ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹುಟ್ಟುಹಬ್ಬದಂದೇ ಗುಡ್‌ ನ್ಯೂಸ್‌ ನೀಡಿದ‌ ʻಕಿಚ್ಚʼ ಸುದೀಪ್‌ ಪತ್ನಿ ಪ್ರಿಯಾ; ಪ್ರತಿಭಾವಂತರಿಗೆ ಇಲ್ಲಿದೆ ಸುವರ್ಣಾವಕಾಶ

Priya Sudeep Birthday: ನಿರ್ಮಾಪಕಿ ಪ್ರಿಯಾ ಸುದೀಪ್ ತಮ್ಮ ಹುಟ್ಟುಹಬ್ಬದ ಅಂಗವಾಗಿ 'ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ' (Supryanvi Pictures Studio) ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಈ ಸಂಸ್ಥೆಯ ಮೂಲಕ ಕೇವಲ ಸ್ಟಾರ್ ಸಿನಿಮಾಗಳಲ್ಲದೆ, ಪ್ರಭಾವಶಾಲಿ ಕಥೆಗಳು ಮತ್ತು ಹೊಸ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

ಹುಟ್ಟುಹಬ್ಬದಂದೇ ಹೊಸ ಸಾಹಸಕ್ಕೆ ಕೈಹಾಕಿದ ಪ್ರಿಯಾ ಸುದೀಪ್

-

Avinash GR
Avinash GR Jan 6, 2026 5:53 PM

ಸ್ಯಾಂಡಲ್‌ವುಡ್‌ ಬಾದ್‌ಷಾ ಕಿಚ್ಚ ಸುದೀಪ್‌ ಅವರ ಪತ್ನಿ ಪ್ರಿಯಾ ಅವರಿಗೆ ಇಂದು (ಜ.6) ಹುಟ್ಟುಹಬ್ಬದ ಸಂಭ್ರಮ. ವಿಶೇಷವೆಂದರೆ, ಇದೇ ದಿನದಂದು ಅವರು ಹೊಸದೊಂದು ಹೆಜ್ಜೆ ಇಟ್ಟಿದ್ದಾರೆ. ಈಗಾಗಲೇ ನಿರ್ಮಾಪಕಿ ಮತ್ತು ಸಿನಿಮಾ ವಿತರಕಿಯಾಗಿರುವ ಪ್ರಿಯಾ ಸುದೀಪ್ ಅವರು ಇದೀಗ ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕೊಡಲು ಮುಂದಾಗಿದ್ದಾರೆ. ತಮ್ಮ ಹುಟ್ಟುಹಬ್ಬದ ದಿನವೇ ಈ ಬಗ್ಗೆ ಅವರು ಘೋಷಣೆ ಮಾಡಿದ್ದಾರೆ.

ನಿರ್ಮಾಣ ಮತ್ತು ವಿತರಣೆಯಲ್ಲಿ ಸಕ್ರಿಯ

ಹೌದು, ಸುಪ್ರಿಯಾನ್ವಿ ಸ್ಟುಡಿಯೋ ಮೂಲಕ ಪ್ರಿಯಾ ಸುದೀಪ್ ಅವರು ಸಿನಿಮಾ ನಿರ್ಮಾಣ ಮಾಡುತ್ತಿರುವುದು ಗೊತ್ತೇ ಇದೆ. ಸುದೀಪ್‌ ಅವರ ಅಕ್ಕನ ಮಗ ಸಂಚಿತ್‌ ಸಂಜೀವ್‌ ಅವರ ಚೊಚ್ಚಲ ಸಿನಿಮಾ ʻಮ್ಯಾಂಗೋ ಪಚ್ಚʼ ನಿರ್ಮಾಣವಾಗುತ್ತಿರುವುದು ಇದೇ ಬ್ಯಾನರ್‌ ಮೂಲಕ. ಇದರ ಜೊತೆಗೆ ಇತ್ತೀಚೆಗೆ ತೆರೆಕಂಡ ಸುದೀಪ್‌ ಅವರ ಮಾರ್ಕ್‌ ಚಿತ್ರದ ವಿತರಣೆ ಮಾಡುವ ಮೂಲಕ ವಿತರಣೆ ಜವಾಬ್ದಾರಿಯನ್ನು ಕೂಡ ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಇದೀಗ ತಮ್ಮದೇ ಸುಪ್ರಿಯಾನ್ವಿ‌ ಬ್ಯಾನರ್‌ ಮೂಲಕ ಹೊಸ ಪ್ರತಿಭೆಗಳಿಗೆ ವೇದಿಕೆ‌ ಕಲ್ಪಿಸಲು ತೀರ್ಮಾನ ಮಾಡಿದ್ದಾರೆ.

