ಕರ್ನಾಟಕ ಬಜೆಟ್​ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಇಪ್ತಿಯಾರ್ ಕೂಟದಲ್ಲಿ ಭಾಗಿಯಾಗಿ ಇಸ್ಲಾಂ ಬಾಂಧವರಿಗೆ ಶುಭ ಕೋರಿದ ಸಂದೀಪ್.ಬಿ.ರೆಡ್ಡಿ

ಇನ್ನು ಸಾಮಾಜಿಕ ಸೇವೆಯೆ ಬೇರೆ, ರಾಜಕಾರಣವೇ ಬೇರೆ, ಯಾವುದೇ ರಾಜಕೀಯ ಲಾಭಕ್ಕಾಗಿ ನಾನು ಸಮಾಜಸೇವೆ ಅಥವಾ ಜನರ ಮೆಚ್ಚುಗೆಗಳಿಸಲು ಮುಂದಾಗುವುದಿಲ್ಲ. ಹಲವಾರು ವರ್ಷ ಗಳಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವೆ. ಸಮುದಾಯಗಳೊಂದಿಗೆ ರಾಜಕೀಯ ಮಾಡಲ್ಲ. ಇನ್ನು ಇಫ್ತಿಯಾರ್ ಕೂಟದ ಆಯೋಜನೆ ಇದೆ ಮೊದಲಲ್ಲ. ನನ್ನ ಸ್ವಗ್ರಾಮ ಪೆರೇಸಂದ್ರ ದಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತಿದೆ

ಸರ್ವ ಸಮುದಾಯಗಳ ಜತೆಗೆ ದೇಶದ ಅಭಿವೃದ್ಧಿಯೆ ಪಕ್ಷದ ಮೂಲ ಉದ್ದೇಶ

ನಗರದ ಮದೀನಾ ಶಾದಿ ಮಹಲ್‌ನಲ್ಲಿ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಸಂದೀಪ್.ಬಿ.ರೆಡ್ಡಿ ಮುಸ್ಲಿಂ ಬಾಂಧವರ ಜೊತೆಗೆ ಆಹಾರ ಸೇವಿಸಿದರು

Profile Ashok Nayak Mar 22, 2025 10:21 PM

ಚಿಕ್ಕಬಳ್ಳಾಪುರ : ಬಿಜೆಪಿ ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ಪಕ್ಷವಲ್ಲ, ಎಲ್ಲರ ನ್ನೂ ಜೊತೆಗೂಡಿಸಿಕೊಂಡು ಸರ್ವರ ಅಭ್ಯುದಯಕ್ಕೆ ಸಂಕಲ್ಪತೊಟ್ಟ ಪಕ್ಷವಾಗಿದೆ ಎಂದು ಭಗತ್‌ ಸಿಂಗ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಹಾಗು ಬಿಜೆಪಿ ಮುಖಂಡ ಸಂದೀಪ್.ಬಿ. ರೆಡ್ಡಿ ತಿಳಿಸಿದರು.

ನಗರದ ಮದೀನಾ ಶಾದಿ ಮಹಲ್‌ನಲ್ಲಿ ತಮ್ಮ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಮುಸ್ಲಿಂ ಬಾಂಧವರ ಜೊತೆಗೆ ಆಹಾರ ಸೇವಿಸಿದರು. ನಂತರ ಮುಸ್ಲಿಂ ಬಾಂಧವರ ವತಿಯಿಂದ ಸನ್ಮಾನ ಸ್ವೀಕರಿಸಿ ಮಾಧ್ಯಮದೊಂದಿಗೆ ಮಾತನಾಡಿ ದರು.

ಇದನ್ನೂ ಓದಿ: Chikkaballapur News: ಮಕ್ಕಳಿಗೆ ಅವರಿಷ್ಟದ ಕ್ಷೇತ್ರದಲ್ಲಿ ಬೆಳೆಯಲು ಬಿಟ್ಟರೆ ಸಮಾಜಕ್ಕೆ ಆಸ್ತಿಯಾಗುತ್ತಾರೆ

