ಅಗತ್ಯ ದಾಖಲೆ ಇಲ್ಲದೆ ರಾಜಾರೋಷವಾಗಿ ಓಡಾಡುತ್ತಿರುವ ಆಟೋಗಳಿಗೆ ದಂಡ ಹಾಕುವವರು ಯಾರು?
ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರತಿನಿತ್ಯ ವಾಹನಗಳು ಓಡಾಡು ತ್ತಿರುತ್ತವೆ ಅದರಲ್ಲಿ ಹಲವು ಆಟೋಗಳಿಗೆ ಇನ್ಸೂರೆನ್ಸ್,ಪರ್ಮಿಟ್,ಎಫ್ ಸಿ, ಹಾಗೂ ಅಗತ್ಯ ದಾಖಲೆ ಗಳಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದ್ದರು ಪೊಲೀಸ್ ಇಲಾಖೆ ಮಾತ್ರ ಅವರಿಗೆ ಏನು ಗೊತ್ತಿಲ್ಲ ದಂತೆ ಸೈಲೆಂಟ್ ಆಗಿದ್ದಾರೆ.
ಅಗತ್ಯ ದಾಖಲೆಗಳು ಇಲ್ಲದ ಆಟೋಗಳನ್ನು ಹಿಡಿದು ದಂಡ ಹಾಕಿ ಕ್ರಮ ಜರುಗಿಸಲು ಮುಂದಾಗುತ್ತಾರೋ ಇಲ್ಲವ ಎಂದು ಕಾದು ನೋಡಬೇಕಾಗಿದೆ -
ಚಿಂತಾಮಣಿ: ವಾಹನ ಸವಾರರಿಗೆ ಹೆಲ್ಮೆಟ್ ಧರಿಸುವುದು ಡಿ.೧೨ರಿಂದ ಕಡ್ಡಾಯ ಗೊಳಿಸಲಾಗಿದೆ. ಇದರ ಬೆನ್ನಲೇ ಚಿಂತಾಮಣಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹಲವು ಆಟೋಗಳಿಗೆ ಅಗತ್ಯ ದಾಖಲೆಗಳಲ್ಲಿ ಒಂದು ಇದ್ದರೆ ಮತ್ತೊಂದು ಇಲ್ಲ! ಇದರ ಬಗ್ಗೆ ಪೊಲೀಸ್ ಇಲಾಖೆ ಹಾಗೂ ಸಂಬಂಧ ಪಟ್ಟ ಇಲಾಖೆಗಳು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ.
ವಾಣಿಜ್ಯ ನಗರಿ ಚಿಂತಾಮಣಿಯಲ್ಲಿ ಅಪಾರ ಸಂಖ್ಯೆಯಲ್ಲಿ ಪ್ರತಿನಿತ್ಯ ವಾಹನಗಳು ಓಡಾಡು ತ್ತಿರುತ್ತವೆ ಅದರಲ್ಲಿ ಹಲವು ಆಟೋಗಳಿಗೆ ಇನ್ಸೂರೆನ್ಸ್,ಪರ್ಮಿಟ್,ಎಫ್ ಸಿ, ಹಾಗೂ ಅಗತ್ಯ ದಾಖಲೆ ಗಳಿಲ್ಲದೆ ರಾಜಾರೋಷವಾಗಿ ಓಡಾಡುತ್ತಿದ್ದರು ಪೊಲೀಸ್ ಇಲಾಖೆ ಮಾತ್ರ ಅವರಿಗೆ ಏನು ಗೊತ್ತಿಲ್ಲ ದಂತೆ ಸೈಲೆಂಟ್ ಆಗಿದ್ದಾರೆ.
ಕೆಲ ದಿನಗಳ ಹಿಂದೆ ಪೊಲೀಸ್ ಇಲಾಖೆ ನಗರ ಭಾಗದ ಆಟೋ ಗಳಿಗೆ ಇನ್ಶೂರೆನ್ಸ್,ಎಫ್ ಸಿ, ಪರ್ಮಿಟ್, ಸೇರಿದಂತೆ ಅಗತ್ಯ ದಾಖಲೆಗಳನ್ನು ಸರಿಪಡಿಸಿಕೊಳ್ಳಬೇಕೆಂದು ಎಚ್ಚರಿಕೆ ನೀಡಿದ್ದರು. ಇದಕ್ಕೆ ಕ್ಯಾರೆ ಎನ್ನದ ಆಟೋಗಳು ನಗರ ಭಾಗದಲ್ಲಿ ರಾಜಾರೋಷವಾಗಿ ಓಡಾಡುತ್ತಿವೆ.
ಚಿಂತಾಮಣಿ ನಗರ ಭಾಗದಲ್ಲಿ ಸುಮಾರು ಸಾವಿರಕ್ಕಿಂತ ಹೆಚ್ಚು ಆಟೋಗಳಿದ್ದು ಹಲವು ಆಟೋ ಗಳಿಗೆ ಸುಮಾರು ವರ್ಷಗಳಿಂದ ಇನ್ಶೂರೆನ್ಸ್,ಎಫ್ ಸಿ,ನೇ ಇಲ್ಲದಂತಾಗಿದೆ. ಇಂತಹ ಆಟೋಗಳಿಗೆ ಒಂದು ವೇಳೆ ಅಪಘಾತವಾದರೆ ಏನು ಕಥೆ ಎಂದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಆಟೋಗಳಿಗೆ ಇನ್ಶೂರೆನ್ಸ್,ಎಫ್ ಸಿ,ಹಾಗೂ ಅಗತ್ಯ ದಾಖಲೆಗಳು ಇದ್ದರೆ ಅಪಘಾತವಾದ ಸಂದರ್ಭ ದಲ್ಲಿ ಬಹಳಷ್ಟು ಅನುಕೂಲಕರವಾಗಲಿದೆ.
ಈಗಲಾದರೂ ಸಂಬAಧಪಟ್ಟ ಇಲಾಖೆಯವರು ಅಗತ್ಯ ದಾಖಲೆಗಳು ಇಲ್ಲದ ಆಟೋಗಳನ್ನು ಹಿಡಿದು ದಂಡ ಹಾಕಿ ಕ್ರಮ ಜರುಗಿಸಲು ಮುಂದಾಗುತ್ತಾರೋ ಇಲ್ಲವ ಎಂದು ಕಾದು ನೋಡ ಬೇಕಾಗಿದೆ.