡಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಜಂಟಿ ಕಾರ್ಯದರ್ಶಿ ಡಾ. ಮಲರ್ವಿಳಿ ತಮಿಳು ಕವನಗಳ ಅವಲೋಕನ ಮಾಡಿದರು. ಮಾಯಾ ಬಿ. ನಾಯರ್ ಮಲಯಾಳಂ ಕವನಗಳ ಕುರಿತು, ಡಾ. ಮಾಲ್ಯಾದ್ರಿ ತೆಲುಗು ಕವನಗಳ ಕುರಿತು ಹಾಗೂ ಡಾ. ಬಿ.ಎಸ್. ಶಿವಕುಮಾರ್ ತುಳು ಕವನಗಳ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಿದರು. ಕಾರ್ಯದರ್ಶಿ ಕೆ. ಪ್ರಭಾಕರನ್ ಸ್ವಾಗತಿಸಿದರು. ಪ್ರೊ. ರಾಕೇಶ್ ವಿ.ಎಸ್. ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಮನ್ವಯವನ್ನು ಕಾರ್ಯಕಾರಿ ಸಮಿತಿ ಸದಸ್ಯ ರೆಬಿನ್ ರವೀಂದ್ರನ್ ನಿರ್ವಹಿಸಿದರು.

ಖ್ಯಾತ ತಮಿಳು ಕವಯತ್ರಿ ಡಾ. ವಡಿವಳಗಿ ದೇವಸಹಾಯಂ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ವಿವಿಧ ಭಾಷೆಗಳ ಕವಿಗಳ ಉಪಸ್ಥಿತಿ ಮತ್ತು ಕಾವ್ಯ ವಾಚನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು. ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಅಪೂರ್ವ ಸಂಗಮವಾಗಿ ರೂಪುಗೊಂಡ ಈ ಕಾರ್ಯಕ್ರಮ ಭಾಗವಹಿಸಿದ ಕವಿಗಳು ಹಾಗೂ ಸಾಹಿತ್ಯಾಸಕ್ತರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಯಿತು.

ದೋಹಾದಲ್ಲಿ 'ಸಂಭ್ರಮ 2026' ಕನ್ನಡ ಗಾಯನ ಸುಧೆ: ಕತಾರ್ ಕನ್ನಡಿಗರ ಮನಗೆದ್ದ ಗಾಯಕ ರಾಜೇಶ್ ಕೃಷ್ಣನ್

ಕನ್ನಡ ವಿಭಾಗದಲ್ಲಿ ಅಮರನಾಥ್, ಸಿ.ಆರ್. ಸುರೇಶ್, ಕೆ.ಟಿ. ಶ್ರೀಮತಿ, ಎನ್. ಶಾರದಮ್ಮ, ನಯನಾ ಕೆ.ಎನ್., ರಾಧಾಮಣಿ ಎಂ. ಕೋಲಾರ, ಶ್ರೀನಿವಾಸನ್ ಎನ್.ವಿ. ಹಾಗೂ ವೀಣಾ ಸುಧೀಂದ್ರ ಅವರು ತಮ್ಮ ಕವನಗಳನ್ನು ವಾಚಿಸಿ ಸಭಿಕರ ಮೆಚ್ಚುಗೆಗೆ ಪಾತ್ರರಾದರು. ಅವರ ಕವನಗಳು ಸಾಹಿತ್ಯದ ವಿವಿಧ ಆಯಾಮಗಳನ್ನು ಅನಾವರಣಗೊಳಿಸಿ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿದ್ದವು.