ಸರ್ವ ಸಮುದಾಯಗಳ ಜತೆಗೆ ದೇಶದ ಅಭಿವೃದ್ಧಿಯೆ ಪಕ್ಷದ ಮೂಲ ಉದ್ದೇಶವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಅವರ ಜನಪ್ರಿಯ ಘೋಷ ವಾಕ್ಯ ಸಬ್ ಕಾ ಸಾಥ್, ಸಬ್ ಕಾ ವಿಕಾಸ್,ಸಬ್ ಕಾ ವಿಶ್ವಾಸ್ ಆಗಿದೆ.ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಎಲ್ಲ ಸಮುದಾಯದವರನ್ನು ಒಂದಾಗಿ ಕಾಣುವಂತೆ, ನಾವು ಕೂಡ ಎಲ್ಲ ಸಮುದಾಯದವರನ್ನು ಜತೆಗೂಡಿಸಿಕೊಂಡು ಒಂದಾಗಿ ಬಾಳಬೇಕಾಗಿದೆ. ಈಮೂಲಕ ಮುಂದಿನ ಪೀಳಿಗೆಗೆ ನಾವೆಲ್ಲರೂ ಒಂದೇ ಎಂಬ ಸಂದೇಶ ನೀಡಬೇಕು. ಸಹಬಾಳ್ವೆಯಿಂದ ಜೀವನ ಸಾಗಿಸಿ ಸುಂದರವಾದ ಸಮಾಜ ಕಟ್ಟುವ ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ಬಿಜೆಪಿ ಮುಸ್ಲಿಮರ ವಿರುದ್ಧ ಅಲ್ಲ. ದೇಶವನ್ನು ಕಟ್ಟಲು ಅಭಿವೃದ್ಧಿಯತ್ತ ಸಾಗಿಸಲು ಎಲ್ಲ ಸಮು ದಾಯದವರ ಸಹಕಾರ ಅಗತ್ಯ. ವಿಭಿನ್ನ ಸಮುದಾಯಗಳ ಸಂಸ್ಕೃತಿಗಳೇ ಭಾರತದ ಜೀವಾಳ. ಈ ನಿಟ್ಟಿನಲ್ಲಿ ಬಿಜೆಪಿ ಎಲ್ಲರನ್ನು ಸಮಾನವಾಗಿ ಕಾಣುವ ನೀತಿ ಅನುಸರಿಸುತ್ತಿದೆ. ಕೆಲವರು ಬಿಜೆಪಿ ಯನ್ನು ಮುಸ್ಲಿಂ ವಿರೋಧಿ ಎಂದು ಬಿಂಬಿಸಿದ್ದಾರೆ, ಇದು ಸತ್ಯಕ್ಕೆ ದೂರವಾದ ಮಾತು ಎಂದರು.

ಇನ್ನು ಸಾಮಾಜಿಕ ಸೇವೆಯೆ ಬೇರೆ, ರಾಜಕಾರಣವೇ ಬೇರೆ, ಯಾವುದೇ ರಾಜಕೀಯ ಲಾಭಕ್ಕಾಗಿ ನಾನು ಸಮಾಜಸೇವೆ ಅಥವಾ ಜನರ ಮೆಚ್ಚುಗೆಗಳಿಸಲು ಮುಂದಾಗುವುದಿಲ್ಲ. ಹಲವಾರು ವರ್ಷ ಗಳಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿರುವೆ. ಸಮುದಾಯಗಳೊಂದಿಗೆ ರಾಜಕೀಯ ಮಾಡಲ್ಲ. ಇನ್ನು ಇಫ್ತಿಯಾರ್ ಕೂಟದ ಆಯೋಜನೆ ಇದೆ ಮೊದಲಲ್ಲ. ನನ್ನ ಸ್ವಗ್ರಾಮ ಪೆರೇಸಂದ್ರದಲ್ಲಿ ನಿರಂತರವಾಗಿ ಆಯೋಜಿಸಲಾಗುತ್ತಿದೆ. ಸತತವಾಗಿ ಒಂದು ತಿಂಗಳ ಕಾಲ ಮುಸ್ಲಿಂ ಬಾಂಧವರು ಉಪವಾಸ ಆಚರಿಸುತ್ತಿದ್ದು, ದೇಶಕ್ಕೆ ಹಾಗು ಎಲ್ಲ ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಲಿ ಎಂದು ಕೋರಿದರು.
ಈ ಸಂದರ್ಭದಲ್ಲಿ ಆನೆಮಡುಗು ಹರೀಶ್, ಸುಹಾಸ್, ರಘು, ಶಶಿ, ಶ್ರೀಕಾಂತ್, ಯೂನುಸ್, ಸೇರಿದಂತೆ ಭಗತ್‌ಸಿಂಗ್ ಚಾರಿಟಬಲ್ ಟ್ರಸ್ಟ್ ಸದಸ್ಯರುಗಳು, ಮುಸ್ಲಿ ಬಾಂಧವರು ಇದ್ದರು.