ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಸೋಮಣ್ಣ ಔಟ್‌

Spandana: ‘ಬಿಗ್ ಬಾಸ್ ಕನ್ನಡ ಸೀಸನ್ 12’ ರಲ್ಲಿ ಸ್ಪಂದನಾ ಸೋಮಣ್ಣ ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ. ಈ ಮೊದಲೇ ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಬಿಗ್ ಬಾಸ್ ಮನೆ ಒಳಗಿನ ಸ್ಪರ್ಧಿಗಳು ಕೂಡ ಈ ಕುರಿತು ಮಾತನಾಡಿದ್ದರು. ಈ ವಾರ ಸ್ಪಂದನಾ ಸೋಮಣ್ಣ ನಾಮಿನೇಟ್ ಆಗಿ ಈಗ ಔಟ್‌ ಆಗಿದ್ದಾರೆ.

ಬಿಗ್‌ ಬಾಸ್‌ ಮನೆಯಿಂದ ಸ್ಪಂದನಾ ಸೋಮಣ್ಣ ಔಟ್‌

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Jan 4, 2026 10:35 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12)ರಲ್ಲಿ ಸ್ಪಂದನಾ ಸೋಮಣ್ಣ (Spandana Somanna) ಬಿಗ್‌ ಬಾಸ್‌ ಮನೆಯಿಂದ ಔಟ್‌ ಆಗಿದ್ದಾರೆ. ಈ ಮೊದಲೇ ಎಲಿಮಿನೇಟ್ ಆಗಬೇಕಿತ್ತು ಎಂಬ ಅಭಿಪ್ರಾಯ ಸೋಷಿಯಲ್‌ ಮೀಡಿಯಾದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಬಿಗ್ ಬಾಸ್ ಮನೆ ಒಳಗಿನ ಸ್ಪರ್ಧಿಗಳು ಕೂಡ ಈ ಕುರಿತು ಮಾತನಾಡಿದ್ದರು. ಈ ವಾರ ಸ್ಪಂದನಾ ಸೋಮಣ್ಣ (Spandana Somanna) ನಾಮಿನೇಟ್ ಆಗಿ ಈಗ ಔಟ್‌ ಆಗಿದ್ದಾರೆ.

ವೀಕ್ ಸ್ಪರ್ಧಿ ಎಂಬುದು ಹಲವರ ಅನಿಸಿಕೆ

ಈ ವಾರ 5 ಜನರು ನಾಮಿನೇಟ್ ಆಗಿದ್ದರು. ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ, ಧ್ರುವಂತ್ ಮತ್ತು ಧನುಶ್ ಅವರನ್ನು ನಾಮಿನೇಟ್ ಮಾಡಲಾಗಿತ್ತು. ಇಷ್ಟು ಜನರ ಪೈಕಿ ಸ್ಪಂದನಾ ಅವರೇ ವೀಕ್ ಸ್ಪರ್ಧಿ ಎಂಬುದು ಹಲವರ ಅನಿಸಿಕೆ ಆಗಿತ್ತು.

ಇದನ್ನೂ ಓದಿ: Bigg Boss Kannada 12: ಕಿಚ್ಚನ ಮುಂದೆ ಮೌನವಾಗಿ ಇದ್ದಿದ್ದು ಗಿಲ್ಲಿಯ ತಂತ್ರಗಾರಿಕೆಯೇ? ಕಾವು ಬಿಟ್ಟುಕೊಡಲಿಲ್ಲ ಏಕೆ?

