ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್: ಪಾರ್ಕ್​ನಲ್ಲೇ ನಡೆಯಿತು ಪೂಜಾ-ಕಿಶನ್ ಮದುವೆ?

ಪೂಜಾ-ಕಿಶನ್ ಇಬ್ಬರೂ ಮಾತನಾಡಲು ಅಲ್ಲೇ ಇದ್ದ ಪಾರ್ಕ್‌ಗೆ ತೆರಳಿದ್ದಾರೆ. ಕಿಶನ್ ಪೂಜಾ ಬಳಿ ಕ್ಷಮೆ ಕೇಳುತ್ತಿರುವಾಗ ಅಲ್ಲೇ ಪಾರ್ಕ್ನಲ್ಲಿದ್ದ 4 ಜನ ಹಿರಿಯರು ಬಂದು, ನೀವೇನ ಪಾರ್ಕ್ ಪ್ರೇಮಿಗಳು ಎಂದು ಕೇಳುತ್ತಾರೆ. ಇದನ್ನ ಕಂಡು ಇವರಿಬ್ಬರು ಸರಿಯಾಗಿ ಸಿಕ್ಕಾಕೊಂಡರು ಎಂದು ತಾಂಡವ್ಗೆ ಖುಷಿ ಆಗುತ್ತದೆ.

ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಬಿಗ್ ಟ್ವಿಸ್ಟ್

Bhagya Lakshmi Serial

Profile Vinay Bhat May 12, 2025 11:31 AM

‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ (Bhagya Lakshmi) ಈಗ ವೀಕ್ಷಕರಿಗೆ ಕುತೂಹಲ ಮೂಡಿಸುವಂತಹ ಎಪಿಸೋಡ್​ಗಳು ಪ್ರಸಾರವಾಗುತ್ತಿದೆ. ಟ್ವಿಸ್ಟ್ ಮೇಲೆ ಟ್ವಿಸ್ಟ್ ಕೊಡುತ್ತಿರುವ ನಿರ್ದೇಶಕರು ಇದೀಗ ದಿಢೀರ್ ಎಂದು ಪಾರ್ಕ್​ನಲ್ಲೇ ಪೂಜಾಳ ಮದುವೆ ಮಾಡಿಸಿದ್ದಾರೆ. ಒಂದೆಡೆ ಭಾಗ್ಯ ತನ್ನ ತಂಗಿ ಪೂಜಾಗೆ ಮದುವೆ ಮಾಡಲು ಎಲ್ಲಿಲ್ಲದ ಕಷ್ಟ ಪಡುತ್ತಿದ್ದಾಳೆ. ಬಂದಿದ್ದ ಒಂದು ಸಂಬಂಧವೂ ಮುರಿದು ಹೋಯಿತು. ಇದಕ್ಕೆ ಕಾರಣವಾಗಿದ್ದು ತಾಂಡವ್. ಆರಂಭದಲ್ಲಿ ಹುಡುಗನ ಕಡೆಯವರಿಗೆ ಪೂಜಾ ಒಪ್ಪಿಗೆ ಆಗಿರುತ್ತಾರೆ. ಆದರೆ, ಇದೇವೇಳೆ ಅವರಿಗೆ ಭಾಗ್ಯಾಳ ವೈಯಕ್ತಿಕ ಜೀವನದ ವಿಷಯ ಗೊತ್ತಾಗಿದೆ. ತನ್ನಿಂದಲೇ ಮದುವೆ ಮಾತುಕತೆ ನಿಂತು ಹೋಯಿತು ಎಂಬ ಕೊರಗಲ್ಲಿ ಭಾಗ್ಯ ಇದ್ದಾಳೆ.

ಬಳಿಕ ಭಾಗ್ಯ ನಿನಗೆ ಒಳ್ಳೆಯ ಹುಡುಗನ ಹುಡುಕಿ ನಾನೇ ಮದುವೆ ಮಾಡಿಸುತ್ತೇನೆ ಎಂದು ಪೂಜಾಗೆ ಮಾತು ಕೊಡುತ್ತಾಳೆ. ಮನೆಗೆ ಬಂದ ಗಂಡಿನ ಕಡೆಯವರು ರಿಜೆಕ್ಟ್ ಮಾಡಿದ್ದಕ್ಕೆ ಪೂಜಾ ಬೇಸರಗೊಂಡು ಆಫೀಸ್​ಗೆ ಹೋಗುತ್ತಾಳೆ. ಆದರೆ, ಅಲ್ಲಿ ಪೂಜಾಗೆ ಮತ್ತೊಂದು ಶಾಕ್ ಕಾದಿರುತ್ತದೆ. ಆಫೀಸ್​ನ ಎಂಡಿ, ಕಾಲೇಜು ಸೀನಿಯರ್‌ ಕಿಶನ್, ಪೂಜಾಗೆ ಪ್ರಪೋಸ್ ಮಾಡಿದ್ದಾನೆ. ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ, ನಿನ್ನ ಮೇಲೆ ಲವ್ ಹೇಗಾಯಿತು ಅಂತ ಗೊತ್ತಿಲ್ಲ, ನಂಗೆ ನೀನಂದ್ರೆ ತುಂಬಾ ಇಷ್ಟ ಎಂದು ಪೂಜಾಳನ್ನು ತಬ್ಬಿಕೊಂಡಿದ್ದಾನೆ. ಇದರಿಂದ ಕೋಪಗೊಂಡ ಪೂಜಾ ಆಫೀಸ್ ತೊರೆದು ಹೊರಬಂದಿದ್ದಾಳೆ.

