Chikkaballapur News: ಕಸಾಪ ಕಾರಣವಾಗಿ ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಕೈಂಕರ್ಯ ನಡೆಯುವಂತಾಗಿದೆ : ಕಸಾಪ ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ
ವಿಶೇಷವಾಗಿ ಯುವ ಜನತೆ ಕನ್ನಡ ಭಾಷೆ,ಕಲೆ, ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸ ಬೇಕಾಗುತ್ತದೆ. ಇದೇ ದಿನ ವರನಟ ಡಾ.ರಾಜ್ ಪುಣ್ಯಸ್ಮರಣೆ ಮಾಡುವ ಅವಕಾಶ ಸಿಕ್ಕಿರುವುದು ಸಂತೋಷದಾಯಕ. ತಮ್ಮ ನಟನೆಯ ಮೂಲಕ ವಿಶೇಷ ವ್ಯಕ್ತಿತ್ವ ರೂಪಿಸಿಕೊಂಡಿದ್ದಲ್ಲದೆ ಗೋಕಾಕ್ ಚಳುವಳಿ ಮೂಲಕ ಕನ್ನಡದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಪ್ರತಿ ಹುಣ್ಣುಮೆ ಕಾರ್ಯಕ್ರಮ ದಲ್ಲಿ ಕನ್ನಡ ಗೀತೆಗಳ ಗಾಯನ, ಕವಿತೆಗಳ ವಾಚನ ವಿಶೇಷ ಅನುಭವ ತಂದು ಕೊಡುತ್ತದೆ

ಬಾಗೇಪಲ್ಲಿಯಲ್ಲಿ ನಡೆದ ಹುಣ್ಣಿಮೆ ಹಾಡು,ಡಾ.ರಾಜ್ ಪುಣ್ಯಸ್ಮರಣೆ ಕಾರ್ಯಕ್ರಮ ದೃಶ್ಯ

ಬಾಗೇಪಲ್ಲಿ : ಕನ್ನಡ ಭಾಷೆ,ಕಲೆ, ಸಾಹಿತ್ಯದ ಕಾರ್ಯಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ನಡೆಸುವು ದರಿಂದ ಕನ್ನಡ ಭಾಷೆಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಚಿನ್ನಕೈವಾರಮಯ್ಯ ಅಭಿಪ್ರಾಯಪಟ್ಟರು. ಪಟ್ಟಣದ ತಾಪಂ ಕಚೇರಿ ಆವರಣದಲ್ಲಿ ರುವ ಕಸಾಪ ಕಚೇರಿಯಲ್ಲಿ ಹುಣ್ಣಿಮೆ ಹಾಡು ಹಾಗು ವರನಟ ಡಾ.ರಾಜಕುಮಾರ್ ಪುಣ್ಯಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಕಾರ್ಯಕ್ರಮ ಪಟ್ಟಣದಲ್ಲಿ ಸೀಮಿತವಾಗದೆ ಗ್ರಾಮೀಣ ಪ್ರದೇಶಗಳಲ್ಲಿ ಹಮ್ಮಿಕೊಳ್ಕುವುದರಿಂದ ಭಾಷೆಯ ಅಭಿವೃದ್ದಿಗೆ ಸಹಕಾರಿಯಾಗುತ್ತದೆ.
ವಿಶೇಷವಾಗಿ ಯುವ ಜನತೆ ಕನ್ನಡ ಭಾಷೆ,ಕಲೆ, ಸಾಹಿತ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಇದೇ ದಿನ ವರನಟ ಡಾ.ರಾಜ್ ಪುಣ್ಯಸ್ಮರಣೆ ಮಾಡುವ ಅವಕಾಶ ಸಿಕ್ಕಿರು ವುದು ಸಂತೋಷದಾಯಕ. ತಮ್ಮ ನಟನೆಯ ಮೂಲಕ ವಿಶೇಷ ವ್ಯಕ್ತಿತ್ವ ರೂಪಿಸಿಕೊಂಡಿದ್ದಲ್ಲದೆ ಗೋಕಾಕ್ ಚಳುವಳಿ ಮೂಲಕ ಕನ್ನಡದ ಅಭಿವೃದ್ಧಿಗೆ ನೀಡಿದ ಕೊಡುಗೆ ಅಪಾರ. ಪ್ರತಿ ಹುಣ್ಣುಮೆ ಕಾರ್ಯಕ್ರಮ ದಲ್ಲಿ ಕನ್ನಡ ಗೀತೆಗಳ ಗಾಯನ, ಕವಿತೆಗಳ ವಾಚನ ವಿಶೇಷ ಅನುಭವ ತಂದು ಕೊಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ಕನ್ನಡ ಗೀತೆಗಳ ಗಾಯನ, ಕವನಗಳನ್ನು ವಾಚನ ಮಾಡ ಲಾಯಿತು. ಕಸಾಪ ನಿಕಟ ಪೂರ್ವ ಅಧ್ಯಕ್ಷ ಡಿ.ಎನ್. ಕೃಷ್ಣಾರೆಡ್ಡಿ, ಗೌ ಕಾರ್ಯದರ್ಶಿ ಶ್ರೀನಿವಾಸ್ ಬಾಣಾಲಪಲ್ಲಿ,ಕೋಶಾಧ್ಯಕ್ಷೆ ಸುಕನ್ಯವಿನಾಯಕ, ಪಿ.ಜಿ.ಶಿವಶಂಕರಾಚಾರಿ, ಅಂಜನಪ್ಪ, ನೂರು ಲ್ಲಾ, ಕನ್ನಡ ಕಲಾ ಸಂಘ ಅಧ್ಯಕ್ಷ ಪಿ.ಎಸ್. ರಾಜೇಶ್, ಡಿ.ಟಿ.ಮುನಿಸ್ವಾಮಿ, ಈಶ್ವರಪ್ಪ, ಶ್ರೀನಿವಾಸ್ ತಂತ್ರಿ, ಚಂದ್ರಶೇಖರ, ವೆಂಕಟೇಶ್, ಜ್ಯೋತಿ, ಡಿ.ಪಾಳ್ಯ ಮೂರ್ತಿ, ಮತ್ತಿತರರು ಉಪಸ್ಥಿತಿ ಇದ್ದರು.