ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಸುಷ್ಮಾ ಕೆ ರಾವ್ ಭಾಗ್ಯಲಕ್ಷ್ಮೀ ಸೀರಿಯಲ್ ಒಪ್ಪಿಕೊಂಡಿದ್ದು ಈ ಕಾರಣಕ್ಕಂತೆ

ಭಾಗ್ಯಾಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಾ ತಂಗಿ ಪೂಜಾಳ ಮದುವೆ ಎಪಿಸೋಡ್ ನಡೆಯುತ್ತಿದೆ. ಈ ಮದುವೆ ನಿಲ್ಲಿಸಲು ಭಾಗ್ಯಾಳ ವಿರೋಧಿಗಳು ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ಮೆಟ್ಟಿನಿಂತು ಮದುವೆ ಮಾಡಿಸಲು ಭಾಗ್ಯ ಮುಂದಾಗಿದ್ದಾಳೆ. ಇದರ ಸುಷ್ಮಾ ತಾವು ಭಾಗ್ಯಲಕ್ಷ್ಮೀ ಧಾರಾವಾಹಿ ಒಪ್ಪಿಕೊಂಡಿದ್ದಕ್ಕೆ ಕಾರಣ ವಿವರಿಸಿದ್ದಾರೆ.

ಸುಷ್ಮಾ ಭಾಗ್ಯಲಕ್ಷ್ಮೀ ಒಪ್ಪಿಕೊಂಡಿದ್ದು ಈ ಕಾರಣಕ್ಕಂತೆ

Sushma K Rao

Profile Vinay Bhat Jul 17, 2025 7:49 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಭಾಗ್ಯ ಲಕ್ಷ್ಮೀ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿರುವ ನಾಯಕಿ ಸುಷ್ಮಾ ಕೆ ರಾವ್ (Sushma K Rao) ಅವರಿಗೆ ದೊಡ್ಡ ಅಭಿಮಾನಿ ಬಳಗವಿದೆ. ಧಾರಾವಾಹಿಯಲ್ಲಿ ಇವರು ಮಾಡುತ್ತಿರುವ ಪಾತ್ರ ಅನೇಕ ಹೆಣ್ಣು ಮಕ್ಕಳಿಗೆ ಸ್ಪೂರ್ತಿಯಾಗಿದೆ. ಗಂಡ ಮೋಸ ಮಾಡಿ ಬೇರೊಬ್ಬಳ ಜೊತೆ ಇದ್ದರೂ ಎಷ್ಟೇ ಕಷ್ಟ ಕೊಟ್ರು ಜಗ್ಗದೇ ಮಕ್ಕಳು, ಅತ್ತೆ ಮಾವನ ಜೊತೆ ನಿಂತು ಬದುಕನ್ನು ದಿಟ್ಟವಾಗಿ ಎದುರಿಸುತ್ತಿದ್ದಾಳೆ ಭಾಗ್ಯ. ಇದಕ್ಕಾಗಿಯೆ ಟಾಪ್​ ಲಿಸ್ಟ್​ನಲ್ಲಿ ಭಾಗ್ಯ ಲಕ್ಷ್ಮೀ ಸ್ಥಾನ ಪಡೆದುಕೊಂಡು ಮುನ್ನುಗುತ್ತಿದೆ.

ಸದ್ಯ ಭಾಗ್ಯಾಲಕ್ಷ್ಮೀ ಧಾರಾವಾಹಿಯಲ್ಲಿ ಭಾಗ್ಯಾ ತಂಗಿ ಪೂಜಾಳ ಮದುವೆ ಎಪಿಸೋಡ್ ನಡೆಯುತ್ತಿದೆ. ಈ ಮದುವೆ ನಿಲ್ಲಿಸಲು ಭಾಗ್ಯಾಳ ವಿರೋಧಿಗಳು ಎಷ್ಟೇ ಪ್ರಯತ್ನ ಪಟ್ಟರೂ ಅದನ್ನು ಮೆಟ್ಟಿನಿಂತು ಮದುವೆ ಮಾಡಿಸಲು ಭಾಗ್ಯ ಮುಂದಾಗಿದ್ದಾಳೆ. ಇದರ ಮಧ್ಯೆ ಭಾಗ್ಯ ಅಲಿಯಾಸ್ ಸುಷ್ಮಾ ಕೆ ರಾವ್ ಖಾಸಗಿ ವೆಬ್​ಸೈಟ್ ಒಂದಕ್ಕೆ ಸಂದರ್ಶನ ನೀಡಿದ್ದು, ಇದರಲ್ಲಿ ತಾವು ಭಾಗ್ಯಲಕ್ಷ್ಮೀ ಧಾರಾವಾಹಿ ಒಪ್ಪಿಕೊಂಡಿದ್ದಕ್ಕೆ ಕಾರಣ ವಿವರಿಸಿದ್ದಾರೆ.