ಸ್ಪಂದನಾ ಸೋಮಣ್ಣ ಅವರು ಮನೆಯಲ್ಲಿ ಅಡುಗೆ ಕೆಲಸ ಮಾಡೋದಿಲ್ಲ, ಟಾಸ್ಕ್‌ ಆಡೋದಿಲ್ಲ, ಸ್ಟ್ಯಾಂಡ್‌ ತಗೊಳೋದಿಲ್ಲ, ಒಟ್ಟಿನಲ್ಲಿ ಕಾಣಿಸಿಕೊಳ್ಳೋದಿಲ್ಲ. ಆದರೂ ಅವರು ಹೇಗೆ ಉಳಿದುಕೊಂಡರು ಎನ್ನೋದು ಮನೆಯ ಸದಸ್ಯರ ಅಭಿಪ್ರಾಯವೂ ಆಗಿತ್ತು. ಅಂದಹಾಗೆ ಕಾವ್ಯ ಶೈವ, ಧನುಷ್‌ ಗೌಡ ಕೂಡ ಸ್ಪಂದನಾ ಸೋಮಣ್ಣ ಉಳಿದುಕೊಂಡಿದ್ದರ ಬಗ್ಗೆ ಕಾಮಿಡಿ ಮಾಡಿದ್ದರು. ಅದನ್ನು ಕೇಳಿ ಸ್ಪಂದನಾ ಅವರು ಕೂಡ ನಕ್ಕಿದ್ದರು.

ಸ್ಪಂದನಾಗಿಂತ ಮಾಳು ಬೆಸ್ಟ್

ಕಳೆದ ವಾರ ಮಾಳು ಹಾಗೂ ಸ್ಪಂದನಾ ನಾಮಿನೇಷನ್ ಲಿಸ್ಟ್​​ನಲ್ಲಿ ಇದ್ದರು. ಈ ಪೈಕಿ ಇಬ್ಬರನ್ನೂ ಕಾರು ಹತ್ತಿಸಿ ಕಳುಹಿಸಲಾಗಿತ್ತು, ಕೊನೆಯಲ್ಲಿ ಸ್ಪಂದನಾ ಉಳಿದುಕೊಂಡಿದ್ದರು. ಬಿಗ್ ಬಾಸ್ ಮನೆಗೆ ಬರುತ್ತಿದ್ದಂತೆ ಕಣ್ಣೀರು ಹಾಕಿದ್ದರು. ಮೊದಲು ಸ್ಪಂದನಾ ಯಾರ ಜೊತೆಯೂ ಜಗಳ ಮಾಡಿದವರಲ್ಲ. ಆದರೆ, ‘ಸ್ಪಂದನಾಗಿಂತ ಮಾಳು ಬೆಸ್ಟ್’ ಎಂದು ಹೇಳಿದ ವಿಷಯಕ್ಕೆ ಸಂಬಂಧಿಸಿ ಅವರು ರಕ್ಷಿತಾ ಶೆಟ್ಟಿ ಜೊತೆ ಜಗಳ ಮಾಡಿದ್ದರು. ಈ ಮೂಲಕ ಮನೆಯಲ್ಲಿ ಹೈಲೈಟ್ ಆಗಿದ್ದರು.

ನಟಿ ಸ್ಪಂದನಾ ಸೋಮಣ್ಣ ಮೂಲತಃ ಮೈಸೂರಿನ ಹುಡುಗಿ.ಕನ್ನಡದ ‘ದಿಲ್‌ ಖುಷ್’ ಹಾಗೂ ‘ಮರೀಚಿ’ ಸಿನಿಮಾಗಳಲ್ಲಿ ಸ್ಪಂದನಾ ಸೋಮಣ್ಣ ಮಿಂಚಿದ್ದಾರೆ.‘ಕರಿಮಣಿ’ ಧಾರಾವಾಹಿ ನಾಯಕಿಯಾಗಿ ಮಿಂಚಿದವರು.

ಇದನ್ನೂ ಓದಿ: Bigg Boss Kannada 12: ಮತ್ತೆ ʻಬಿಗ್‌ ಬಾಸ್‌ʼ ವೇದಿಕೆಗೆ ಬಂದ ಮಾಳು ನಿಪನಾಳ್‌ಗೆ ಖಡಕ್‌ ಪ್ರಶ್ನೆ ಕೇಳಿದ ʻಕಿಚ್ಚʼ ಸುದೀಪ್‌!

ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಫಿನಾಲೆ ಬರಲಿದೆ. ಯಾರು ಫಿನಾಲೆಗೆ ಹೋಗುತ್ತಾರೆ? ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಗಿಲ್ಲಿ ನಟ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ಅವರೇ ಗೆಲ್ಲುತ್ತಾರೆ ಎಂಬ ಅಭಿಪ್ರಾಯ ವೀಕ್ಷಕರಿಂದ ಕೇಳಿಬರುತ್ತಿದೆ.