Bhagya Lakshmi Serial: ಕೊನೆಗೂ ನಿಂತೇ ಹೋಯಿತು ಪೂಜಾ-ಕಿಶನ್ ಮದುವೆ: ನಿಲ್ಲಿಸಿದ್ದು ಸ್ವತಃ ಭಾಗ್ಯ
ಎಲ್ಲ ಅಡೆತಡೆ ದಾಟಿ ಭಾಗ್ಯಾ-ಕುಸುಮಾ ಹೇಗಾದರು ಮಾಡಿ ಪೂಜಾ ಮದುವೆ ಮಾಡಿಸಿಯೇ ಬಿಡಬೇಕೆಂದು ಪಣತೊಟ್ಟಿದ್ದರು. ಆದರೆ, ಕೊನೆಯಲ್ಲಿ ಸ್ವತಃ ಭಾಗ್ಯಾನೇ ಈ ಮದುವೆ ನಿಲ್ಲಿಸಿದ್ದಾಳೆ. ಇದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪೂಜಾ-ಕಿಶನ್ನ ಮದುವೆ ಮಾಡಿಸಲು ಭಾಗ್ಯ ತನ್ನೆಲ್ಲ ಶಕ್ತಿ ಮೀರಿ ಪ್ರಯತ್ನಿಸಿದ್ದಳು.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯಾ ತಂಗಿ ಪೂಜಾ ಕಲ್ಯಾಣೋತ್ಸವ ಭರ್ಜರಿ ಆಗಿ ನಡೆಯುತ್ತಿತ್ತು. ಆದರೀಗ ಈ ಎಲ್ಲ ಸಂಭ್ರಮ ದಿಢೀರ್ ನಿಂತು ಹೋಗಿದೆ. ಪೂಜಾ-ಕಿಶನ್ ಮದುವೆ ಸಮಾರಂಭ ಕ್ಯಾನ್ಸಲ್ ಆಗಿದೆ. ಈ ಮದುವೆ ನಡೆಯ ಬಾರದು ಎಂದು ಅನೇಕರು ಅಡ್ಡಗಾಲು ಹಾಕಿದ್ದರು. ಈ ಮದುವೆ ನಿಲ್ಲಿಸಲು ಭಾಗ್ಯ ಮನೆಯವರಿಗೆ ಬಂದ ಸಂಕಷ್ಟ ಒಂದೆರಡಲ್ಲ. ಮೀನಾಕ್ಷಿ ಹಾಗೂ ಕನ್ನಿಕಾ ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ, ಭಾಗ್ಯ ಪತಿ ತಾಂಡವ್ ಕೂಡ ಹಾಲ್ಗೆ ಬಂದು ಮದುವೆ ನಿಲ್ಲಿಸಲು ಮುಂದಾಗಿದ್ದ.
ಆದರೆ, ಎಲ್ಲ ಅಡೆತಡೆ ದಾಟಿ ಭಾಗ್ಯಾ-ಕುಸುಮಾ ಹೇಗಾದರು ಮಾಡಿ ಪೂಜಾ ಮದುವೆ ಮಾಡಿಸಿಯೇ ಬಿಡಬೇಕೆಂದು ಪಣತೊಟ್ಟಿದ್ದರು. ಆದರೆ, ಕೊನೆಯಲ್ಲಿ ಸ್ವತಃ ಭಾಗ್ಯಾನೇ ಈ ಮದುವೆ ನಿಲ್ಲಿಸಿದ್ದಾಳೆ. ಇದು ವೀಕ್ಷಕರಿಗೆ ಅಚ್ಚರಿ ಮೂಡಿಸಿದೆ. ಪೂಜಾ-ಕಿಶನ್ನ ಮದುವೆ ಮಾಡಿಸಲು ಭಾಗ್ಯ ತನ್ನೆಲ್ಲ ಶಕ್ತಿ ಮೀರಿ ಪ್ರಯತ್ನಿಸಿದ್ದಳು. ಆದರೆ, ಸ್ವತಃ ಆಕೆಯೇ ಮದುವೆ ನಿಲ್ಲಿಸುವಂತದ್ದು ಏನಾಗಿತ್ತು ಎಂಬುದು ವೀಕ್ಷಕರ ಮನದಲ್ಲಿ ಮೂಡಿದೆ.