Priya Sudeep: ನಟ ಸುದೀಪ್ ಬರ್ತ್‌ಡೇಗೆ ಮಹತ್ತರ ಕಾರ್ಯ ಮಾಡಿದ ಪತ್ನಿ ಪ್ರಿಯಾ; ಅಂಗ-ಅಂಗಾಂಶ ದಾನ

ಪ್ರೇಕ್ಷಕರ ಪ್ರೋತ್ಸಾಹವನ್ನು ಕೋರುತ್ತೇವೆ

ಪ್ರಿಯಾ ಸುದೀಪ್ ಹುಟ್ಟುಹಬ್ಬದಂದು ಹೊಸಬರಿಗೆ ಅವಕಾಶ ನೀಡುವ ಬಗ್ಗೆ ಸುಪ್ರಿಯಾನ್ವಿ‌ ನಿರ್ಮಾಣ‌ ಸಂಸ್ಥೆಯ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪ್ರಿಯಾ ಸುದೀಪ್, "ಹೆಮ್ಮೆ ಮತ್ತು ಉತ್ಸಾಹದಿಂದ, ನಾವು ತಾಯಿ ಭದ್ರಕಾಳಿಯ ಪವಿತ್ರ ಆಶೀರ್ವಾದ ಮತ್ತು ನಮ್ಮ ಮೌಲ್ಯಯುತ ಪ್ರೇಕ್ಷಕರ ಆತ್ಮೀಯ ಪ್ರೋತ್ಸಾಹವನ್ನು ಕೋರುತ್ತೇವೆ. ನಾವು ಸುಪ್ರಿಯಾನ್ವಿ ಪಿಕ್ಚರ್ಸ್ ಸ್ಟುಡಿಯೋ ಮೋಷನ್ ಪೋಸ್ಟರ್ ಅನ್ನು ಪ್ರಸ್ತುತಪಡಿಸುತ್ತೇವೆ. ಈ ಕ್ಷಣವು ಬಲವಾದ ವಿಷಯ, ಹೊಸ ಧ್ವನಿಗಳು ಮತ್ತು ಪ್ರಭಾವಶಾಲಿ ಸಿನೆಮಾಗಳಿಗೆ ಮೀಸಲಾಗಿರುವ ಸೃಜನಾತ್ಮಕ ವೇದಿಕೆಯ ಪ್ರಾರಂಭವನ್ನು ಸೂಚಿಸುತ್ತದೆ" ಎಂದು ಹೇಳಿದ್ದಾರೆ.

"ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಅರ್ಥಪೂರ್ಣ ಸಿನೆಮಾ ಮತ್ತು ಶಕ್ತಿಯುತ ಕಥೆಗಳ ಭರವಸೆಯೊಂದಿಗೆ ಮುಂದುವರಿಯುತ್ತದೆ. ಹೊಸ ಪ್ರಯಾಣ ಇಂದು ಪ್ರಾರಂಭವಾಗುತ್ತದೆ - ಮುಂದಿನದಕ್ಕಾಗಿ ಸಿದ್ಧ ಆಗಿರಿ" ಎಂದು ಪ್ರಿಯಾ ಸುದೀಪ್‌ ಅವರು ಹೇಳಿದ್ದಾರೆ.

ಸುಪ್ರಿಯಾನ್ವಿ ಪ್ರೊಡಕ್ಷನ್ ನಡಿ‌ ಹೊಸ ಹೊಸ ಕಥೆಗಳಿಗೆ, ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕಲ್ಪಿಸಲು ಪ್ರಿಯಾ ಸುದೀಪ್ ಮುಂದಾಗಿದ್ದಾರೆ. ವಿಭಿನ್ನ ಬಗೆಯ ಕಂಟೆಂಟ್ ಆಧಾರಿತ ಸಿನಿಮಾಗಳು ಸುಪ್ರಿಯಾನ್ವಿ ಪ್ರೊಡಕ್ಷನ್ ನಡಿ ಮೂಡಿಬರಲಿದೆ.