‘‘ಭಾಗ್ಯಲಕ್ಷ್ಮಿ ಧಾರಾವಾಹಿ ಆಫರ್ ನನಗೆ ಬಂದಾಗ ಆರಂಭದಲ್ಲಿ ಒಪ್ಪಲಿಲ್ಲ. ಸುಮಾರು ಎಂಟು ತಿಂಗಳು ನಾನು ಮಾಡಲ್ಲ ಮಾಡಲ್ಲ ಅಂತ ಹೇಳುತ್ತಿದ್ದೆ. ಸೀರಿಯಲ್‌ ಕಮಿಟ್‌ಮೆಂಟ್‌ ತುಂಬಾ ಕಷ್ಟ. ಒಂದು ಸಲ ಕಮಿಟ್‌ ಆದ್ರೆ ಹೊರಗೆ ಬರೋದಕ್ಕೆ ಆಗಲ್ಲ. ನಾನು ಮಾಡಿರುವ ಅಷ್ಟು ಧಾರಾವಾಹಿಗಳು ಮುಗಿಯುವವರೆಗೂ, ಕೊನೆವರೆಗೂ ನಾನು ಇದ್ದೆ. ಗುಪ್ತಗಾಮಿನಿ ಧಾರಾವಾಹಿಯಂತೂ 7 ವರ್ಷಕ್ಕಿಂತ ಹೆಚ್ಚು ಕಾಲ ಪ್ರಸಾರವಾಯಿತು. ಅಷ್ಟು ದಿನಗಳವರೆಗೂ ನಾನು ಆ ಧಾರಾವಾಹಿಯಲ್ಲಿದ್ದೆ. ನಾವು ಮಾಡುವ ಕೆಲಸ ಕೊನೆವರೆಗೂ ಇರಬೇಕು ಅನ್ನೋ ಮನಸ್ಥಿತಿ ನನ್ನದು. ಆದರೆ ಈಗಲೂ ನನಗೆ ಧಾರಾವಾಹಿಗಳನ್ನು ಮಾಡಬೇಕು ಅಂತಂದ್ರೆ ಭಯ’’ ಎಂದಿದ್ದಾರೆ.

‘‘ಈ ಧಾರಾವಾಹಿಯಲ್ಲಿ ಅತ್ತೆ-ಸೊಸೆ ಸಿಕ್ಕಾಪಟ್ಟೆ ಕ್ಲೋಸ್‌ ಇರ್ತೀರಾ. ಅತ್ತೆಯೇ ಸೊಸೆಗೆ ಸಪೋರ್ಟ್‌ ಆಗಿ ನಿಲ್ತಾರೆ ಅನ್ನೋ ಲೈನ್‌ ನನಗೆ ಇಷ್ಟ ಆಯ್ತು. ಈ ಪಾಯಿಂಟ್‌ಗೆ ನಾನು ಸೋಲ್ಡ್‌ ಔಟ್‌ ಆಗಿಬಿಟ್ಟೆ. ಸಾಮಾನ್ಯವಾಗಿ ಎಲ್ಲ ಕಥೆಗಳಲ್ಲಿಯೂ ಅತ್ತೆ-ಸೊಸೆ ಜಗಳ. ಅತ್ತೆಗೆ ಸೊಸೆಯನ್ನ ಕಂಡ್ರೆ ಆಗಲ್ಲ, ಸೊಸೆಗೆ ಅತ್ತೆಯನ್ನು ಕಂಡ್ರೆ ಆಗಲ್ಲ ಅಂತ ತೋರಿಸುವಾಗ, ಅತ್ತೆನೇ ಸೊಸೆಗೆ ಸಪೋರ್ಟ್‌ ಆಗಿ ನಿಲ್ತಾರೆ ಅಂತ ಹೇಳಿದ ಪಾಯಿಂಟ್‌ಗೆ ನಾನು ಇಷ್ಟವಾಯಿತು, ಅದಕ್ಕೆ ಇಪ್ಪಿಕೊಂಡೆ ಎಂದು ಸುಷ್ಮಾ ಹೇಳಿದ್ದಾರೆ.

ಕಲರ್ಸ್-ಝೀ ಮಧ್ಯೆ ಮಹಾಯುದ್ಧ: ಬಿಗ್ ಬಾಸ್​ಗೆ ಟಕ್ಕರ್ ಕೊಡಲು ಶುರುವಾಗುತ್ತಿದೆ ಪ್ಯಾಟೆ ಹುಡು ಹುಡುಗೀರ್ ಹಳ್ಳಿ ಲೈಫು

ಸುಷ್ಮಾ ಅವರು ಮೂಲತಃ ಚಿಕ್ಕಮಗಳೂರಿನ ಕೊಪ್ಪದವರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಬಿಎಸ್‌ಸಿ ಪದವಿ ಪಡೆದಿದ್ದಾರೆ. ಎಸ್‌. ನಾರಾಯಣ್ ನಿರ್ದೇಶನದ ಭಾಗಗೀರಥಿ ಧಾರಾವಾಹಿಯಲ್ಲಿ ಹೇಮಾ ಪ್ರಭಾತ್ ಅವರ ತಂಗಿಯ ಪಾತ್ರದಲ್ಲಿ ನಟಿಸುವ ಮೂಲಕ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟರು. ನಂತರ ಯಾವ ಜನ್ಮದ ಮೈತ್ರಿ, ಗುಪ್ತಗಾಮಿನಿ, ಸೊಸೆ ತಂದ ಭಾಗ್ಯ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಇವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.