Actress Sreenidhi Shetty: ಈಶ ಗ್ರಾಮೋತ್ಸವಕ್ಕೆ ಸಾಕ್ಷಿಯಾದ ಕೆಜಿಎಫ್ ಸಿನಿಮಾ ನಟಿ ಶ್ರೀನಿಧಿ ಶೆಟ್ಟಿ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ತಂಡಗಳು ವಯಸ್ಸಿನ ಅಂತರ ಜಾತಿ ಧರ್ಮಗಳ ಭೇದವಿಲ್ಲದೆ ಭಾಗವಹಿಸಿವೆ.ಜನತೆ ತಮ್ಮ ಕೆಲಸಗಳಿಗೆ ಬಿಡುವು ನೀಡಿ ಈ ಗ್ರಾಮೀಣ

ಚಿಕ್ಕಬಳ್ಳಾಪುರ; ತಾಲೂಕಿನ ಲಿಂಗಶೆಟ್ಟಿಪುರ ಗ್ರಾಮದ ಬಳಿ ಇರುವ ಈಶ ಫೌಂಡೇಶನ್ ಆವರಣದಲ್ಲಿ ನಡೆದಿರುವ ಎರಡನೇ ವರ್ಷದ ಈಶ ಗ್ರಾಮೋತ್ಸವದಲ್ಲಿ ಕೆಜಿಎಫ್ ಸಿನಿಮಾದ ಖ್ಯಾತ ನಟಿ ಶ್ರೀನಿಧಿಶೆಟ್ಟಿ ಭಾಗವಹಿಸಿ ಕ್ರೀಡಾಪ ಟು ಗಳಿಗೆ ಪ್ರೋತ್ಸಾಹ ನೀಡಿದರು.
ಈ ವೇಳೆ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಅವರು ಸದ್ಗುರು ಸನ್ನಿಧಾನಕ್ಕೆ ಬಂದು ಭಾಗವಹಿಸಿದರೆ ಪಾಸಿಟಿವ್ ಎನರ್ಜಿ ಬರಲಿದೆ.ಮನಸ್ಸು ಪ್ರಪುಲ್ಲವಾಗಲಿದೆ. ಚಿಕ್ಕಬಳ್ಳಾಪುರ ಈಶ ಕೇಂದ್ರದಲ್ಲಿ ಇದು ಎರಡನೇ ವರ್ಷದ ಗ್ರಾಮೀಣ ಕ್ರೀಡೋತ್ಸವ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ತಂಡಗಳು ವಯಸ್ಸಿನ ಅಂತರ ಜಾತಿ ಧರ್ಮಗಳ ಭೇದವಿಲ್ಲದೆ ಭಾಗವಹಿಸಿವೆ.ಜನತೆ ತಮ್ಮ ಕೆಲಸಗಳಿಗೆ ಬಿಡುವು ನೀಡಿ ಈ ಗ್ರಾಮೀಣ ಪ್ರದೇಶದಲ್ಲಿ ಆಡುವ ಆಟೋಟಗಳಲ್ಲಿ ಸಂತೋಷದಿ0ದ ಭಾಗವಹಿಸಿದ್ದಾರೆ. ಇದನ್ನು ನೋಡುವುದೇ ಒಂದು ಆನಂದ. ಈ ಬಾರಿ ಮಹಿಳಾ ತಂಡಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿರುವುದು ಖುಷಿ ತಂದಿದೆ. ಇಲ್ಲಿ ಗೆದ್ದ ತಂಡಗಳು ಕೊಯ ಮುತ್ತೂರಿನಲ್ಲಿ ನಡೆಯುವ ಕ್ರೀಡೋತ್ಸವದಲ್ಲಿ ಭಾಗಿಯಾಗುತ್ತವೆ ಎಂದರು.
ಈಶ ಗ್ರಾಮೀಣ ಕ್ರೀಡೋತ್ಸವ ೧೦ ಹಲವು ವಿಶೇಷಗಳನ್ನು ಒಳಗೊಂಡಿದೆ. ಇಲ್ಲಿ ಭಾಗವಹಿಸುವ ಮಂದಿ ತಮ್ಮ ದಿನನಿತ್ಯದ ಕೆಲಸದ ಒತ್ತಡಗಳನ್ನು ಮೀರಿ ತಮ್ಮಿಷ್ಟದ ಕ್ರೀಡೆಗಳಲ್ಲಿ ಭಾಗವಹಿಸುವ ಮೂಲಕ ಪ್ರತಿಭಾ ಪ್ರದರ್ಶನ ತೋರುತ್ತಾರೆ. ಆ ಮೂಲಕ ಕ್ರೀಡೆಗೆ ವಯಸ್ಸಾಗಲಿ ಕುಲ ಗೋತ್ರಗಳ ಹಂಗಾಗಲಿ ಯಾವುದು ಇಲ್ಲ, ಆಟದಲ್ಲಿ ತೋರುವ ಉತ್ಸಾಹವೆ ಮುಖ್ಯ ಎಂಬುದನ್ನು ನಾವು ಮನಗಣಬಹುದು. ಈಶ ಕೇಂದ್ರದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮ ವಿಶ್ವಮಾನವ ಸಂದೇಶವನ್ನೇ ಸಾರುತ್ತಿದೆ. ಇಂತಹ ಕಡೆ ಬಂದು ಹೋಗುವುದು ನನ್ನ ಬದುಕಿನಲ್ಲಿ ಅತ್ಯಂತ ಮುಖ್ಯವಾದ ದಿನಚರಿಯಾಗಿದೆ ಎಂದರು.
ಪೂರ್ಣಮಿಯ ದಿನವಾದ ಭಾನುವಾರ ಚಿಕ್ಕಬಳ್ಳಾಪುರದ ಈಶ ಕೇಂದ್ರದಲ್ಲಿ ಜನ ಜಾತ್ರೆಯೇ ಸೇರಿತ್ತು. ಒಂದೆಡೆ ಗ್ರಾಮೀಣ ಕ್ರೀಡೋತ್ಸವ ಮತ್ತೊಂದೆಡೆ ನಾಗಮಂಟಪದ ನಾಗರಾಜನ ದರ್ಶನ,೧೦೮ ಅಡಿಯ ಧ್ಯಾನಸ್ಥ ಈಶ ಮೂರ್ತಿಯ ದಿವ್ಯದರ್ಶನಕ್ಕೆ ಪ್ರವಾಸಿಗರು ಮುಗಿಬಿದ್ದಿದ್ದರು.
ಶ್ರೀನಿಧಿ ಶೆಟ್ಟಿ ಅವರ ಆಗಮನ ಗ್ರಾಮೀಣ ಕ್ರೀಡೋತ್ಸವಕ್ಕೆ ಹೊಸ ಚೈತನ್ಯ ತಂದಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ ಶ್ರೀನಿಧಿ ಶೆಟ್ಟಿಯವರು ಸಹ ನಾನು ಖ್ಯಾತ ನಟಿ ಎಂಬ ಹಮ್ಮಿಲ್ಲದೆ ಸ್ಪರ್ಧಿಗಳನ್ನು ಮನದಂಬೆ ಹುರಿದುಂಬಿಸು ತ್ತಿದ್ದರು.