ಮೊದಲಿಗೆ ಈ ಮದುವೆ ನಿಲ್ಲಿಸಲು ಆದೀಶ್ವರ್ ಕಾಮತ್-ಮೀನಾಕ್ಷಿ ಹಾಗೂ ಕನ್ನಿಕಾ ಪ್ಲ್ಯಾನ್ ಮಾಡಿದ್ದರು. ಆದರೆ, ಆದೀಗೆ ಭಾಗ್ಯ ಮನೆಯವರು ಒಳ್ಳೆಯವರು ಎಂದು ಕೊಂಚ ಕೊಂಚನೇ ಮನವರಿಕೆ ಆಗಲು ಶುರುವಾಗಿದೆ. ಆದರೆ, ಕನ್ನಿಕಾ-ಮೀನಾಕ್ಷಿ ಭಾಗ್ಯ ಮನೆಯವರ ಮೇಲೆ ಒತ್ತಡ ಹಾಕಿ ಮದುವೆ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಿರುವಾಗ ತಾಂಡವ್ ಕೂಡ ಮದುವೆ ಹಾಲ್ಗೆ ಬಂದು ಬಂದು ರಾಮ್ದಾಸ್ ಬಳಿ, ಭಾಗ್ಯ ಸರಿ ಇಲ್ಲ.. ಆಕೆ ನನ್ನ ಲೈಫ್ ಅನ್ನೇ ಹಾಳು ಮಾಡಿದಳು.. ಆಕೆಯಿಂದಲೇ ನಾನು ಇಂದು ಈ ಪರಿಸ್ಥಿತಿಯಲ್ಲಿದ್ದೇನೆ.. ನನ್ನ ಅಪ್ಪ-ಅಮ್ಮನನ್ನು ನನ್ನಿಂದ ದೂರು ಮಾಡಿದ ಮನೆಹಾಳಿ ಆಕೆ.. ಕಿಶನ್ ಜೊತೆ ಪೂಜಾನ ಮದುವೆ ಮಾಡಿಸಿದ್ರೆ ನಿಮ್ಮ ಕುಟುಂಬ ಒಡೆಯೋದು ಗ್ಯಾರೆಂಟಿ ಎಂದು ಹೇಳಿದ್ದಾನೆ.
ಇದನ್ನೆಲ್ಲ ಕೇಳಿದ ರಾಮ್ದಾಸ್ ಕಾಮತ್ ಭಾಗ್ಯ ಎಷ್ಟು ಒಳ್ಳೆಯ ಗುಣದವಳು ಅಂತ ನಿನಗಿಂತ ಚೆನ್ನಾಗಿ ನನಗೆ ಗೊತ್ತು ಎಂದು ತಾಂಡವ್ನ ಕೆನ್ನೆಗೆ ಬಾರಿಸಿದ್ದಲ್ಲದೆ ಸೆಕ್ಯುರಿಟಿ ಅವರನ್ನ ಕರೆದು ತಾಂಡವ್ನನ್ನು ಎಳೆದುಕೊಂಡು ಹೋಗಿ ಹೊರದಬ್ಬಿದ್ದಾರೆ. ಮೀನಾಕ್ಷಿ-ಕನ್ನಿಕಾ ಕೂಡ ಮತ್ತೊಮ್ಮೆ ಈ ಮದುವೆ ಮಾಡೋದು ಬೇಡ ಎಂದು ಒತ್ತಿ ಒತ್ತಿ ಹೇಳುತ್ತಾರೆ. ಆದರೆ, ಈ ಎಲ್ಲ ಘಟನೆ ಭಾಗ್ಯಾಗೆ ತುಂಬಾನೇ ಬೇಸರ ತರಿಸಿದೆ. ಈ ಮದುವೆ ನಿಲ್ಲಿಸಲು ಅನೇಕರು ಪ್ರಯತ್ನಿಸುತ್ತಿದ್ದಾರೆ. ಇಷ್ಟು ಜನರ ವಿರೋಧ ಕಟ್ಟಿಕೊಂಡು ಪೂಜಾನ ಆ ಮನೆಗೆ ಸೊಸೆಯಾಗಿ ಕಳುಹಿಸಿದರೆ ಆಕೆ ಖುಷಿ ಆಗಿ ಇರಲು ಸಾಧ್ಯವೇ ಎಂಬ ಪ್ರಶ್ನೆ ಭಾಗ್ಯಾಗೆ ಮೂಡುತ್ತದೆ.