ಬಳಿಕ ದಾರಿಯಲ್ಲಿ ಪೂಜಾ ಹೋಗುತ್ತಿರುವಾಗ ಕಿಶನ್ ಬಂದು ಪೂಜಾ ನಿನ್ನ ಜೊತೆ ಮಾತನಾಡಬೇಕು ಎಂದು ಹೇಳುತ್ತಾನೆ. ರೋಡ್​ನಲ್ಲಿ ಕಿಶನ್ ಹೀಗೆ ಹೇಳುತ್ತಿರುವಾಗ ಇದನ್ನು ತಾಂಡವ್ ಗಮನಿಸಿದ್ದಾನೆ. ಅರೇ.. ಇದು ಪೂಜಾ ಅಲ್ವಾ.. ಹೋ ಇದೆಲ್ಲ ನಡಿತಿದ್ಯಾ ಇವಾಗ.. ಒಳ್ಳೆ ಟೈಮ್​ನಲ್ಲಿ ಸಿಕ್ಕಾಕಿಕೊಂಡಳು ಎಂದು ಹೇಳುತ್ತಾ ಅವರಿಬ್ಬರು ತಾಂಡವ್ ಫಾಲೋ ಮಾಡಿದ್ದಾನೆ. ಪೂಜಾ-ಕಿಶನ್ ಇಬ್ಬರೂ ಮಾತನಾಡಲು ಅಲ್ಲೇ ಇದ್ದ ಪಾರ್ಕ್‌ಗೆ ತೆರಳಿದ್ದಾರೆ. ಕಿಶನ್ ಪೂಜಾ ಬಳಿ ಕ್ಷಮೆ ಕೇಳುತ್ತಿರುವಾಗ ಅಲ್ಲೇ ಪಾರ್ಕ್​ನಲ್ಲಿದ್ದ 4 ಜನ ಹಿರಿಯರು ಬಂದು, ನೀವೇನ ಪಾರ್ಕ್ ಪ್ರೇಮಿಗಳು ಎಂದು ಕೇಳುತ್ತಾರೆ. ಇದನ್ನ ಕಂಡು ಇವರಿಬ್ಬರು ಸರಿಯಾಗಿ ಸಿಕ್ಕಾಕೊಂಡರು ಎಂದು ತಾಂಡವ್​ಗೆ ಖುಷಿ ಆಗುತ್ತದೆ.



ನೀವಿಬ್ರು ಅಮರ ಪ್ರೇಮಿಗಳು ಅಂದ ಮೇಲೆ ನಿಮ್ಮಿಬ್ರಿಗು ನಾವು ಮದುವೆ ಮಾಡಿಸಬೇಕಲ್ವಾ ಎಂದು ಹಿರಿಯರು ಹೇಳುತ್ತಾರೆ. ಇದನ್ನು ಕೇಳಿ ಕಿಶನ್-ಪೂಜಾಗೆ ಶಾಕ್ ಆಗುತ್ತದೆ. ಸರ್.. ನೀವು ಏನೇನು ಹೇಳಬೇಡಿ.. ನೀವು ಅಂದುಕೊಂಡಂತೆ ಏನೂ ಇಲ್ಲ, ನಾವಿಬ್ಬರು ಜಸ್ಟ್ ಮಾತಾಡೋಕೆ ಬಂದಿದ್ದೇವೆ ಅಷ್ಟೆ ಎಂದು ಪೂಜಾ ಹೇಳುತ್ತಾಳೆ. ಆದರೆ, ಅವಳ ಮಾತನ್ನು ಹಿರಿಯರು ಕೇಳದೆ, ಕಳ್ಳ ಯಾವತ್ತು ತಾನೇ ಕದ್ದ ಅಂತ ಒಪ್ಪಲ್ಲ ಇದು ಅದೇ ತರನೆ.. ಮೊದ್ಲು ತಾಳಿ ಕಟ್ಟಿಸ್ತೀವಿ ಆಮೇಲೆ ನಿಮ್ಮನ್ನ ಇಲ್ಲಿಂದ ಕಳುಸ್ತೀವಿ.. ಕೊಡು ತಾಳಿನ ಎಂದು ತಾಳಿ ತೆಗೆದು ಕೊಡುತ್ತಾರೆ.

ಸದ್ಯ ಈ ಎಪಿಸೋಡ್ ಸಾಕಷ್ಟು ಕುತೂಹಲ ಕೆರಳಿಸಿದೆ. ನಿಜಕ್ಕೂ ಇಲ್ಲಿ ಮದುವೆ ಆಗುತ್ತ ಅಥವಾ ಇಬ್ಬರು ಹೇಗಾದರು ಮಾಡಿ ಎಸ್ಕೇಪ್ ಆಗುತ್ತಾರ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.

Chaithra Kundapura Marriage: ಚೈತ್ರಾ ಕುಂದಾಪುರ ಮದುವೆಗೆ ಉಗ್ರಂ ಮಂಜು ಕೊಟ್ಟ ಗಿಫ್ಟ್ ಏನು ಗೊತ್ತಾ?