ಹೀಗಾಗಿ ಇನ್ನೇನು ಪೂಜಾ ಮಂಟಪಕ್ಕೆ ಬಂದು ಹಸೆಮಣೆ ಮೇಲೆ ಕೂರಬೇಕು ಎನ್ನುವಷ್ಟರಲ್ಲಿ ಭಾಗ್ಯ ಬಂದು, ಪೂಜಾ ನೀನು ಹಸೆಮಣೆ ಮೇಲೆ ಕೂರೋದು ಬೇಡ.. ಪೂಜಾ ಈ ಮದುವೆ ಆಗುತ್ತಿಲ್ಲ ಅಷ್ಟೆ ಎಂದು ಜೋರಾಗಿ ಕಿರುಚಿ ಹೇಳಿದ್ದಾಳೆ. ಅಷ್ಟೇ ಅಲ್ಲದೆ ಪೂಜಾ, ಕುಸುಮಾ ಹಾಗೂ ಮನೆಯವರನ್ನೆಲ್ಲ ಕರೆದುಕೊಂಡು ಹಾಲ್ನಿಂದ ಹೊರಡಲು ಭಾಗ್ಯ ಮುಂದಾಗಿದ್ದಾಳೆ. ಈ ಮೂಲಕ ಸ್ವತಃ ಭಾಗ್ಯಾನೇ ಈ ಮದುವೆ ಮುರಿದಿದ್ದಾಳೆ. ಅತ್ತ ಮೀನಾಕ್ಷಿ ಹಾಗೂ ಕನ್ನಿಕಾ ಖುಷಿಯಲ್ಲಿ ನಗುತ್ತಿದ್ದಾರೆ.
ಆದರೆ, ಅತ್ತ ಆದೀಶ್ವರ್ ಕಾಮತ್ಗೆ ಇದನ್ನೆಲ್ಲ ಕಂಡು ಆಘಾತವಾಗುತ್ತದೆ. ಭಾಗ್ಯ ಮನೆಯವರಿಗೆ ದುಡ್ಡು ಮುಖ್ಯ ಅಲ್ಲ ಎಂಬ ಅರಿವು ಆದೀಗೆ ಬಮದಿದೆ. ‘‘ಭಾಗ್ಯಾನ ಮೇಲೆ ಅನುಮಾನ ಪಟ್ಟು ನಾನು ತಪ್ಪು ಮಾಡಿದೆ.. ನನ್ನ ಜೀವನದಲ್ಲಿ ಆಗಿರುವ ಕಹಿ ಅನುಭವದಿಂದ ಇಂತಹ ಸಂಸ್ಕಾರವಂತ ಕುಟುಬಂದ ಮೇಲೆ ಅನುಮಾನ ಪಟ್ಟೆ.. ಭಾಗ್ಯಾಳಿಗೆ ದುಡ್ಡೇ ಮುಖ್ಯ ಅನ್ನೋದಾಗಿದ್ರೆ ತನ್ನ ತಂಗಿಗೆ ಎಷ್ಟೇ ಕಷ್ಟ ಆದ್ರೂ ಪರವಾಗಿಲ್ಲ ರಾಮ್ದಾಸ್ ಮನೆಯ ಸೊಸೆಯನ್ನಾಗಿ ಮಾಡ್ತಾ ಇದ್ಳು.. ಆದರೆ ಭಾಗ್ಯನಿಗೆ ತನ್ನ ತಂಗಿಯ ಖುಷಿ-ಸಂತೋಷ ಮುಖ್ಯ.. ಅದಕ್ಕೆ ನಾವು ಯಾರೂ ಒಪ್ಪದಿರುವ ಈ ಮದುವೇನಾ ನಿಲ್ಲಿಸಲು ಹೊರಟಿದ್ದಾಳೆ.. ಈ ಮದುವೆ ನಡೆಯಬೇಕು.. ಈಗಲೂ ನಾನು ಸುಮ್ಮನಿದ್ರೆ ಭಾಗ್ಯಾಗೆ, ಕಿಶನ್ಗೆ ಪೂಜಾಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ.. ಹಾಗೆ ಆಗಲು ಬಿಡಬಾರದು’’ ಎಂದು ಅಂದುಕೊಂಡಿದ್ದಾನೆ.
ಸದ್ಯ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ -ಕಿಶನ್ ಕಲ್ಯಾಣೋತ್ಸವ ರೋಚಕತೆ ಸೃಷ್ಟಿಸಿದೆ. ಅನೇಕರ ವಿರೋಧ ಇರುವ ಕಾರಣ ಭಾಗ್ಯ ಈ ಮದುವೆ ಬೇಡ ಎಂದು ಹೇಳುತ್ತಿದ್ದರೆ ಅತ್ತ ಆದೀಶ್ವರ್ಗೆ ತಪ್ಪಿನ ಅರಿವಾಗಿ ಮದುವೆ ನಡೆಯಬೇಕು ಎಂದಿದ್ದಾನೆ. ಹೀಗಾಗಿ ಮುಂದಿನ ಎಪಿಸೋಡ್ನಲ್ಲಿ ಏನಾಗಬಹುದು ಎಂಬುದು ಕುತೂಹಲ ಕೆರಳಿಸಿದೆ.
Bhagya Lakshmi Serial: ಸುಷ್ಮಾ ಕೆ ರಾವ್ ಭಾಗ್ಯಲಕ್ಷ್ಮೀ ಸೀರಿಯಲ್ ಒಪ್ಪಿಕೊಂಡಿದ್ದು ಈ ಕಾರಣಕ್ಕಂತೆ